Geetha: ಭಾನುಮತಿಗೆ ಬುದ್ದಿ ಹೇಳಿದ ಸುಧಾರಾಣಿ: ವರುಣ್ ಮನೆಗೆ ಬಂದ ಗೀತಾ- ವಿಜಿಗೆ ಅನುಮಾನ

By ಶೃತಿ ಹರೀಶ್ ಗೌಡ

ಸಂಪ್ರದಾಯದಂತೆ ಗಂಡು ನೋಡುವ ಶಾಸ್ತ್ರಕ್ಕೆ ಬಂದ ಗೀತಾ ಹಾಗೂ ವಿಜಿಗೆ ಮತ್ತೊಮ್ಮೆ ಅವಮಾನವಾಗುವಂತೆ ವರುಣ್ ಫ್ಯಾಮಿಲಿಯವರು ಮಾತನಾಡಿದ್ದಾರೆ. ನೀವಿಬ್ಬರೇ ಬಂದ್ರಾ ಎಂದು ಹೇಳುವ ಮೂಲಕ ವಿಜಿಯ ಸಿಟ್ಟು ಹೆಚ್ಚಾಗುವಂತೆ ಮಾಡಿದ್ದಾರೆ. ಆದರೆ ವಿಜಿ ತನ್ನ ಕೋಪವನ್ನೆಲ್ಲಾ ಕಂಟ್ರೋಲ್ ಮಾಡಿಕೊಂಡು ಸುಮ್ಮನೆ ಇದ್ದಾನೆ. ಇದೇ ವೇಳೆ ಮನೆಯಿಲ್ಲ ಎಂದು ವರುಣ್ ಹೇಳಿದ್ದನ್ನು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ನಾವೇನು ಬೀದಿ ಬದಿಯಲ್ಲಿ ಇಸ್ತ್ರಿ ಪೆಟ್ಟಿಗೆ ಇಟ್ಟುಕೊಂಡಿರುವವರು ಎಂದು ತಿಳಿದುಕೊಂಡ್ರಾ? ನಾವು ಮಗನಿಗಾಗಿ ಮನೆಯನ್ನ ಖರೀದಿ ಮಾಡಿದ್ವಿ ಎಂದು ಜೋರಾಗಿ ಅಪ್ಪ ಅಮ್ಮ ಹೇಳಿದ್ದಾರೆ. ಇದರಿಂದ ಇದ್ದ ಗೊಂದಲ ಪರಿಹಾರವಾಗಿದೆ. ಮದುವೆ ಗ್ರ್ಯಾಂಡ್ ಆಗಿ ಮಾಡಬೇಕೆಂದು ಮಾತನಾಡಿದ್ದಕ್ಕೆ ಇಲ್ಲ ನಾವು ನಮ್ಮ ಮನೆ ದೇವರ ಸನ್ನಿಧಾನದಲ್ಲಿ ಮದುವೆ ಮಾಡುವುದಾಗಿ ಹರಕೆ ಕಟ್ಟಿಕೊಂಡಿದ್ವಿ ಎಂದು ಬೇಸರ ಮಾಡಿಸಿದ್ದಾರೆ. ಹೂ ಹಣ್ಣು ಕೊಟ್ಟಾಗಲು ಸಹ ಅವಮಾನವಾಗುವಂತೆ ಮಾತನಾಡಿ ಮನೆಯಿಂದ ಕಳುಹಿಸಿದ್ದಾರೆ.

ಸುಶೀಲಾಗೆ ಪದೇಪದೇ ಗೀತಾ ತನ್ನಿಂದ ದೂರವಾಗುತ್ತಾಳೆ ಎಂಬ ಕನಸು ಬೀಳುತ್ತಿದೆ. ಇನ್ನು ಚಂದ್ರಿಕಾ ಕೂಡ ಸುಶೀಲಾ ಮನೆಯಲ್ಲಿಯೇ ಇದ್ದು ಮಗಳ ಬಗ್ಗೆ ಕಂಡು ಹಿಡಿಯುತ್ತಾಳೆ ಎಂಬ ಭ್ರಮೆಯಲ್ಲಿ ಸುಶೀಲ ಇದ್ದಾಳೆ. ಸುಶೀಲಾಗೆ ಚಂದ್ರಿಕಾ ಬಂದು ಹಳೆಯ ಫೋಟೋವನ್ನು ತೋರಿಸಿ ಗೀತಾಳೆ ನನ್ನ ಮಗಳು ಎಂದು ಹೇಳಿದ ಬಗ್ಗೆ ಕನಸು ಬಿದ್ದಿದೆ. ಚಂದ್ರಿಕಾ ಜೋರು ಮಾಡಿ ಗೀತಾಳೆ ನನ್ನ ಮಗಳು ನಾನು ಫೋಟೋವನ್ನು ಕೂಡ ಎನ್‌ಲಾರ್ಜ್ ಮಾಡಿಸಿದ್ದೇನೆ ಎಂದು ಹೇಳಿದಂತೆ ಕನಸು ಕಂಡಿದ್ದಾಳೆ.

colors kannada geetha Written Update on march 30th episode

ಸುಶೀಲಾ ದಯವಿಟ್ಟು ನನ್ನ ಮಗಳನ್ನು ದೂರ ಮಾಡಬೇಡ ನನಗೆ ಪ್ರಾಣ ಭಿಕ್ಷೆಯನ್ನು ಕೊಡು ಎಂದು ಕೇಳಿದ್ದಾಳೆ. ನಂತರ ನನ್ನ ಮಗಳನ್ನು ದೂರ ಮಾಡಬೇಡ ದೂರ ಮಾಡಬೇಡ ಎಂದು ಚೀರಿದಾಗ ಎದ್ದು ಕಣ್ಣು ಬಿಟ್ಟರೆ ಇದು ಕನಸು ಎಂದು ತಿಳಿದಿದೆ. ಚಂದ್ರಿಕಾಗೆ ಭಾನುಮತಿ ಕಪಾಳಕ್ಕೆ ಹೊಡೆದಿದ್ದಕ್ಕೆ ಸುಧಾರಾಣಿ ಬಂದು ಯಾಕೆ ಹೊಡೆದೆ ಎಂದು ವಾರ್ನಿಂಗ್ ಮಾಡಿದ್ದಾಳೆ. ನೀನು ಈ ಮನೆಗೆ ಎರಡನೆಯ ಹೆಂಡತಿ ನಿನಗೆ ಯಾವುದೇ ಅಧಿಕಾರ ಇಲ್ಲ ಎಂದು ಸುಧಾರಾಣಿ ಭಾನುಮತಿಗೆ ಹೇಳಿದ್ದಾಳೆ.

colors kannada geetha Written Update on march 30th episode

ನೀನು ಅನುಭವಿಸುತ್ತಿರುವ ಅಧಿಕಾರ ನನ್ನ ಗಂಡ ನಿನಗೆ ಕೊಟ್ಟ ಭಿಕ್ಷೆ ಇಲ್ಲದಿದ್ದರೆ ನೀನು ಪಾರ್ಟಿ ಆಫೀಸ್‌‌ನ ಗೇಟ್ ಕೀಪರ್ ಆಗಲು ಆಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದಾಳೆ. ನಾನು ಇಲ್ಲದ ಸಮಯವನ್ನ ಎನ್ ಕ್ಯಾಶ್ ಮಾಡಿಕೊಂಡು ಈ ಮನೆಗೆ ನೀನು ಸೊಸೆಯಾಗಿ ಬಂದಿದ್ದೀಯ ಎಲ್ಲಾ ಆಸ್ತಿಯನ್ನು ಅನುಭವಿಸಬೇಕು ಎಂದುಕೊಂಡಿದ್ದೆ ಎಂದು ಹೇಳಿದ್ದಾಳೆ. ಚಂದ್ರಿಕಾ, ಸೂರ್ಯ ಪ್ರಕಾಶ್‌ರವರ ತಂಗಿ ಈ ಮನೆಯಲ್ಲಿ ಅವಳಿಗೆ ಸಂಪೂರ್ಣವಾದ ಹಕ್ಕಿದೆ ಎಂದು ಭಾನುಮತಿಗೆ ಸುಧಾರಾಣಿ ತಿಳಿಸಿದ್ದಾಳೆ.

ಇನ್ನೊಮ್ಮೆ ಏನಾದರೂ ಚಂದ್ರಿಕಾಗೆ ಈ ರೀತಿ ಮಾಡಿದರೆ ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಎಂದು ಸಹ ಎಚ್ಚರಿಕೆ ನೀಡಿದ್ದಾಳೆ. ವರುಣ್ ಫ್ಯಾಮಿಲಿಯವರು ಸಿಂಪಲ್ಲಾಗಿ ದೇವಸ್ಥಾನದಲ್ಲಿ ಮದುವೆ ಮಾಡಬೇಕು ಎಂದು ಹೇಳಿದ ಬಗ್ಗೆ ಭಾನುಮತಿಯ ಬಳಿ ವಿಜಿ ಪ್ರಸ್ತಾಪ ಮಾಡಿದ್ದಾನೆ. ಇದಕ್ಕೆ ಭಾನುಮತಿ ಸಹ ಒಪ್ಪಿಕೊಂಡಿದ್ದು ಶೃತಿಯನ್ನು ಒಪ್ಪಿಸುವುದಾಗಿ ವಿಜಿಗೆ ತಿಳಿಸಿದ್ದಾಳೆ. ಗ್ರ್ಯಾಂಡ್ ಆಗಿ ರಿಸೆಪ್ಶನ್ ಮಾಡೋಣ ಎಂದು ವಿಜಿ ಭಾನುಮತಿಯ ಬಳಿ ಹೇಳಿದ್ದಾನೆ.

ಭಾನುಮತಿ ಸಹ ಯೋಚನೆ ಮಾಡಿ ನಂತರ ಶೃತಿಗೆ ಒಪ್ಪಿಸುವುದಾಗಿ ವಿಜಿ ಬಳಿ ತಿಳಿಸಿದ್ದಾಳೆ. ಈ ಕಡೆ ಗೀತಾ ಮನೆಗೆ ಬಂದಿದ್ದು ಸುಶೀಲಾಗೆ ಊಟ ಮಾಡಿದ್ಯಾ ಎಂದು ಕೇಳಲಿಲ್ಲ. ಇದರಿಂದ ಸುಶೀಲಾ ಮನಸ್ಸಿಗೆ ತುಂಬಾ ನೋವಾಗಿದೆ. ನೀನು ನನಗೆ ಈ ರೀತಿ ಮಾಡಿದ್ದು ನೋವಾಗಿದೆ ಎಂದು ಸುಶೀಲ ಕಣ್ಣೀರು ಹಾಕಿದ್ದಾಳೆ.

More from Filmibeat

English summary
colors kannada serial Geetha Written Update on march 30th episode. Here is the details about shushila suffering from dream
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X