Geetha: ಭಾನುಮತಿಗೆ ಸವಾಲ್ ಹಾಕಿದ ಗೀತಾ, ಸುಧಾರಾಣಿ, ಚಂದ್ರಿಕಾ
ಭಾನುಮತಿಗೆ ಚಂದ್ರಿಕಾ , ಸುಧಾರಾಣಿ ಹಾಗೂ ಗೀತಾ ಮೂವರು ಸೇರಿ ಸವಾಲು ಹಾಕಿದ್ದಾರೆ. ಭಾನುಮತಿ ಕೂಡ ನೀವು ಏನೇ ಮಾಡಿದರು ಸಹ ನನ್ನನ್ನು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಸುಧಾರಾಣಿ ನನ್ನ ಮಗ ನಿನ್ನ ಕಡೆ ಇದ್ದಾನೆ ಎಂದು ಬೀಗಬೇಡ ಅವನಿಗೂ ಸಹ ಸತ್ಯ ಅರ್ಥವಾಗುವ ಕಾಲ ಬರುತ್ತದೆ ಎಂದು ಹೇಳಿದ್ದಾಳೆ.
ವಿಜಿ ಯಾವತ್ತಿಗೂ ಕೂಡ ನನ್ನ ಪರವಾಗಿ ಇರುತ್ತಾನೆ ಅವನನ್ನು ಆ ರೀತಿ ನಾನು ಮಾಡುತ್ತೇನೆ ಎಂದು ಭಾನುಮತಿ, ಚಂದ್ರಿಕಾ ಹಾಗೂ ಸುಧಾರಾಣಿಗೆ ಸವಾಲನ್ನು ಹಾಕಿದ್ದಾಳೆ. ಇದೇ ವೇಳೆ ಅಲ್ಲಿ ಇದ್ದಾಗ ಗೀತಾ ನಿಮ್ಮ ನಿಜ ಬಣ್ಣವನ್ನು ವಿಜಯ ಮುಂದೆ ಖಂಡಿತವಾಗಿಯೂ ಬಯಲು ಮಾಡುತ್ತೇನೆ ಎಂದು ಹೇಳಿದ್ದಾಳೆ.
ಯಾವುದೇ ಕಾರಣಕ್ಕೂ ಆ ರೀತಿಯಾಗಲು ನಾನು ಬಿಡುವುದಿಲ್ಲ, ಎಲ್ಲವನ್ನು ಕೂಡ ನಾನು ಪ್ರತಿ ಸವಾಲಾಗಿ ಸ್ವೀಕಾರ ಮಾಡುತ್ತೇನೆ. ನೀವು ನನ್ನನ್ನು ಬೀದಿಗೆ ತರಲು ಸಾಧ್ಯವಿಲ್ಲ ಎಂದು ಭಾನುಮತಿ ಖಡಕ್ಕಾಗಿಯೇ ಎಚ್ಚರಿಕೆಯನ್ನು ನೀಡಿದ್ದಾಳೆ. ಇದರಿಂದಾಗಿ ಸುಧಾರಾಣಿ, ಚಂದ್ರಿಕಾ, ಗೀತಾ ಮೂವರು ಕೋಪ ಮಾಡಿಕೊಂಡಿದ್ದಾರೆ.

ಭಾನುಮತಿ ಕ್ಷಮೆ ಯಾಚಿಸಿದ ವಿಜಿ
ಆಕಸ್ಮಿಕವಾಗಿ ಆಫೀಸಿಗೆ ಹೋದ ವಿಜಿಗೆ ಭಾನುಮತಿ ಫೋರ್ಜರಿ ಸಹಿ ಮಾಡಿರುವ ವಿಷಯ ಗೊತ್ತಾಗಿದೆ. ಇದರಿಂದಾಗಿ ಮನೆಗೆ ಕೋಪದಿಂದ ಬಂದಿದ್ದಾನೆ ಭಾನುಮತಿಯ ಬಳಿ ಹೋಗುವ ವೇಳೆ ಭಾನುಮತಿಯೇ ವಿಜಿ ಮುಂದೆ ಡ್ರಾಮಾ ಆಡಲು ಶುರು ಮಾಡಿದ್ದಾಳೆ. ಏನಾಯಿತು ಅಮ್ಮ ಎಂದು ಭಾನುಮತಿಯ ಬಳಿ ವಿಜಿ ಕೇಳಿದ್ದಾನೆ. ಭಾನುಮತಿ ತನ್ನ ಅಣ್ಣ ಮೇಲೆ ಫೋರ್ಜರಿ ಮಾಡಿರುವ ಆಪಾದನೆಯನ್ನು ಹೊರಿಸಿದ್ದಾಳೆ. ಇದರಿಂದಾಗಿ ವಿಜಿ ಅಮ್ಮ ನಾನು ನಿಮ್ಮನ್ನು ತಪ್ಪಾಗಿ ತಿಳಿದುಕೊಂಡು ಬಿಟ್ಟೆ ದಯವಿಟ್ಟು ಕ್ಷಮಿಸು ಬಿಡು ಎಂದು ಕೇಳಿದ್ದಾನೆ.

ಚಂದ್ರಿಕಾ ನೋಡಿ ಖುಷಿಯಾದ ವಿಜಿ
ಚಂದ್ರಿಕಾಳನ್ನು ತನ್ನ ಮನೆಯಲ್ಲಿ ನೋಡಿದ ವಿಜಯ್‌ಗೆ ತುಂಬಾ ಖುಷಿಯಾಗಿದೆ. ನನ್ನ ಕಣ್ಣನ್ನೇ ನಾನೇ ನಂಬಲು ಆಗುತ್ತಿಲ್ಲ, ಅತ್ತೆ ನೀವು ನಮ್ಮ ಮನೆಗೆ ಬರುತ್ತೀರಾ ಎಂದು ಸಹ ಅಂದುಕೊಂಡಿರಲಿಲ್ಲ ಎಂದು ಅತ್ತೆಯ ಮುಂದೆ ಸಂತೋಷವನ್ನ ವಿಜಿ ವ್ಯಕ್ತಪಡಿಸುತ್ತಿದ್ದಾನೆ. ಸುಧಾರಾಣಿಯೇ ನನ್ನನ್ನು ಬಿಡಿಸಿದಳು ಎಂದು ಚಂದ್ರಿಕಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾಳೆ. ಇದೇ ವೇಳೆ ಸುಧಾರಾಣಿ ನಿನ್ನ ಅತ್ತೆ ಬೇರೆ ಕಡೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ವಿಜಿಗೆ ಹೇಳಿದ್ದಾಳೆ. ಇದಕ್ಕೆ ವಿಜಿ ಅತ್ತೆ ನೀವು ಈ ಮನೆಯ ಮಗಳು ನೀವೇ ಈ ಮನೆಗೆ ನಿಜವಾದ ಯಜಮಾನ ನಾವು ಇರುವ ತನಕ ನೀವು ಎಲ್ಲೂ ಸಹ ಹೋಗಬಾರದು ಎಂದು ಹೇಳಿದ್ದಾನೆ.

ಸುಶೀಲಾಗೆ ಗೀತಾ ಕಳೆದುಕೊಳ್ಳುವ ಭಯ
ಗೀತಾ, ಚಂದ್ರಿಕಾ ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾಗಿರುವ ಸುದ್ದಿಯನ್ನು ಸುಶೀಲಾ ಬಳಿ ಹೇಳಿದ್ದಾಳೆ. ಇದರಿಂದಾಗಿ ಶಾಕ್ ಹೊಡೆದಂತೆ ಸುಶೀಲ ನಿಂತುಕೊಂಡಿದ್ದಾಳೆ. ಇದೇ ವೇಳೆ ಗೀತಾ ನಿನ್ನನ್ನು ವಿಜಯ್ ಮನೆಗೆ ಕರೆದುಕೊಂಡು ಹೋಗಿ ಚಂದ್ರಿಕಾಳನ್ನು ಭೇಟಿ ಮಾಡಿಸುವುದಾಗಿ ತಿಳಿಸಿದ್ದಾಳೆ. ಇದರಿಂದಾಗಿ ಗೀತಾಳನ್ನು ಕಳೆದುಕೊಳ್ಳುವ ಭಯ ಸುಶೀಲಾಗೆ ಆವರಿಸಿದೆ.

ಸುಶೀಲ ಕಣ್ಣೀರು
ಚಂದ್ರಿಕಾ ಒಬ್ಬಳೇ ಹಾಲ್‌ಗೆ ಬಂದು ಅಳುತ್ತಾ ಕುಳಿತುಕೊಂಡಿದ್ದಾಳೆ. ಅಮ್ಮನನ್ನು ಹುಡುಕಾಡಿದ ಗೀತಾ ಡೈನಿಂಗ್ ಹಾಲ್‌ಗೆ ಬಂದಿದ್ದಾಳೆ. ಸುಶೀಲಾಳ ಬಳಿ ಬಂದ ಗೀತಾ ಅಮ್ಮ ಯಾಕೆ ಅಳುತ್ತಿದ್ದೀಯಾ ಎಂದು ಕೇಳಿದ್ದಾಳೆ. ಇದಕ್ಕೆ ಸುಶೀಲಾ, ಗೀತಾ ನನ್ನನ್ನು ನೀನು ಬಿಟ್ಟು ಹೋಗುವುದಿಲ್ಲ ತಾನೇ ಎಂದು ಕಣ್ಣೀರನ್ನು ಹಾಕಿದ್ದಾಳೆ. ಆದರೆ ಗೀತಾಗೆ ಸುಶೀಲಾಳ ವರ್ತನೆ ವಿಚಿತ್ರ ಎಂದು ಅನಿಸಿದೆ. ಗೀತಾ, ಚಂದ್ರಕಾಳನ್ನು ಭೇಟಿ ಮಾಡಿಸುತ್ತೇನೆ ಎನ್ನುವುದು ಸುಶೀಲಾಳಲ್ಲಿ ಭಯವನ್ನು ತರಿಸಿದೆ.


Click it and Unblock the Notifications











