Geetha: ಶೃತಿ ನೋಡಲು ಬಂದ ವರುಣ್ ಫ್ಯಾಮಿಲಿ: ವರುಣ್ ಅಪ್ಪನ ಅಧಿಕ ಪ್ರಸಂಗ ಹೇಗಿತ್ತು?
ವರುಣ್ ಜೊತೆ ಶ್ರುತಿ ಮಾತನಾಡುತ್ತಾ ಇದ್ದಾಳೆ. ನೀನು ನಿನ್ನ ತಂದೆ ತಾಯಿಗೆ ಲವ್ ಮಾಡುತ್ತಿರುವ ವಿಷಯವನ್ನು ಹೇಳಿಲ್ವಾ ಎಂದು ಕೇಳಿದ್ದಾಳೆ. ಇದಕ್ಕೆ ವರುಣ್ ಹೇಳಿದ್ದೇನೆ, ಆಂಟಿ ಆಯ್ತು ಕರೆಸುತ್ತೇನೆ ಎಂದು ಹೇಳಿದ್ದಾನೆ. ಮನಸ್ಸಿನಲ್ಲಿಯೇ ನಾನು ಕೇರ್ ಆಫ್ ಫುಟ್ಪಾತ್ ಎಂದು ಇವರಿಗೆ ಗೊತ್ತಾದರೆ ಇವರ ಮನೆಯ ಅಳಿಯ ಆಗಲಿ ಮನೆ ತೊಳೆಯಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದಾನೆ.
ಈ ಕಡೆ ವರುಣ್ ಹೋದ ಮೇಲೆ ಮಾದೇಶ ಸಿಸೋ ನಂಗೆ ಯಾಕೋ ಇವನ ಮೇಲೆ ಅನುಮಾನ ಎಂದಿದ್ದಕ್ಕೆ ಭಾನುಮತಿ ಕಪಾಳಮೋಕ್ಷ ಮಾಡಿದ್ದಾಳೆ. ನಿನ್ನ ಲಿಮಿಟ್‌ನಲ್ಲಿ ನೀನು ಇರು, ಎಂದು ಕೋಪ ತೋರಿಸಿದ್ದಾಳೆ. ಈ ಮನೆಯ ಅಳಿಯ ಆಗುವವನು ಅವನ ಬಗ್ಗೆ ಮಾತನಾಡೋಕೆ ಎಷ್ಟು ಧೈರ್ಯ ನಿಂಗೆ ಎಂದು ಬೈದಿದ್ದಾಳೆ. ನೀನು ಕೂಡ ಅಣ್ಣನ ರೀತಿಯಲ್ಲಿ ಎಡಬಿಡಂಗಿ ತರ ಆಡಬೇಡ, ನಾಳೆ ಅವರ ಕುಟುಂಬದವರು ಬರುತ್ತಾರೆ. ನಾಳೆ ಅನುಮಾನ ಕ್ಲಿಯರ್ ಆಗುತ್ತದೆ ಎಂದು ಭಾನುಮತಿ ಮಾದೇಶನಿಗೆ ಹೇಳಿದ್ದಾಳೆ.

ಈ ವೇಳೆ ಮಾದೇಶ, ಸೀತಾರನನ್ನು ನೆನಸಿಕೊಂಡು ಅಕ್ಕನ ಜೊತೆಗೆ ನೀನು ಹೇಗಿದ್ಯೋ ಎಂದು ನೆನಸಿಕೊಳ್ತಾ ಇರ್ತಾನೆ. ಸಿತಾರಾ ನೋಡಲು ಮಾದೇಶ ಜೈಲಿಗೆ ಹೋಗಿದ್ದಾನೆ. ಜೈಲಿನಿಂದ ಹೊರಗೆ ಬಂದ ಮಾದೇಶ, ಭಾನುಮತಿಗೆ ಸಿತಾರಾ ನಿನ್ನ ನೋಡಬೇಕಂತೆ ಎಂದು ಅಂದಿದ್ದಾನೆ. ಅದಕ್ಕೆ ಭಾನುಮತಿ ನಾನು ಈಗ ಜೈಲಿಗೆ ಹೋದರೆ ದೊಡ್ಡ ಯಡವಟ್ಟು ಆಗುತ್ತದೆ, ಎಲ್ಲರಿಗೂ ನಮ್ಮ ಮೇಲೆ ಕಣ್ಣು ಇದೆ. ಈಗ ನಾನು ಹೋದರೆ ವಿಜಿಗೂ ಸಹ ಅನುಮಾನ ಬರುತ್ತದೆ ಎಂದು ಹೇಳಿದ್ದಾನೆ.
ಅಣ್ಣ ಇನ್ನೂ ಒಂದಷ್ಟು ದಿನ ಜೈಲಿನಲ್ಲಿ ಇರಲಿ ಹೊರಗೆ ಬಂದರೆ ವಿಜಿ ಅವನನ್ನು ಸುಮ್ಮನೆ ಬಿಡೋದಿಲ್ಲ, ಎಂದು ಹೇಳಿ ಬಾ ಎಂದು ಭಾನುಮತಿ ಹೇಳಿದ್ದಾಳೆ. ಅವನು ಸಾಯೋಕೆ ಆಸೆ ನಾಳೆಯೇ ನಾನೇ ಬಿಡುಗಡೆ ಮಾಡಿಸುತ್ತೇನೆ ಎಂದು ಮಾದೇಶ ಕೈಯಲ್ಲಿ ಸಿತಾರಾಗೆ ಹೇಳಿ ಕಳಿಸಿದ್ದಾಳೆ. ಗೀತಾಳನ್ನು ನೋಡಲು ಚಂದ್ರಿಕಾ, ಸುಶೀಲ ಮನೆಗೆ ಬಂದಿದ್ದಾಳೆ. ಇದೇ ವೇಳೆ ಗೀತಾ ಮತ್ತು ಸುಶೀಲ ಇಬ್ಬರೂ ಮಾತನಾಡುವಾಗ, ಮಧ್ಯ ಪ್ರವೇಶ ಮಾಡಿದ ಚಂದ್ರಿಕಾ ಗೀತಾ ನನ್ನ ರೀತಿ ಹಿಡಿದ ಕೆಲಸವನ್ನು ಮುಗಿಸದೇ ಬಿಡೋದಿಲ್ಲ ಎಂದಿದ್ದಾಳೆ. ಈ ಮಾತಿಗೆ ಸುಶೀಲಾಗೆ ಬೇಸರವಾಗಿದೆ.

ವಿಜಿ ಮನೆಗೆ ಗೀತಾ ಬಂದಿದ್ದಾಳೆ. ಇದೇ ವೇಳೆ ಸುಧಾರಾಣಿ, ವಿಜಿಗೆ ಊಟ ಮಾಡು ಎಂದು ಪೀಡಿಸಿ ಊಟವನ್ನು ತಿನ್ನಿಸುತ್ತಾ ಇರುತ್ತಾಳೆ. ಇದನ್ನು ನೋಡಿದಾಗ ಏನಮ್ಮ ಈ ರೀತಿ ಊಟ ಮಾಡಿಸುತ್ತಿದ್ದೀರಾ ಎಂದು ಕೇಳಿದ್ದಾಳೆ. ಇವನು ಕೆಲಸ ಎಂದುಕೊಂಡು ಸರಿಯಾಗಿ ಊಟ ಮಾಡುವುದಿಲ್ಲ ಎಂದು ಸುಧಾರಾಣಿ ಹೇಳಿದ್ದಾಳೆ. ಸುಧಾರಾಣಿಗೆ ಫೋನ್ ಬಂದಿದೆ. ಸುಧಾರಾಣಿ ಪ್ಲೇಟನ್ನ ಗೀತಾ ಕೈಗೆ ಕೊಟ್ಟು ನೀನೆ ಊಟ ಮಾಡಿಸು ಎಂದು ಅಂದಿದ್ದಾರೆ.
ಈ ಸಂದರ್ಭದಲ್ಲಿ ಗೀತಾಗೆ ವಿಜಯ್ ಊಟ ಮಾಡಿಸುತ್ತಿದ್ದಾಗ ಅದನ್ನು ನೋಡಿ ಇವರಿಬ್ಬರ ಪ್ರೀತಿಯ ಮೇಲೆ ಯಾರ ಕಣ್ಣು ಸಹ ಬೀಳದೆ ಇರಲಿ ಎಂದು ಸುಧಾರಾಣಿ ಹಾರೈಸಿದ್ದಾಳೆ. ವಿಜಿ ಮನೆಗೆ ವರುಣ್ ಕರೆಸಿದ ಫೇಕ್ ಅಮ್ಮ ಅಪ್ಪ ಬಂದಿದ್ದಾರೆ.ಈ ವೇಳೆ ಕುಟುಂಬವನ್ನು ಪರಿಚಯಿಸುವ ವೇಳೆ ಸೂರ್ಯ ಪ್ರಕಾಶ್‌ಗೆ ಎರಡು ಹೆಂಡತಿಯರು ಇದ್ದಾರಾ ? ಎಂದಿದ್ದಕ್ಕೆ ವಿಜಿಗೆ ಕೋಪ ಬಂದಿದೆ. ಇದನ್ನು ಗೀತಾ ಹೇಗೋ ಸಂಭಾಳಿಸಿ ಕೋಪ ಮಾಡಿಕೊಳ್ಳಬೇಡ ಎಂದಿದ್ದಾಳೆ. ಎರಡನೇ ಹೆಂಡತಿಯ ಮಗಳು ಶೃತಿ ಎಂದಿದ್ದು ಭಾನುಮತಿಗೆ ಅವಮಾನ ಮಾಡಿದಂತೆ ಆಗಿದೆ.
ಗೀತಾ ನೋಡಿ ಮದುವೆಯಾಗದೆ ಹುಡುಗಿಯನ್ನು ಮನೆಗೆ ಸೇರಿಸಿದ್ದಾರೆ ಎನು ಸಂಪ್ರದಾಯವೋ ಎನೋ ಎಂದು ಅಂದಾಗಲೂ ಸಹ ವಿಜಿಗೆ ಕೋಪ ಬಂದಿದೆ ಆದರೂ ಸಹ ಶೃತಿ ಪ್ರೀತಿಗಾಗಿ ಎಲ್ಲವನ್ನು ಸಹಿಸಿಕೊಂಡು ಇದ್ದಾನೆ. ಈ ವೇಳೆ ವರದಕ್ಷಿಣೆ ಮಾತು ಬಂದಾಗ ವಿಜಿ ಹುಡುಗಿಗೆ ಚಿನ್ನ, ಡೌರಿ ಎಲ್ಲವನ್ನು ಕೊಡುವುದಾಗಿ ಹೇಳಿದ್ದಾನೆ. ಶೃತಿಯನ್ನು ವರುಣ್ ಫೇಕ್ ಅಮ್ಮ ಅಪ್ಪ ಒಪ್ಪಿಕೊಂಡಿದ್ದಾರೆ.


Click it and Unblock the Notifications











