Geetha: ಶೃತಿಗೆ ವರುಣ್ ಮೇಲೆ ಡೌಟ್: ಸುಧಾರಾಣಿಗೆ ಗೊಂದಲ

By ಶೃತಿ ಹರೀಶ್ ಗೌಡ

ಮನೆಯಲ್ಲಿ ಸುಧಾರಾಣಿ ಮಗ ಆಡಿದ ಮಾತುಗಳನ್ನು ನೆನಪಿಸಿಕೊಂಡು ಬೇಸರ ಮಾಡಿಕೊಂಡು ರೂಮ್‌ನಲ್ಲಿ ಯೋಚನೆ ಮಾಡುತ್ತಾ ಕುಳಿತಿದ್ದಾಳೆ. ಅಲ್ಲಿಗೆ ಬಂದ ಭಾನುಮತಿ ನೋಡಿದ್ಯಾ ನೀನು ಒಂದು ಏಟು ಕೊಟ್ಟೆ, ನಾನು ಮಾತ್ರ ನಿನಗೆ ಯಾವ ರೀತಿ ಮಾಡಿದೆ ಎಂದು ಸುಧಾರಾಣಿಗೆ ಮತ್ತಷ್ಟು ಕೋಪವನ್ನು ತರಿಸುತ್ತಿದ್ದಾಳೆ.

ಸುಧಾರಾಣಿ ರೂಮ್‌ನಿಂದ ಹೊರಗೆ ಹೋಗುವಂತೆ ಸುಧಾರಾಣಿಗೆ ಹೇಳಿದ್ದಾಳೆ. ಈ ವೇಳೆ ಭಾನುಮತಿ, ಸುಧಾರಾಣಿಗೆ ನೀನು ಏನು ಹೇಳಿದರು ಸಹ ವಿಜಿ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಅಮ್ಮನಿಗೆ ಹುಚ್ಚು ಹೆಚ್ಚಾಗಿ ಈ ರೀತಿ ಮಾತನಾಡುತ್ತಿದ್ದಾಳೆ ಎಂದು ನಿನ್ನನ್ನು ಆಸ್ಪತ್ರೆ ಪಾಲು ಮಾಡುತ್ತಾನೆ. ವಿಜಿ ನಾನು ಸಾಕಿರುವ ಮಗ ಎಂದು ಹೇಳುತ್ತಿದ್ದಾಳೆ.

Colors kannada geetha Written Update on march 11th episode

ನಾನೇ ಸೂರ್ಯಪ್ರಕಾಶ್‌ನನ್ನು ಕೊಲೆ ಮಾಡಿದೆ ಎಂದರು ಸಹ ನಿನ್ನ ಮಗ ನಂಬೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವನು ಇದ್ದಾನೆ ಎಂದು ಸುಧಾರಾಣಿಗೆ ಭಾನುಮತಿ ಹೇಳಿದ್ದಾಳೆ. ನೀನು ಕೆಣಕಿರುವುದು ಈ ಭಾನುಮತಿಯನ್ನು ನಾನು ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಎಂದು ಸುಧಾರಾಣಿಗೆ ಭಾನುಮತಿ ವಾರ್ನ್ ಮಾಡಿದ್ದಾಳೆ.

ಕಾವ್ಯ ಎಂಬ ಹುಡುಗಿ ವರುಣ್ ದೊಡ್ಡ ಫ್ರಾಡ್ ಅವನನ್ನು ನಂಬಬೇಡ ಎಂದಿಲ್ಲ ಶ್ರುತಿ ಬಳಿ ಹೇಳಿದ್ದಾಳೆ. ವರುಣ್ ಬಿಟ್ಟು ಹೋಗಿರುವ ಗಿಫ್ಟ್ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ಶ್ರುತಿ ಬಳಿ ಕಾವ್ಯ ಹೇಳಿದ್ದಾಳೆ. ಮಲಗಿರುವ ಶ್ರುತಿಗೆ ಕಾವ್ಯ ಕನಸಿನಲ್ಲಿ ಬಂದು ವರುಣ್ ಫ್ರಾಡ್ ನಾನು ಈಗ ಸಾಯುವ ನಿರ್ಧಾರ ಮಾಡಿದ್ದೇನೆ ಎಂದು ಕೇಳಿದಂಥ ಕನಸು ಬಿದ್ದಿದೆ.

ವರುಣ್‌ಗೆ ಫೋನ್ ಮಾಡಿರುವ ಶ್ರುತಿ ಮನೆಗೆ ಕರೆಸಿಕೊಂಡು ಕಾವ್ಯ ಎಂಬ ಹುಡುಗಿಯ ಬಗ್ಗೆ ವಿಚಾರಿಸಿದ್ದಾಳೆ. ಆದರೆ ವರುಣ್ ಮಾತ್ರ ಇವರೆಲ್ಲರೂ ಸಹ ಸುಮ್ಮನೆ ಮದುವೆಗೆ ಕಲ್ಲು ಹಾಕಲು ನೋಡುತ್ತಿದ್ದಾರೆ ಎಂದು ಶ್ರುತಿ ಬಳಿ ಜಗಳವನ್ನು ಆಡಿಕೊಂಡು ಮನೆಯಿಂದ ಹೋಗಿದ್ದಾನೆ. ಇದೆಲ್ಲವನ್ನು ಸಹ ಸುಧಾರಣೆ ಗಮನಿಸುತ್ತಾ ಇದ್ದಾಳೆ.

Colors kannada geetha Written Update on march 11th episode

ಗೀತಾ ಹಾಗೂ ಚಂದ್ರಿಕಾ ಇಬ್ಬರು ಸಹ ಭಾನುಮತಿ ಹೆಚ್ಚಾಗಿ ಮೆರೆಯುತ್ತಿದ್ದು ಅಕ್ಕನಿಗೆ ಅವಮಾನ ಮಾಡಿ ಕುಗ್ಗಿಸಿದ್ದಾಳೆ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ. ಅವಳ ನನಗೆ ಬುದ್ಧಿ ಕಲಿಸಲು ನೀನು ಆ ಮನೆಯ ಸೊಸೆಯಾಗಿ ಹೋಗಬೇಕು ಎಂದು ಚಂದ್ರಿಕಾ, ಗೀತಾಗೆ ಹೇಳುತ್ತಿದ್ದಾಳೆ. ನೀನೊಬ್ಬಳು ವಿಜಯ್ ಹೆಂಡತಿಯಾಗಿ ಹೋಗಿ ಅಕ್ಕನಿಗೆ ಬೆಂಬಲವಾಗಿ ನಿಂತು ಭಾನುಮತಿಗೆ ಬುದ್ಧಿ ಕಲಿಸು ಎಂದು ಹೇಳುತ್ತಿರುವುದನ್ನು ಸುಶೀಲ ಕೇಳಿಸಿಕೊಂಡಿದ್ದಾಳೆ.

ನನಗೆ ನನ್ನ ಮಗಳನ್ನು ಆ ಮನೆಯ ಸೊಸೆ ಮಾಡಬೇಕು ಎಂಬುದಷ್ಟೇ ಹಂಬಲ. ಆದರೆ ನೀನು ಅವಳ ತಲೆಗೆ ಏನೇನೋ ತುಂಬುತ್ತಿದ್ದೀಯಾ ನೀವು ಇಬ್ಬರು ಮಾತನಾಡುವುದನ್ನು ನಾನು ಕೇಳಿಸಿಕೊಂಡೆ ಎಂದು ಸುಶೀಲ, ಚಂದ್ರಿಕಾಗೆ ಹೇಳಿದ್ದಾಳೆ. ನೀನು ಇಲ್ಲಿ ಇದ್ದರೆ ಯಾವುದು ಒಳ್ಳೆಯದು ಆಗುವುದಿಲ್ಲ ನೀನು ಮನೆಯನ್ನು ಬಿಟ್ಟು ಹೋಗು ಎಂದು ಚಂದ್ರಿಕಾಗೆ ಹೇಳಿದ್ದಾಳೆ.

ಶ್ರುತಿ ಮತ್ತು ವರುಣ್ ಮಧ್ಯೆ ಜಗಳವಾಗಿದೆ. ಅವನು ಫ್ರಾಡ್ ಎಂದು ಹೇಳುತ್ತಿದ್ದಳು. ಅದರ ಬಗ್ಗೆ ವಿಚಾರಿಸಲು ಸುಧಾರಾಣಿ ಗೀತಾಳನ್ನು ಕರೆದುಕೊಂಡು ಬಂದಿದ್ದಾಳೆ. ಇದು ವಿಜಿಗೆ ಗೊತ್ತಾದರೆ ವಿಜಿ ನಮ್ಮಿಬ್ಬರಿಗೂ ಬೈಯುತ್ತಾನೆ ಎಂದು ಸುಧಾರಾಣಿಗೆ ಗೀತಾ ಹೇಳಿದ್ದಾಳೆ. ಸುಧಾರಾಣಿ ವರುಣ್ ಇರುವ ಜಾಗಕ್ಕೆ ಬಂದಿದ್ದಾಳೆ ಆದರೆ ಇದು ಗೀತಾಗೆ ಸ್ವಲ್ಪವೂ ಇಷ್ಟ ಇಲ್ಲ.

ಭಾನುಮತಿ ಮಾಡುತ್ತಾಳೆ ಎಂದು ನಾನು ಶೃತಿಗೆ ಮೋಸ ಮಾಡುವುದಿಲ್ಲ. ಆ ಪಾಪದ ಹುಡುಗಿ ಯಾಕೆ ಕಷ್ಟವನ್ನು ಅನುಭವಿಸಬೇಕು ನಾವೇ ಸರಿಯಾಗಿ ತಿಳಿದು ಮದುವೆಯನ್ನು ಮಾಡಿಸೋಣ ಎಂದು ಗೀತಾಗೆ ಸುಧಾರಾಣಿ ಹೇಳಿದ್ದಾಳೆ. ಇಬ್ಬರೂ ಸಹ ವರುಣ್ ಮನೆ ಕಡೆ ಪಯಣ ಬೆಳೆಸಿದ್ದಾರೆ.

More from Filmibeat

English summary
colors kannada serial Geetha Written Update on April 11th episode. Here is the details about shruthi questions to varun, sushila speak to chandrika about leaves to her Home. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X