Geetha: ಗೀತಾಳನ್ನು ಸಾಯಿಸಲು ಮಾಸ್ಟರ್ ಪ್ಲ್ಯಾನ್: ಎಲ್ಲರಲ್ಲೂ ಆತಂಕ

By ಶೃತಿ ಹರೀಶ್ ಗೌಡ

ಗೀತಾ ಮನೆಯಲ್ಲಿ ದೇವಸ್ಥಾನಕ್ಕೆ ರೆಡಿಯಾಗಿ ಹೋಗಲು ಸಿದ್ಧತೆಯನ್ನು ನಡೆಸಿದ್ದಾಳೆ. ಇದೇ ವೇಳೆ ಗೀತಾಗೆ ಸುಧಾರಾಣಿ ಫೋನ್ ಮಾಡಿ ಬೇಗ ಪೂಜೆಗೆ ಬರುವಂತೆ ತಿಳಿಸಿದ್ದಾಳೆ. ಗಡಿ ಬಿಡಿಯಲ್ಲಿ ಗೀತಾ ರೆಡಿಯಾಗಲು ತಯಾರಿಯನ್ನು ನಡೆಸಿದ್ದಾಳೆ. ಗೀತಾ ರೂಮ್‌ಗೆ ಬಂದ ಸುಶೀಲಾ ನಾನು ಸಹ ದೇವಸ್ಥಾನಕ್ಕೆ ಬರುವುದಾಗಿ ತಿಳಿಸಿದ್ದಾಳೆ. ಇದಕ್ಕೆ ಗೀತಾ ಬೇಡ ಅಮ್ಮ ಎಂದಿದ್ದಾಳೆ.

ಅಲ್ಲಿಗೆ ಬಂದ ಚಂದ್ರಿಕಾ ನೀನು ನಿನ್ನೆ ಹೊರಗೆ ಹೋದಾಗ ಚಂದ್ರಿಕಾ ತುಂಬಾ ಯೋಚನೆ ಮಾಡುತ್ತಿದ್ದಳು, ಇದಕ್ಕಾಗಿಯಾದರೂ ಜೊತೆಯಲ್ಲಿ ಬರುತ್ತೇವೆ ಎಂದು ಗೀತಾಳನ್ನು ಒಪ್ಪಿಸಿದ್ದಾಳೆ. ಬೇಗ ರೆಡಿಯಾಗು ಎಂದು ಹೇಳಿ ಸೀರೆ ಮತ್ತು ಬಳೆಯನ್ನು ಗೀತಾ ಕೈಗೆ ಚಂದ್ರಿಕಾ ಕೊಡಲು ಹೋದಾಗ ಗೀತಾ ಕೈನಿಂದ ಬಳೆ, ಸೀರೆ ಎಲ್ಲ ಕೆಳಗೆ ಬಿದ್ದಿದೆ. ಈ ವೇಳೆ ಬಳೆ ಹೊಡೆದು ಹೋಗಿದೆ. ಸುಶೀಲಾ ತುಂಬಾ ಬೇಸರ ಮಾಡಿಕೊಂಡು ಇದು ಅಪಶಕುನದ ಮುನ್ಸೂಚನೆ ಎಂದು ಹೇಳಿದ್ದಾಳೆ. ಆದರೆ ಗೀತಾ ಅಮ್ಮನಿಗೆ ಸಮಾಧಾನ ಮಾಡಿ ರೆಡಿಯಾಗಿದ್ದಾಳೆ.

colors kannada geetha Written Update on march 6th episode

ದೇವಸ್ಥಾನಕ್ಕೆ ಬಂದಿರುವ ಗೀತಾಗೆ ತಾಳಿಯನ್ನು ತೆಗೆಯಬೇಕು ಎಂದು ಬೇಸರವಾಗಿದೆ. ಇದರ ಬಗ್ಗೆ ವಿಜಿ ಬಳಿ ಹೇಳಿಕೊಂಡು ಅಳುತ್ತಿದ್ದಾಳೆ. ಇದನ್ನು ನೀನು ಕಟ್ಟದೇ ಇರಬಹುದು ಆದರೆ ನಿನಗೆ ಬುದ್ದಿಕಲಿಸಬೇಕು ಎಂದು ನಾನೇ ತಾಳಿಕೊಂಡರು ಇದರ ಜೊತೆಗೆ ನನಗೆ ಒಂದು ಅವಿನಾಭಾವ ಸಂಬಂಧವಿದೆ ಎಂದಿದ್ದಾಳೆ. ಈಗ ತಾಳಿಯನ್ನು ಬಿಚ್ಚಿ ಬೆಂಕಿಗೆ ಹಾಕಲು ತುಂಬಾ ಸಂಕಟವಾಗುತ್ತಿದೆ, ಎಂದಾಗ ವಿಜಿ ಗೀತಾಗೆ ಸಮಾಧಾನ ಮಾಡಿದ್ದಾನೆ.

ಗೀತಾ ಬೆಂಕಿಗೆ ಕುಳಿತಾಗ ಎಣ್ಣೆಯನ್ನು ಸುರಿದು ಅವಳನ್ನು ಕೊಲ್ಲುವ ಮಾಸ್ಟರ್ ಪ್ಲ್ಯಾನ್‌ನ್ನು ಭಾನುಮತಿ ಮಾಡಿದ್ದಾಳೆ. ತನ್ನ ಪ್ಲ್ಯಾನ್ ಬಗ್ಗೆ ಮಾದೇಶನಿಗೆ ತಿಳಿಸಿದ್ದಾಳೆ. ಮೊದಲು ಅರಿಶಿಣ, ಕುಂಕುಮದ ನೀರನ್ನು ವಿಜಿ ಹಾಕುತ್ತಾನೆ ನಂತರ ಗಂಜಲವನ್ನು ಹಾಕುವ ಸಮಯದಲ್ಲಿ ಎಣ್ಣೆಯನ್ನು ಸುರಿಯುವ ರೀತಿ ನಾವು ಮಾಡಬೇಕು ಎಂದು ಮಾದೇಶನಿಗೆ ಭಾನುಮತಿ ಹೇಳಿದ್ದಾಳೆ.

colors kannada geetha Written Update on march 6th episode

ಈ ಪ್ಲ್ಯಾನ್ ಏನಾದ್ರು ಹಾಳು ಆದರೆ ಮಾತ್ರ ನಿಜವಾಗಿಯೂ ನಾನು ಸೋತು ಹೋದಂತೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯಬೇಕು. ವಿಜಿಯನ್ನು ಜೈಲಿಗೆ ಕಳುಹಿಸಿ ಸುಧಾರಾಣಿಯನ್ನು ಮತ್ತೆ ಹುಚ್ಚಿಯನ್ನಾಗಿ ಮಾಡಬೇಕು ಎಂದು ಸುಧಾರಾಣಿ ಹೇಳಿದ್ದಾಳೆ. ಆ ಚಂದ್ರಿಕಾ ಕಥೆ ಚಿಟಿಕೆ ಹೊಡೆಯೋ ಅಷ್ಟರಲ್ಲಿ ನಾನೇ ಮುಗಿಸುತ್ತೇನೆ ಎಂದು ಭಾನುಮತಿ ಮಾದೇಶನಿಗೆ ಹೇಳಿದ್ದಾಳೆ.

ಮದುವೆಗೂ ಮುನ್ನವೇ ಗೀತಾ ವಿಧವೆಯಾಗಿದ್ದಾಳೆ. ವಿಜಿಯೇ ತನ್ನ ಕೈಯಾರೆ ಗೀತಾಳ ಅರಿಶಿಣ ಕುಂಕುಮ ಅಳಿಸಿ ಬಳೆಯನ್ನು ಹೊಡೆದು ಹಾಕಿದ್ದಾನೆ. ಇನ್ನೂ ಭಾನುಮತಿ,‌ ಗೀತಾಗೆ ಈ ಪರಿಸ್ಥಿತಿ ಬಾರಬಾರದಿತ್ತು ಮದುವೆಗೆ ಮುಂಚೆಯೇ ವಿಧವೆಯಾಗಿದ್ದಾಳೆ ಎಂದು ಕಿಂಡಲ್ ಮಾಡಿದ್ದಾಳೆ. ಇದರಿಂದ ಗೀತಾ ಕಣ್ಣಲ್ಲಿ ನೀರು ಬಂದಿದೆ.‌ ಗೀತಾ ಅಳುವುದನ್ನು ನೋಡಿ ವಿಜಿ ಸಹ ಕಣ್ತುಂಬಿಕೊಂಡಿದ್ದಾನೆ.

colors kannada geetha Written Update on march 6th episode

ನಾನು ವಿಜಿ ಕೈಲಿ ತಾಳಿ, ಕಾಲುಂಗುರ ಹಾಕಿಸಿಕೊಂಡು ಇರಬೇಕು ಎಂದು ಕನಸು ಕಾಣುತ್ತಿದ್ದರೆ‌ ವಿಧಿ ವಿಜಿಯ ಕೈಯಲ್ಲೇ ನನ್ನ ಅರಿಶಿಣ, ಕುಂಕುಮ, ಕಾಲುಂಗುರ ತಗೆಯುತ್ತಿದ್ದಾನೆ ಎಂದು ಗೀತಾ ಕಣ್ಣೀರು ಹಾಕಿದ್ದಾಳೆ. ಇದೆಲ್ಲವನ್ನೂ ನೋಡುತ್ತಿರುವ ಮನೆಯವರು ಸಹ ಕಣ್ಣೀರನ್ನು ಹಾಕಿದ್ದಾರೆ.

ಸುಶೀಲಾಗೆ ಮಗಳಿಗೆ ಏನಾದರೂ ಆಗುತ್ತದೆ ಎಂಬ ಆತಂಕ ಮನೆ ಮಾಡಿದೆ. ಚಂದ್ರಿಕಾ ದೇವರ ಬಳಿ ಗೀತಾಗೆ ಏನು ಆಗಬಾರದು ಎಂದು ಬೇಡಿಕೊಂಡಿದ್ದಾಳೆ.

More from Filmibeat

English summary
colors kannada serial Geetha Written Update on April 6th episode. Here is the details about Bhanumati plans to murder to geetha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X