Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Geetha: ಸುಧಾರಾಣಿಗೆ ನೆನಪು ಮರುಕಳಿಸಿತ್ತಾ?
ಭಾನುಮತಿಗೆ ಸುಧಾರಾಣಿಯ ಖಾಯಿಲೆ ವಾಸಿಯಾಗುತ್ತಿರುವ ಮುನ್ಸೂಚನೆ ಗೊತ್ತಾಗುತ್ತಿದೆ. ಹಳೆಯ ನೆನಪು ಭಾನುಮತಿಗೆ ಬರುತ್ತಿದೆ. ಇತ್ತ ಡಾಕ್ಟರ್ ಪಲ್ಲವಿ ನಂಬಿ ನಾವು ಮೋಸ ಹೋದ್ವಿ ಅಣ್ಣ ಎಂದು ಭಾನುಮತಿ ಕೈ ಹಿಸುಕಿಕೊಳ್ತಾ ಇರ್ತಾಳೆ. ಡಾಕ್ಟರ್ ಪಲ್ಲವಿಗೆ ಫೋನ್ ಮಾಡು ಎಂದು ಸಿತಾರಾಗೆ ಭಾನುಮತಿ ಹೇಳ್ತಾಳೆ ಅದಕ್ಕೆ ಸಿತಾರಾ ಡಾಕ್ಟರ್ ಫೋನ್ ತೆಗೆಯುತ್ತಾ ಇಲ್ಲ ಅಂದಾಗ ಬೇರೆ ನಂಬರ್‌ನಿಂದ ಮಾಡು ನಿನಗೆ ಅಷ್ಟು ಗೊತ್ತಾಗಲ್ವ ಅಂತಾ ಅಣ್ಣನಿಗೆ ಭಾನುಮತಿ ಬೈತಾಳೆ.
ಸಿತಾರ ಬೇರೆ ನಂಬರ್‌ನಿಂದ ಪಲ್ಲವಿಗೆ ಫೋನ್ ಮಾಡ್ತಾನೆ ಆಗ ಡಾಕ್ಟರ್ ಪಲ್ಲವಿ ಚನ್ನಾಗಿ ಬೈತ್ತಾಳೆ. ನಾನು ಕೊಟ್ಟ ಮೆಡಿಸಿನ್ ಮೇಲೆ ನಂಬಿಕೆ ಇಲ್ಲದಿದ್ದರೆ ಬೇರೆಯವರನ್ನು ನೋಡಿಕೊಳ್ಳಿ ಎಂದು ಕೂಗಾಡುತ್ತಾಳೆ. ಇದರಿಂದ ಸಿತಾರಾಗೆ ಇರಿಸುಮುರಿಸು ಆಗುತ್ತದೆ. ನಂತರ ತಂಗಿ ಜೊತೆಗೆ ಡಾಕ್ಟರ್ ಕಾನ್ಫಿಡೆನ್ಸ್‌ನಿಂದ ಹೇಳ್ತಾ ಇದ್ದಾರೆ ಅವರು ಸುಳ್ಳು ಹೇಳ್ತಾ ಇಲ್ಲ ಅನಿಸುತ್ತದೆ ತಂಗ್ಯಮ್ಮ ಎಂದು ಸಿತಾರಾ ಹೇಳ್ತಾಳೆ.
ಈ ಕಡೆ ಡಾಕ್ಟರ್ ತನ್ನ ಮಗಳನ್ನು ಕಾಪಾಡಿದ ಗೀತಾಳ ಬಗ್ಗೆ ಅವರ ಮನೆಯಲ್ಲಿ ನಡೆದ ಘಟನೆಯನ್ನು ನೆನೆಪಿಕೊಂಡು ಗೀತಾಗೆ ಫೋನ್ ಮಾಡ್ತಾಳೆ. ಡಾಕ್ಟರ್ ಏನಕ್ಕೆ ಇಷ್ಟೊತ್ತಲ್ಲಿ ಪೋನ್ ಮಾಡಿದ್ದು ಎಂದು ಗೀತಾ ಕೇಳ್ತಾಳೆ ಇದಕ್ಕೆ ಭಾನುಮತಿ ಫೋನ್ ಮಾಡಿದ ವಿಷಯ ತಿಳಿಸುತ್ತಾಳೆ. ನಾನು ಮೊದಲೇ ಹೇಳಿದ್ದಂತೆ ಹುಷಾರಾಗಿ ನೀವು ಇರಿ ಎಂದು ಗೀತಾ ತಿಳಿಸುತ್ತಾಳೆ.

ಟ್ಯಾಬ್ಲೆಟ್ ಬಗ್ಗೆ ಎಚ್ಚರ ವಹಿಸಲು ಗೀತಾಗೆ ಡಾಕ್ಟರ್ ಸಲಹೆ
ಗೀತಾಗೆ ಫೋನ್ ಮಾಡಿದ ಸುಧಾರಾಣಿ ನೋಡಿಕೊಳ್ಳುವ ಡಾ.ಪಲ್ಲವಿ ಭಾನುಮತಿಗೆ ನಾನು ಕೊಟ್ಟಿರುವ ಟ್ಯಾಬ್ಲೆಟ್ ಬಗ್ಗೆ ಗೊತ್ತಾಗಬಾರದು. ಗೊತ್ತಾದರೆ ಅವಳು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾಳೆ ಎಂದು ಗೀತಾ ಬಳಿ ಹೇಳುತ್ತಾಳೆ. ಒಂದು ಸಣ್ಣ ಅನುಮಾನ ಬಂದರು ಸಹ ಆ ಟ್ಯಾಬ್ಲೆಟ್ ಬಗ್ಗೆ ಆನ್‌ಲೈನ್ ಸರ್ಚ್ ಮಾಡಿದರೆ ಟ್ಯಾಬ್ಲೆಟ್ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಹೇಳಿ ಫೋನ್ ಕಟ್ ಮಾಡ್ತಾಳೆ.

ಸುಧಾರಾಣಿಗೆ ಬರುತ್ತಿರುವ ನೆನಪು
ಸುಧಾರಾಣಿ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ. ಇದರಿಂದ ಸಿತಾರಾ ಮತ್ತು ಭಾನುಮತಿಗೆ ಭಯ ಶುರುವಾಗಿದೆ ಎಂದು ಡಾಕ್ಟರ್ ಹೇಳ್ತಾರೆ.ಅದಕ್ಕೆ ಗೀತಾ ಆ ಸಮಯದಲ್ಲಿ ನಾನು ಸಹ ಅಲ್ಲೇ ಇದ್ದೇ ಅವರಿಗೆ ಸುಧಾರಾಣಿ ಅತ್ತೆಗೆ ನೆನಪು ಬಂದು ಅವರ ಬಣ್ಣ ಬಯಲು ಆಗುತ್ತದೆ ಎಂದು ಭಯ ಶುರುವಾಗಿದೆ ಎಂದು ಗೀತಾ ಹೇಳ್ತಾಳೆ.ಅದಕ್ಕೆ ಡಾಕ್ಟರ್ ಯಾವುದರ ಬಗ್ಗೆ ನೀವು ವರಿ ಮಾಡಬೇಡಿ ನಾನು ಇದ್ದೀನಿ ಎಂದು ಗೀತಾ ಹೇಳ್ತಾಳೆ.

ಸುಧಾರಾಣಿ ಮಾತನ್ನು ನೆನಪು ಮಾಡಿಕೊಂಡ ವಿಜಿ
ಸುಧಾರಾಣಿ ಬೆಳಗ್ಗೆ ಆಡಿದ ರೀತಿಯನ್ನು ವಿಜಯ್ ನೆನಪು ಮಾಡಿಕೊಂಡು ಬೇಜಾರು ಮಾಡಿಕೊಂಡು ಅವರ ಅಮ್ಮ ಮಲಗಿದ್ದ ರೂಮ್ ಬಳಿ ಬರ್ತಾನೆ. ಅಮ್ಮನ ತಲೆಯನ್ನು ಸವರಿ ಅಮ್ಮ ನೀವು ಬೇಗ ಹುಷಾರು ಆಗಬೇಕು ಅದೇ ನನ್ನ ಆಸೆ. ಬೆಳಗ್ಗೆ ನೀವು ಆಡಿದ ರೀತಿ ನೋಡಿ ನಂಗೆ ತುಂಬಾ ಗಾಬರಿಯಾಗಿತ್ತು ಅಂತಾನೆ. ನೀವು ಎಲ್ಲರ ಜೊತೆಗೆ ಬೆರೆತು ಸಂತೋಷವಾಗಿ ಇರಬೇಕು ಅದೇ ನನ್ನ ಆಸೆ ಅಂತಾ ವಿಜಿ ಹೇಳ್ತಾನೆ. ಮಾತ್ರೆ ಕಡೆ ಕಣ್ಣಾಯಿಸಿದ ವಿಜಿಗೆ ಮಾತ್ರೆ ಎರಡೇ ಎರಡು ಇರೋದು ಕಾಣಿಸುತ್ತದೆ. ಇದನ್ನು ನೋಡಿ ಅದಕ್ಕೆ ಹೇಳೋದು ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು ಕೆಲಸದವರನ್ನು ನಂಬಿದರೆ ಹೀಗೆ ಮಾಡೋದು ಎಂದು ಬೈದುಕೊಂಡು ಹೋಗುತ್ತಾನೆ.

ಡೆವಲಪ್ಮೆಂಟ್ ಸೆಂಟರ್‌ಗೆ ಹೊರಟ ಗೀತಾ
ಚಂದ್ರಿಕಾ ಕೊಟ್ಟ ಫೋಟೋ ಹಿಡಿದು ಈಗ ಈ ಹುಡುಗಿ ಹೇಗೆ ಇದ್ದಾಳೆ ಅನ್ನೋದನ್ನು ತಿಳಿಯಲು ಗೀತಾ ಡೆವಲಪ್ಮೆಂಟ್ ಸೆಂಟರ್‌ಗೆ ಹೋಗೋಕೆ ರೆಡಿಯಾಗ್ತಾ ಇರ್ತಾಳೆ. ಇದನ್ನು ನೋಡಿದ ಸುಶೀಲಾಗೆ ತುಂಬಾನೆ ಗಾಬರಿಯಾಗುತ್ತದೆ. ಗೀತಾಳನ್ನು ಎಲ್ಲಿಗೆ ಹೋಗ್ತಾ ಇದ್ಯಾ ಅಂತಾ ಕೇಳಿದಾಗ ಗೀತಾ ಡೆವಲಪ್ಮೆಂಟ್ ಸೆಂಟರ್‌ಗೆ ಹೋಗ್ತಾ ಇದ್ದಾನೆ ಅಂದಾಗ ಸುಶೀಲ ನಾನು ಬರ್ತಿನಿ ಅಂತಾ ಗೀತಾ ಜೊತೆಗೆ ಹೋಗ್ತಾಳೆ. ಗೀತಾಗೆ ನಾನೇ ಚಂದ್ರಿಕಾ ಮಗಳು ಅನ್ನೋ ಸತ್ಯ ಗೊತ್ತಾಗುತ್ತಾ ಕಾದು ನೋಡಬೇಕಿದೆ.