Geetha: ಭಾನುಮತಿಗೆ ಫುಲ್ ಟಾರ್ಚರ್: ಗೀತಾಳನ್ನು ಮದುವೆಯಾಗಲು ಒಪ್ಪಿಕೊಂಡ ವಿಜಿ
ಸುಧಾರಾಣಿ ಈಗ ಭಾನುಮತಿ ಮೇಲೆ ದ್ವೇಷವನ್ನ ತೀರಿಸಿಕೊಳ್ಳಲು ವಿಧ ವಿಧವಾಗಿ ಯೋಜನೆಯ ರೂಪಿಸಿದ್ದಾಳೆ. ಗೀತಾಗೆ ಭಾನುಮತಿ ಕೊಟ್ಟ ಎಲ್ಲ ಟಾರ್ಚರ್‌ಗಳನ್ನು ನೆನಪಿಸಿಕೊಂಡು ಅವಳು ಸಹ ಇದೇ ರೀತಿ ಕಷ್ಟವನ್ನು ಅನುಭವಿಸಬೇಕು ಎಂದು ಅವಳ ಕೈಯಲ್ಲಿ ದೇವರ ಸೇವೆಯನ್ನ ಮಾಡಿಸುತ್ತಿದ್ದಾಳೆ. ಇದನ್ನು ಭಾನುಮತಿ ಬಳಿಯೂ ಹೇಳುತ್ತಿದ್ದಾಳೆ. ಭಾನುಮತಿ ಉರುಳು ಸೇವೆ ಮಾಡಿ ನನ್ನ ಕೈಲಿ ಇನ್ನು ಆಗಲ್ಲ ಎಂದಿದ್ದಾಳೆ.
ಸುಧಾರಾಣಿಯೇ ವಿಜಿ ಮುಖವನ್ನು ನೋಡಿಕೊಂಡು ಗೀತಾ, ವಿಜಿಗೋಸ್ಕರ ಎಷ್ಟೆಲ್ಲಾ ತ್ಯಾಗವನ್ನ ಮಾಡಿದ್ದಾಳೆ. ಎಷ್ಟೆಲ್ಲ ಪೂಜೆಯನ್ನ ಮಾಡಿದಳು ಎಂದು ಹೇಳಿದ್ದಾಳೆ. ಇದಕ್ಕೆ ವಿಜಿ ಮಾಡಮ್ಮ ಎಂದು ಹೇಳಿದ್ದಾನೆ. ಭಾನುಮತಿಗೆ ಬೇರೆ ಯಾವುದೇ ಆಯ್ಕೆ ಇಲ್ಲದೆ ಸೇವೆ ಮುಂದುವರಿಸಬೇಕಾಗಿದೆ.

ಸುಧಾರಾಣಿ ಹಾಗೂ ಗೀತಾ ತುಂಬಾ ಖುಷಿಯಿಂದ ಇದ್ದಾರೆ. ಭಾನುಮತಿಗೆ ಗೀತಾ ನಾನು ಸುಮ್ಮನೆ ಮೌನವಾಗಿದ್ದೆ ಎಂದರೆ ಅದು ನನ್ನ ವೀಕ್ನೆಸ್ ಅಲ್ಲ, ಎಲ್ಲಿ ಏನು ಮಾಡಬೇಕು ಅದನ್ನು ನಾನು ಮಾಡುತ್ತೇನೆ ಎಂದಿದ್ದಾಳೆ. ಆಗ ನಮಗೆ ಕಷ್ಟ ಕೊಡುವುದು ನಿನಗೆ ಒದಗಿ ಬಂದಿತ್ತು. ಈಗ ಅದಕ್ಕೆ ರಿವೇಂಜ್ ತೀರಿಸಿಕೊಳ್ಳುತ್ತಿದ್ದೇವೆ ಎಂದು ಸುಧಾರಾಣಿ, ಭಾನುಮತಿಗೆ ಹೇಳಿದ್ದಾಳೆ. ಇನ್ಮುಂದೆ ನಿನ್ನ ಆಟ ನಡೆಯೋದಿಲ್ಲ ಎಂದು ಸಹ ಹೇಳಿದ್ದಾಳೆ.
ಭಿಕ್ಷೆ ಬೇಡಿದ ಭಾನುಮತಿ
ಭಾನುಮತಿ ಕೈಯಲ್ಲಿ ಸುಧಾರಾಣಿ ಹಾಗೂ ಗೀತಾ ಒಂದೊಂದೇ ಪೂಜೆಗಳನ್ನು ಮಾಡಿಸುತ್ತಾ ಬಂದಿದ್ದಾರೆ. ಉರುಳು ಸೇವೆಯಾದ ನಂತರ ಭಾನುಮತಿಯನ್ನು ಭಿಕ್ಷುಕರ ಜೊತೆಯಲ್ಲಿ ತಂದು ಕೂರಿಸಿ ಭಿಕ್ಷೆ ಬೇಡುವಂತೆ ಹೇಳಿದ್ದಾರೆ. ನಂತರ ಭಿಕ್ಷುಕರ ಜೊತೆಯಲ್ಲಿಯೇ ಊಟವನ್ನು ಸಹ ಮಾಡಿಸಿದ್ದಾರೆ. ಇದ್ಯಾವುದೂ ಭಾನುಮತಿಗೆ ಸ್ವಲ್ಪವೂ ಇಷ್ಟವಿಲ್ಲ.
ವಿಜಿಗೋಸ್ಕರ ಶ್ರುತಿಗಾಗಿ ಈ ರೀತಿಯೆಲ್ಲ ಮಾಡುತ್ತಿದ್ದಾಳೆ. ಭಿಕ್ಷುಕರು ಉಂಡು ಬಿಟ್ಟು ಹೋದ ಎಲೆಯನ್ನು ಭಾನುಮತಿ ಎತ್ತುವ ಪ್ರಸಂಗ ಬಂದಿದೆ. ನಾನು ಹೋಂ ಮಿನಿಸ್ಟರ್, ಇದೆಲ್ಲವನ್ನು ಮಾಡುತ್ತಿದ್ದೇನೆ ಎಂದು ಭಾನುಮತಿ ಬೇಸರ ಮಾಡಿಕೊಂಡಿದ್ದಾಳೆ. ಮುಂದೆ ನಾನು ರೀವೆಂಜ್ ತಿಳಿಸಿಕೊಳ್ಳುತ್ತೇನೆ ಎಂದು ಭಾನುಮತಿ ಅಂದುಕೊಂಡಿದ್ದಾಳೆ.

ಕರ್ಪೂರ ಹಚ್ಚಿದ ಹೋಂ ಮಿನಿಸ್ಟರ್
ಭಾನುಮತಿ ಒಂದೊಂದೇ ಸೇವೆಗಳನ್ನು ಮಾಡುತ್ತಿದ್ದಂತೆಯೇ ಸುಧಾರಾಣಿ ಹಾಗೂ ಗೀತಾ, ಭಾನುಮತಿ ಬೆನ್ನ ಹಿಂದೆಯೇ ನಿಂತಿದ್ದಾರೆ. ಅವಳ ಕೈಯಲ್ಲಿ ಕರ್ಪೂರವನ್ನು ಇಟ್ಟು ದೇವರಿಗೆ ಆರತಿಯನ್ನು ಬೆಳಗಿಸಿದ್ದಾರೆ. ಕೈ ಮೇಲೆ ಕರ್ಪೂರವನ್ನು ಇಟ್ಟುಕೊಂಡು ದೇವರಿಗೆ ಭಾನುಮತಿ ಬೆಳಗುತ್ತಿದ್ದಾಳೆ. ಭಾನುಮತಿಯ ಸೆರಗಿಗೆ ಬೆಂಕಿ ಹಚ್ಚಿಕೊಂಡಿದೆ. ಇದನ್ನು ಸುಧಾರಾಣಿ ತನ್ನ ಕೈಯಿಂದಲೇ ಹಾರಿಸಿ ವಿಜಿಯ ಕೃಪೆಗೆ ಪಾತ್ರರಾಗಿದ್ದಾಳೆ.
ವಿಜಿ-ಗೀತಾ ಮದುವೆಗೆ ಸಮ್ಮತಿ
ವಿಜಿ ಹಾಗೂ ಗೀತಾ ಮದುವೆಯನ್ನು ಮಾಡಬೇಕು ಎಂದು ಗುರೂಜಿ ಅವರು ಹೇಳುತ್ತಿದ್ದಂತೆಯೇ ವಿಜಿ ಸಹ ಒಪ್ಪಿದ್ದಾನೆ. ಆದಷ್ಟು ಬೇಗ ನಮ್ಮ ಮನೆಯಲ್ಲಿ ಶುಭಕಾರ್ಯ ನಡೆಯುವಂತೆ ನಾನೇ ಮಾಡುತ್ತೇನೆ ಎಂದು ವಿಜಿ ಹೇಳಿದ್ದಾನೆ. ನನ್ನ ತಂಗಿ ಶ್ರುತಿ ಹಾಗೂ ಅಮ್ಮನ ಆಯಸ್ಸಿಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ, ನಾನು ಗೀತಾಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ.
ಸುಧಾರಾಣಿ ಮಾಡಿದ ಪ್ಲ್ಯಾನ್ ವರ್ಕ್ ಔಟ್ ಆಗುತ್ತಿದೆ. ಗುರೂಜಿ ಸುಧಾರಾಣಿಗೆ ಹೇಗೆ ಬೇಕೋ ಅದೇ ರೀತಿ ಹೇಳಿದ್ದಾರೆ. ಮನೆಯಲ್ಲಿರುವ ಕಂಟಕ ಹೋಗಬೇಕು ಎಂದರೆ ಮನೆಯಲ್ಲಿ ಶುಭಕಾರ್ಯ ನಡೆಯಬೇಕು ಎಂದು ಹೇಳಿದ್ದು ಇದು ವಿಜಿ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿದೆ. ಇದಕ್ಕಾಗಿ ಗೀತಾಳನ್ನು ವಿಜಿ ಮದುವೆಯಾಗಲು ಒಪ್ಪಿಗೆಯನ್ನು ನೀಡಿದ್ದಾನೆ. ಗೀತಾ ಮದುವೆಯಾಗಲು ವಿಜಿ ಒಪ್ಪಿಗೆ ಕೊಟ್ಟಿದ್ದು ಮಾತ್ರ ಭಾನುಮತಿಗೆ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ.


Click it and Unblock the Notifications











