Geetha Serial: ಗೀತಾಳಿಂದ ದೂರಾಗ್ತಾನ ವಿಜಯ್?

By ಶೃತಿ ಹರೀಶ್ ಗೌಡ

ಈ ಕಡೆ ಗೀತಾಳನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದಾಗಿ ಭಾನುಮತಿ ಘೋಷಣೆ ಮಾಡುತ್ತಿದ್ದಂತೆ ಕೆಲವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರಾ ಪಕ್ಷದಲ್ಲಿ ಅನುಭವಿ ಮುಖಂಡರು ಇದ್ದಾರೆ ಅವರನ್ನು ಅಧ್ಯಕ್ಷರಾಗಿ ಮಾಡಿ ಎಂದು ಹೇಳಿದ್ದಾರೆ. ಇದಕ್ಕೆ ಕೆಲವರು ಭಾನುಮತಿಯ ಪರವಾಗಿ ಮಾತನಾಡಿದ್ದಾರೆ ಇನ್ನೂ ಕೆಲವರು ಗೀತಾ ಬಂದ ಮೇಲೆ ಪಕ್ಷದಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ ಇದು ನಿಮ್ಮದೇ ನಿರ್ಧಾರ ಎಂದು ಡೈರೆಕ್ಟಾಗಿ ಕೇಳಿದ್ದಾರೆ.

ಈ ಕಡೆ ಭಾನುಮತಿ ಮತ್ತು ಗೀತಾ ಇಬ್ಬರ ಕಡೆಯವರು ಸಹ ಜಗಳವಾಡಿದ್ದಾರೆ ಇದಕ್ಕೆ ಭಾನುಮತಿ ಸುಮ್ಮನೆ ಆಗಿದ್ದಾಳೆ. ಗೀತಾಳನ್ನು ನೋಡಿದ ಭಾನುಮತಿ ಮನಸ್ಸಿನಲ್ಲಿಯೇ ನಾಳೆ ನಿನ್ನ ಹಣೆಬರಹ ನಿರ್ಧಾರವಾಗಲಿದೆ ಬಂದು ನಿನ್ನ ಹಣೆಬರಹವನ್ನು ಬರೆಯಲಿದ್ದಾರೆ ಎಂದು ಒಳಗೊಳಗೆ ನಗುತ್ತಿದ್ದಾಳೆ ಆದರೆ ಗೀತಾ ಭಾನುಮತಿಯನ್ನು ನೋಡಿ ಕೋಪಗೊಂಡಿದ್ದಾಳೆ.

ಜೈಲಿನ ಒಳಗಿಂದಲೇ ಗೀತಾಗೆ ಚಂದ್ರಿಕಾ ಫೋನ್ ಮಾಡಿದ್ದಾಳೆ. ಗೀತಾ ಬೆಳಿಗ್ಗೆಯಿಂದ ನಡೆದ ಎಲ್ಲಾ ಘಟನೆಗಳನ್ನ ಚಂದ್ರಿಕಾ ಬಳಿ ಹೇಳಿದ್ದಾಳೆ. ಇದೇ ವೇಳೆ ಚಂದ್ರಿಕಾ ನೀನು ಭಯ ಪಡಬೇಡ ಗೀತಾ ನಾನು ಸ್ವರ್ಣ ಅಕ್ಕನ ಬಳಿ ಮಾತನಾಡಿ ಎಲ್ಲವನ್ನು ಸರಿ ಮಾಡುತ್ತೇನೆ ನೀನು ನನ್ನ ಮಗಳಿಗಿಂತ ಹೆಚ್ಚು ಭಾನುಮತಿ ಯಾವುದೇ ನಾಟಕ ಮಾಡಿದರು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಗೀತಾಗೆ ಧೈರ್ಯವನ್ನ ತುಂಬಿದ್ದಾರೆ.

ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡುತ್ತಿರುವ ವಿಜಿ

ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡುತ್ತಿರುವ ವಿಜಿ

ಈ ಕಡೆ ಸಿಸಿಟಿವಿ ಫುಟೇಜ್ ತಂದಿರುವ ವಿಜಿ ಅಪ್ಪನ ಸಾವಿಗೆ ಕಾರಣ ಯಾರು ಎಂದು ತಿಳಿಯಲು ಸುಳಿವು ಸಿಗುತ್ತದಾ ಎಂದು ವಿಡಿಯೋ ಫುಟೇಜ್ ನೋಡುತ್ತಾ ಇದ್ದಾನೆ.‌ ಈ ಕಡೆ ಏನು ಸಿಗದ ಕಾರಣ ತನ್ನ ಫ್ರೆಂಡ್‌ಗೆ ಫೋನ್ ಮಾಡಿ ನಿನ್ನ ಬಳಿ ಒಂದು ಸಹಾಯವನ್ನು ಕೇಳುತ್ತಿದ್ದೇನೆ ಎಂದಾಗ ಸಿಸಿಟಿವಿಯಲ್ಲಿರುವ ವಿಡಿಯೋ ಕ್ಲಾರಿಟಿ ಬರುತ್ತಿಲ್ಲ ಎಂದಾಗ ನೀನು ಅದನ್ನು ಆಫೀಸಿಗೆ ತಂದು ಕೊಡು ನಾನು ಅದನ್ನು ಎನ್‌ಹ್ಯಾನ್ಸ್ ಮಾಡಿ ಕೊಡುತ್ತೇನೆ ಎಂದು ವಿಜೆಗೆ ಅವನ ಫ್ರೆಂಡ್ ಹೇಳುತ್ತಾನೆ ಇದರಿಂದಾಗಿ ವಿಜಿ ನಿರಾಳವಾಗಿದ್ದಾನೆ.

ಗೀತಾ ಜೊತೆಗೆ ಜಗಳವಾಡಿದ ವಿಜಿ

ಗೀತಾ ಜೊತೆಗೆ ಜಗಳವಾಡಿದ ವಿಜಿ

ಗೀತಾಗೋಸ್ಕರ ಕಾಯುತ್ತಿದ್ದ ವಿಜಿ, ಗೀತಾ ಬಾರದ್ದನ್ನು ನೋಡಿ, ಇನ್ನೇನು ಹೊರಡುವಾಗ ಗೀತಾ ಜೋರಾಗಿ ವಿಜಿ ಎಂದು ಕರೆದಿದ್ದಾಳೆ. ಇದೇ ವೇಳೆ ಗೀತಾ ಮಾತನಾಡಲು ಬಿಡದೆ ಈ ಒಂದೇ ಸಮನೆ ಗೀತಾ ಜೊತೆ ಜಗಳವಾಡುತ್ತಿದ್ದಾನೆ ಗೀತಾ ನಿನ್ನಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದಾಗ ಗೀತಾಗೆ ತುಂಬಾ ಶಾಕ್ ಆಗಿದೆ. ಸುಧಾರಾಣಿ ಅಮ್ಮನಿಗೆ ನೀನು ಏನೇನು ಹೇಳಿದ್ದೀಯಾ ಭಾನುಮತಿ ಅಮ್ಮನ ಬಗ್ಗೆ ಸುಧಾರಾಣಿಯಮ್ಮ ಒಂದು ದಿನವೂ ವಿರೋಧವಾಗಿ ಮಾತನಾಡಿಲಿಲ್ಲ. ನೀನು ಈಗ ಮಾತನಾಡುವಂತೆ ಮಾಡಿದ್ದೀಯಾ ಎಂದು ಗೀತಾ ಜೊತೆ ಹೇಳಿ ಗೀತಾಳ ಮಾತನ್ನು ಕೇಳದೆ ಹೋಗಿದ್ದಾನೆ ಇದರಿಂದ ಗೀತಾಗೆ ಬಹಳ ನೋವಾಗಿದೆ.

ಸುಧಾರಾಣಿಗೆ ಫೋನ್ ಮಾಡಿದ ಗೀತಾ

ಸುಧಾರಾಣಿಗೆ ಫೋನ್ ಮಾಡಿದ ಗೀತಾ

ಸುಧಾರಾಣಿಗೆ ಫೋನ್ ಮಾಡಿದ ಗೀತಾ, ವಿಜಿ ತನ್ನ ಜೊತೆ ಜಗಳವಾಡಿಕೊಂಡು ಮನಸ್ಸಿಗೆ ನೋವು ಮಾಡಿದ ವಿಷಯವನ್ನು ಹೇಳುತ್ತಿದ್ದಾಳೆ ಈ ಕಡೆ ಸುಧಾರಾಣಿ ಸಹ ನನ್ನದು ಅದೇ ಪರಿಸ್ಥಿತಿ ಎಂದು ಗೀತಾ ಬಳಿ ಹೇಳುತ್ತಿದ್ದಾರೆ. ಇನ್ನು ಸುಧಾರಾಣಿ ಗೀತಾ ಬಳಿ ಮಾತನಾಡುತ್ತಾ ನನ್ನ ಸಾಯಿಸಲು ಬಂದವರು ಭಾನುಮತಿ ಮತ್ತು ಸೀತಾರಾಮ್ ಎಂದು ಹೇಳಿದಾಗ ವಿಜಿ ನನ್ನ ಬಳಿ ಸಹ ಹೀಗೆ ಮಾತನಾಡಿದ ಎಂದು ಹೇಳಿದ್ದಾಳೆ.

ಮುಂದೇನಾಗುತ್ತದೆ ಕಾದು ನೋಡಬೇಕಿದೆ

ಮುಂದೇನಾಗುತ್ತದೆ ಕಾದು ನೋಡಬೇಕಿದೆ

ಈ ವಿಷಯವನ್ನೆಲ್ಲ ನಿನಗೆ ಗೀತಾ ತಲೆಗೆ ತುಂಬಿದ್ದಾಳೆ ಎಂದು ಕೇಳಿದ ನಾನು ಏನೇ ಹೇಳಿದರು ಸಹ ಅವನಿಗೆ ಭಾನುಮತಿಯ ಮೇಲೆ ಇರುವ ನಂಬಿಕೆ ಹೋಗುತ್ತಿಲ್ಲ ಎಂದು ಸುಧಾರಾಣಿ, ಗೀತಾ ಬಳಿ ಹೇಳಿದ್ದಾರೆ ಇದರಿಂದಾಗಿ ಗೀತಾಗೆ ತುಂಬಾ ಬೇಸರವಾಗಿದೆ. ನಾವು ನಿಧಾನವಾಗಿ ವಿಜಯ ಮನಸ್ಸನ್ನು ಸೆಳೆಯಬೇಕು ಎಂದು ಹೇಳುತ್ತಿದ್ದಾರೆ ಹೌದು ಅತ್ತೆ ನನ್ನ ಬಳಿಯೂ ಸಹ ಜಗಳವಾಡಿದ್ದಾನೆ ಎಂದು ಹೇಳಿದ್ದಾರೆ ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Colors Kannada serial Geetha Written Update on February 6th episode. Here is the details about Banumati master plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X