Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Geetha Serial: ಗೀತಾ-ವಿಜಿ ಜೀವ ಅಪಾಯದಲ್ಲಿ
ಭಾನುಮತಿ ವಿಜಿ ಬಗ್ಗೆ ಸಿತಾರಾ ಬಳಿ ಹೇಳ್ತಾ ಇರ್ತಾಳೆ ನಾವು ಸ್ಪಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡದೇ ಇದ್ದರೆ ನಮ್ಮ ಬುಡಕ್ಕೆ ಬರುತ್ತದೆ ಎಂದು ಹೇಳುತ್ತಾ ಇರುತ್ತಾಳೆ. ವಿಜಿ ಮಾತ್ರ ಅಪ್ಪನ ಸಾವಿಗೆ ಕಾರಣರಾದವರ ಬಗ್ಗೆ ಮಾತ್ರ ಹುಡುಕುತ್ತಾ ಇದ್ದಾನೆ ಇದಕ್ಕೆ ನಾವು ಬೇರೆಯದ್ದೇ ಮಾಸ್ಟರ್ ಪ್ಲ್ಯಾನ್ ಮಾಡಬೇಕು ಹೇಳುತ್ತಾನೆ. ಹೌದಣ್ಣ ಎಂದು ಭಾನುಮತಿ ಹೇಳಿ ವಿಜಯ್ ಜೀವಕ್ಕೆ ಸಂಚಕಾರ ತರುವ ಪ್ಲ್ಯಾನ್ ರೆಡಿ ಮಾಡುತ್ತಿದ್ದಾರೆ.
ಸುಧಾರಾಣಿ ರೂಮ್‌ಗೆ ಬಂದ ವಿಜಿ ಅಮ್ಮನ ಬಳಿ ಬಂದು ಅಳುತ್ತಾ ಇರ್ತಾನೆ ಅಮ್ಮ ಅಪ್ಪನ ಸಾವು ಎಷ್ಟು ಕ್ರೂರವಾಗಿ ಸಾಯಿಸಿದ್ದಾರೆ ಎಂದು ಹೇಳಿ ಅಳುತ್ತಾ ಇರ್ತಾನೆ. ಅದಕ್ಕೆ ಸುಧಾರಾಣಿ ಸಮಾಧಾನವನ್ನು ಮಾಡುತ್ತಾಳೆ. ನಿನ್ನ ಬಳಿ ನನ್ನ ಮನಸಿನ ನೋವು ಹೇಳಿಕೊಂಡೆ ನೀನು ಅಳಬೇಡ ವಿಜಿ ಅಂತಾಳೆ.
ಅಮ್ಮ ನಾನು ಅಪ್ಪನ ಸಾವಿಗೆ ಕಾರಣರಾದವರನ್ನು ನಾನು ಸುಮ್ಮನೆ ಬಿಡಲ್ಲ, ಅವರು ಯಾರೇ ಆಗಿದ್ರು ನಾನು ಸುಮ್ಮನೆ ಬಿಡಲ್ಲ ಅಪ್ಪನ ಸಾವು ಹೇಗೆ ಆಯ್ತು ಹಾಗೇ ನರಳಿ ನರಳಿ ಸಾಯಬೇಕು ಹಾಗೇ ಮಾಡ್ತಿನಿ, ಅವರನ್ನು ಜೈಲಿಗೆ ಹಾಕಿಸ್ತೇನೆ ಎಂದು ವಿಜಿ ಹೇಳುತ್ತಾನೆ. ಇದಕ್ಕೆ ಸುಧಾರಾಣಿ ನಿಮ್ಮ ಅಪ್ಪ ನಿನ್ನ ಜೀವಕ್ಕೂ ಅಪಾಯ ಇದೆ ಎಂದು ಹೇಳಿದ್ದಾರೆ. ನಿನಗೆ ಯಾವ ಉಸಾಬರಿಯೂ ಬೇಡ ಎಂದು ಹೇಳಿದರೂ ವಿಜಿ ಮಾತ್ರ ನಾನು ಅಪ್ಪನ ಕೊಂದವರನ್ನು ಸುಮ್ಮನೆ ಬಿಡಲ್ಲ ಎಂದು ಹೇಳುತ್ತಾನೆ.
ಡೆವಲಪ್ಮೆಂಟ್ ಸೆಂಟರ್‌ನಿಂದ ಬಂದ ಸುಶೀಲ ಬಹಳ ಖುಷಿಯಲ್ಲಿದ್ದಾಳೆ. ಗೀತಾಳ ಫೋಟೋವನ್ನು ಬದಲಾಯಿಸಿ ನಿಟ್ಟಿಸಿರು ಬಿಟ್ಟಿದ್ದಾಳೆ. ಈಗ ಗೀತಾ ಜೈಲಿನಲ್ಲಿರುವ ಚಂದ್ರಿಕಾಳನ್ನು ನೋಡಲು ಹೋಗಲು ರೆಡಿಯಾಗುತ್ತಿದ್ದಾಳೆ.

ಜೈಲಿನಲ್ಲಿ ಕೊರಗುತ್ತಿರುವ ಚಂದ್ರಿಕಾ
ಜೈಲಿನಲ್ಲಿ ಮಗಳ ನೆನಪಿನಲ್ಲಿ ಕೊರಗುತ್ತಿದ್ದಾಳೆ ನನ್ನ ಮಗಳು ಎಲ್ಲಿರುವಳೋ ಎಂದು ಯೋಚನೆ ಮಾಡುತ್ತಿದ್ದಾಳೆ. ಅಲ್ಲಿಗೆ ಬಂದ ಸ್ವರ್ಣ ಏನಕ್ಕ ಹೀಗೆ ನೀವು ಯೋಚನೆ ಮಾಡ್ತಾ ಕುಳಿತರೆ ನಿಮ್ಮ ಆರೋಗ್ಯ ಸಹ ಹಾಳಾಗುತ್ತದೆ. ಬನ್ನಿ ಹೊರಗೆ ಹೋಗಿ ತಿರುಗಾಡಿಕೊಂಡು ಬರೋಣ ಎಂದು ಹೇಳುತ್ತಾಳೆ. ಆ ನಂತರ ಗೀತಾ ಬಗ್ಗೆ ಸ್ವರ್ಣ ಮಾತನಾಡುತ್ತಾಳೆ ಆಕಸ್ಮಿಕವಾಗಿ ಗೀತಾ ಫೋಟೋ ಕಳೆದು ಬಿಟ್ಟರೆ ಏನು ಮಾಡುತ್ತೀರಾ ಎಂದು ಕೇಳಿದಾಗ. ಆಗ ಗೀತಾಳನ್ನು ಬೈಯ್ಯೋ ಆಗಿಲ್ಲ ಎಂದು ಚಂದ್ರಿಕಾ ಹೇಳುತ್ತಾಳೆ.

ವಿಜಿ ಜೀವಕ್ಕೆ ಅಪಾಯ
ವಿಜಿ ಗೀತಾ ಮನೆಗೆ ಬಂದು ಗೀತಾ ಬಳಿ ಅಪ್ಪನ ಸಾವಿಗೆ ಕಾರಣರಾದವನ್ನು ಹುಡುಕಬೇಕು ಗೀತಾ ಎಂದು ಹೇಳುತ್ತಾ ಇರುತ್ತಾನೆ. ಆಗ ಗೀತಾ ಮನೆಗೆ ಯಾರು ಯಾರು ಬಂದಿದ್ದರು ಮನೆಗೆ ಎಂದು ನೆನಪಿಸಿಕೋ ಅವಾಗ ಎನಾದ್ರು ಗೊತ್ತಾಗಬಹುದು ಎಂದು ಹೇಳುತ್ತಾಳೆ. ಆಗ ವಿಜಿ ಅದೇ ಪ್ರಯತ್ನದಲ್ಲಿ ಇದ್ದೇನೆ ಎಂದು ಹೇಳುತ್ತಾನೆ. ನಾನು ನಿನ್ನ ಜೊತೆಗೆ ಇದ್ದು ನಿನಗೆ ಸಹಾಯವನ್ನು ಮಾಡುತ್ತೇನೆ ಎಂದು ಗೀತಾ ಹೇಳುತ್ತಾಳೆ.

ವಿಜಿಯ ಹಿಂದೆ ರೌಡಿಗಳು
ಇತ್ತ ಭಾನುಮತಿ ವಿಜಿಗೆ ಟಾರ್ಚರ್ ಕೊಡಲು ರೆಡಿಯಾಗಿದ್ದಾಳೆ ವಿಜಿಯ ಹಿಂದೆ ರೌಡಿಗಳನ್ನು ಬಿಟ್ಟಿದ್ದಾಳೆ. ಇನ್ನೂ ರೌಡಿಗಳು ವಿಜಿ ಹಾಗೂ ಗೀತಾ ಹಿಂದೆ ಬಿದ್ದಿದ್ದಾರೆ. ವಿಜಿ ಗೀತಾ ಮನೆಯಿಂದ ಹೊರಟ ಮೇಲೆ ವಿಜಿಯನ್ನು ರೌಡಿಗಳು ಫಾಲೋ ಮಾಡಿಕೊಂಡು ಬರುತ್ತಿದ್ದಾರೆ. ಇದು ವಿಜಿಗೆ ಗೊತ್ತಾಗಿದೆ ಕಾರು ಹೊಡಿಸುವಾಗ ಮಿರರ್ ನಲ್ಲಿ ಕಾರ್ ಫಾಲೋ ಮಾಡುತ್ತಿರುವ ರೌಡಿಗಳನ್ನು ನೋಡಿದ್ದಾನೆ.

ಗೀತಾಗೆ ಶಾಕ್
ಇತ್ತ ಗೀತಾ ವಿಜಿಯನ್ನು ಮಾತಾಡಿಸಿದರು ಅವನ ಮನಸೆಲ್ಲಾ ರೌಡಿಗಳ ಮೇಲಿದೆ ಅವರು ಯಾರು ಯಾಕೆ ಫಾಲೋ ಮಾಡಿಕೊಂಡು ಬರುತ್ತಿದ್ದಾರೆ ಎಂದು ಯೋಚನೆಯನ್ನು ಮಾಡುತ್ತಿದ್ದಾನೆ. ಗೀತಾ ವಿಜಿಗೆ ಕೇಳುತ್ತಾಳೆ ಏನಾಗಿದೆ ಎಂದು ಅದಕ್ಕೆ ವಿಜಿ ಯಾರೋ ಫಾಲೋ ಮಾಡುತ್ತಿದ್ದಾರೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಗೀತಾಗೆ ಶಾಕ್ ಆಗಿದೆ. ಮುಂದೇನಾಗುತ್ತದೆ ಕಾದು ನೋಡಬೇಕಾಗಿದೆ.