Geetha: ಪ್ರಕೃತಿ ಸಾಕ್ಷಿಯಾಗಿ ಕಲ್ಪನೆಯಲ್ಲೇ ಗೀತಾ- ವಿಜಿ ಮದುವೆ!
ಗೀತಾಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದಿರುವ ವಿಜಿ, ಗೀತಾಳನ್ನು ತನ್ನ ಮುಂದೆ ನಿಲ್ಲಿಸಿಕೊಂಡು ಮಾತನಾಡುತ್ತಾ ಇದ್ದಾನೆ. ಗೀತಾ ನಂಗೆ ಹಳೆಯದನ್ನು ನೆನಸಿಕೊಂಡು ಬೇಸರವಾಗುತ್ತಿದೆ. ಅಜ್ಜಿ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿನ್ನ ಜೊತೆಗೆ ಬಹಳ ಒರಟಾಗಿ ಮಾಡಿಬಿಟ್ಟೆ ಎಂದು ಹೇಳಿದ್ದಾನೆ. ಇದೇ ವೇಳೆ ಗೀತಾಳ ಕಣ್ಣನ್ನು ಮುಚ್ಚಿಸಿ ನನ್ನ ಎದೆಗೆ ಒರಗಿಸಿಕೊಂಡಿದ್ದಾನೆ.
ಗೀತಾಗೆ ನಾನು ನೀನು ಇಬ್ಬರೇ ಇರುವುದು ನಾನು ಹೇಳೋದನ್ನು ನೀನು ಕೇಳಿಸಿಕೊ ನನ್ನ ಎದೆಬಡಿತ ಮಾತ್ರ ನಿನಗೆ ಕೇಳಿಸಬೇಕು ಎಂದು ಹೇಳಿ ಪ್ರಕೃತಿ ಸಾಕ್ಷಿಯಾಗಿ ಅವಳನ್ನು ಮದುವೆಯಾಗಿರುವುದಾಗಿ ಕೇಳಿದ್ದಾನೆ. ಇದೇ ವೇಳೆ ಗೀತಾ ಬರೀ ಕಲ್ಪನೆಯಲ್ಲಿ ಮಾತ್ರನಾ ನಾನು ನೀನು ಮದುವೆಯಾಗಲು ಸಾಧ್ಯ ಎಂದು ಕೇಳಿದ್ದಾಳೆ. ನಂತರ ವಿಜಿ, ಗೀತಾಗೆ ನನ್ನ ತಂಗಿ ಶೃತಿ ಮದುವೆಯಾಗಲಿ ನಾವಿಬ್ಬರು ದೊಡ್ಡದಾಗಿ ಮದುವೆಯಾಗಿ ಸಂಸಾರ ಮಾಡೋಣ ಎಂದು ತಿಳಿಸಿದ್ದಾನೆ. ವಿಜಿಯ ಈ ಮಾತನ್ನು ಕೇಳಿದ ಗೀತಾಗೆ ತುಂಬಾ ಸಂತೋಷವಾಗಿದೆ.

ಸಾಂಪ್ರದಾಯಿಕವಾಗಿ ಗಂಡಿನ ಮನೆಗೆ ಹೆಣ್ಣಿನ ಮನೆಯವರು ಬರುವ ರೀತಿ ವಿಜಿ, ಗೀತಾ ಬಂದಿದ್ದಾರೆ. ಆದರೆ ಫೇಕ್ ಅಮ್ಮ -ಅಪ್ಪ ಮನೆಯಲ್ಲಿ ಇರದ್ದನ್ನು ನೋಡಿದ ವರುಣ್‌ಗೆ ಶಾಕ್ ಆಗಿದೆ. ಏನು ಹೇಳಬೇಕು ಎಂಬುದು ಗೊತ್ತಾಗದೇ ಇಲ್ಲಿ ಇಲ್ಲ ಎಂದು ಹೇಳಿದ್ದಾನೆ. ಇದೇ ವೇಳೆ ವರುಣ್‌ಗೆ ಗೀತಾ ನಿನಗೆ ಮನೆ ಇಲ್ಲ ಎಂದೇ ಇದು ಯಾವ ಮನೆ ಎಂದು ಕೇಳಿ ವರುಣ್‌ನನ್ನು ಇಕ್ಕಟ್ಟಿಗೆ ಗೀತಾ ಸಿಲುಕಿಸಿದ್ದಾಳೆ. ಇದರಿಂದ ವಿಜಿಗೆ ಏನು ಹೇಳಬೇಕೋ ತಿಳಿಯದೇ ಗೊಂದಲದಲ್ಲಿ ಇದ್ದಾನೆ.
ಈ ಕಡೆ ಗೀತಾ ಮತ್ತು ವಿಜಿ ಮನೆಗೆ ಬರುತ್ತೇನೆ ಎಂದಾಗ ವರುಣ್‌ಗೆ ತುಂಬಾ ಟೆನ್ಷನ್ ಆಗಿದೆ. ಅದಕ್ಕೆ ಫೇಕ್ ಅಮ್ಮ ಅಪ್ಪನನ್ನು ಹುಡುಕಿದ್ದಾನೆ. ಹುಡುಕುವಾಗಲೇ ಅಲ್ಲಿಗೆ ಗೀತಾ- ವಿಜಿ ಬಂದಿದ್ದಾರೆ. ಇದರಿಂದ ವರುಣ್ ಇವರು ಎಲ್ಲಿ ಹೋದರು ಎಂದು ಯೋಚನೆ ಮಾಡುತ್ತಿದ್ದಾನೆ. ಇಸ್ತ್ರಿ ಮಾಡಿದ ನಂತರ ಮನೆಯ ಬಳಿ ಬಂದಾಗ ಗೀತಾ ಹಾಗೂ ವಿಜಿ ವರುಣ್ ಬಳಿ ಮಾತನಾಡುತ್ತಾ ಇರುವುದನ್ನು ನೋಡಿ ಕಾಂಪೌಂಡ್ ನೆಗೆದು ಒಳಗೆ ಹೋಗಿ ವೇಷವನ್ನು ಮರೆಸಿಕೊಂಡಿದ್ದಾರೆ. ಇದರಿಂದಾಗಿ ವರುಣ್ ನಿರಾಳನಾಗುವಂತೆ ಆಗಿದೆ. ಇಲ್ಲದಿದ್ದರೆ ಇಂದು ಸಿಕ್ಕಿ ಬಿದ್ದು ಮದುವೆ ಕ್ಯಾನ್ಸಲ್ ಆಗುವ ಸಾಧ್ಯತೆ ಇದ್ದಿತು.
ಗೀತಾ ಮನೆಯಿಂದ ಚಂದ್ರಿಕಾ ವಿಜಿಯ ಮನೆಗೆ ಬಂದಿದ್ದಾಳೆ. ಇದೇ ವೇಳೆ ಭಾನುಮತಿ, ಚಂದ್ರಿಕಾಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದಾಳೆ. ಇದಕ್ಕೆ ಚಂದ್ರಿಕಾ ನಿನ್ನ ಸಾವನ್ನು ನೋಡಲಾಗದೇ ನಾನು ಗೀತಾ ಮನೆಯಲ್ಲಿ ಇದ್ದೇನೆ ನಿನ್ನ ನೋಡಿದರೆ ಸಾಯಿಸಬೇಕು ಅನ್ನುವಷ್ಟು ಕೋಪವಿದೆ, ನಿನ್ನ ಸಾವು ಅಷ್ಟು ಬೇಗ ಬಿಡೋದಿಲ್ಲ ನರಳಿ ನರಳಿ ಸಾಯುವಂತೆ ಮಾಡುತ್ತೇನೆ ಎಂದಿದ್ದಾಳೆ.

ಚಂದ್ರಿಕಾಗೆ ಭಾನುಮತಿ ಕಪಾಳಕ್ಕೆ ಎರಡು ಸಲ ಹೊಡೆದಿದ್ದಾಳೆ. ಈ ವೇಳೆ ಅಲ್ಲಿಗೆ ಸುಧಾರಾಣಿ ಬಂದು ಭಾನುಮತಿಯ ಕೈ ಹಿಡಿದುಕೊಂಡಿದ್ದಾಳೆ. ಭಾನುಮತಿಗೆ ಸುಧಾರಾಣಿಯ ಮುಖವನ್ನೇ ದಿಟ್ಟಿಸಿಕೊಂಡು ನೋಡುತ್ತಿದ್ದಾಳೆ ಮುಂದೆ ಏನಾಗಲಿದೆ ಎಂಬುದೇ ಕುತೂಹಲಕಾರಿಯಾಗಿದೆ.


Click it and Unblock the Notifications











