Geetha: ಸುಧಾರಾಣಿಯನ್ನು ಮತ್ತೆ ಹುಚ್ಚಿಯನ್ನಾಗಿ ಮಾಡಿದ ಭಾನುಮತಿ
ಸುಧಾರಾಣಿ ಹಾಗೂ ಭಾನುಮತಿ ಮಾತಿನ ನಡುವೆ ಭಾನುಮತಿ ಹೊಸ ಆಟ ಶುರು ಮಾಡಿದ್ದಾಳೆ. ಸುಧಾರಾಣಿಗೆ ಪದೇ ಪದೇ ನಿನ್ನ ಮಗ ನಾನು ಹೇಳಿದ ಹಾಗೇ ಕೇಳೋದು ನನ್ನ ಮಗಳ ಮದುವೆಯನ್ನು ಮಾಡಿದ ನಂತರ ನಿನ್ನ ಮಗನನ್ನು ನಾನು ಸಾಯಿಸುತ್ತೇನೆ ಎಂದು ಸುಧಾರಾಣಿಯನ್ನು ಕೆರಳಿಸುವ ರೀತಿ ಮಾತನಾಡಿದ್ದಾಳೆ. ಇದು ಸುಧಾರಾಣಿಗೆ ಕೋಪ ತರಿಸಿ ಕಪಾಳಕ್ಕೆ ಹೊಡೆದಿದ್ದಾಳೆ.
ವಿಜಿ ಬಂದಾಗ ಅಕ್ಕನಿಗೆ ಮತ್ತೆ ಹುಷಾರಿಲ್ಲ ಮಾತನಾಡುತ್ತಿರುವಾಗಲೇ ನನಗೆ ಹೊಡೆದರು, ಎಂದು ವಿಜಿಗೆ ಭಾನುಮತಿ ಹೇಳಿದ್ದಾಳೆ. ಭಾನುಮತಿಯ ಮಾತಿಗೆ ಮರುಳಾದ ವಿಜಿ ಅಮ್ಮನಿಗೆ ಮಾತ್ರೆಯನ್ನು ತಗೆದುಕೊಳ್ಳುವಂತೆ ಬಾ ಎಂದು ಕರೆದುಕೊಂಡು ರೂಮ್‌ಗೆ ಹೋಗಿದ್ದಾನೆ. ಇದೆಲ್ಲವನ್ನೂ ನೋಡುತ್ತಿರುವ ಭಾನುಮತಿಗೆ ತನ್ನ ಪ್ಲ್ಯಾನ್ ವರ್ಕೌಟ್ ಆಗುತ್ತಿದೆ ಅನಿಸುತ್ತಿದೆ. ಗೀತಾಗೆ ಮಾತ್ರ ವಿಜಿ ಈ ರೀತಿ ನಡೆದುಕೊಳ್ಳುತ್ತಿರುವುದು ಸ್ಪಲ್ಪವೂ ಸಹ ಇಷ್ಟ ಇಲ್ಲ.

ವಿಜಿಗೆ ಬುದ್ದಿ ಹೇಳಲು ಹೋಗಿ ಗೀತಾ ಸೋತು ಹೋಗಿದ್ದಾಳೆ. ವಿಜಿ ನೀನು ಅತ್ತೆಯದ್ದೇ ತಪ್ಪು ಎಂದು ಹೇಳುತ್ತೀಯಾ ಎಂದು ಗೀತಾ ಕೇಳಿದ್ದಕ್ಕೆ ನೀವು ಭಾನುಮತಿ ಅಮ್ಮನ ಮೇಲೆ ತಪ್ಪಾಗಿ ಕಾಣುವುದನ್ನು ಬಿಡಿ ಆಗ ಎಲ್ಲವೂ ಸರಿಯಾಗೇ ಕಾಣುತ್ತದೆ ಎಂದು ಭಾನುಮತಿಯ ಪರವಾಗಿಯೇ ವಿಜಿ ಮಾತನಾಡಿದ್ದಾನೆ.
ಸಿತಾರಾನನ್ನು ನೋಡಲು ಜೈಲಿಗೆ ಮಾದೇಶ ಬಂದಿದ್ದಾನೆ. ಇದೇ ವೇಳೆ ಸಿತಾರಾ, ಗೀತಾ ಸತ್ತು ಬಿದ್ಲಾ ಎಂದು ಕೇಳಿದ್ದಾನೆ. ಇದಕ್ಕೆ ಮಾದೇಶ ಸುಧಾರಾಣಿ ಹಾಗೂ ಚಂದ್ರಿಕಾನಿಂದ ನಾವು ಮಾಡಿದ ಪ್ಲ್ಯಾನ್ ಎಲ್ಲ ಹಾಳು ಆಯಿತು ಎಂದು ತಿಳಿಸಿದ್ದಾನೆ. ಇದಕ್ಕೆ ಸಿತಾರಾಗೆ ತುಂಬಾ ಬೇಸರವಾಗಿದೆ. ಮಾದೇಶನಿಗೆ ಬೇಲ್ ಸಿಕ್ಕಿತಾ ಎಂದು ಸಿತಾರಾ ಕೇಳಿದ್ದಾನೆ. ಇದಕ್ಕೆ ಇನ್ನೂ ಶೃತಿ ಮದುವೆಯಾಗುವವರೆಗೂ ಇಲ್ಲೇ ಇರಬೇಕು ಅಂತಾ ಅಕ್ಕ ಹೇಳಿದ್ದಾಳೆ ಎಂದು ಹೇಳಿದ್ದಾನೆ. ಈ ವೇಳೆ ಮಾದೇಶನಿಗೆ ಸಿತಾರಾ ಬೈದಿದ್ದಾನೆ.
ಗೀತಾ ಮತ್ತು ವಿಜಿ ಇಬ್ಬರು ಶ್ರುತಿಯ ಎಂಗೇಜ್ಮೆಂಟ್ ಇನ್ವಿಟೇಶನ್ ಕಾರ್ಡ್ ಅನ್ನು ಆಯ್ಕೆ ಮಾಡಲು ಬಂದಿದ್ದಾರೆ. ಅಲ್ಲಿಗೆ ಬಂದ ಅಂಗಡಿಯ ಹುಡುಗಿ ಸರ್ ನಿಮ್ಮಿಬ್ಬರ ಮದುವೆಯ ಇನ್ವಿಟೇಶನ್ ಕಾರ್ಡ್ ರೆಡಿಯಾಗಿದೆ ಎಂದು ಇನ್ವಿಟೇಶನ್ ಕಾರ್ಡ್ ಅನ್ನು ವಿಜಿ ಮತ್ತು ಗೀತಾಗೆ ತೋರಿಸಿದ್ದಾಳೆ. ಅಮ್ಮ ಫೋನ್ ಮಾಡಿ ನಿಮ್ಮಿಬ್ಬರ ಮದುವೆಯ ಇನ್ವಿಟೇಶನ್ ಕಾರ್ಡ್ ಅನ್ನ ಪ್ರಿಂಟ್ ಮಾಡಲು ಹೇಳಿದ್ದಾರೆ ಎಂದು ಹೇಳಿದಾಗ ವಿಜಿಗೆ ಅಮ್ಮನಿಗೆ ಮತ್ತೆ ಹುಚ್ಚು ಹೆಚ್ಚಾಯಿತಾ ಎಂಬ ಅನುಮಾನ ಕಾಡುತ್ತಿದೆ.

ವರುಣ್ ಒಬ್ಬ ಫ್ರಾಡ್ ಎಂದು ಶ್ರುತಿಗೆ ಒಂದು ಹುಡುಗಿ ಕರೆಸಿಕೊಂಡು ಹೇಳಿದ್ದಾಳೆ. ಆದರೆ ಶ್ರುತಿ ಇದನ್ನು ನಂಬುವ ಹಂತದಲ್ಲಿ ಇಲ್ಲ. ದುಡ್ಡು ಇರುವವರನ್ನು ಮದುವೆಯಾಗುತ್ತಿದ್ದಾರೆ ಎಂದು ಈ ರೀತಿ ಸುಳ್ಳು ಹೇಳುವುದು ಸಹಜ, ನಿನಗೆ ಎಷ್ಟು ದುಡ್ಡು ಬೇಕು ಕೇಳು ನಾನು ಕೊಡುತ್ತೇನೆ ಎಂದು ಆ ಹುಡುಗಿಗೆ ಶ್ರುತಿ ಹೇಳಿದ್ದಾಳೆ. ಮೊದ ಮೊದಲು ನನಗೂ ಸಹ ಇದೇ ರೀತಿ ಮೋಸ ಮಾಡಿದ ಅವನು ಕೊಟ್ಟ ಗಿಫ್ಟ್ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ, ನೀನು ಸಹ ಮೋಸ ಹೋಗಬೇಡ ಎಂದು ಶ್ರುತಿಗೆ ಅಲ್ಲಿಗೆ ಬಂದ ಹುಡುಗಿ ಎಚ್ಚರಿಕೆ ನೀಡಿದ್ದಾಳೆ.
ಸುಧಾರಣಿಯನ್ನು ನೋಡಲು ಡಾಕ್ಟರ್ ಮನೆಗೆ ಬಂದಿದ್ದಾರೆ. ಇದೇ ವೇಳೆ ಮಾದೇಶ, ಸುಧಾರಾಣಿಯನ್ನು ಕೆರಳಿಸಿದ್ದಾನೆ. ಈ ವೇಳೆಯೂ ಸಹ ಸುಧಾರಾಣಿ ರಿಯಾಕ್ಟ್ ಮಾಡಿದ್ದಾಳೆ. ಇದೆಲ್ಲವನ್ನು ಸಹ ವಿಜಿಯು ನೋಡುತ್ತಿದ್ದು ಬೇಸರ ಮಾಡಿಕೊಂಡಿದ್ದಾನೆ. ಕೊನೆಗೆ ವಿಜಿಯೇ ಡಾಕ್ಟರನ್ನು ಕರೆಸಿದ್ದು ಎಂದು ಗೊತ್ತಾದ ಕೂಡಲೇ ಸುಧಾರಾಣಿ ನಾನು ನಿನಗೆ ಮನೆಯಲ್ಲಿ ಇರುವುದು ಇಷ್ಟವಿಲ್ಲದಿದ್ದರೆ ಹೇಳು, ನಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುತ್ತೇನೆ ಎಂದು ಹೇಳುತ್ತಾ ರೂಮಿಗೆ ಹೋಗಿದ್ದಾಳೆ. ಅಮ್ಮ ಈ ರೀತಿ ಮಾತನಾಡಿ ಹೋಗಿದ್ದು ವಿಜಿಗೆ ತುಂಬಾ ಬೇಸರವನ್ನು ತರಿಸಿದೆ.


Click it and Unblock the Notifications











