Geetha: ಚಂದ್ರಿಕಾ ಸತ್ಯ ಹೇಳಿ ಬಿಡ್ತಾಳಾ..?!

By ಶೃತಿ ಹರೀಶ್ ಗೌಡ

ಸುಧಾರಾಣಿ ಶೃತಿಗೆ ಕೆಟ್ಟದ್ದು ಆಗಬಾರದು ಎಂಬ ಉದ್ದೇಶದಿಂದ ವರುಣ್ ಅವರ ಮನೆಗೆ ಬಂದಿದ್ದಾರೆ. ಸುಧಾರಾಣಿ ಮನೆಯಲ್ಲಿ ಊರಿನ ಬಗ್ಗೆ, ಎಲ್ಲಿದ್ರಿ ಎಂದೆಲ್ಲಾ ಕೇಳಿದ್ದಕ್ಕೆ ವರುಣ್ ಫೇಕ್ ಅಮ್ಮ-ಅಪ್ಪ ಸುಧಾರಾಣಿ ಹಾಗೂ ಗೀತಾ ಮೇಲೆ ಎಗರಾಡಿದ್ದಾರೆ. ಮನೆಯಿಂದ ಎದ್ದು ಹೊರಗೆ ಹೋಗಿ ಎಂದೆಲ್ಲ ವರುಣ್ ಅಪ್ಪ ಹೇಳಿ ಮನೆಯ ಬಾಗಿಲನ್ನು ಹಾಕಿಕೊಂಡಿದ್ದಾರೆ. ಸುಧಾರಾಣಿಗೆ ಪ್ರಶ್ನೆ ಮಾಡಿದ್ದಾನೆ.

ಈ ಮದುವೆ ಆಗೋದೆ ಬೇಡ ಎಂದು ಹೇಳಿದಾಗ ಗೀತಾ ಹಾಗೂ ಸುಧಾರಾಣಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಈ ವೇಳೆ ದಯವಿಟ್ಟು ಮನೆಯಿಂದ ಹೊರಗೆ ಹೋಗಿ ಎಂದು ವರುಣ್ ಅಮ್ಮ ಅಪ್ಪ ಹೇಳಿದ್ದಾರೆ. ಹೊರಗೆ ಬಂದ ಸುಧಾರಾಣಿ, ಗೀತಾ ಬಳಿ ಬಂದು ನಾನು ಏನು ತಪ್ಪಾಗಿ ಕೇಳಿದ್ವಿ ಎಂದು ಕೇಳಿದ್ದಾಳೆ. ಅವರೇ ತಪ್ಪಾಗಿ ತಿಳಿದುಕೊಂಡರು ಎಂದು ಸಮಾಧಾನ ಮಾಡಿದ್ದಾಳೆ.

Colors kannada Geetha Written Update on march 12th episode

ಸುಧಾರಾಣಿ ಹಾಗೂ ಗೀತಾ ಅವರ ಮನೆಗೆ ಹೋಗಿ ವಂಶವೃಕ್ಷ ಕೇಳಿದರು ಎಂದು ವರುಣ್ ಅವರ ಅಪ್ಪ ಅಮ್ಮ ವಿಜಿ ಬಳಿ ಹೇಳುತ್ತಿದ್ದಾರೆ. ನಾನೇನು ನಿಮ್ಮ ಮನೆಗೆ ಹೆಣ್ಣು ಕೇಳಿಕೊಂಡು ಬಂದಿದ್ವಾ ಈ ರೀತಿಯೆಲ್ಲ ಮಾಡುವುದು ತಪ್ಪು ತಾನೇ ಎಂದಿದ್ದಾರೆ. ಇದನೆಲ್ಲ ಕೇಳುತ್ತಿರುವ ವಿಜಿಗೆ ಬೇಸರವಾಗಿದೆ. ವರುಣ್ ಮೇಲೆ ಅವರ ಅಪ್ಪ ಅಮ್ಮ ನೀನು ಮಾತನಾಡಬೇಡ ಎಂದು ತಾಕೀತು ಮಾಡಿದ್ದಾರೆ. ಈ ವೇಳೆ ಆಗಿರುವ ಅನಾಹುತಕ್ಕೆ ಅಮ್ಮನ ಪರವಾಗಿ ನಾನು ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ ಎಂದು ವಿಜಿ ಹೇಳಿದ್ದಾನೆ.

ಇನ್ನು ಮುಂದೆ ಯಾವುದೇ ತಪ್ಪು ಆಗದಾ ರೀತಿ ನಾನು ನೋಡಿಕೊಳ್ಳುತ್ತೇನೆ ಎಂಬ ಭರವಸೆಯನ್ನು ವಿಜಿ, ವರುಣ್ ಫ್ಯಾಮಿಲಿಗೆ ಹೇಳಿದ್ದಾನೆ. ಚಂದ್ರಿಕಾ ರಸ್ತೆಯಲ್ಲಿ ಆಟವಾಡುತ್ತಿರುವ ಮಗುವನ್ನು ನೋಡುತ್ತಾ ಕುಳಿತಿದ್ದಾಳೆ. ಈ ವೇಳೆ ಕಾರು ವೇಗವಾಗಿ ಬಂದು ಮಗುವಿಗೆ ಇನ್ನೇನು ಡಿಕ್ಕಿ ಹೊಡೆಯಬೇಕು ಎಂದಾಗ ಚಂದ್ರಿಕಾ ಹೋಗಿ ಕಾಪಾಡುತ್ತಾಳೆ. ಇದನ್ನು ನೋಡಿದ ಸುಶೀಲಾ ಚಂದ್ರಿಕಾಗೆ ಸತ್ಯವನ್ನು ಹೇಳಬೇಕು ಎಂದು ಮನಸು ಮಾಡಿ‌ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾಳೆ. ಸುಶೀಲಾಳ ಈ ನಡೆಯಿಂದ ಚಂದ್ರಿಕಾಗೆ ಶಾಕ್ ಆಗಿದೆ.

ಹೆತ್ತ ಅಮ್ಮ ಹಾಗೂ ಸಾಕಿದ ತಾಯಿಯ ಬಗ್ಗೆ ಸುಶೀಲಾ, ಚಂದ್ರಿಕಾ ಬಳಿ ಅಭಿಪ್ರಾಯ ಕೇಳುತ್ತಿದ್ದಾಳೆ. ಹೆತ್ತ ಕರಳು ಮಾತ್ರ ಅಲ್ಲ ಸಾಕಿದ ಕರಳು ಸಹ ತುಂಬಾ ಮಹತ್ವವಾದುದ್ದು ಎಂದು ಚಂದ್ರಿಕಾ, ಸುಶೀಲಾಗೆ ಹೇಳುತ್ತಿದ್ದಾಳೆ. ಇನ್ನೂ ಸತ್ಯವನ್ನು ಹೇಳಬೇಕು ಎಂದು ಒಗಟಿನ ರೀತಿಯಲ್ಲಿ ಚಂದ್ರಿಕಾಗೆ ಸುಶೀಲಾ ಹೇಳಿದ್ದಾಳೆ. ನನ್ನ ದೊಡ್ಡ ಜವಾಬ್ದಾರಿಯನ್ನು ಈಗ ನಿನ್ನ ಹೆಗಲಿಗೆ ಹಾಕುತ್ತೇನೆ ಎಂದಿದ್ದಾಳೆ.

Colors kannada Geetha Written Update on march 12th episode

ಅಷ್ಟರಲ್ಲಿ ಗೀತಾ ಹಾಗೂ ಸುಧಾರಾಣಿ ಇಬ್ಬರನ್ನೂ ನೋಡಿದ ಸುಶೀಲ ಒಂದು ಕ್ಷಣ ಶಾಕ್ ಆಗಿ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ. ನಂತರ ಗೀತಾ ಇಬ್ಬರನ್ನೂ ನೋಡಿ ಮಾತನಾಡಿಸಲು ಬಂದಾಗ ಚಂದ್ರಿಕಾ ಸುಶೀಲಾ ಏನೋ ಸತ್ಯ ಹೇಳಲು ಕರೆದುಕೊಂಡು ಬಂದಳು ಎಂದಿದ್ದಾಳೆ. ಈ ವೇಳೆ ಗೀತಾ ಎನಮ್ಮ ಸತ್ಯ ಹೇಳು ಎಂದು ಸುಶೀಲಾ ಬಳಿ ಕೇಳಿದ್ದಾಳೆ. ಅದಕ್ಕೆ ಸುಶೀಲಾ ಗೀತಾ ಬಳಿಯಲ್ಲಿ ಎನು ಹೇಳಬೇಕೋ ತಿಳಿಯದೇ ಸುಮ್ಮನೆ ಆಗಿದ್ದಾಳೆ.

More from Filmibeat

English summary
Colors kannada serial Geetha Written Update on April 12th episode. Here is the details about vijay warns geetha and sudharani not to interfere in varun marriage. Susheela wants to reveal the truth. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X