Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೀತಾ: ಸಿಗುತ್ತಾ ಗೀತಾಗೆ ಬಾಲ್ಯದ ಪೋಟೊ?
ಗೀತಾ ಮತ್ತು ವಿಜಿ ಇಬ್ಬರು ಫೋಟೋ ಅನ್ನು ಹುಡುಕುತ್ತಾ ತಾವು ಬಂದ ದಾರಿಯಲ್ಲಿ ಹೋಗಿದ್ದಾರೆ. ಅವರು ಓಡಾಡಿದ್ದಾರೆ ರಸ್ತೆಯಲ್ಲಿ ಹೋಗುವಾಗ ಅವರ ಕಣ್ಣಿಗೆ ಹುಚ್ಚ ಬಿದ್ದಿದ್ದಾನೆ. ಕೈಯಲ್ಲಿದ್ದ ಫೋಟೋವನ್ನು ನೋಡಿದ ವಿಜಿಗೆ ತಕ್ಷಣವೇ ಗೀತಾ ಕೈಯಲ್ಲಿದ್ದ ಫೋಟೋ ಇದೇ ಎಂದು ಅನಿಸಿದೆ. ತಕ್ಷಣವೇ ಗೀತಾಳನ್ನು ಕರೆದು ನೋಡು ಅದೇ ಫೋಟೋನ ಎಂದು ಕೇಳಿದ್ದಾನೆ.
ಅದಕ್ಕೆ ಪ್ರತ್ಯುತ್ತರವಾಗಿ ಗೀತಾ ಚಂದ್ರಿಕಾ ಕೊಟ್ಟ ಫೋಟೋ ಅದೇ ಎಂದು ಹೇಳಿದ್ದಾಳೆ. ನಂತರ ಇಬ್ಬರೂ ಸಹ ಹುಚ್ಚ ನಿಂದ ಫೋಟೋವನ್ನು ತೆಗೆದುಕೊಳ್ಳಲು ಹರಸಾಹಸಪಟ್ಟಿದ್ದಾರೆ. ಹುಚ್ಚ ಯಾವುದೇ ಸರ್ಕಸ್ ಮಾಡಿದರು ಸಹ ಗೀತಾ ಮತ್ತು ವಿಜಿಗೆ ಫೋಟೋವನ್ನು ಕೊಡೋದಿಲ್ಲ. ಇದರಿಂದ ಕಂಗಾಲಾದ ಗೀತಾಳನ್ನು ನೋಡಿ ವಿಜಿ ಒಂದು ಐಡಿಯಾವನ್ನು ಉಪಯೋಗಿಸುತ್ತಾನೆ.
ಒಂದು ಬೊಂಬೆಯನ್ನು ತಂದು ತಗೋ ಇದು ನಿನ್ನ ಚಿನ್ನು ಆ ಫೋಟೋವನ್ನು ನಮಗೆ ಕೊಡು ಎಂದು ವಿಜಿ ಕೇಳಿದ್ದಾನೆ. ಬೊಂಬೆಯನ್ನು ಕಂಡ ಹುಚ್ಚ ನನ್ನ ಚಿನ್ನು ಕೊಡು ಎಂದು ಕೇಳಿದ್ದಾನೆ. ಅರ್ಧದಲ್ಲಿ ಫೋಟೋವನ್ನು ವಾಪಸ್ ಕಿತ್ತುಕೊಂಡಿದ್ದಾನೆ.
ಕೊನೆಗೂ ಹೇಗೋ ಸರ್ಕಸ್ ಮಾಡಿ ಗೀತಾಗೆ ಚಂದ್ರಿಕಾ ಕೊಟ್ಟ ಫೋಟೋವನ್ನು ವಿಜಿ ಕೊಡಿಸಿದ್ದಾನೆ. ಇದರಿಂದ ಗೀತಾಗೆ ಸಕ್ಕತ್ ಖುಷಿಯಾಗಿದೆ. ಹೇಗೋ ಫೋಟೋ ಸಿಕ್ತು, ಚಂದ್ರಿಕಾ ಅಮ್ಮನಿಗೆ ನನ್ನ ಮುಖ ತೋರಿಸಲು ಸಾಧ್ಯವಾಯಿತು ಥ್ಯಾಂಕ್ ಯು ವಿಜಿ ಎಂದು ಹೇಳಿದ್ದಾಳೆ.
ಇತ್ತ ಶ್ರುತಿಗೆ ತನ್ನ ಮನಸಲ್ಲಿ ಆಗುತ್ತಿರುವ ತಳಮಳವನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿತಾರಾ ನೀನು ವರುಣ್ ಪ್ರೀತಿಸುವ ವಿಚಾರ ನಮಗೆ ತಿಳಿದಿದೆ ಅದು ಮೂರನೇ ವ್ಯಕ್ತಿ ಅವರಿಂದ ತಿಳಿದಿದ್ದು ಬೇಸರವಾಗಿದೆ ಎಂದು ಶ್ರುತಿಗೆ ಹೇಳುತ್ತಾನೆ. ನಂತರ ನಿಮ್ಮಮ್ಮ ನೀವು ಈ ವಿಚಾರ ತಿಳಿದಿದೆ ನೀನೇ ತಿಳಿಸಲಿ ಎಂದು ಕಾಯುತ್ತಿದ್ದಾಳೆ ಎಂದು ಹೇಳಿದ್ದಾನೆ.

ಶ್ರುತಿಯ ನೋಡು ಯಾರಿಗೂ ಹೇಳಿಕೊಳ್ಳುವಂತಿಲ್ಲ
ಆದ್ರೆ ಅವಳ ಮಾತನ್ನು ಕೇಳದೆ ಫೋನ್ ಬಂದ ಕಾರಣ ಸಿತಾರಾ ಹಾಗೆ ಓಡಿ ಹೋಗಿದ್ದಾನೆ. ಇರಿಂದಾಗಿ ಶೃತಿಯ ಮನಸ್ಸಿಗೆ ಮತ್ತಷ್ಟು ಬೇಸರವಾಗಿದೆ. ನನ್ನ ಮನಸ್ಸಿನಲ್ಲಿ ಆಗುತ್ತಿರುವ ವೇದನೆಯನ್ನು ಯಾರ ಬಳಿ ಹೇಳಿಕೊಳ್ಳಲಿ ಯಾರೂ ಸಹ ಕೇಳಲು ತಯಾರಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಕೊಡುವ ಕಾಟಕ್ಕೆ ಸಕ್ಕತ್ತು ಬೇಜಾರಾಗಿದೆ ಆತನಿಗೆ ದುಡ್ಡು ಬೇಕು ಎಂದು ಹುಚ್ಚನ ತರ ಆಡುತ್ತಿದ್ದಾನೆ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದುರಿಸುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.

ಚಿಂತೆಯಲ್ಲಿ ಮುಳಗಿ ಹೋದ ಸುಶೀಲ
ಫೋಟೋ ಸಿಕ್ಕಿದ ಖುಷಿಯಲ್ಲಿ ಮನೆ ಹತ್ತಿರ ಗೀತಾ ಮತ್ತು ವಿಜಿ ಬರುತ್ತಾರೆ ಅವರಿಬ್ಬರ ಸಂತೋಷವನ್ನು ನೋಡಿದ ಸುಶೀಲನಿಗೆ ಚಿಂತೆಯಾಗುತ್ತದೆ. ಗೀತಾ ಹಾಗೂ ವಿಜಿ ಮನೆಗೆ ಬಂದು ಕುಳಿತುಕೊಳ್ತಾರೆ. ಇಬ್ಬರು ಫೋಟೋ ಬಗ್ಗೆ ಡಿಸ್ಕಸ್ ಮಾಡ್ತಾ ಇರ್ತಾರೆ. ವಿಜಿಗೆ ಗೀತಾ ಈ ಫೋಟೋ ನೋಡಿದರೆ ಏನು ಅನಿಸುತ್ತದೆ ಎಂದು ಕೇಳಿದಾಗ ತಮಾಷೆ ಮಾಡ್ತಾ ಇರ್ತಾನೆ. ಆದರೆ ಗೀತಾ ನಂಗೆ ಈ ಫೋಟೋ ನೋಡುದ್ರೆ ತುಂಬಾ ಫೀಲ್ ಆಗ್ತಿದೆ ಅಂತ ಹೇಳ್ತಾಳೆ ಇದಕ್ಕೆ ಸುಶೀಲ ಶಾಕ್ ಆಗ್ತಾಳೆ. ಸೇರಿಸಿದ್ರೆ ನಮಗೆ ತುಂಬಾ ಪುಣ್ಯ ಬರುತ್ತೆ ಎಂದು ಹೇಳುವಾಗ ಸುಶೀಲನಿಗೆ ಆಕಾಶವೇ ತಲೆ ಮೇಲೆ ಬಿದ್ದಹಾಗೆ ಆಗುತ್ತದೆ.

ಭಾನುಮತಿಗೆ ಶಾಕ್ ಆಗುತ್ತದೆ
ಆಗ ಸುಶೀಲ ಫೋಟೋವನ್ನು ಪೇಪರ್ ನಲ್ಲಿ ಹಾಕಿದರೆ ಆ ಹುಡುಗಿ ಮದುವೆಯಾಗಿದ್ದರೆ ಅವಳ ಸಂಸಾರವನ್ನು ನೀನೇ ಹಾಳು ಮಾಡಿದ ಹಾಗೆ ಆಗುತ್ತದೆ ಎಂದು ಗೀತಾಗೆ ತಿಳಿಸುತ್ತಾಳೆ. ಇದಕ್ಕೆ ವಿಜಿ ಸಹ ಧನಿಗೂಡಿಸುತ್ತಾನೆ ಇವನಿಗೆ ಅದೆಲ್ಲ ಎಲ್ಲಿ ಗೊತ್ತಾಗಬೇಕು ಅತ್ತೆ ಪುಣ್ಯ ತಗೊಂಡು ತುಂಬಾ ಒದ್ದಾಡ್ಲಿ ಎಂದು ಕಿಚಾಯಿಸುತ್ತಾನೆ. ವಿಜಿ ರೂಮಿಗೆ ಇದ್ದಕ್ಕಿದ್ದಂತೆ ಭಾನುಮತಿ ಎಂಟ್ರಿ ಕೊಡ್ತಾಳೆ. ನನ್ನ ಮಗ ಏನು ಮಾಡ್ತಿದ್ದಾನೆ ಎಂದು ನೋಡುತ್ತಾ ಇರಬೇಕಾದರೆ ವಿಜಿ ತನ್ನ ಅಪ್ಪನ ಕೊಲೆಯ ವಿಚಾರವಾಗಿ ಕೆಲವೊಂದು ಮಾಹಿತಿಗಳನ್ನು ಭಾನುಮತಿ ಜೊತೆ ಹಂಚಿಕೊಳ್ಳುತ್ತಾನೆ. ಇದೆಲ್ಲವನ್ನು ಕೇಳಿದ ಭಾನುಮತಿಗೆ ಶಾಕ್ ಆಗುತ್ತೆ

ಭಾನುಮತಿ ಬಳಿ ವಿಜಿ ಚರ್ಚೆ
ನಾನು ನಿನ್ನ ಇಲ್ಲಿ ತನಕ ಬಿಟ್ಟಿದ್ದೆ ತಪ್ಪು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಇವ್ನು ಇಷ್ಟು ಹಾರ್ಡ್ ವರ್ಕ್ ಮಾಡ್ತಾನೆ ಅಂತ ಗೊತ್ತಿರ್ಲಿಲ್ಲ ಎಂದು ಅಂದುಕೊಳ್ತಾ ಇರ್ತಾಳೆ. ನಂತರ ವಿಜಿ ತನ್ನ ಅಪ್ಪನ ಮರ್ಡರ್ ಮಾಡಿದ ನಂತರ ಬಂದ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಗ್ಗೆ ಭಾನುಮತಿ ಬಳಿ ಹೇಳ್ತಾನೆ. ಇದು ಸಹ ಭಾನುಮತಿಗೆ ಶಾಕ್ ಕೊಡುತ್ತದೆ. ಭಾನುಮತಿ ನಂತರ ವಿಜಿ ರೂಮಿಂದ ಹೊರಗಡೆ ಹೋಗುವಾಗ ಅಲ್ಲೆ ನಿಂತು ನೀನು ನನ್ನ ಭರವಸೆ ಎಂದು ಹೇಳುತ್ತಿದ್ದೀಯ ನೋಡ್ತಾ ಇರು ನಿನ್ನ ದಾರಿಯನ್ನ ಹೇಗೆ ತಪ್ಪುಸ್ತೀನಿ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಮುಂದೆ ಭಾನುಮತಿ ಎನು ಮಾಡ್ತಾಳೆ ನೋಡಬೇಕಿದೆ.