Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Geetha Serial: ಗೀತಾಗೆ ಗೊತ್ತಾಗಿದೆ ನಾನೇ ಚಂದ್ರಿಕಾ ಮಗಳೆಂದು! ಮುಂದೇನು?
ಸಂಚಿಕೆ ಆರಂಭದಲ್ಲಿ ವಿಜಿ ಮನೆಯಲ್ಲಿ ಓಡಾಡ್ತಾ ಇರ್ತಾನೆ ಅಷ್ಟರಲ್ಲಿ ಮನೆ ಕೆಲಸದವರು ಸುಧಾರಾಣಿಗೆ ಕೊಡೋಕೆ ತಿಂಡಿ ತಕೊಂಡು ಹೋಗ್ತಾ ಇರ್ತಾರೆ. ಅಷ್ಟರಲ್ಲಿ ವಿಜಿ ನಾನೇ ತಿನ್ನಿಸುತ್ತೇನೆ ಎಂದು ತಿಂಡಿ ಪ್ಲೇಟ್ ಹಿಡಿದು ಅಮ್ಮನ ರೂಮ್‌ಗೆ ಹೋಗಿ ತಿಂಡಿ ತಿನ್ನಿಸುತ್ತಾನೆ. ನಂತರ ಮಾತ್ರೆ ಕೊಡಲು ಹೋದಾಗ ಇನ್ನೊಂದು ಶೀಟ್ ಮಾತ್ರೆ ಇದ್ಯಾ ಎಂದು ಕೇಳುತ್ತಾನೆ. ಆಗ ಇಲ್ಲ ಎಂದು ಹೇಳುತ್ತಾಳೆ ಆಗ ವಿಜಯ್ ಕೊಡಿ ನಾನೇ ತರ್ತಿನಿ ಅಂತಾ ಹೇಳಿದಾಗ ಅಷ್ಟರಲ್ಲಿ ಭಾನುಮತಿ ಎಂಟ್ರಿ ಕೊಡ್ತಾಳೆ.
ಇತ್ತ ವಿಜಿ ನಾನೇ ಮಾತ್ರೆ ತರ್ತಿನಿ ಅಂತಾ ಹೇಳಿದ್ದು ಕೇಳಿ ಭಾನುಮತಿಗೆ ಶಾಕ್ ಆಗುತ್ತೆ ಅದಕ್ಕೆ ಮಗನೇ ಇದನೆಲ್ಲಾ ಮಾಡೋಕೆ ನಾನು ಇದ್ದೇನೆ ನೀನು ಅಪ್ಪನನ್ನು ಕೊಲೆ ಮಾಡಿದವರ ಬಗ್ಗೆ ತಲೆಕೆಡಿಸಿಕೋ ನನ್ನ ಹತ್ರ ಒಂದು ಸಾಕ್ಷಿ ಇದೆ ಎಂದು ಹೇಳಿ ವಿಜಿ ಮನಸನ್ನು ಡೈವರ್ಟ್ ಮಾಡುತ್ತಾಳೆ ಭಾನುಮತಿ. ವಿಜಿ ಹೋದ ನಂತರ ಸುಧಾರಾಣಿ ಹತ್ತಿರ ಬಂದ ಭಾನುಮತಿ ಮಾತ್ರೆ ಕೊಟ್ಟು ಸುಧಾರಾಣಿಯನ್ನು ಮಲಗಿಸುತ್ತಾಳೆ.
ಸುಧಾರಾಣಿ ಮಲಗಿರುತ್ತಾಳೆ ಕನಸಿನಲ್ಲಿ ಸೂರ್ಯಪ್ರಕಾಶ್ ಬಂದು ಸುಧಾ ಎಂದು ಕರೆದಂತೆ ಆಗುತ್ತದೆ. ಆಗ ಸುಧಾರಾಣಿ ಯಾರು ಎಂದಾಗ ನಾನು ಸೂರ್ಯಪ್ರಕಾಶ್ ನನ್ನ ಇಬ್ಬರು ಸೇರಿ ಕೊಂದರು. ಉಸಿರು ಕಟ್ಟಿಸಿ ನನ್ನ ಸಾಯಿಸಿದ್ರು ಎಂದು ಹೇಳುತ್ತಾನೆ. ನನಗೆ ಸಾಯಿಸೋವಾಗ ನರಕಯಾತನೆ ಆಯಿತು ಎಂದು ಹೇಳಿದಾಗ ಸುಧಾರಾಣಿ ಮನಸಿಗೆ ತುಂಬಾ ನೋವಾಗುತ್ತದೆ.

ಕನಸಿನಲ್ಲಿ ಬೆಚ್ಚಿ ಬಿದ್ದ ಸುಧಾರಾಣಿ
ನೀನು ನೆಮ್ಮದಿಯಾಗಿ ನಿದ್ರೆ ಮಾಡ್ತಾ ಇದ್ದೀಯಾ, ನಾನು ಸತ್ತರು ಕೂಡ ನೆಮ್ಮದಿಯಾಗಿ ನಿದ್ರೆ ಮಾಡ್ತಾ ಇಲ್ಲ ಎಂದು ಸೂರ್ಯಪ್ರಕಾಶ್ ಹೇಳುತ್ತಾನೆ. ನನ್ನ ಕೊಂದವರು ನನ್ನ ಮಗನನ್ನು ಕೊಲ್ಲುತ್ತಾರೆ. ನನ್ನ ಮಗನ ಪ್ರಾಣ ಅಪಾಯದಲ್ಲಿದೆ ಎಂದು ಸೂರ್ಯಪ್ರಕಾಶ್ ಮುನ್ಸೂಚನೆ ನೀಡುತ್ತಾನೆ. ನೀನು ನನ್ನ ಮಗನನ್ನು ಕಾಪಾಡು ಎಂದು ಹೇಳುತ್ತಾನೆ. ಆಗ ಸೂರ್ಯಪ್ರಕಾಶ್ ಕಣ್ಮರೆಯಾಗುತ್ತಾನೆ. ಇತ್ತ ಸುಧಾರಾಣಿ, ವಿಜಯ್ ಎಂದು ಜೋರಾಗಿ ಕೂಗಿಕೊಂಡು ರೂಮ್‌ನಿಂದ ಹೊರಗೆ ಬಂದು ಸೂರ್ಯಪ್ರಕಾಶ್ ಫೋಟೋ ಮುಂದೆ ಕುಳಿತು ಅಳುತ್ತಾ ಇರ್ತಾಳೆ.

ವಿಜಿಗೆ ಎಲ್ಲ ವಿಷಯ ಹೇಳಿದ ಸುಧಾರಾಣಿ
ವಿಜಿಗೆ ಸುಧಾರಾಣಿ ತನ್ನ ಗಂಡ ಕನಸಿನಲ್ಲಿ ಬಂದ ವಿಷಯವನ್ನು ಹೇಳುತ್ತಾಳೆ. ಆಗ ವಿಜಿ ಅಪ್ಪ ಕನಸಿನಲ್ಲಿ ಬಂದಿದ್ರಾ ಎಂದು ಕೇಳುತ್ತಾನೆ. ಯಾವತ್ತಾದ್ರೂ ನಿಮ್ಮ ಅಪ್ಪ ಕನಸಿನಲ್ಲಿ ಬಂದಿದ್ರಾ ಹೇಳು ಅಂದಾಗ ವಿಜಯ್ ಅದಕ್ಕೆಯಾಕೆ ಅಳುತ್ತಾ ಇದ್ದೀಯಾ ಎಂದು ಕೇಳುತ್ತಾನೆ. ಅದಕ್ಕೆ ನಿಮ್ಮ ಅಪ್ಪ ಮುಂದೆ ಆಗುವ ಅನಾಹುತದ ಬಗ್ಗೆ ಹೇಳಿದ್ರು ಅವರನ್ನು ಯಾರೋ ಇಬ್ಬರು ಮೂವರು ಸೇರಿ ಕೊಂದರಂತೆ ನಿನ್ನನ್ನು ಹಾಗೇ ಕೊಲ್ಲುತ್ತೇನೆ ಎಂದು ಅಪ್ಪನ ಬಳಿ ಹೇಳಿದ್ದರಂತೆ ನಂಗೆ ಭಯವಾಗುತ್ತಿದೆ ಎಂದು ಸುಧಾರಾಣಿ ವಿಜಿ ಬಳಿ ಹೇಳುತ್ತಾ ಇರ್ತಾಳೆ. ನಂಗೆ ಏನು ಆಗಲ್ಲ ಸುಮ್ಮನೆ ಇರಮ್ಮ ಎಂದು ಹೇಳುತ್ತಾನೆ.

ತನ್ನದೇ ಪೋಟೋ ನೋಡಿ ಶಾಕ್ ಆದ ಗೀತಾ
ತನ್ನದೇ ಪೋಟೋವನ್ನು ನೋಡಿ ಗೀತಾ ಶಾಕ್ ಆಗ್ತಾಳೆ. ಚಿಕ್ಕ ವಯಸ್ಸಿನ ಪೋಟೋ ಹಾಗೂ ಡೆವಲಪ್ಮೆಂಟ್ ಫೋಟೋ ನೋಡಿ ನಾನೇ ಚಂದ್ರಿಕಾ ಮಗಳು ಗೀತಾ ಗೊತ್ತಾಗುತ್ತದೆ. ಸುಶೀಲನನ್ನು ಯಾಕಮ್ಮ ನನ್ನ ಬಳಿ ಸುಳ್ಳು ಹೇಳಿದೆ ತಾಯಿ ಮಗಳನ್ನು ಯಾಕೆ ದೂರ ಮಾಡಿದೆ ಎಂದು ಕೇಳುತ್ತಾಳೆ.

ಕಣ್ಣೀರು ಹಾಕಿದ ಸುಶೀಲಾ
ಆಗ ಸುಶೀಲಾ ನೀನು ನನ್ನಿಂದ ದೂರವಾಗಿ ಹೋಗ್ತೀಯಾ ಎಂದು ಕಣ್ಣೀರು ಹಾಕ್ತಾಳೆ. ನಂಗೆ ಎಲ್ಲಾ ಅರ್ಥ ಆಯ್ತು ಬಿಡಮ್ಮ, ಚಂದ್ರಿಕಾನೇ ನನ್ನ ತಾಯಿ ಎಂದು ನಿಮಗೆ ಗೊತ್ತಿದ್ದರೂ ಯಾಕೆ ಸುಳ್ಳು ಹೇಳಿದೆ ಎಂದು ಕೇಳಿದಾಗ ಚಂದ್ರಿಕಾನೇ ನಿನ್ನ ತಾಯಿ ಎಂದು ಹೇಳಿದಾಗ ಗೀತಾ ಅಮ್ಮ ನಾನು ಬರ್ತಾ ಇದ್ದೇನೆ ಎಂದು ಗೀತಾ ಅಲ್ಲೇ ಸುಶೀಲನನ್ನು ಬಿಟ್ಟು ಹೋಗ್ತಾಳೆ.