Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Geetha Serial: ವಿಜಿ-ಗೀತಾಗೆ ಕ್ಷಣ ಕ್ಷಣಕ್ಕೂ ಅಗ್ನಿಪರೀಕ್ಷೆ
ಸಂಚಿಕೆ ಆರಂಭದಲ್ಲಿ ಶೃತಿ ವರುಣ್ ಕೊಡುತ್ತಿರುವ ಟಾರ್ಚರ್ ನೆನಸಿಕೊಂಡು ರೂಮ್‌ನಲ್ಲಿ ಕುಳಿತು ಅಳುತ್ತಾ ಡೈರಿಯನ್ನು ಕೈಗೆತ್ತಿಕೊಂಡಿದ್ದಾಳೆ.
ನನ್ನ ಮನಸಿನಲ್ಲಿ ಇರುವ ನೋವನ್ನು ಯಾರ ಬಳಿಯೂ ಹೇಳಲು ಆಗುತ್ತಿಲ್ಲ ಎಂದು ಡೈರಿಯಲ್ಲಿ ಬರೆಯುತ್ತಿದ್ದಾಳೆ. ವರುಣ್ ಲವ್ ಮಾಡು ಎಂದು ಟಾರ್ಚರ್ ಕೊಟ್ಟ ನಾನು ಮಾಡಲ್ಲ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಲವ್ ಮಾಡುವಂತೆ ಮಾಡಿದ. ಈಗ ದುಡ್ಡು ಬೇಕು ಎಂದು ಪೀಡಿಸ್ತಾ ಇದ್ದಾನೆ. ಇದನ್ನು ನನ್ನ ಮೇಲೆ ಪ್ರಾಣ ಇಟ್ಟುಕೊಂಡಿರುವ ಮಾಮ್‌ಗೆ ಹೇಳೋಕೆ ಆಗ್ತಿಲ್ಲ ಎಂದು ಬರೆಯುತ್ತಾ ಇರುತ್ತಾಳೆ ಅಷ್ಟರಲ್ಲಿ ಮನೆಕೆಲಸದವಳು ಬಂದು ಅಮ್ಮೋರು ಕರೆಯುತ್ತಿದ್ದಾರೆ ಎಂದು ಹೇಳುತ್ತಾರೆ ಶೃತಿ ಹೋಗುತ್ತಾಳೆ.
ಈ ಕಡೆ ಮೂವಿ ನೋಡುತ್ತಾ ಕುಳಿತಿದ್ದ ಸುಧಾರಾಣಿ ತನ್ನ ಸಾಯಿಸಿದವರನ್ನು ನೆನಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ರೂಮ್‌ನಿಂದ ಹೊರಗೆ ಬಂದು ಏನೇನೋ ಹುಡುಕುತ್ತಿದ್ದಾಗ ಸುಧಾರಾಣಿ ಬಳಿ ಡೈರಿ ಇರುತ್ತದೆ. ಇನ್ನೂ ರೂಮ್‌ಗೆ ಬಂದ ಸುಧಾರಾಣಿ ಡೈರಿಯಲ್ಲಿ ಸಾಯಿಸಿದವರನ್ನು ಸ್ಕೆಚ್ ಬಿಡಿಸಿರುತ್ತಾಳೆ.

ಸ್ಕೆಚ್ ಮಾಡಿರುವ ಸುಧಾರಾಣಿ
ರೂಮ್‌ಗೆ ಬಂದ ಭಾನುಮತಿ ಸುಧಾರಾಣಿಗೆ ಜ್ಯೂಸ್ ಕೊಟ್ಟು ಮಾತ್ರೆ ಕೊಟ್ಟು ಹೋಗೋಕೆ ಬರ್ತಾಳೆ. ಆದರೆ ಡೈರಿಯಲ್ಲಿ ಸುಧಾರಾಣಿ ಬಿಡಿಸಿರುವ ಸ್ಕೆಚ್ ಬಗ್ಗೆ ಗಮನ ಹರಿಸೋದಿಲ್ಲ. ಇನ್ನೊಮ್ಮೆ ನೋಡಿದಾಗ ಸ್ಕೆಚ್ ಮಾಡಿರುವ ಹಾಳೆ ಮಡಚಿಕೊಂಡು ಬಿಡುತ್ತದೆ. ಅದೇನೇನೋ ಬರೆದುಕೊಂಡು ಇರಬೇಕು ಎಂದು ಭಾನುಮತಿ ಸುಮ್ಮನೆ ಆಗ್ತಾಳೆ. ರೌಡಿಗಳು ವಿಜಿ ಹಾಗೂ ಗೀತಾ ಬರುತ್ತಿರುವ ರೋಡ್‌ಗೆ ಆಲೂಗೆಡ್ಡೆಗಳಿಗೆ ಮೊಳೆ ಹಾಕಿ ಕಾರು ಪಂಕ್ಚರ್ ಮಾಡಲು ತಯಾರಿ ಮಾಡಿ ರೋಡ್‌ಗೆ ಎಸೆಯುತ್ತಾರೆ. ಆಗ ಮತ್ತೆ ಗೀತಾ ಮತ್ತು ವಿಜಿ ಬರುತ್ತಿರುವ ಕಾರು ಪಂಕ್ಚರ್ ಆಗುತ್ತದೆ. ಆಗ ಗೀತಾ ಪಂಕ್ಚರ್ ಹಾಕೋರಿಗೆ ಫೋನ್ ಮಾಡಿ ಕಾರು ಪಂಕ್ಚರ್ ಹಾಕಿಸಿ ಹೊರಡುತ್ತಾರೆ.

ವಿಜಿಗೆ ಆತ್ಮವಿಶ್ವಾಸ ತುಂಬಿದ ಗೀತಾ
ನಂತರ ಗೀತಾ ವಿಜಿ ಜೈಲಿನತ್ರ ಚಂದ್ರಿಕಾ ನೋಡೋಕೆ ಹೋಗುತ್ತಾರೆ. ಆಗ ಗೀತಾ, ವಿಜಿಗೆ ಆತ್ಮವಿಶ್ವಾಸ ತುಂಬುತ್ತಾಳೆ. ನೀನು ಎದುರಾಳಿಗಳಿಗಿಂತ ಸ್ಟ್ರಾಂಗ್ ಆಗಿ ಇರಬೇಕು. ಅವರು ಕೊಟ್ಟ ಟಾರ್ಚರ್‌ಗೆ ದುಪ್ಪಟ್ಟು ಟಾರ್ಚರ್ ಕೊಡಬೇಕು ಎಂದು ವಿಜಿಗೆ ಧೈರ್ಯದಿಂದ ಸನ್ನಿವೇಶವನ್ನು ಎದುರಿಸಲು ಹೇಳುತ್ತಾಳೆ ನೀನು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡ ಎಂದು ಗೀತಾ ಹೇಳಿದ ಮಾತನ್ನೇ ವಿಜಿ ನೆನಪಿಸಿಕೊಳ್ಳುತ್ತಾ ಇರ್ತಾನೆ. ಈ ಕಡೆ ಗೀತಾ ವಿಜಿ ಕರೆದು ಜೈಲಿನೊಳಗೆ ಹೋಗುತ್ತಾಳೆ. ವಿಜಿ ಫೋನ್ ಮಾಡಿ ಬರ್ತಿನಿ ಹೋಗು ಎಂದು ಗೀತಾಳನ್ನು ಕಳಿಸುತ್ತಾನೆ.

ಸುಧಾರಾಣಿ ರೂಮ್‌ಗೆ ಬಂದ ಶೃತಿ
ಸುಧಾರಾಣಿ ಶೃರಿ ಡೈರಿ ಯನ್ನು ತಂದು ತನ್ನ ಕೊಂದವರ ಸ್ಕೆಚ್ ಬಿಡಿಸಿರುತ್ತಾಳೆ. ನಂತರ ವಾಶ್ ರೂಮ್‌ಗೆ ಹೋಗಿ ಬರುವಷ್ಟರಲ್ಲಿ ಎಲ್ಲರನ್ನು ಕೇಳಿ ಬಂದ ಶೃತಿ ಸುಧಾರಾಣಿ ರೂಮ್‌ಗೆ ಡೈರಿ ಹುಡುಕೋಕೆ ಬರ್ತಾಳೆ. ಡೈರಿ ಹಾಸಿಗೆ ಮೇಲೆ ಇರೋದನ್ನು ನೋಡಿ ನಿಟ್ಟುಸಿರು ಬಿಡುತ್ತಾಳೆ. ನಂತರ ಡೈರಿಯನ್ನು ತಗೆದುಕೊಂಡು ಅಲ್ಲಿಂದ ಹೊರಡುತ್ತಾಳೆ.

ಟೆನ್ಷನ್‌ನಲ್ಲಿ ಸುಧಾರಾಣಿ
ವಾಶ್ ರೂಮ್‌ನಿಂದ ಬಂದ ಸುಧಾರಾಣಿ ಡೈರಿ ಮಂಚದ ಮೇಲೆ ಇಲ್ಲದ್ದನ್ನು ನೋಡಿ ಹುಡುಕಾಟ ನಡೆಸುತ್ತಾಳೆ. ಡೈರಿಯನ್ನು ಇಲ್ಲೇ ಇಟ್ಟಿದ್ದೇ ಎಲ್ಲಿ ಹೋಯಿತು ನಾನು ಅವರಿಬ್ಬರ ಸ್ಕೆಚ್ ಬಿಟ್ಟಿದ್ದೆ ಎಂದು ಅಂದುಕೊಂಡು ಡೈರಿ ಹುಡುಕಾಟ ಆರಂಭಿಸಿದ್ದಾರೆ. ಶೃತಿ ಡೈರಿ ಸಿಕ್ಕ ಖುಷಿಯಲ್ಲಿದ್ದಾಳೆ ಆದರೆ ಸುಧಾರಾಣಿ ಟೆನ್ಷನ್‌ನಲ್ಲಿದ್ದಾರೆ. ಭಾನುಮತಿ ಡೈರಿ ಎನಾದ್ರು ಸಿಕ್ಕಿದರೆ ಶಾಕ್ ಆಗೋದು ಗ್ಯಾರಂಟಿಯಾಗಿದೆ.ಆದರಲ್ಲಿ ಭಾನುಮತಿ ಹಾಗೂ ಸಿತಾರನ ಚಿತ್ರವನ್ನು ಸುಧಾರಾಣಿ ಬಿಡಿಸಿದ್ದಾಳೆ. ಮುಂದೇನು ಆಗುತ್ತದೆ ಕಾದು ನೋಡಬೇಕಿದೆ.