Don't Miss!
- News
Budget 2023: ಇದು "ಕಾರ್ಪೊರೇಟ್ ಪ್ರೇಮಿ" ಬಜೆಟ್ ಎಂದ ಹೆಚ್. ಸಿ. ಮಹದೇವಪ್ಪ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Geetha Serial : ಗೀತಾ: ಸುಧಾರಾಣಿಗೆ ಬರುತ್ತಾ ಹಳೆಯ ನೆನಪು
ಸುಧಾರಾಣಿಯನ್ನು ಭೇಟಿಯಾಗಲು ಗೀತಾ, ವಿಜಿ ಮನೆಗೆ ಬಂದಿದ್ದಾಳೆ. ರಾಮನಗರಕ್ಕೆ ಸುಧಾರಾಣಿ ಹೋಗಿದ್ದ ಸುದ್ದಿ ಭಾನುಮತಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಗೀತಾ ಜನಪರ ಸೇವಾ ದಳದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು ಖುಷಿಯ ವಿಚಾರ ಅಂತಾ ಗೀತಾಗೆ ಸುಧಾರಾಣಿ ಶುಭ ಹಾರೈಸುತ್ತಾರೆ.
ಇತ್ತ ಸುಧಾರಾಣಿ ಗೀತಾ ಹಾಗೂ ವಿಜಿಯ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿ ನಂಗೆ ನಿಮ್ಮಿಬ್ಬರ ಮದುವೆ ನೋಡಬೇಕು ಅಂತಾ ತುಂಬಾ ಆಸೆ ಆಗ್ತಿದೆ ಎಂದು ಹೇಳ್ತಾರೆ. ಅದಕ್ಕೆ ಗೀತಾ ನನಗೆ ನನ್ನದೇ ಆದ ಜವಾಬ್ದಾರಿಗಳಿವೆ ಎಂದು ಹೇಳ್ತಾಳೆ. ಇದರಿಂದ ಸುಧಾರಾಣಿಗೆ ಬೇಸರವಾಗುತ್ತದೆ.
ಇತ್ತ ಭಾನುಮತಿಗೆ ಶೃತಿ ನಿಮ್ಮ ಪ್ಲ್ಯಾನ್ ಯಾವುದು ಸಹ ವರ್ಕ್‌ಔಟ್ ಆಗೋದಿಲ್ಲ ಎಂದು ಹೇಳುತ್ತಾಳೆ. ಗೀತಾ ವಿಜಿ ತಲೆ ಕೆಡಿಸಿದ್ದಾಳೆ ಎಂದು ಭಾನುಮತಿ ಹೇಳ್ತಾಳೆ. ವಿಜಿ ನಮ್ಮ ಕೈತಪ್ಪಿ ಹೋಗದಂತೆ ನಾವು ನೋಡಿಕೊಳ್ಳಬೇಕು ಇಲ್ಲದಿದ್ದರೆ ತಿರುಪೆ ಎತ್ತಬೇಕಾಗುತ್ತದೆ ಎಂದು ಮೂವರು ಮಾತನಾಡುತ್ತಾ ಇರುತ್ತಾರೆ. ನಂತರ ಸುಧಾರಾಣಿ ರಾಮನಗರದಿಂದ ಬಂದಿದ್ದಾಳೆ. ಜೊತೆಗೆ ಗೀತಾ ಸಹ ಬಂದಿದ್ದು ಏನಾದ್ರು ಪ್ಲ್ಯಾನ್ ಮಾಡಿಕೊಂಡು ಬಂದಿರುತ್ತಾಳೆ ಎಂದು ಮೂವರು ಅಲ್ಲಿಂದ ಜಾಗ ಖಾಲಿ ಮಾಡ್ತಾರೆ.

ಸುಧಾರಾಣಿಯನ್ನು ಸಮಾಧಾನ ಪಡಿಸಿದ ವಿಜಿ
ಗೀತಾ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ತಿರಸ್ಕಾರ ಮಾಡಿದ್ದಕ್ಕೆ ಸುಧಾರಾಣಿ ಬೇಜಾರಾಗಿದ್ದಾಳೆ. ಇದಕ್ಕೆ ವಿಜಿ ಸಮಾಧಾನ ಮಾಡ್ತಾ ನಮಗೂ ಮದುವೆ ಆಗಲು ಆಸೆ ಇದೆ ಆದರೆ ಅಪ್ಪನನ್ನು ಕೊಂದವರನ್ನು ಹುಡುಕಬೇಕು ಅವರಿಗೆ ಶಿಕ್ಷೆಯಾಗಬೇಕು ಅಪ್ಪನ ಆತ್ಮಕ್ಕೂ ಶಾಂತಿ ಸಿಗುತ್ತದೆ ಎಂದು ಹೇಳ್ತಾನೆ. ಇದಕ್ಕೆ ದನಿಗೂಡಿಸಿದ ಗೀತಾ ವಿಜಿ ಹೇಳೋದು ಸರಿಯಾಗಿದೆ ಎನ್ನುತ್ತಾಳೆ. ಸುಧಾರಾಣಿ ಮಾತ್ರ ನಮ್ಮ ಆತಂಕ ನಮ್ಮ ಚಿಂತೆ ನಿಮಗೆ ಅರ್ಥವಾಗೋದಿಲ್ಲ ಎಂದು ಹೇಳುತ್ತಾಳೆ. ಮನೆಯಲ್ಲಿ ಇದ್ದರೆ ಮನಸಿಗೆ ನೆಮ್ಮದಿ ಇಲ್ಲ, ಚಿಂತೆ ಕಾಡುತ್ತದೆ ಎನ್ನುತ್ತಾಳೆ ಸುಧಾರಾಣಿ. ನಂತರ ಸುಧಾರಾಣಿಯನ್ನು ವಿಜಿ, ಗೀತಾ ಹೊರಗಡೆ ಕರೆದುಕೊಂಡು ಹೋಗ್ತಾರೆ.

ಮೂವರ ಮಾತು ಕದ್ದು ಕೇಳಿಸಿಕೋ ಎಂದ ಭಾನುಮತಿ
ವಿಜಿ, ಗೀತಾ, ಸುಧಾರಾಣಿ ಮೂವರು ಮಾತನಾಡೋದು ಭಾನುಮತಿಗೆ ಕೇಳಿಸೋದಿಲ್ಲ ಅಲ್ಲೇ ನೀರು ಹಾಕುತ್ತಿದ್ದ ವ್ಯಕ್ತಿಗೆ ಕಲ್ಲು ಹೊಡೆದು ಅವರು ಏನು ಮಾತಾಡ್ತಾ ಇದ್ದಾರೆ ಕೇಳಿಸಿಕೋ ಎಂದು ಹೇಳ್ತಾಳೆ. ಅವನು ನಿಧಾನವಾಗಿ ಕೇಳಿಸಿಕೊಳ್ತಾ ಇರ್ತಾನೆ. ಕಾರಿನಲ್ಲಿ ಹೋಗುವಾಗ ಸುಧಾರಾಣಿ ಡ್ರೈವರ್ ಸೀಟ್‌ನಲ್ಲಿ ಕುಳಿತುಕೊಂಡು ಸೀಟ್ ಬೆಲ್ಟ್‌ನ್ನು ಕುತ್ತಿಗೆಗೆ ಹಾಕಿ ಸೀಟ್ ಬೆಲ್ಟ್‌ನ್ನು ಎಳೆಯಿರಿ ಎಂದು ಹೇಳ್ತಾ ಇರ್ತಾಳೆ. ಅವಾಗ ನನ್ನನ್ನು ಸಾಯಿಸೋಕೆ ಪ್ರಯತ್ನ ಮಾಡಿದ್ದು ಯಾರು ಎಂದು ನೆನಪಿಸಿಕೊಳ್ತಾ ಇರ್ತಾಳೆ. ಅವಳಿಗೆ ಸಿತಾರಾ ಮತ್ತು ಸುಧಾರಾಣಿ ಸಾಯಿಸೋಕೆ ಪ್ರಯತ್ನ ಪಟ್ಟರು ಅಂತಾ ಗೊತ್ತಾಗೋದಿಲ್ಲ.

ಸುಧಾರಾಣಿ ಹಿಂಬಾಲಿಸಿದ ಭಾನುಮತಿ
ಸುಧಾರಾಣಿ ಹಾಗೂ ವಿಜಿ, ಗೀತಾ ಹೋದ ಕಾರನ್ನು ಹಿಂಬಾಲಿಸಿ ಭಾನುಮತಿ ಸಹ ಬರ್ತಾಳೆ. ಇತ್ತ ವಿಜಿ ಗೀತಾ ಸೀಟ್ ಬೆಲ್ಟ್ ಎಳಿಯೋದನ್ನು ನೋಡಿ ಶಾಕ್ ಆದ ಭಾನುಮತಿ ಅಲ್ಲಿಗೆ ಬಂದು ವಿಜಿಗೆ ಮತ್ತು ಗೀತಾಗೆ ಬೈತ್ತಾಳೆ. ನಂತರ ಕಾರಿನಿಂದ ಸುಧಾರಾಣಿನಾ ಇಳಿಸುತ್ತಾಳೆ. ವಿಜಿಗೆ ಭಾನುಮತಿ ಬೈದ್ದು ಅಕ್ಕನನ್ನು ಹೊರಗೆ ಕರೆದುಕೊಂಡು ಬಂದು ಈ ರೀತಿ ನಾನ್‌ಸೆನ್ಸ್ ಕ್ರಿಯೆಟ್ ಮಾಡ್ತಾ ಇದ್ದೀರಾ ಎಂದು ಬೈತಾಳೆ. ಈಗ ಅಕ್ಕ ಚೇತರಿಸಿಕೊಳ್ತಾ ಇದ್ದಾಳೆ ಎಂದು ಭಾನುಮತಿ ಅಂತಾಳೆ. ಅಕ್ಕ ಹುಷಾರಾದ ಮೇಲೆ ಎಲ್ಲಿಗಾದ್ರೂ ಕರೆದುಕೊಂಡು ಹೋಗು ಅಂತಾಳೆ.

ಸುಧಾರಾಣಿಯನ್ನು ಕರೆದುಕೊಂಡು ಹೋದ ಭಾನುಮತಿ
ಸುಧಾರಾಣಿ ನನ್ನ ಯಾರೋ ಸಾಯಿಸೋಕೆ ಬಂದರು ಎಂಬ ಮಾತು ಕೇಳಿ ಭಾನುಮತಿ ಶಾಕ್ ಆಗ್ತಾರೆ. ನಂತರ ಅಲ್ಲಿಂದ ನೈಸ್ ಮಾಡಿಕೊಂಡು ಸುಧಾರಾಣಿಯನ್ನು ಭಾನುಮತಿ ಕರೆದುಕೊಂಡು ಹೋಗ್ತಾಳೆ. ನಂತರ ಗೀತಾಳನ್ನು ಕೋಪದಿಂದ ನೋಡ್ತಾಳೆ, ಗೀತಾ ಸಹಕೋಪದಿಂದ ಭಾನುಮತಿಯನ್ನು ನೋಡ್ತಾಳೆ.
ನಂತರ ವಿಜಿ ಅಮ್ಮನ ಸ್ಥಿತಿ ನೋಡಿ ಬಹಳ ಬೇಸರ ಮಾಡಿಕೊಳ್ಳುತ್ತಾನೆ. ಸುಧಾರಾಣಿಗೆ ನೆನಪು ಬರುತ್ತಾ ಕಾದು ನೋಡಬೇಕಿದೆ.