Geetha: ಸುಧಾರಾಣಿ ಪ್ಲ್ಯಾನ್‌ ಸಕ್ಸಸ್: ಭಾನುಮತಿಗೆ ಕಂಟಕ

By ಶೃತಿ ಹರೀಶ್ ಗೌಡ

ಭಾನುಮತಿಗೆ ಸುಧಾರಾಣಿ ಖೆಡ್ಡಾವನ್ನ ತೋಡಿದ್ದಾಳೆ. ಅವಳು ಯಾವ ರೀತಿ ಪ್ಲ್ಯಾನ್‌ ಮಾಡುತ್ತಿದ್ದಳೋ ಅದೇ ರೀತಿ ಸುಧಾರಾಣಿ ಸಹ ಪ್ಲ್ಯಾನ್‌ ಮಾಡಿದ್ದಾಳೆ. ಗೀತಾಗೆ ಇಲ್ಲ ಸಲ್ಲದ ಕಂಟಕವಿದೆ ಎಂದು ಆರೋಪಿಸಿದ್ದಕ್ಕಾಗಿ ಸರಿಯಾದ ರೀತಿಯಲ್ಲಿ ಬುದ್ಧಿ ಕಲಿಸಲು ಯೋಚಿಸಿದ್ದಾಳೆ. ಇದಕ್ಕಾಗಿ ದೇವಸ್ಥಾನಕ್ಕೆ ಹೋಗುವ ನಾಟಕ ಮಾಡಿದ್ದಾಳೆ. ವಿಜಿಗೆ ಭಾನುಮತಿ ಏನು ಮಾತನಾಡುವುದಿಲ್ಲ ಎಂದು ತಿಳಿದುಕೊಂಡ ಸುಧಾರಾಣಿ ಆಟ ಶುರು ಮಾಡಿದ್ದಾಳೆ.

ವಿಜಿ ಬರುವುದನ್ನೇ ನೋಡಿಕೊಂಡು ಗೀತಾ ಬಳಿಯಲ್ಲಿ ನಾವು ಇವತ್ತು ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾಳೆ. ಇದಕ್ಕೆ ಭಾನುಮತಿ ನಾನು ದೇವಸ್ಥಾನಕ್ಕೆ ಬರೋದಿಲ್ಲ ಎಂದಿದ್ದಾಳೆ ವಿಜಿ ಅಮ್ಮ ಹೇಳಿದ ಮೇಲೆ ಮುಗೀತು ನಾವೆಲ್ಲರೂ ದೇವಸ್ಥಾನಕ್ಕೆ ಹೋಗಲೇಬೇಕು ಎಂದು ಹೇಳಿದ್ದಾನೆ.

colors kannada geetha Written Update on April 26th episode

ದೇವಸ್ಥಾನದಲ್ಲಿ ಸುಧಾರಾಣಿ ಗುರುಗಳನ್ನು ಭೇಟಿಯಾಗಿದ್ದಾಳೆ. ಈ ವೇಳೆ ಗುರುಗಳು ಭಾನುಮತಿಯ ಮುಖ ನೋಡಿಕೊಂಡು ಏನೇನು ಒಗಟು ಒಗಟಾಗಿ ಹೇಳಿದ್ದಾರೆ. ನಿನ್ನ ಮಗ ಹಾಗೂ ಮಗಳ ಪ್ರಾಣಕ್ಕೆ ಸಂಚಕಾರವಿದೆ ಎಂದು ಹೇಳಿದ್ದಕ್ಕೆ ಭಾನುಮತಿಗೆ ಭಯವಾಗಿದೆ. ಇದೇ ವೇಳೆ ಗೀತಾ ಇದಕ್ಕೆ ಪರಿಹಾರ ಏನು ಎಂದು ಕೇಳಿದ್ದಾಳೆ.

ಸುಧಾರಾಣಿ ಹೆಣೆದ ಬಲೆಗೆ ಬಿದ್ದ ಭಾನುಮತಿ

ಸುಧಾರಾಣಿ ಹೆಣೆದ ಬಲೆಗೆ ಭಾನುಮತಿ ಬಿದ್ದಿದ್ದಾಳೆ. ಗುರೂಜಿ ಶೃತಿ ಹಾಗೂ ಮಗನ ಪ್ರಾಣಕ್ಕೆ ಕಂಟಕವಿದೆ ಎಂದು ಹೇಳಿದ್ದನ್ನು ಭಾನುಮತಿ ನಂಬಿದ್ದಾಳೆ. ಇದಕ್ಕಾಗಿ ಹಲವಾರು ಪೂಜೆ ಪುರಸ್ಕಾರಗಳನ್ನು ಮಾಡಬೇಕಿದೆ, ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬಾರದು ಎಂದು ಗುರೂಜಿ ಹೇಳಿದ್ದಾರೆ. ಇದಕ್ಕೆ ವಿಜಿ ಕೂಡ ನನಗೆ ಕಂಟಕವಿದೆ ಎಂದು ಹೇಳಿದಾಗ ಗೀತಾ ಎಲ್ಲ ಪೂಜೆಯನ್ನು ಮಾಡಿದಳು, ಅಮ್ಮ ಕೂಡ ಮಾಡುತ್ತಾಳೆ ಎಂದಿದ್ದಾನೆ.

ಇದು ಸುಧಾರಾಣಿಗೆ ಖುಷಿಯನ್ನು ಕೊಟ್ಟಿದೆ. ಸುಳ್ಳು ಹೇಳಿ ಗೀತಾ ಕೈಯಲ್ಲಿ ತಾಳಿ ತೆಗೆಸಿದೆ ಎಂಬ ಕೋಪಕ್ಕೆ ಈ ರೀತಿ ಸುಧಾರಾಣಿ ಮಾಡಿದ್ದಾಳೆ. ವಿಜಿಯನ್ನು ಹಾಗೂ ಭಾನುಮತಿಯನ್ನು ದಕ್ಷಿಣೆ ಕೊಟ್ಟು ಬರುತ್ತೇನೆ ಎಂದು ಕಳುಹಿಸಿದ್ದಾಳೆ. ಈ ವೇಳೆ ಗುರೂಜಿಗಳಿಗೆ ಧನ್ಯವಾದ ತಿಳಿಸಿದ ಸುಧಾರಾಣಿ ನಿಮ್ಮಿಂದ ಬಹಳಷ್ಟು ಸಹಾಯವಾಯಿತು ಎಂದಿದ್ದಾಳೆ.

colors kannada geetha Written Update on April 26th episode

ಸುಧಾರಾಣಿ ಮಾತು ಕೇಳಿ ಗೀತಾಗೆ ಶಾಕ್

ಸುಧಾರಾಣಿ ಗುರೂಜಿ ಬಳಿ ಮಾತನಾಡುತ್ತಾ ಇದ್ದಾಗ ಅಲ್ಲಿಯೇ ಗೀತಾ ಸಹ ಇದ್ದಳು. ಸುಧಾರಾಣಿ ನಾನು ಹೇಳಿದ ರೀತಿ ನೀವು ಮಾಡಿದ್ದಕ್ಕೆ ಧನ್ಯವಾದ ಎಂದಿದ್ದಾಳೆ. ಅತ್ತೆ ಹೇಳಿದ ಮಾತು‌ ಕೇಳಿದ ಗೀತಾಗೆ ಶಾಕ್ ಆಗಿದೆ. ಇದಕ್ಕೆ ಸುಧಾರಾಣಿ ಗೀತಾಗೆ ನಾನೇ ಈ ರೀತಿ ಹೇಳಿ ಎಂದು ಹೇಳಿದ್ದೆ. ಅವಳ ಅಹಂಕಾರ ಮುರಿಯಲು ಇದೇ ಸರಿಯಾದ ದಾರಿ ಎಂದು ಈ ರೀತಿ ಮಾಡಿದೆ. ನೀನು ಹೋಗಿ ಪೂಜೆಗೆ ಬೇಕಾದ ಎಲ್ಲಾ ಕಾರ್ಯ ಮಾಡು ಎಂದು ವಿಜಿ ಬಳಿ ಕಳಿಸಿದ್ದಾಳೆ‌.

ನಾನು ಪೂಜೆ ಮಾಡಲ್ಲ ಎಂದ ಭಾನುಮತಿ

ಭಾನುಮತಿ ನಾನು ಈ ಪೂಜೆ ಮಾಡಲ್ಲ ಎಂದು ವಿಜಿ ಬಳಿ ಹೇಳುತ್ತಿದ್ದಾಳೆ. ವಿಜಿ ಆಗಲ್ಲ ಅಮ್ಮ ಇಲ್ಲಿ ಶೃತಿ ಜೀವ ಮುಖ್ಯ ಎಂದು ಹೇಳಿ ಶುದ್ದೀಕರಣ ಮಾಡುವ ಸ್ಥಾನದಲ್ಲಿ ಕೂರಿಸಿ ನೀರನ್ನು ವಿಜಿ‌ ಹಾಕುತ್ತಿದ್ದಾನೆ. ನಂತರ ಎಲ್ಲರೂ ಸಹ ದೇವಸ್ಥಾನಕ್ಕೆ ದೇವರ ದರ್ಶನವನ್ನು ಪಡೆದಿದ್ದಾರೆ. ನಂತರ ಗೀತಾ ಅತ್ತೆ ಬನ್ನಿ ಉರುಳು ಸೇವೆ ಮಾಡಬೇಕು ಎಂದು ಕರೆದುಕೊಂಡು ಹೋಗಿದ್ದಾಳೆ.

ಭಾನುಮತಿ ಉರುಳು ಸೇವೆ ಮಾಡುವಾಗ ಸುಧಾರಾಣಿ ನೀನು ಈ ಲಾಯರ್ ಮುಂದೆಯೇ ನಿನ್ನ ಆಟ ನಡೆಯೋದಿಲ್ಲ ಎಂದು ಹೇಳಿದ್ದಾಳೆ. ನೀನು ಗೀತಾ ಪೂಜೆ ಮಾಡುವಾಗ ಯಾವ ರೀತಿಯಲ್ಲಿ ಟಾರ್ಚರ್ ಕೊಟ್ಟೆ ಈಗ ನಾನು ಸಹ ನಿನ್ನ ಹಾದಿಯಲ್ಲಿ ಬಂದು ವಿಜಿ ಮುಂದಿಟ್ಟುಕೊಂಡು ಆಟ ಆಡುತ್ತಿದ್ದೇನೆ ಅನುಭವಿಸುವ ಎಂದಿದ್ದಾಳೆ.

More from Filmibeat

English summary
colors kannada serial Geetha Written Update on April 26th episode. Here is the details about Sudharani start new game with Bhanumati. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X