Geetha: ಭಾನುಮತಿಗೆ ಬುದ್ದಿ ಹೇಳಿದ ಸುಧಾರಾಣಿ

By ಶೃತಿ ಹರೀಶ್ ಗೌಡ

ಶೃತಿಯನ್ನು ನೋಡಿಕೊಂಡು ಬಂದ ಫೇಕ್ ಅಮ್ಮ -ಅಪ್ಪನ ಫಾರ್ಮಮೆನ್ಸ್‌ಗೆ ವರುಣ್ ಪಿಧಾ ಆಗಿದ್ದಾನೆ.‌ ಇನ್ನೊಂದು ತಿಂಗಳಲ್ಲಿ ನಾನು ಕೋಟ್ಯಾಧೀಶ್ವರರ ಮನೆಯ ಅಳಿಯ ಆಗುತ್ತೇನೆ ಆದರೆ ಅವಳು ನಮ್ಮ ಮನೆಯ ಆಳಾಗುತ್ತಾಳೆ ಎಂದು ವರುಣ್ ಜೋರಾಗಿ ನಗುತ್ತಿದ್ದಾನೆ.

ಈ ಕಡೆ ವರುಣ್ ಕರೆಸಿಕೊಂಡಿರುವ ಫೇಕ್ ಅಮ್ಮ-ಅಪ್ಪ ನಾವು ಹೇಗೆ ಆ್ಯಕ್ಟ್ ಮಾಡುದ್ವಿ ನಮ್ಮ ಮಾತನ್ನು ಅವರು ಸಂಪೂರ್ಣವಾಗಿ ನಂಬಿದ್ದಾರೆ ಎಂದು ವರುಣ್ ಬಳಿ ಮಾತನಾಡಿದ್ದಾರೆ. ಇದಕ್ಕೆ ವರುಣ್ ನಿಮಗಾಗಿ ಒಂದು ಮನೆಯನ್ನು ‌ನೋಡಿದ್ದೇನೆ ನೀವು ಅಲ್ಲಿಯೇ ಮದುವೆಯಾಗುವವರೆಗೆ ಇರಿ ಎಂದು ಹೇಳಿದ್ದಾನೆ.

colors kannada Geetha Written Update on march 28th episode

ಯಾವುದೇ ಅನುಮಾನ ಬಾರದಂತೆ ನೀವು ನೋಡಿಕೊಳ್ಳಬೇಕು ಹೊರಗಡೆ ಬಂದಾಗ ಯಾರ ಜೊತೆಯೂ ಸಹ ಮಾತನಾಡಬಾರದು ಎಂದೆಲ್ಲ ಕಂಡೀಷನ್ ಹಾಕಿದ್ದಾನೆ. ಇದೊಂದು ಮದುವೆ ಮುಗಿದ ಬಳಿಕ ನಾನು ಫೇಮೆಂಟ್ ಕೊಡುತ್ತೇನೆ ಎಂದು ಫೇಕ್ ಅಮ್ಮ ಅಪ್ಪನಿಗೆ ವರುಣ್ ಹೇಳಿದ್ದಾನೆ.

ಗೀತಾ ವಿಜಯ್ ಬಳಿ‌ ಬಂದು ನೀನು ಒಮ್ಮೆ ವರುಣ್ ಹಾಗೂ ಆತನ ಫ್ಯಾಮಿಲಿ ಬಗ್ಗೆ ವಿಚಾರಿಸು ಎಂದು ಹೇಳಿದ್ದಾಳೆ. ಇದಕ್ಕೆ ವಿಜಯ್ ನನ್ನ ತಂಗಿ ಮದುವೆಯನ್ನು ಯಾರೇ ತಡೆಯಲು‌ ಬಂದರು ಸಹ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾನೆ.

ಇದನೆಲ್ಲ ಕೇಳಿಸಿಕೊಂಡ ಸುಧಾರಾಣಿ ಗೀತಾ ಹೇಳುತ್ತಿರುವುದರಲ್ಲಿ ತಪ್ಪೇನು ಇಲ್ಲ ಈ ಮನೆಯಿಂದ ಬೇರೆ ಮನೆಗೆ ಕೊಡುವಾಗ ಈ ರೀತಿ ವಿಚಾರಿಸೋದು ಒಳ್ಳೆಯದು ಎಂದು ವಿಜಿಗೆ ಸುಧಾರಾಣಿ ಹೇಳಿದ್ದಾಳೆ. ಒಂದು ಹೆಣ್ಣಿನ ಜೀವನದ ವಿಷಯ ನಿನ್ನ ತಂಗಿ ಸುಖವಾಗಿರಬೇಕು ಎಂದರೆ ಎಲ್ಲವನ್ನು ಸಹ ವಿಚಾ.ರಿಸಿ ಮದುವೆ ಮಾಡು ಎಂದಿದ್ದಾರೆ ಸುಧಾರಾಣಿ.

colors kannada Geetha Written Update on march 28th episode

ಸುಶೀಲಾಗೆ ಗೀತಾ ತನ್ನಿಂದ ದೂರವಾಗುವಂತಹ ಕನಸೊಂದು ಬಿದ್ದಿದೆ. ಇದರಿಂದಾಗಿ ಸುಶೀಲ ಜೋರಾಗಿ ನನ್ನ ಮಗಳನ್ನು ನನ್ನಿಂದ ದೂರ ಮಾಡಬೇಡಿ ಎಂದು ಚೀರಿಕೊಂಡಿದ್ದಾಳೆ. ಇದೇ ವೇಳೆ ಸ್ಥಳಕ್ಕೆ ಚಂದ್ರಿಕಾ ಆಗಮಿಸಿದ್ದಾಳೆ ಏನಾಯ್ತು ಅಮ್ಮ ಯಾಕೆ ಹೀಗೆ ಚಿರಿಕೊಂಡೆ ಕೆಟ್ಟ ಕನಸು ಬಿತ್ತ ಎಂದು ಕೇಳಿದ್ದಾಳೆ ಅದಕ್ಕೆ ಸುಶೀಲ ಹೌದು ಎಂದಷ್ಟೇ ಹೇಳಿದ್ದಾಳೆ ಚಂದ್ರಿಕಾಳನ್ನು ನೋಡಿ ಭಯಪಟ್ಟುಕೊಂಡಿದ್ದಾಳೆ ಏನಾದರೂ ಗೊತ್ತಾಯಿತಾ ಅಂದುಕೊಂಡಿದ್ದಾಳೆ.

ಶ್ರುತಿ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ವರುಣ್ ಫ್ಯಾಮಿಲಿಯ ಬಗ್ಗೆ ವಿಚಾರಿಸು ಎಂದು ಸುಧಾರಾಣಿ ಭಾನುಮತಿಗೆ ಬುದ್ಧಿಯನ್ನ ಹೇಳಿದ್ದಾಳೆ. ಸುಧಾರಾಣಿ ಬುದ್ಧಿಯನ್ನ ಹೇಳಿದರು ಸಹ ಭಾನುಮತಿ ಡೋಂಟ್ ಕೇರ್ ಎಂದು ಸುಮ್ಮನೆ ನಡೆದಿದ್ದಾಳೆ. ಗುರುಗಳು ಹೇಳಿದ ಮಾತನ್ನು ಇದೇ ವೇಳೆ ಸುಧಾರಾಣಿ ನೆನಪಿಸಿ ಮುಂದೆ ಆಗುವ ಅನಾಹುತಕ್ಕೆ ನೀನು ಕಾರಣವಾಗಬೇಡ ಎಂದು ಹೇಳಿದ್ದಾಳೆ.

ದಯವಿಟ್ಟು ಶ್ರುತಿ ಮದುವೆಯನ್ನ ಮುಂದೆ ಹಾಕು ಇದೆಲ್ಲವೂ ಕಳೆದ ಮೇಲೆ ನಂತರ ಮಾಡುವೆ ಎಂದಿದ್ದಕ್ಕೆ ಭಾನುಮತಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ನನ್ನ ಮಗಳ ಮದುವೆ ಮಾಡುವುದು ನನಗೆ ಗೊತ್ತು ಎಂದುಕೊಂಡು ಅಲ್ಲಿಂದ ಹೋಗಿದ್ದಾಳೆ. ಶೃತಿ ಮದುವೆಯ ಬಗ್ಗೆ ಸುಧಾರಾಣಿಗೆ ಚಿಂತೆಯಾಗಿದೆ ಯಾವುದಾದರೂ ಅನಾಹುತ ಸಂಭವಿಸಿದರೆ ಏನು ಗತಿ ಅಂದುಕೊಂಡಿದ್ದಾಳೆ.

ಗೀತಾ ಅಜ್ಜಿಯ ಮನೆಯ ಕಾರ್ಯಕ್ರಮಕ್ಕೆ ಹೋದಾಗ ತಾನಾಗಿಯೇ ತಾಳಿಯನ್ನು ಕಟ್ಟುಕೊಂಡಿದ್ದಾಳೆ ಇದು ಈಗ ವಿಜಿ ಮುಂದೆ ಪ್ರದರ್ಶನ ವಾಗಿದೆ. ಹಿಂದಿನ ಕಹಿ ಘಟನೆಗಳೆಲ್ಲವನ್ನು ಸಹ ವಿಜಿ ನೆನಪಿಸಿ ಕೊಂಡು ಬೇಸರ ಮಾಡಿಕೊಂಡಿದ್ದಾನೆ. ಅಜ್ಜಿ ತಾಳಿ ತೋರಿಸು ಎಂದಿದ್ದಕ್ಕೆ ಹೋಗಿ ಗೀತಾ ತಾಳಿಯನ್ನು ಕಟ್ಟಿಕೊಂಡಿದ್ದು, ವಿಜಿ ಗೀತಾಗೆ ಕುಂಕುಮ ಹಚ್ಚಿದ್ದು ಎಲ್ಲವನ್ನು ನೆನಪಿಸಿಕೊಂಡಿದ್ದಾನೆ.

y

More from Filmibeat

English summary
colors kannada serial Geetha Written Update on march 28th episode. Here is the details about susheela blabbers that chandrika will take away her daughter geetha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X