Geetha: ಮದುವೆ ಸೀಕ್ರೆಟ್ ರೀವಿಲ್ ಮಾಡಿದ ಗೀತಾ: ಮುಂದೇನಾಗುತ್ತೆ?

By ಶೃತಿ ಹರೀಶ್ ಗೌಡ

ಈ ಮನೆಯಲ್ಲಿ ಯಾವುದೋ ಒಂದು ಅಪಾಯವಾಗುವ ಮುನ್ಸೂಚನೆ ಸ್ವಾಮೀಜಿಗಳಿಗೆ ಸಿಕ್ಕಿದೆ. ಇದಕ್ಕಾಗಿ ವಿಜಿ ಮನೆಗೆ ಬಂದಿದ್ದಾರೆ ಅವರು ಮುಂದೆ ಮನೆಯಲ್ಲಿ ನಡೆಯಬಹುದಾದ ಅನಾಹುತದ ಬಗ್ಗೆ ತಿಳಿಸಲು ಬಂದಿದ್ದಾರೆ. ಭಾನುಮತಿಗೆ ಮಾತ್ರ ನಂಬಿಕೆ ಇಲ್ಲ. ವಿಜಿ ಮತ್ತು ಗೀತಾ ಇಬ್ಬರೂ ಹೋಗುವಾಗ ನಾಯಿ ಅಡ್ಡ ಬಂದಿದೆ. ನಾಯಿಯ ಜೀವ ಉಳಿಸಲು ಹೋಗಿ ಇಬ್ಬರ ಪ್ರಾಣಕ್ಕೆ ಸಂಚಕಾರವನ್ನ ತಂದುಕೊಳ್ಳುತ್ತಿದ್ದರು.

ದೇವರ ದಯೆಯಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಿಗೆ ಗೀತಾ ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಚಂದ್ರಿಕಾ ಸುಧಾರಾಣಿಯ ಬಳಿ ತನ್ನ ಮನಸ್ಸಿನಲ್ಲಿ ಇರುವ ದುಗುಡದ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಸುಶೀಲಾ ಅವರು ನನ್ನನ್ನು ಕಂಡರೆ ಮುಖ ತಿರುಗಿಸುತ್ತಾರೆ ಎಂದು ಹೇಳಿದ್ದಕ್ಕೆ ಸುಧಾರಾಣಿ, ಚಂದ್ರಿಕಾಗೆ ಮನ ಮುಟ್ಟುವಂತೆ ಮಗಳ ಮೇಲಿರುವ ಪ್ರೀತಿ ಎಷ್ಟೇ ಎಂದು ತಿಳಿಸಿದ್ದಾಳೆ.

Colors kannada Geetha Written Update on march 31th episode

ವರುಣ್ ಫೇಕ್ ಅಪ್ಪ ಅಮ್ಮ ಇಸ್ತ್ರಿ ಅಂಗಡಿ ಹಾಕಿಕೊಂಡು ಕೆಲಸ ಮಾಡುತ್ತಿರುತ್ತಾರೆ. ಅವರ ಬಳಿ ಬಟ್ಟೆಯನ್ನು ಕೇಳಲು ಬಂದವರು ಜಗಳ ಮಾಡಿದ್ದಾರೆ. ಇದೇ ವೇಳೆ ಇವರ ಮನೆಗೆ ನಾನು ಈ ಬಟ್ಟೆಯನ್ನು ಹಾಕಿ ಹೋಗಿದ್ದೆ ಎಂದು ಹೆಂಡತಿಯ ಬಳಿ ಹೇಳುವುದನ್ನು ಕೇಳಿಸಿಕೊಂಡ ಅಲ್ಲಿದ್ದವರು ಹೊಡೆಯಲು ಶುರು ಮಾಡಿದ್ದಾರೆ. ಅದೇ ವೇಳೆಗೆ ವಿಜಿ ಮತ್ತು ಗೀತಾ ಅಲ್ಲಿಗೆ ಬಂದಿದ್ದಾರೆ.

ಏನು ಎಂದು ನೋಡಲು ಹೋಗುವಷ್ಟರಲ್ಲಿ ಗುಂಪಿನ ಒಳಗೆ ನುಗ್ಗಿದ ವರುಣ್ ಫೇಕ್ ಅಪ್ಪ ಅಮ್ಮನನ್ನು ಕರೆದುಕೊಂಡು ಮನೆಯ ಕಡೆ ಹೊರಟಿದ್ದಾನೆ. ಮನೆಗೆ ಹೋದ ನಂತರ ಇನ್ಮುಂದೆ ನೀವೇನಾದರೂ ಹೊರಗಡೆ ಕಾಣಿಸಿಕೊಂಡರೆ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆಯನ್ನು ವರುಣ್ ಹಾಕಿದ್ದಾನೆ.

ಚಂದ್ರಿಕಾಳನ್ನು ಬೇಕು ಅಂತಲೇ ಭಾನುಮತಿ ಕೆಣಕಲು ಶುರು ಮಾಡಿದ್ದಾಳೆ. ಇದೇ ವೇಳೆ ಭಾನುಮತಿಗೆ ಚಂದ್ರಿಕಾ ನೀನು ನಾನು ಕೊಟ್ಟ ಭಿಕ್ಷೆಯಲ್ಲಿ ಬದುಕುತ್ತಿದ್ದೀಯ ಅದನ್ನು ನೆನಪಿಟ್ಟುಕೋ ಎಂದಿದ್ದಾಳೆ. ಇದಕ್ಕೆ ನಿನ್ನ ಹಲ್ಲನ್ನು ಉದುರಿಸುತ್ತೇನೆ ಎಂದು ಭಾನುಮತಿ ಹೇಳಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ಸುಧಾರಾಣಿ ಎಂಟ್ರಿ ಕೊಟ್ಟಿದ್ದಾಳೆ. ಭಾನುಮತಿಗೆ ಸುಧಾರಾಣಿ ಟಾಂಗ್ ನೀಡಿದ್ದಾಳೆ ಹೊರಗಿನವರೆಲ್ಲಾ ಮಾತನಾಡುವಂತಾಗಿದ್ದಾರೆ ಎಂದು ಹೇಳಿ ಭಾನುಮತಿಯನ್ನು ಕಟ್ಟಿ ಹಾಕಿದ್ದಾಳೆ.

Colors kannada Geetha Written Update on march 31th episode

ಜಾಸ್ತಿ ಕಿರುಚಾಡಬೇಡ ಉಸಿರು ಕಟ್ಟಿ ಸತ್ತು ಹೋಗ್ತೀಯ ನಿನ್ನ ಸ್ಥಾನ ಎಷ್ಟಿದೆ ಅಷ್ಟರಲ್ಲಿ ನೀನು ಇರು ಎಂದು ಹೇಳಿ ಅಲ್ಲಿಂದ ಸುಧಾರಾಣಿ ಹಾಗೂ ಚಂದ್ರಿಕಾ ಇಬ್ಬರು ಸಹ ಮಹಡಿ ಮೇಲೆ ಹೋಗಿದ್ದಾರೆ. ಸ್ವಾಮೀಜಿ ಸುಧಾರಾಣಿಯ ಮನೆಗೆ ಬಂದಿದ್ದಾರೆ ಇದೇ ವೇಳೆ ಈ ಮನೆಯಲ್ಲಿ ದೊಡ್ಡ ಮರಣ ಹೋಮವೇ ನಡೆಯಲಿದೆ ಅದಕ್ಕೆ ನಾನು ಪರಿಹಾರ ಸೂಚಿಸಲು ಬಂದಿದ್ದೇನೆ ಎಂದು ಹೇಳಿದ್ದಾರೆ.

ಸ್ವಾಮೀಜಿಯವರ ಮಾತಿನಿಂದ ಸುಧಾರಾಣಿ ಚಿಂತೆ ಮಾಡುತ್ತಿದ್ದಾಳೆ. ಸೂರ್ಯ ಪ್ರಕಾಶ್ ನಮ್ಮ ಗುರುಗಳು ಹೇಳಿದರು, ಆತ್ಮೀಯರಿಂದಲೇ ನಿನ್ನ ಪ್ರಾಣ ಹರಣವಾಗುತ್ತದೆ ಎಂದು ಅದೇ ರೀತಿ ಆಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ವಿಜಿಗೆ ತನ್ನ ತಂದೆಯನ್ನು ಆತ್ಮೀಯರೇ ಕೊಂದಿದ್ದಾರೆ ಎಂಬ ಸತ್ಯ ತಿಳಿದಿದ್ದು ಬೇಸರವಾಗಿದೆ. ಇದೇ ವೇಳೆ ಈ ಮನೆಯ ದೊಡ್ಡ ಮಗನ ಮದುವೆ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂದು ಹೇಳಿದ್ದಾರೆ.

ದೊಡ್ಡ ಮಗನ ಪ್ರಾಣಕ್ಕೆ ಕಂಟಕ ಎದುರಾಗಿದೆ ಅದರ ಮುನ್ಸೂಚನೆ ಇಂದು ಸಿಕ್ಕಿದೆ ಎಂದು ಸ್ವಾಮೀಜಿ ಹೇಳಿದ್ದಕ್ಕೆ ಗೀತಾ ತುಂಬಾ ಭಯಪಟ್ಟಿದ್ದಾಳೆ. ಇದೇ ವೇಳೆ ತನ್ನ ಕತ್ತಲ್ಲಿ ಇರುವ ತಾಳಿಯನ್ನು ತಾನೇ ಕಟ್ಟಿಕೊಂಡ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾಳೆ.

More from Filmibeat

English summary
colors kannada serial Geetha Written Update on march 31th episode. Here is the details about geetha reveals the truth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X