Geetha: ನೀರಿಗೆ ಬಿದ್ದ ಸುಧಾರಾಣಿ: ಕಾಪಾಡಿದ ವಿಜಿ
ದಿನದಿಂದ ದಿನಕ್ಕೆ ಗೀತಾ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗ ಸುಧಾರಾಣಿ ಸಾಯುವ ಯೋಚನೆ ಮಾಡಿದ್ದಾಳೆ. ವಿಜಿಯನ್ನು ಗಂಗಾ ಪೂಜೆ ಮಾಡಲು ಬಿಟ್ಟು ಅಲ್ಲಿಂದ ಗೀತಾಳನ್ನು ಕಳುಹಿಸಿ ದೂರಕ್ಕೆ ನೀರಿನಲ್ಲಿ ಹೋಗಿದ್ದಾಳೆ. ಕಾರಿನ ಬಳಿ ಬಂದ ಗೀತಾ ಬಾಗೀನದ ಸಾಮಾಗ್ರಿಗಳನ್ನು ಹುಡುಕುತ್ತಿದ್ದಾಳೆ.
ಕಾರಿನ ಮುಂಭಾಗ , ಡಿಕ್ಕಿ ಎಲ್ಲವನ್ನು ಹುಡುಕಿ ಪೂಜಾ ಸಾಮಗ್ರಿಗಳು ಸಿಗದ ಹಿನ್ನೆಲೆಯಲ್ಲಿ ಗೀತಾ ಅತ್ತೆ ಮರೆತು ಬಿಟ್ಟಿರಬೇಕು ಎಂದು ಕೊಂಡಿದ್ದಾಳೆ. ಇದೇ ವೇಳೆ ಅತ್ತೆಯ ಮನಸು ಸರಿಯಿಲ್ಲ ಎಂದು ಕೊಂಡು ಗಂಗಾಪೂಜೆ ಮಾಡುವ ಸ್ಥಳಕ್ಕೆ ಓಡಿ ಹೋಗಿದ್ದಾಳೆ. ಅಲ್ಲಿ ಸುಧಾರಾಣಿ ಇಲ್ಲದ್ದನ್ನು ನೋಡಿ ಗಾಬರಿಯಾಗಿದ್ದಾಳೆ.

ಅತ್ತೆ ಎಲ್ಲಿಯೂ ಸಹ ಕಾಣುತ್ತಿಲ್ಲ ಎಂದು ಜೋರಾಗಿ ಕೂಗಿದ್ದಾಳೆ ಗೀತಾ. ವಿಜಿ ಇಲ್ಲೇ ಎಲ್ಲೋ ಹೋಗಿರಬೇಕು ನೋಡು ಎಂದಿದ್ದಾನೆ. ಇಬ್ಬರು ಹುಡುಕಿ ಸುಸ್ತಾದ ಮೇಲೆ ಕೊನೆಗೆ ಗೀತಾ ಗಂಗಾಪೂಜೆ ಮಾಡುವ ಸ್ಥಳಕ್ಕೆ ಬಂದಿದ್ದಾಳೆ. ಆಗ ದೂರದಲ್ಲಿ ಸುಧಾರಾಣಿ ಕೈ ಮುಗಿದು ನಿಂತಿರುವುದು ಕಾಣಿಸಿದೆ.ವಿಜಿ ಹಾಗೂ ಗೀತಾ ಇಬ್ಬರು ನೋಡುತ್ತಿದ್ದಂತೆಯೇ ಸುಧಾರಾಣಿ ನೀರಿಗೆ ಬಿದ್ದಿದ್ದಾಳೆ ಗೀತಾಗೆ ಗಾಬರಿ ಹೆಚ್ಚಾಗಿದೆ.
ಸುಧಾರಾಣಿ ಬಿದ್ದ ತಕ್ಷಣವೇ ವಿಜಿ ಈಜಾಡಿಕೊಂಡು ಹೋಗಿ ಸುಧಾರಾಣಿಯನ್ನು ಕಾಪಾಡಿದ್ದಾನೆ. ನಂತರ ಗೀತಾ ಬಳಿ ಕರೆದುಕೊಂಡು ಬಂದಿದ್ದಾನೆ. ಗೀತಾ ನೀರನ್ನು ಹೊರಗಡೆ ತಗೆದು ಕೈ ಕಾಲು ಉಜ್ಜಿ ಪ್ರಜ್ಞೆ ಬರುವ ರೀತಿ ಮಾಡಿದ್ದಾಳೆ. ಆಗ ಗೀತಾ ಹಾಗೂ ವಿಜಿಗೆ ಧೈರ್ಯ ಬಂದಿದೆ.
ಗೀತಾ ಬೆಂಕಿಯ ಮಧ್ಯೆ ಕುಳಿತು ತಾಳಿಯನ್ನು ಬಿಚ್ಚಿ ಹಾಕುವ ವೇಳೆ ಗೀತಾಳನ್ನು ಕೊಲ್ಲಲು ಪ್ಲ್ಯಾನ್ ಮಾಡಲಾಗಿದೆ. ಇದನ್ನು ವಿಜಿಯೇ ಮಾಡಿದ ಎಂದು ಅವನನ್ನು ಸಹ ಜೈಲಿಗೆ ಕಳಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಕೆಲಸವನ್ನು ಮಾಡುವ ಯೋಜನೆಯಲ್ಲಿ ಭಾನುಮತಿ, ಸಿತಾರಾ ಇದ್ದಾರೆ. ಇದನ್ನು ಜೈಲಿನಲ್ಲಿರುವ ಸಿತಾರಾಗೆ ಭಾನುಮತಿ ಫೋನ್ ಮಾಡಿ ಹೇಳಿದ್ದಾಳೆ. ಇದರಿಂದ ಸಿತಾರ ಖುಷಿಯಿಂದ ಗೀತಾ ನೀನು ಗೋತಾ ಎಂದು ಹಾಡುತ್ತಾ ಇದ್ದಾನೆ.

ಮಗಳು ಬೆಂಕಿಯ ಮಧ್ಯೆ ಕುಳಿತು ತಾಳಿಯನ್ನು ಬಿಚ್ಚಿ ಹಾಕಬೇಕು ಎಂಬುದನ್ನು ಕೇಳಿರುವ ಸುಶೀಲಾಗೆ ತುಂಬಾ ಭಯವಾಗುತ್ತಿದೆ. ಇದನ್ನೇ ನೆನೆದುಕೊಂಡು ಕಣ್ಣೀರನ್ನು ಹಾಕುತ್ತಿದ್ದಾಳೆ. ಅಲ್ಲಿಗೆ ಬಂದ ಚಂದ್ರಿಕಾ ಏನಾಯ್ತು ಎಂದು ಕೇಳಿದ್ದಾಳೆ. ಇದಕ್ಕೆ ಗೀತಾ ಬಗ್ಗೆ ಚಿಂತೆ ಮಾಡುತ್ತಾ ಇದ್ದೇ ಎಂದು ಸುಶೀಲಾ ಹೇಳಿದ್ದಾಳೆ. ಈ ವೇಳೆ ಚಂದ್ರಿಕಾ, ಗೀತಾ ಬಗ್ಗೆ ನೀನು ಏನು ಚಿಂತೆ ಮಾಡಬೇಡ ಎಂದಿದ್ದಾಳೆ.
ನಿನಗೆ ಏಕೆ ಗೀತಾ ಮೇಲೆ ಇಷ್ಟು ಕಾಳಜಿ ಎಂದು ಸುಶೀಲಾ, ಚಂದ್ರಿಕಾಗೆ ಕೇಳಿದ್ದಾಳೆ. ಗೀತಾ ಮೇಲೆ ಕಾಳಜಿ ತೋರಿದರೆ ಎಲ್ಲೋ ಇರುವ ನನ್ನ ಮಗಳು ಚೆನ್ನಾಗಿ ಇರುತ್ತಾಳೆ ಎಂಬ ನಂಬಿಕೆ ಎಂದು ಚಂದ್ರಿಕಾ ಅಂದಿದ್ದಾಳೆ. ಈ ವೇಳೆ ಸುಶೀಲಾಗೆ ಚಂದ್ರಿಕಾ, ಗೀತಾ ಜೊತೆಗೆ ದೇವಸ್ಥಾನಕ್ಕೆ ನಾವಿಬ್ಬರು ಸಹ ಹೋಗೋಣ ಎಂದು ಹೇಳಿದ್ದಾಳೆ. ಇದಕ್ಕೆ ಸುಶೀಲಾ ಸರಿ ಎಂದು ಚಿಂತೆಯನ್ನು ಮಾಡುತ್ತಿದ್ದಾಳೆ.
ಇನ್ನೊಮ್ಮೆ ಸಾಯುವ ನಿರ್ಧಾರ ಮಾಡದಂತೆ ಸುಧಾರಾಣಿ ಬಳಿ ವಿಜಿ ಹಾಗೂ ಗೀತಾ ಮಾತು ತೆಗೆದುಕೊಂಡಿದ್ದಾರೆ. ಇದು ನಿಮಗೆ ಮರುಜನ್ಮವಲ್ಲ ನಮಗೆ ಎಂದು ಗೀತಾ ಕಣ್ಣೀರನ್ನು ಹಾಕಿದ್ದಾಳೆ. ಇದೇ ವೇಳೆ ವಿಜಿ ಎಂತಹ ಕಷ್ಟ ಬಂದರೂ ಸರಿ ನಿನ್ನ ಮಗ ಅದನ್ನು ಪರಿಹರಿಸುತ್ತಾನೆ ಎಂಬ ನಂಬಿಕೆ ನಿನಗೆ ಇಲ್ವಾ ಅಮ್ಮ ಎಂದು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಸುಧಾರಾಣಿ ಇಬ್ಬರಿಗೂ ಸಹ ನಾನು ಇನ್ಮುಂದೆ ಸಾಯುವ ನಿರ್ಧಾರವನ್ನು ಮಾಡೋದಿಲ್ಲ ಎಂದು ಭಾಷೆಯನ್ನು ನೀಡಿದ್ದಾಳೆ.


Click it and Unblock the Notifications











