Geetha: ಏನಾಗುತ್ತದೆ ಎಂಬ ಗೊಂದಲದಲ್ಲಿ ಸುಧಾರಾಣಿ-ಭಾನುಮತಿ

By ಶೃತಿ ಹರೀಶ್ ಗೌಡ

ಸುಧಾರಾಣಿ ಕುಟುಂಬದ ಎಲ್ಲರ ಜೊತೆಗೂ ದೇವಸ್ಥಾನಕ್ಕೆ ಹೋಗಿದ್ದಾರೆ. ಇಲ್ಲಿ ಪೂಜೆಯನ್ನು ಮಾಡಿಸಿದ ನಂತರ ಆಚಾರ್ಯರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ದೇವಸ್ಥಾನದ ಅರ್ಚಕರು ಹೌದು ಆಚಾರ್ಯರು ಇಲ್ಲೇ ಇದ್ದಾರೆ ಎಂದು ಆಚಾರ್ಯರು ಇರುವ ಸ್ಥಳದ ಬಗ್ಗೆ ತಿಳಿಸಿದ್ದಾರೆ.

ಎಲ್ಲರೂ ಹೋಗಿ ಆಚಾರ್ಯರ ಮುಂದೆ ನಿಂತುಕೊಂಡಿದ್ದಾರೆ ಇದೇ ವೇಳೆ ಆಚಾರ್ಯರು ಕಣ್ಣು ತೆಗೆದು ನೋಡಿದಾಗ ಸುಧಾರಾಣಿ ಕೈಮುಗಿದು ನಾನು ಮಿನಿಸ್ಟರ್ ಸೂರ್ಯ ಪ್ರಕಾಶ್ ಹೆಂಡತಿ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಆಚಾರ್ಯರು ಗೊತ್ತಿದೆ ಹೇಳಿ ಎಂದಿದ್ದಾರೆ. ನೀವು ಇಲ್ಲ ಎಂದು ನಿಮ್ಮ ಯಜಮಾನರು ತುಂಬಾ ಬೇಸರ ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿ ಅವರ ಸಾವು ನಮಗೆ ತುಂಬಾ ನೋವು ಮಾಡಿದೆ ಎಂದಿದ್ದಾರೆ.

colors kannada geetha Written Update on march 24th episode

ಸುಧಾರಾಣಿ ಮನೆಯಲ್ಲಿ ನಡೆಯುತ್ತಿರುವ ಅವಘಡಗಳ ಬಗ್ಗೆ ಆಚಾರ್ಯರ ಬಳಿ ಕೇಳಿದ್ದಕ್ಕೆ ಈ ಹುಣ್ಣಿಮೆಯಿಂದ ಬರುವ ಹುಣ್ಣಿಮೆಯ ಒಳಗಡೆ ನಿಮ್ಮ ಮನೆಯಲ್ಲಿ ಮೂರು ಕಂಟಕಗಳು ಸಂಭವಿಸಲಿವೆ ಎಂದು ಹೇಳಿದ್ದಾರೆ. ನೀವೆಲ್ಲರೂ ಮನೆಯನ್ನ ಬಿಟ್ಟು ಬಿಡಬೇಕು ಮೂರು ತಿಂಗಳು ಬೇರೆ ಮನೆಯಲ್ಲಿ ಇರಬೇಕು ಎಂದು ಹೇಳಿದ್ದಾರೆ. ಇದರಿಂದ ಮನೆಯವರೆಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ.

ಹೊಸ ಮನೆಗೆ ಆಚಾರ್ಯರ ಆಜ್ಞೆಯಂತೆ ವಿಜಿ ಕುಟುಂಬ ಬಂದಿದೆ. ಹೊಸ ಮನೆಯಲ್ಲಿ ಗೀತಾಳೇ ಮುಂದೆ ನಿಂತು ಪೂಜೆಯನ್ನು ನೆರವೇರಿಸಿದ್ದಾಳೆ. ಪೂಜೆಯಾದ ನಂತರ ಎಲ್ಲರೂ ತಮ್ಮ ಪಾಡಿಗೆ ತಾವು ಇದ್ದಾರೆ. ವಿಜಿ ಮತ್ತು ಗೀತಾ ಸಹ ತುಂಬಾ ಖುಷಿಯಲ್ಲಿ ಇದ್ದಾರೆ ಆದರೆ ಸುಧಾರಾಣಿ ಮಾತ್ರ ಆತಂಕದಲ್ಲಿಯೇ ಇದ್ದಾಳೆ. ಆಚಾರ್ಯರು ಹೇಳಿದ ಮೂರು ಕಂಟಕಗಳು ಯಾವುವು ಎಂದು ಸುಧಾರಾಣಿ ಯೋಚನೆ ಮಾಡುತ್ತಿದ್ದಾಳೆ. ಚಂದ್ರಿಕಾ ಸಮಾಧಾನವನ್ನು ಮಾಡಿದ್ದಾಳೆ.

colors kannada geetha Written Update on march 24th episode

ಈ ಕಡೆ ಭಾನುಮತಿ ತನ್ನ ಅಣ್ಣ ಜೈಲಿಗೆ ಹೋಗಿದ್ದರ ಬಗ್ಗೆ ಚಿಂತೆ ಮಾಡುತ್ತಿದ್ದಾಳೆ. ಇದೆ ವೇಳೆ ಶ್ರುತಿ ಭಾನುಮತಿಯ ಹತ್ತಿರ ಬಂದು ಆಚಾರ್ಯರು ಹೇಳಿದ ಕಂಟಕಗಳು ನಮಗೇನಾದರೂ ಆಗುತ್ತದಾ ಎಂದು ಕೇಳಿದ್ದಾಳೆ. ನಿನಗೆ ಏನು ಆಗಲು ನಾನು ಬಿಡುವುದಿಲ್ಲ ಎಂದು ಸಮಾಧಾನವನ್ನು ಭಾನುಮತಿ ಮಾಡಿದ್ದಾಳೆ. ನಿನ್ನ ಮದುವೆಯನ್ನು ಮಾಡಿ ನಿನ್ನ ಗಂಡನ ಮನೆಗೆ ಕಳುಹಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಶ್ರುತಿಗೆ ಸಮಾಧಾನ ಮಾಡಿದ್ದಾಳೆ. ಹೇಗಾದರೂ ಮಾಡಿ ಅಣ್ಣನನ್ನು ಬಿಡಿಸಿಕೊಂಡು ಬರಬೇಕು ಎಂದು ಭಾನುಮತಿ ಚಿಂತಿಸುತ್ತಿದ್ದಾಳೆ.

ಇದೇ ವೇಳೆ ಮನೆಯವರೆಲ್ಲರನ್ನು ಒಂದು ಕಡೆ ಕರೆದಿರುವ ವಿಜಿ, ಶೃತಿ ಮದುವೆಯ ಬಗ್ಗೆ ಪ್ರಸ್ತಾಪವನ್ನ ಮಾಡಿದ್ದಾನೆ. ಶ್ರುತಿ ಒಂದು ಹುಡುಗನನ್ನು ಪ್ರೀತಿಸುತ್ತಿದ್ದು ಅದನ್ನು ಅಮ್ಮನ ಬಳಿ ಹೇಳಲು ಹೆದರಿಕೆಯಾಗಿ ನನ್ನ ಬಳಿ ಬಂದು ಹೇಳಿದ್ದಾಳೆ. ಪ್ರತಿ ಇಷ್ಟಪಟ್ಟ ಹುಡುಗ ನಮಗೆಲ್ಲರಿಗೂ ಮೆಚ್ಚುಗೆಯಾಗಿದ್ದಾನೆ. ಆದ್ದರಿಂದ ಶ್ರುತಿ ಮದುವೆಯ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ ಎಂದು ವಿಜಿ ಹೇಳಿದ್ದಾನೆ.

colors kannada geetha Written Update on march 24th episode

ವಿಜಿ ಹೇಳಿದ ಮಾತಿಗೆ ಮನೆಯವರೆಲ್ಲರಿಗೂ ಸಹ ಸಂತೋಷವಾಗಿದೆ. ಚಂದಿಕಾ ತನ್ನ ಬೆರಳಿನಲ್ಲಿ ಇದ್ದ ಉಂಗುರವನ್ನು ವಿಜಿಗೆ ನೀಡಿ ನೀನು ಇಂದು ನನ್ನ ಅಣ್ಣನ ಸ್ಥಾನದಲ್ಲಿ ನಿಂತು ತಂಗಿಯ ಮದುವೆಯನ್ನು ಮಾಡಿಸುತ್ತಿದ್ದೀಯ ಇದೆಲ್ಲವನ್ನು ನೋಡಿ ನನಗೆ ತುಂಬಾ ಖುಷಿಯಾಗಿದೆ ಬಳುವಳಿಯಾಗಿ ಬಂದ ಉಂಗುರ ನಿನ್ನ ಕೈಲಿದ್ದರೆ ಚಂದ ಎಂದು ವಾಪಸ್ ಉಂಗುರವನ್ನು ನೀಡಿದ್ದಾಳೆ.

ಶೃತಿ ಪ್ರೀತಿ ಮಾಡುತ್ತಿರುವ ಹುಡುಗನನ್ನು ಕರೆದಿರುವ ಭಾನುಮತಿ ನಿನ್ನ ತಂದೆ ತಾಯಿಯನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾಳೆ. ಇದಕ್ಕೆ ಅವನು ತೊದಲುತ್ತಿರುವುದನ್ನು ನೋಡಿ ಭಾನುಮತಿ ನೀನು ಪ್ರೀತಿ ಮಾಡುವ ವಿಚಾರವನ್ನು ತಂದೆ ತಾಯಿ ಬಳಿ ಹೇಳಲಿಲ್ಲವೇ ಎಂದು ಕೇಳಿದ್ದಾಳೆ. ಅವನು ಭಯದಿಂದಲೇ ಉತ್ತರ ನೀಡುತ್ತಿದ್ದಾನೆ. ಇದರಿಂದ ಭಾನುಮತಿಗೆ ಅವನ ಮೇಲೆ ಅನುಮಾನ ಶುರುವಾಗಿದೆ.

More from Filmibeat

English summary
colors kannada serial Geetha Written Update on march 24episode. Here is the details about shruthi marriage announced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X