Don't Miss!
- Automobiles
ಹೆಚ್ಚಿನ ಸೇಫ್ಟಿ ಫೀಚರ್ಸ್ಗಳೊಂದಿಗೆ ಬಿಡುಗಡೆಗೊಂಡ 2023ರ ಹ್ಯುಂಡೈ ಕ್ರೆಟಾ
- Finance
ಅದಾನಿ ಗ್ರೂಪ್ ಲಿಂಕ್ನ ಸಂಸ್ಥೆಗೆ ಯುಕೆ ಮಾಜಿ ಪಿಎಂ ಬೋರಿಸ್ ಸಹೋದರ ರಾಜೀನಾಮೆ!
- Technology
ಭಾರತದಲ್ಲಿ ಸ್ಯಾಮ್ಸಂಗ್ನಿಂದ ಹೊಸ ಲ್ಯಾಪ್ಟಾಪ್ ಸರಣಿ ಬಿಡುಗಡೆ! ಬೆಲೆ ಎಷ್ಟು?
- News
Namma Metro 3ನೇ ಹಂತದ ಪ್ರಸ್ತಾವನೆ ಸ್ವೀಕರಿಸಿದ ಕೇಂದ್ರ
- Sports
ವಿರಾಟ್ ಕೊಹ್ಲಿ ಈ ವಯಸ್ಸಿನವರೆಗೆ ಕ್ರಿಕೆಟ್ ಆಡಿದರೆ, 100 ಶತಕ ದಾಖಲಿಸುತ್ತಾರೆ; ವ್ಯಾನ್ ಡೆರ್ ಮೆರ್ವೆ
- Lifestyle
ಬ್ಲ್ಯಾಕ್ಹೆಡ್ಸ್ ಸಂಪೂರ್ಣ ಹೋಗಲಾಡಿಸಲು ಈ ಎಕ್ಸ್ಪರ್ಟ್ ಟಿಪ್ಸ್ ಬೆಸ್ಟ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವರುಣ್‌ಗೆ ಕಾಪಾಳಮೋಕ್ಷ ಮಾಡಿದ ಗೀತಾ, ಸುಮ್ನಾಗ್ತಾನಾ ವರುಣ್?
ವರುಣ್, ಗೀತಾ ಬಳಿ ಒಂದೇ ಒಂದು ಮುತ್ತುಕೊಡು ಗೀತಾ ಪ್ಲೀಸ್ ನಿನ್ನ ದಮ್ಮಯ್ಯ, ನಿನ್ನ ಕಾಲಿಗೆ ಬೇಕಾದರೂ ಬೀಳುತ್ತೇನೆ ಒಂದೇ ಒಂದು ಮುತ್ತು ಕೊಡು ಎಂದು ಗೀತಾಗೆ ದುಂಬಾಲು ಬೀಳುತ್ತಾನೆ. ಇದರಿಂದ ಕಸಿವಿಸಿಗೊಂಡ ಗೀತಾ ವರುಣ್ ನಿನಗೆ ಏನಾದ್ರು ತಲೆ ಕೆಟ್ಟಿದ್ಯಾ ಶೃತಿ ಲವರ್ ಅಂತಾ ನಿನ್ನ ಸುಮ್ಮನೆ ಬಿಡ್ತಾ ಇದ್ದೀನಿ ಎಂದು ಹೇಳ್ತಾಳೆ. ಅದಕ್ಕೆ ವರುಣ್ ನಿನ್ನ ಹುಚ್ಚು ಹಿಡಿದಿದೆ ನಂಗೆ ಅಂತಾನೆ.
ಇನ್ನೂ ವರುಣ್ ಗೀತಾ ಬಳಿ ಮುತ್ತು ಕೊಡು ಅಂದಾಗ ಗೀತಾ ವರುಣ್ ಕೆನ್ನೆಗೆ ಸರಿಯಾಗಿ ಭಾರಿಸ್ತಾಳೆ. ಇದು ವರುಣ್ ಕಾಣುತ್ತಿದ್ದ ಕನಸು ಆಗಿರುತ್ತದೆ. ಅಬ್ಬಾ ಇದು ಎಂತಹ ಕನಸು ಎಂದು ಕೆನ್ನೆ ಸಾವರಿಕೊಂಡು. ಮನದಲ್ಲಿ ಇರೋ ಆಸೆಗಳನ್ನು ದೇವರ ಬಳಿ ಗೀತಾ ನಂಗೆ ಸಿಗಲಿ ಎಂದು ಕೇಳಿಕೊಂಡು ಗೀತಾ ಜ್ಞಾನದಲ್ಲಿ ಮುಳುಗಿ ಹೋಗುತ್ತಾನೆ.
ಇತ್ತ ಸುಶೀಲ ಮನೆಗೆ ಗೀತಾ ತಂದಿರುವ ಫೋಟೋದಿಂದ ಚಿಂತಾಕ್ರಾಂತಳಾಗಿ ಅಡುಗೆ ಮನೆಗೆ ಹೋಗಿ ನಲ್ಲಿ, ಮಿಕ್ಸಿ ಹಾಗೂ ಗ್ಯಾಸ್ ಸ್ಟವ್ ಆನ್ ಮಾಡಿಟ್ಟಿರುತ್ತಾಳೆ. ಅಲ್ಲಿಗೆ ಬಂದ ಗೀತಾ ಮೊದಲು ಮಿಕ್ಸಿ, ಗ್ಯಾಸ್, ನಲ್ಲಿ ಆಫ್ ಮಾಡಿ ಅಮ್ಮ ಏನಾಯ್ತು ಅಂತಾ ಕೇಳ್ತಾಳೆ. ಇದಕ್ಕೆ ಸುಶೀಲ ಏನಿಲ್ಲ ಕಣಮ್ಮ ಎಂದು ಅನ್ನುತ್ತಾಳೆ. ನಂತರ ಗೀತಾ ಒತ್ತಾಯದಿಂದ ಏನಾಯ್ತು ಅಮ್ಮ ಹೇಳು ಅಂತಾಳೆ.
ಇನ್ನು ಸುಶೀಲ ಕಣ್ಣಲ್ಲಿ ನೀರು ತುಂಬಿಕೊಂಡು ಇರೋದ್ದನ್ನು ಗೀತಾ ಗಮನಿಸ್ತಾಳೆ ಆಗ ಸುಶೀಲನ ಏನೋ ಸತ್ಯ ಮುಚ್ಚಿ ಇಡ್ತಾ ಇದ್ಯಾ ಅಮ್ಮ ಅದೇನು ಹೇಳು ನಾನು ನಿನ್ನ ಮಗಳು ಅಂತಾ ಒತ್ತಾಯಿಸ್ತಾಳೆ. ಕಣ್ಣಿಗೆ ಖಾರ ಬಿತ್ತು ಅಷ್ಟೇ ಗೀತಾ ಅಂತಾಳೆ, ನನ್ನ ತಲೆ ಮೇಲೆ ಕೈಯಿಟ್ಟು ಹೇಳು ಏನು ಸತ್ಯ ಮುಚ್ಚಿ ಇಡ್ತಾ ಇಲ್ಲ ಅಂತಾ ಗೀತಾ ಕೇಳ್ತಾಳೆ ಅವಾಗ ಎನಿಲ್ಲ ಅಂತಾಳೆ ಅಷ್ಟರಲ್ಲಿ ಮನೆ ಮುಂದೆ ಯಾರೋ ಸುಶೀಲನ್ನು ಕರೆದು ಹಾಗೇ ಆಗುತ್ತದೆ. ಅಲ್ಲಿಗೆ ಹೋಗಿ ನೋಡ್ತಾಳೆ.

ಗೀತಾ ಕೈಯಲ್ಲಿದ್ದ ಪೋಟೋ ನೋಡಿದ ಪಕ್ಕದ ಮನೆಯ ಆಂಟಿ
ಇತ್ತ ಪಕ್ಕದ ಮನೆಯ ಆಂಟಿ ಸುಶೀಲಾಗೆ ಗಿಣ್ಣು ಹಾಲು ಕೊಡಕೆ ಬಂದಿರುತ್ತಾರೆ. ಆಗ ಗೀತಾ ಕೈಯಲ್ಲಿದ್ದ ಫೋಟೋ ನೋಡಿ ಯಾರದ್ದಮ್ಮ ಪೋಟೋ ಅದು ಅಂತಾ ಕೇಳ್ತಾರೆ. ಅದಕ್ಕೆ ನಂಗೆ ಬೇಕಾಗಿರೋದು ಅಂತಾ ಗೀತಾ ಹೇಳ್ತಾಳೆ. ಎಲ್ಲಾದರೂ ಈ ಫೋಟೋದಲ್ಲಿ ಇರುವ ಹುಡುಗಿನಾ ನೋಡಿದ್ದೀರಾ ಆಂಟಿ ಅಂತಾ ಕೇಳ್ತಾಳೆ. ಅದಕ್ಕೆ ಪಕ್ಷದ ಮನೆಯವರು ನಾನೇ ಈ ಹುಡುಗಿನ ಕೈಯಾರ ಆಡಿಸಿದ್ದೆ ಕಣಮ್ಮ ಆದರೆ ಎಲ್ಲಿ ಅಂತಾ ಗೊತ್ತಿಲ್ಲ ಅಂತಾಳೆ.

ಪಕ್ಕದ ಮನೆಯಾಕೆಯ ಕಳಿಸಿದ ಸುಶೀಲ
ಇನ್ನೂ ಸುಶೀಲನ ನಿಮಗೂ ಗೊತ್ತಿಲ್ವ? ಅಂದಾಗ ಸುಶೀಲ ಗಾಬರಿಯಿಂದ ನಂಗೆ ಏನೂ ಗೊತ್ತಿಲ್ಲ, ಗೊತ್ತಿದ್ದರೆ ನಾನೇ ನನ್ನ ಮಗಳಿಗೆ ಹೇಳ್ತಾ ಇದ್ದೇ ಅಂತಾಳೆ. ಇನ್ನೂ ಅವರು ಎಲ್ಲಿ ಎಲ್ಲಿ ಎಂದು ನೆನಪು ಮಾಡಿಕೊಳ್ಳೋವಾಗ ಸುಶೀಲ ಮಧ್ಯ ಪ್ರವೇಶ ಮಾಡಿ ಅಯ್ಯೋ ಈ ಫೋಟೋದಲ್ಲಿರುವ ಹುಡುಗಿ ಬಗ್ಗೆ ನೆನಪು ಆದ ಮೇಲೆ ಹೇಳಿ ನೀವೇನು ದೂರ ಇದ್ದೀರಾ ಪಕ್ಕದ ಮನೆಯಲ್ಲೇ ಅಲ್ವ ಇರೋದು ಅಂತಾ ಮನೆಗೆ ಬಂದಿದ್ದ ಪಕ್ಕದ ಮನೆಯವರನ್ನು ಸಾಗಿ ಹಾಕಿದ್ದಾಳೆ.

ಫೋಟೋ ಕಂಡು ಹಿಡಿಯಲು ಗೀತಾ ಮಾಡಿದ ಪ್ಲ್ಯಾನ್
ಇತ್ತ ಚಂದ್ರಿಕಾ ಕೊಟ್ಟ ಫೋಟೋವನ್ನು ಕೈಯಲ್ಲಿ ಹಿಡಿದಿದ್ದ ಗೀತಾ, ಸುಶೀಲಾ ಮುಂದೆ ನಾನು ಈ ಫೋಟೋದಲ್ಲಿ ಇರೋ ಹುಡುಗಿನ ಕಂಡು ಹಿಡಿಯೋಕೆ ಒಂದು ಪ್ಲ್ಯಾನ್ ಮಾಡಿದ್ದೇನೆ ಅಂತಾಳೆ. ಈ ಮಾತು ಕೇಳಿ ಸುಶೀಲನಿಗೆ ತುಂಬಾನೇ ಶಾಕ್ ಆಗುತ್ತದೆ ನಾನು ಗೀತಾಳನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನ ಪಡ್ತಾ ಇದ್ರೆ, ಈ ಗೀತಾ ನಂಗೆ ಗೊತ್ತಾದ ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದಾಳೆ ಅಂತಾ ಸುಶೀಲ ಬೇಜಾರ್ ಮಾಡಿಕೊಳ್ತಾಳೆ. ಗೀತಾ ನಾನು ಮಾಡಿರೋ ಪ್ಲ್ಯಾನ್ ಬಗ್ಗೆ ಮನೆಯಲ್ಲಿ ಸುಳಿವು ಬಿಟ್ಟುಕೊಡೋದಿಲ್ಲ.

ವಿಜಿ ಮನೆಗೆ ಅತ್ತೆಯ ಹುಡುಕಿ ಬಂದ ಗೀತಾ
ವಿಜಿ ಮನೆಗೆ ಭಾನುಮತಿ ಹುಡುಕಿಕೊಂಡು ಗೀತಾ ಬರ್ತಾಳೆ. ಆದರೆ ಸೀತಾರ ಮತ್ತು ಭಾನುಮತಿ ಎನೋ ಮಾತಾಡ್ತಾ ಇರ್ತಾರೆ.ಗೀತಾನಿಗೆ ನಿನ್ನ ಪವರ್ ತೋರಿಸು ಅಂತಾ ಸೀತಾರ ತಂಗಿಗೆ ಕಿವಿ ಊದುತ್ತಾನೆ. ಅಷ್ಟರಲ್ಲಿ ವಿಜಿ ಗೀತಾಳನ್ನು ಅಡುಗೆ ಮಬೆಗೆ ಕರೆದುಕೊಂಡು ಹೋಗಿ ಮಾತಾಡ್ತಾ ಇರ್ತಾನೆ.ಇತ್ತಭಾನುಮತಿ ಮುಂದೆ ಎನೋ ಪ್ಲ್ಯಾನ್ ಮಾಡಿದ್ದಾಳೆ. ಏನು ಪ್ಲ್ಯಾನ್ ಮಾಡಿದ್ದಾಳೆ ಎಂಬುದೇ ಸಸ್ಪೆನ್ಸ್ ಆಗಿದೆ.