Geetha: ಮಗನಿಗಾಗಿ ತನ್ನ ಪ್ರಾಣ ಕೊಡಲು ಸಿದ್ದಳಾದ ಸುಧಾರಾಣಿ!
ಮಗ ವಿಜಿ ಮೇಲೆ ಮೇಲೆ ಹಲ್ಲಿ ಬಿದ್ದ ಪ್ರಸಂಗವನ್ನು ನೆನಪಿಸಿಕೊಂಡು ಸುಧಾರಾಣಿ ಒಂದು ನಿರ್ಧಾರಕ್ಕೆ ಬಂದಿದ್ದಾಳೆ. ಈ ಕುರಿತು ಗೀತಾಗೆ ಫೋನ್ ಮಾಡಿದ್ದಾಳೆ. ಮದುವೆ ಕಾರ್ಯದ ಬಗ್ಗೆ ದೇವಸ್ಥಾನಕ್ಕೆ ಹೋಗೋಣ ಬಾ ಎಂದು ಗೀತಾಗೆ ಫೋನ್ ಮಾಡಿದ್ದಾಳೆ. ಆಯ್ತು ಎಂದು ಗೀತಾ ಸುಧಾರಾಣಿಗೆ ಹೇಳಿದ್ದಾಳೆ. ಸುಧಾರಾಣಿ ಮನೆಯಲ್ಲಿ ನಡೆಯುತ್ತಿರುವ ಅಪಶಕುನಗಳ ಬಗ್ಗೆ ನೆನಪಿಸಿಕೊಂಡು ತುಂಬಾ ಬೇಸರವನ್ನು ಮಾಡಿಕೊಂಡಿದ್ದಾಳೆ.
ವಿಜಿಗೂ ಸಹ ದೇವಸ್ಥಾನಕ್ಕೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾಳೆ. ವಿಜಿ ಅಮ್ಮ ಹಾಗೂ ಗೀತಾನ ಜೊತೆಯಲ್ಲಿ ಖುಷಿಯಿಂದ ದೇವಸ್ಥಾನಕ್ಕೆ ಹೊರಟಿದ್ದಾನೆ. ದಾರಿ ಮಧ್ಯೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಕೇಳಿದ್ದಾನೆ. ಇದಕ್ಕೆ ಗೀತಾ ನಾವು ಎಲ್ಲಿಗಾದರೂ ಹೋಗುವಾಗ ಎಲ್ಲಿಗೆ ಎಂದು ಕೇಳಬಾರದು ಎಂದು ವಿಜಿಯ ಬಾಯಿ ಮುಚ್ಚಿಸಿದ್ದಾಳೆ. ವಿಜಿ ಖುಷಿಯಿಂದ ನಿಮ್ಮಿಬ್ಬರ ಜೊತೆಗೆ ಲಾಂಗ್ ಡ್ರೈವ್ ಹೋಗಬೇಕು ಎಂದು ಅನಿಸುತ್ತದೆ ಎಂದು ಹೇಳಿದ್ದಾನೆ.

ವಿಜಿ- ಗೀತಾ ಹಾಗೂ ಸುಧಾರಾಣಿ ಜೊತೆಗೆ ಮಾತಾಡಿಕೊಂಡು ಕಾರನ್ನು ಓಡಿಸುತ್ತಿದ್ದಾನೆ. ಅಷ್ಟರಲ್ಲಿ ನಾಯಿ ಅಡ್ಡ ಬಂದಿದೆ. ಇನ್ನೂ ಸಡನ್ ಆಗಿ ವಿಜಿ ಬ್ರೇಕ್ ಹಾಕಿದ್ದಾನೆ. ಗೀತಾ-ಸುಧಾರಾಣಿ ಒಂದು ಕ್ಷಣ ಗಾಬರಿಯಾಗಿದ್ದಾರೆ. ಏನು ವಿಜಿ ಯಾಕೆ ಸಡನ್ ಆಗಿ ಬ್ರೇಕ್ ಹಾಕಿದೆ ಎಂದು ಗೀತಾ ಕೇಳಿದ್ದಾಳೆ. ಇದಕ್ಕೆ ವಿಜಿ ನಾಯಿ ಅಡ್ಡ ಬಂತು ಎಂದಿದ್ದಾನೆ. ಸುಧಾರಾಣಿ ಗಾಬರಿಯಾಗಿ ನಾನು ಯೋಚನೆ ಮಾಡಿದ್ದೇ ಸರಿ ಎಂದು ಅಂದುಕೊಂಡಿದ್ದಾಳೆ.
ವಿಜಿಗೆ ಪಂಚೆ ಶರ್ಟು ಕೊಟ್ಟು ಇದನ್ನು ತೊಟ್ಟುಕೊಂಡು ಬಾ ಎಂದು ಕಳಿಸಿದ್ದಾಳೆ. ಈ ವೇಳೆ ಗೀತಾಗೆ ನನ್ನ ಮಗನನ್ನು ನೀನು ಚೆನ್ನಾಗಿ ನೋಡಿಕೊಳ್ಳಬೇಕು. ನನ್ನ ಮಗ ಸುಣ್ಣಕ್ಕೂ-ಹಾಲಿಗೂ ವ್ಯತ್ಯಾಸವನ್ನು ಕಾಣದವನು ಎಂದಿದ್ದಾಳೆ. ಅತ್ತೆ ಯಾಕೆ ಬೇಸರದಲ್ಲಿ ಇದ್ದೀರಾ ಎಂದು ಗೀತಾ ಕೇಳಿದ್ದಕ್ಕೆ ಮನೆಯಲ್ಲಿ ನೆಡೆಯುತ್ತಿರುವ ಅಪಶಕುನದ ಬಗ್ಗೆ ಚಿಂತೆ ಎಂದು ಮಾತನ್ನು ತಿರುವಿಸಿದ್ದಾಳೆ.
ದಿನದಿಂದ ದಿನಕ್ಕೆ ಚಂದ್ರಿಕಾ ಮತ್ತು ಗೀತಾ ಹತ್ತಿರವಾಗುತ್ತಿರುವುದನ್ನು ಸುಶೀಲಾ ಕೈಯಲ್ಲಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿ ಯಾವಾಗ ಚಂದ್ರಿಕಾ ಮನೆಯಿಂದ ಹೋಗುತ್ತಾಳೋ ಎಂಬ ಯೋಜನೆಯಲ್ಲಿ ಇದ್ದಾಳೆ. ಆದರೆ ಚಂದ್ರಿಕಾ ನನ್ನ ಮಗಳು ಎಲ್ಲಿದ್ದಾಳೋ ಎನೋ ಎಂಬ ಚಿಂತೆಯಲ್ಲಿ ಇದ್ದಾಳೆ. ಇದರ ಬಗ್ಗೆ ಸುಶೀಲಾ ಬಳಿಯು ಚರ್ಚೆಯನ್ನು ಮಾಡಿದ್ದಾಳೆ. ಆದರೆ ಸುಶೀಲಾಗೆ ಎಲ್ಲಿ ಸತ್ಯ ಗೊತ್ತಾಗಿ ಗೀತಾ ದೂರವಾಗುತ್ತಾಳೆ ಎಂಬ ಭಯ ಕಾಡುತ್ತಿದೆ.

ಈ ಕಡೆ ವಿಜಿ ಕೈಯಲ್ಲಿ ಗಂಗಾಮಾತೆಗೆ ಸುಧಾರಾಣಿ ಪೂಜೆ ಮಾಡಿಸಿದ್ದಾಳೆ. ದೂರದಲ್ಲಿ ಹರಿಯುತ್ತಿರುವ ನೀರಿನ ಬಗ್ಗೆ ನೋಡುತ್ತಾ ತನ್ನ ಮಗನಿಗಾಗಿ ನಾನು ಸಾಯಲೇಬೇಕು ಎಂದು ನಿರ್ಧಾರವನ್ನು ಮಾಡಿದ್ದಾಳೆ. ಈ ವೇಳೆ ವಿಜಿಗೆ ನಿನಗೆ ಚಂದ್ರಿಕಾನೇ ಅಮ್ಮ ಹಾಗೂ ತಾಯಿಯಾಗಿ ಇರುತ್ತಾಳೆ ಎಂದು ಹಣೆಗೆ ಮುತ್ತನ್ನು ಇಟ್ಟಿದ್ದಾಳೆ. ವಿಜಿಗೆ ನಾನು ಕಣ್ಣು ಬಿಡು ಎಂದಾಗ ಬಿಡು ಎಂದು ಹೇಳಿದ್ದಾಳೆ.
ಈ ಕಡೆ ಗೀತಾಗೆ ಗಂಗಾಮಾತೆಗೆ ಬಾಗೀನವನ್ನು ಬಿಡಬೇಕು ಕಾರಿನಲ್ಲಿ ಬಾಗೀನ ಇದೆ ಎಂದು ಗೀತಾಳನ್ನು ಕಳಿಸಿದ್ದಾಳೆ. ಇನ್ನೂ ಸುಧಾರಾಣಿ ಹರಿಯುತ್ತಿರುವ ನೀರಿನ ಕಡೆಗೆ ಹೋಗಿದ್ದಾಳೆ. ವಿಜಿ ಕಣ್ಣು ಮುಚ್ಚಿ ಗಂಗಾಮಾತೆಗೆ ವಂದನೆಯನ್ನು ಸಲ್ಲಿಸುತ್ತಿದ್ದಾನೆ. ಈ ಕಡೆ ಮಗನಿಗಾಗಿ ಪ್ರಾಣವನ್ನು ಕೊಡಲು ಸುಧಾರಾಣಿ ಸಿದ್ಧಳಾಗಿದ್ದಾಳೆ.


Click it and Unblock the Notifications











