Geetha: ಸ್ವಾಮಿಜೀ ಮಾತು ಕೇಳಿ ಮನೆಯವರಿಗೆ ಶಾಕ್: ವಿಜಿಗಾಗಿ ದೊಡ್ಡ ತ್ಯಾಗಕ್ಕೆ ಸಿದ್ದಳಾದ ಗೀತಾ
ಗೀತಾಳನ್ನು ವಿಜಿ ರೆಸಾರ್ಟ್‌ಗೆ ಕರೆಸಿಕೊಂಡು ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಇದೇ ವೇಳೆ ಗೀತಾ ತಾಳಿ ಕಟ್ಟಿಕೊಂಡು ವಿಜಿಗೆ ಬುದ್ದಿ ಕಲಿಸಲು ನೋಡಿದ್ದಾಳೆ. ಮನೆಯವರ ಮುಂದೆ ಇದೆಲ್ಲವನ್ನೂ ಹೇಳಿಕೊಂಡಿದ್ದಾಳೆ. ಭಾನುಮತಿಯ ಮನೆಯಲ್ಲಿ ಇರುವ ಅವನ ತಮ್ಮ ಇದೆಲ್ಲವನ್ನೂ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಸ್ವಾಮೀಜಿಗಳು ಈ ಮನೆಯಲ್ಲಿ ಮಾರಣಹೋಮ ನಡೆಯುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಮನೆಯವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಮನೆಯವರು ಗಾಬರಿಯಾಗಿದ್ದಾರೆ. ವಿಜಿಯ ಪ್ರಾಣವೇ ಹೋಗುತ್ತದೆ ಎಂದಾಗ ಮನೆಯವರೆಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ.

ಇದಕ್ಕೆ ಪರಿಹಾರವನ್ನು ಸೂಚಿಸುವಂತೆ ಸ್ವಾಮೀಜಿಗಳ ಬಳಿ ಕೇಳಿಕೊಂಡಿದ್ದಾರೆ. ಸ್ವಾಮೀಜಿಗಳು ಗೀತಾ ಕತ್ತಿನಲ್ಲಿರುವ ತಾಳಿಯನ್ನು ತೆಗೆಸಬೇಕು ಎಂದು ಹೇಳಿದ್ದಾರೆ. ಕಠಿಣವಾದ ಪರಿಹಾರವನ್ನು ಕೇಳಿದ ಮನೆಯವರಿಗೆ ಶಾಕ್ ಆಗಿದ್ದರೆ, ಗೀತಾ ವಿಜಿಗೋಸ್ಕರ ಏನಾದ್ರು ಮಾಡುತ್ತೇನೆ ಎಂದಿದ್ದಾಳೆ. ಗೀತಾಳ ಕತ್ತಿನಲ್ಲಿರುವ ತಾಳಿಯನ್ನು ಬಿಚ್ಚಿ ಹಾಕಬೇಕು ಎಂದರೆ ಕಠಿಣದ ವ್ರತದ ಮೂಲಕ ಮಾತ್ರ ಸಾಧ್ಯವಾಗಿದೆ. ಇದಕ್ಕಾಗಿ ಗೀತಾ ಅಗ್ನಿ ಕುಂಡದ ಒಳಗೆ ಕುಳಿತು ತಾಳಿಯನ್ನು ತನ್ನ ಕತ್ತಿನಿಂದ ತಗೆಯಬೇಕಾಗಿದೆ. ಸ್ವಾಮೀಜಿಗಳ ಈ ಮಾತು ಮನೆ ಮಂದಿಯ ನೆಮ್ಮದಿಯನ್ನು ಕೆಡಿಸಿದೆ.
ಬೇರೆ ಪರಿಹಾರ ಕೇಳಿದ್ದಕ್ಕೆ ಈ ಮನೆಯಲ್ಲಿ ಒಂದು ಪ್ರಾಣ ಹಾನಿಯಾದರೆ ಮಾತ್ರ ಈ ಮನೆಯ ಮಗನ ಜೀವ ಉಳಿಯುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಇದು ಮನೆಯವರನ್ನು ಇನ್ನೂ ಕಂಗೆಡಿಸಿದೆ. ಗೀತಾ ಸ್ವಾಮೀಜಿಗಳು ಹೇಳಿದ ಕಠಿಣ ವ್ರತವನ್ನು ಮಾಡುವುದಾಗಿ ಒಪ್ಪಿಕೊಂಡಿದ್ದಾಳೆ. ವಿಜಿಗೋಸ್ಕರ ಏನು ಬೇಕಾದರೂ ಮಾಡುತ್ತೇನೆ ಎಂದು ಗೀತಾ ಹೇಳಿದ್ದಾಳೆ.

ಭಾನುಮತಿಯ ತಮ್ಮ ಗೀತಾ ಮಾತನಾಡಿರುವ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಇದನ್ನು ಭಾನುಮತಿ ತನಗೆ ಬೇಕಾದಂತೆ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾಳೆ. ಇಬ್ಬರು ಸೇರಿ ವಿಡಿಯೋವನ್ನು ಇಟ್ಟುಕೊಂಡು ಏನಾದ್ರು ಮಾಡಬೇಕು ಅದಕ್ಕೆ ಕಾಲ ಬರಬೇಕು ಎಂದು ಮಾತನಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಅಣ್ಣ ಇರಬೇಕಿತ್ತು ಎಂದು ಮಾತಾಡಿಕೊಳ್ಳುವ ವೇಳೆ ಸುಧಾರಾಣಿ ಬಂದು ಭಾನುಮತಿಗೆ ಸವಾಲನ್ನು ಹಾಕಿದ್ದಾಳೆ.
ವಿಜಿ ಕಾಫಿ ಕುಡಿಯುವ ವೇಳೆ ಹಲ್ಲಿ ವಿಜಿಯ ತಲೆಯ ಮೇಲೆ ಬಿದ್ದಿದೆ. ಇದರಿಂದಾಗಿ ಸುಧಾರಾಣಿ ಅಪಶಕುನವಾಗುತ್ತದೆ ಎಂದು ಭಯದಲ್ಲಿ ಇದ್ದಾಳೆ. ಆದರೆ ವಿಜಿ ಏನು ಆಗೋದಿಲ್ಲ ಎಂದು ಸುಧಾರಾಣಿಯನ್ನು ಸಮಾಧಾನ ಮಾಡಿದ್ದಾನೆ. ಆದರೂ ಸಹ ಮನಸಿಗೆ ಏನೋ ಕಳವಳವಾದಂತೆ ಸುಧಾರಾಣಿ ಮನೆ ಕೆಲಸದವರ ಬಳಿ ಹೇಳಿದ್ದಾಳೆ.

ಮನೆಗೆ ಬಂದಿರುವ ಗೀತಾ ಸುಶೀಲ ಬಳಿ ನಡೆದ ಎಲ್ಲಾ ವಿಷಯವನ್ನು ಹೇಳಿದ್ದಾಳೆ. ಇದಕ್ಕೆ ಸುಶೀಲಾ ವಿರೋಧವನ್ನು ವ್ಯಕ್ತಪಡಿಸಿದ್ದಾಳೆ. ನನ್ನ ಮಗಳನ್ನು ನನ್ನಿಂದ ದೂರ ಮಾಡುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೋಪ ಮಾಡಿಕೊಂಡಿದ್ದಾಳೆ. ಇನ್ನೂ ಚಂದ್ರಿಕಾಗೆ ಮನೆಯಿಂದ ಹೊರಗೆ ಹೋಗುತ್ತಿಲ್ಲ ಎಂದು ಪರೋಕ್ಷವಾಗಿ ಮಾತನಾಡಿ ಅವಮಾನವನ್ನು ಮಾಡಿದ್ದಾಳೆ. ಇದಕ್ಕೆ ಗೀತಾ ಚಂದ್ರಿಕಾಗೆ ಸಮಾಧಾನವನ್ನು ಮಾಡಿದ್ದಾಳೆ.
ಈ ತಾಳಿಯನ್ನು ಹೇಗೆ ಬಿಚ್ಚಲಿ ಎಂದು ಗೀತಾ ಯೋಚನೆ ಮಾಡುತ್ತಿದ್ದಾಳೆ. ಇದನ್ನು ವಿಜಿ ಕಟ್ಟಿದೇ ಇದ್ದರೂ ಒಂದು ಭಾವನಾತ್ಮಕ ಸಂಬಂಧ ಇದೆ. ನಾನೇ ಇದನ್ನು ಬಿಚ್ಚಿ ಬೆಂಕಿಗೆ ಹಾಕಿದರೆ ನಾನೇ ಬೆಂಕಿಗೆ ಬಿದ್ದಂತೆ ಎಂದು ಹೇಳಿಕೊಳ್ಳುವಾಗ ಅಲ್ಲಿಗೆ ಬಂದ ಸುಶೀಲ ನೀನು ಅಲ್ಲಿಯೇ ಹೇಳಬೇಕಿತ್ತು ಎಂದು ಹೇಳಿದ್ದಾಳೆ.


Click it and Unblock the Notifications