Geetha: 5 ಲಕ್ಷ ರೂ. ಹೊಂದಿಸಲು ಗೀತಾ ಹರಸಾಹಸ: ಭಾನುಮತಿಯಿಂದ ಕಾಟ

By ಶೃತಿ ಹರೀಶ್ ಗೌಡ

ಭಾನುಮತಿ ಹಾಗೂ ಸುಧಾರಾಣಿ ನಡುವೆ ಶೀತಲ ಸಮರ ನಡೆಯುತ್ತಿದೆ. ಭಾನುಮತಿ ತನ್ನ ಅಣ್ಣ ಸೀತಾರಾ ಬಳಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಸುಧಾರಾಣಿ ಏನು ಅಣ್ಣನ ಹತ್ತಿರ ಮಾತನಾಡುತ್ತಿದ್ದೀಯ, ಅಲ್ಲಿ ಅವನು ಆರಾಮಾಗಿ ಇದ್ದಾನಾ ಎಂದಿದ್ದಾಳೆ. ಇದಕ್ಕೆ ಆಕೆ, ಅವನು ನನ್ನ ಅಣ್ಣ ನಾವು ಇಲ್ಲಿ ಹೇಗೆ ಇದ್ದೀವೋ ಅವನು ಜೈಲಿನಲ್ಲಿ ಹಾಗೆ ಇದ್ದಾನೆ ಎಂದು ಹೇಳಿದ್ದಾಳೆ.

ನಿನ್ನ ಗಂಡನನ್ನು ಕೊಂದೆ ಎಂದು ಅವನೊಬ್ಬನೇ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವನು ಶಿಕ್ಷೆ ಅನುಭವಿಸುತ್ತಿರುವುದರಿಂದ ನಾವು ಇಲ್ಲಿ ಆರಾಮಾಗಿ ಇದ್ದೇವೆ ಎಂದು ಭಾನುಮತಿ ಹೇಳಿದ್ದಾಳೆ. ಅವನು ಅಲ್ಲಿ ಇರುವವರೆಗೂ ನಾವಿಲ್ಲಿ ನೆಮ್ಮದಿಯಾಗಿ ಇರುತ್ತೇವೆ ನಮ್ಮನ್ನು ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.

Colors kannada geetha Written Update on April 28th episode

ಸುಧಾರಾಣಿ ಕೂಡ ಭಾನುಮತಿಗೆ ಟಾಂಗ್ ನೀಡಿದ್ದಾಳೆ, ನಿನ್ನ ಪಾಪದ ಕೊಡ ತುಂಬುತ್ತಿದೆ, ನಿನ್ನ ಅಹಂಕಾರಕ್ಕೆ ಬುದ್ಧಿ ಕಲಿಸುವ ಸಮಯ ಬಂದೇ ಬರುತ್ತದೆ ಎಂದು ಹೇಳಿದ್ದಾಳೆ. ಇದ್ಯಾವುದನ್ನು ಭಾನುಮತಿ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿಲ್ಲ. ಇವರು ನನ್ನನ್ನು ಏನು ಮಾಡುತ್ತಾರೆ ಎಂದು ಅಂದುಕೊಂಡಿದ್ದಾಳೆ. ಆದರೆ ಸುಧಾರಾಣಿ ಒಳಗೊಳಗೆ ವಿಜಿ ಕಣ್ಣಿಗೆ ಭಾನುಮತಿ ಮಾಡುವ ತಪ್ಪುಗಳು ಬೀಳುವಂತೆ ಮಾಡುತ್ತಿದ್ದಾಳೆ.

ಹಣಕ್ಕಾಗಿ ಗೀತಾ ಪರದಾಟ

ತಂದೆ ಕೇಳಿರುವ 5 ಲಕ್ಷ ರೂ. ಹಣವನ್ನು ಹೊಂದಿಸಲು ಗೀತಾ ಪರದಾಡುತ್ತಿದ್ದಾಳೆ. ಇದಕ್ಕಾಗಿ ಸೇಠು ಬಳಿ ಹೋಗಿದ್ದಾಳೆ. ಸೇಠು ವಿಜಿಗೆ ಫೋನ್ ಮಾಡಿದ್ದಾನೆ. ಏನಕ್ಕೆ ಐದು ಲಕ್ಷ ಬೇಕು ಎಂದು ವಿಚಾರಿಸಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಭಾನುಮತಿ ಏನು ಎಂದು ಕೇಳಿದ್ದಕ್ಕೆ ವಿಜಿ ಗೀತಾ 5 ಲಕ್ಷ ಹಣಕ್ಕಾಗಿ ಸೇಠು ಬಳಿ ಹೋಗಿದ್ದಾಳೆ ಎಂದಿದ್ದಾನೆ.

ಇದಕ್ಕೆ ಭಾನುಮತಿ ಹಣವನ್ನು ಗೀತಾಗೆ ಕೊಡಬೇಡ ಎಂದು ಹೇಳು ಎಂದಿದ್ದಾಳೆ. ಇದಕ್ಕೆ ವಿಜಿ ಸಹ ಸೇಠು ಬಳಿ ಕೊಡಬೇಡಿ ಎಂದು ಹೇಳಿದ್ದಾನೆ. ಸೇಠು, ಗೀತಾಗೆ ಹಣವನ್ನು ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಗೀತಾ ಅಲ್ಲಿಂದ ಹೊರಗಡೆ ಬಂದಿದ್ದಾಳೆ. ಈ ಕಡೆ ಭಾನುಮತಿ, ಸುಧಾರಾಣಿ ಬಳಿ ಬಂದು ವಿಜಿ ಮುಂದೆ ಏನು ಬೇಕು ಅದೆಲ್ಲವನ್ನು ನಾವೇ ಮಾಡೋಣ ಅವಳು ಸಾಲ ಯಾಕೆ ಮಾಡಬೇಕು ಎಂಬ ನಾಟಕವನ್ನು ಆಡಿದ್ದಾಳೆ.

Colors kannada geetha Written Update on April 28th episode

ಗೀತಾಗೆ ಭಾನುಮತಿ ಅವಮಾನ

ಗೀತಾಗೆ ಹಣದ ಸಮಸ್ಯೆ ಎದುರಾಗಿದೆ ಎಂಬುದನ್ನು ತಿಳಿದುಕೊಂಡ ಭಾನುಮತಿ ಅವಳಿಗೆ ಫೋನ್ ಮಾಡಿ ಅವಮಾನ ಮಾಡಿದ್ದಾಳೆ. ನಿನಗೆ ಸೇಠು ಅಲ್ಲ ಪಾನಿಪುರಿ ಮಾರುವ ಸೂರಿ ಕೂಡ ಸಾಲವನ್ನು ಕೊಡೋದಿಲ್ಲ ಎಂದು ಈ ಹೀಯಾಳಿಸಿದ್ದಾಳೆ. ಅದು ಯಾವ ರೀತಿ ನೀನು ಸಾಲವನ್ನು ಪಡೆದುಕೊಳ್ಳುತ್ತೀಯಾ ನೋಡುತ್ತೇನೆ ಎಂದು ಸವಾಲು ಹಾಕಿದ್ದಾಳೆ.

ನನಗೆ ವಿಜಿ ಟ್ರಂಪ್ ಕಾರ್ಡ್‌ ಆಗಿ ಬಳಕೆಯಾಗುತ್ತಿದ್ದ ನೀನು ಅವನನ್ನು ನಿನ್ನ ಕಡೆ ತೆಗೆದುಕೊಳ್ಳುವಂತೆ ಮಾಡಿ ನನ್ನು ಪ್ರಶ್ನೆ ಮಾಡುವಂತೆ ಮಾಡಿಬಿಟ್ಟೆ. ನಿನಗೆ ಮತ್ತಷ್ಟು ಕಾಟ ಕೊಡುತ್ತೇನೆ ಎಂದು ಗೀತಾಗೆ ಭಾನುಮತಿ ಹೇಳಿದ್ದಾಳೆ.

ಈ ಕಡೆ ಸುಧಾರಾಣಿ ಬಳಿ ಮಾತನಾಡಿದ ಭಾನುಮತಿ ನಮ್ಮ ಬಳಿ ದುಡ್ಡಿದೆ. ಆದರೆ ನಾನು 5 ಪೈಸೆಯನ್ನು ಸಹ ಗೀತಾಗೆ ಕೊಡುವುದಿಲ್ಲ ಎಂದು ಹೇಳಿದ್ದಾಳೆ.

ಗೀತಾಗೆ ಸಹಾಯ ಯಾರು ಮಾಡ್ತಾರೆ?

ತಂದೆಗೆ ಹಣ ಕೊಡಲು ಹೊಂದಿಸುವುದಕ್ಕಾಗಿ ಗೀತಾ ಪರದಾಟ ನಡೆಸುತ್ತಿದ್ದಾಳೆ. ಕಂಡ ಕಂಡವರ ಬಳಿ ಹಣ ಕೇಳುತ್ತಿದ್ದಾಳೆ. ಆದರೆ ಯಾರು ಸಹ ಗೀತಾಗೆ ಹಣ ನೀಡುತ್ತಿಲ್ಲ. ಈಗ ಗೀತಾ ಸಹಾಯಕ್ಕೆ ಯಾರು ಬರ್ತಾರೆ ಎಂಬುದೇ ಕುತೂಹಲವಾಗಿದೆ. ವಿಜಿ, ಗೀತಾಳನ್ನು ಸಂಕಷ್ಟದಿಂದ ಪಾರು ಮಾಡ್ತಾನಾ ಅಥವಾ ಸುಧಾರಾಣಿ ಅವಳಿಗೆ ಸಹಾಯ ಮಾಡುತ್ತಾಳಾ ನೋಡಬೇಕಿದೆ.

More from Filmibeat

English summary
colors kannada serial Geetha Written Update on April 28th episode.Here is the details about Geetha father srinivas had demands money and Geetha accepts the demand. She is tries to arrange the money but Bhanumati tries to stop her. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X