Geetha: ಸುಧಾರಾಣಿಯಿಂದ ಬದುಕುಳಿದ ಗೀತಾ: ಸದ್ಯಕ್ಕೆ ಮದುವೆ ಬೇಡ ಎಂದ ವಿಜಿ
ಗೀತಾ ಒಲ್ಲದ ಮನಸ್ಸಿನಿಂದ ಗೀತಾಳ ಬಳೆ ಹಾಗೂ ಕಾಲುಂಗುರ ಹೂವನ್ನು ತೆಗೆದು ಬೆಂಕಿಗೆ ಹಾಕಿದ್ದಾನೆ. ಆದರೆ ಇದು ನೋಡುಗರ ಕಣ್ಣಿಗೆ ತುಂಬಾ ಬೇಸರವನ್ನ ತರಿಸಿದೆ. ವಿಜಿ ಸಹ ಮಲ್ಲಿಗೆ ಅಂದರೆ ನಿನಗೆ ತುಂಬಾ ಇಷ್ಟ ನಾನು ಅದನ್ನು ಮೂಡಿಸಬೇಕಿತ್ತು. ಹೂ ಮಾರುವ ಹುಡುಗಿ ನನ್ನ ಬದುಕಿಗೆ ಬಂದಳು ಖುಷಿ ತಂದಳು ಎಂದು ಅಂದುಕೊಳ್ಳುತ್ತಿದ್ದಾನೆ.
ಆದರೆ ಭಾನುಮತಿ ಮಾಡಿರುವ ಪ್ಲ್ಯಾನ್‌ನಿಂದ ಗೀತಾಳೇ ತಾಳಿಯನ್ನು ಕಟ್ಟಿಕೊಂಡಳು ಎಂಬುದನ್ನು ಹೇಳಿಸಬೇಕಿತ್ತು. ಇದರಿಂದಾಗಿ ವಿಜಿಗೆ ಕಂಟಕ ಇದೆ ಎಂದು ಹೇಳುವ ಮೂಲಕ ಸತ್ಯವನ್ನು ಹೊರಗೆ ತರುವ ಕೆಲಸವನ್ನು ಮಾಡಿದ್ದಾಳೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಗೀತಾಳನ್ನು ಕೊಲ್ಲಲು ಸಹ ಪ್ಲ್ಯಾನ್ ಮಾಡಿದ್ದಳು. ಆದರೆ ಗೀತಾ ಮಾತ್ರ ಬಚಾವ್ ಆಗಿದ್ದಾಳೆ.

ಗೀತಾಗೆ ವಿಜಿ ಅರಿಶಿಣ, ಕುಂಕುಮ ಹಾಗೂ ಗಂಜಲವನ್ನು ಹಾಕಿ ಪ್ರೊಕ್ಷಣೆನು ಮಾಡಿ ಗೀತಾ ಶುದ್ದಿಯಾಗುವಂತೆ ಮಾಡಲಾಗಿದೆ. ಈಗ ಗೀತಾ ಅಗ್ನಿ ಕುಂಡದ ಸುತ್ತ ಬೆಂಕಿಯನ್ನು ಹಚ್ಚಬೇಕು. ಆ ಬೆಂಕಿಯನ್ನು ಗೀತಾ ದಾಟಿಕೊಂಡು ಬಂದು ತಾಳಿಯನ್ನು ತೆಗೆದು ಬೆಂಕಿಗೆ ಹಾಕಿದರೆ ಪೂಜೆ ಪೂರ್ಣವಾಗುತ್ತದೆ.
ಗೀತಾ ಅಗ್ನಿಕುಂಡದ ಒಳಗೆ ಕುಳಿತಿದ್ದಾಳೆ. ಸುತ್ತಲೂ ವಿಜಿ ಬೆಂಕಿಯನ್ನು ಹಚ್ಚುತ್ತಿದ್ದಾನೆ. ಈಗ ಖುಷಿ ಪಡುವ ಸರದಿ ಭಾನುಮತಿ ಮತ್ತು ಮಾದೇಶನದ್ದು ಆಗಿದೆ. ಇಬ್ಬರು ಈಗ ಗೀತಾ ಸತ್ತು ಹೋಗುತ್ತಾಳೆ ಎಂದು ದೂರ ಸರಿದು ನಿಂತಿದ್ದಾರೆ. ಗೀತಾ ಮುಕ್ತ ಮನಸ್ಸಿನಿಂದ ದೇವರನ್ನು ಬೇಡಿಕೊಂಡಿದ್ದಾಳೆ. ಬಂದಿರುವ ಕಂಟಕವನ್ನು ದೂರ ಮಾಡು ಎಂದು ಅದಕ್ಕೆ ದೇವರು ಸಹ ಆಶೀರ್ವಾದ ಮಾಡಿದ್ದಾನೆ.

ಅಗ್ನಿಕುಂಡವನ್ನು ದಾಟಲು ಗೀತಾ ಭಯ ಪಡುತ್ತಿದ್ದಾಳೆ. ಆದರೆ ಎಲ್ಲರೂ ಗೀತಾ ಪರಿಸ್ಥಿತಿ ನೆನೆದು ದೇವರ ಬಳಿ ಬೇಡಿಕೊಳ್ಳುತ್ತಿದ್ದಾರೆ. ಗೀತಾ ಜೀವಕ್ಕೆ ಏನು ಅಪಾಯವಾಗಬಾರದು ಎಂದು. ವಿಜಿ ಸಹ ದೇವರಿಗೆ ಕೈ ಮುಗಿದು ತನ್ನ ಬಾಳ ಸಂಗಾತಿ ಆಗುವವಳಿಗೆ ಏನು ಆಗಬಾರದು ಎಂದು ಬೇಡಿಕೊಳ್ಳುತ್ತಿದ್ದಾನೆ. ಮನೆಯವರು ಎಲ್ಲರೂ ಸಹ ಗೀತಾಗೆ ಧೈರ್ಯವನ್ನು ಹೇಳಿದ್ದಾರೆ. ಗೀತಾ ಅಗ್ನಿಕುಂಡವನ್ನು ದಾಟಿ ತಾಳಿಯನ್ನು ಅಗ್ನಿಗೆ ಆಹುತಿಯನ್ನು ಮಾಡಿ ಭಾನುಮತಿಗೆ ಶಾಕ್ ನೀಡಿದ್ದಾಳೆ.
ತಾನು ಮಾಡಿದ ಪ್ಲ್ಯಾನ್ ಯಾಕೆ ವರ್ಕ್ ಆಗಿಲ್ಲ ಎಂದು ಭಾನುಮತಿ ಮಾದೇಶನ ಬಳಿ ಹೇಳುತ್ತಿದ್ದಾಳೆ. ಅಲ್ಲಿಗೆ ಬಂದಂತಹ ಸುಧಾರಾಣಿ ನಿನ್ನ ಪ್ಲ್ಯಾನ್ ಹಾಳು ಮಾಡಿದ್ದೇ ನಾನು ಎಂದು ಹೇಳುವ ಮೂಲಕ ಭಾನುಮತಿಗೆ ಶಾಕ್ ನೀಡಿದ್ದಾಳೆ. ನೀನು ಮಾಡಿದ ಪಾಪ ಕರ್ಮದ ಬಗ್ಗೆ ಸ್ವಾಮೀಜಿಗಳು ನನ್ನ ಬಳಿ ಹೇಳಿದ್ರು ನಾನು ಎಲ್ಲವನ್ನು ನೋಡಿಕೊಂಡೆ ಎಂದು ಹೇಳಿ ಗೀತಾ ಹಾಗೂ ವಿಜಿಗೆ ಮದುವೆ ಮಾಡಿಸುವ ಸವಾಲನ್ನು ಭಾನುಮತಿಗೆ ಸುಧಾರಾಣಿ ಹಾಕಿದ್ದಾಳೆ.

ಭಾನುಮತಿ, ಗೀತಾಳನ್ನು ಕೊಲ್ಲಲು ಮಾಡಿದ ಕಂಕಟದ ಪ್ಲ್ಯಾನ್ ಬಗ್ಗೆ ಹಾಗೂ ವಿಜಿಯನ್ನು ಮದುವೆಯಾಗಿಲ್ಲ ಎಂದು ತಿಳಿದುಕೊಳ್ಳುವ ಬಗ್ಗೆ ಅವಳೇ ಮಾಡಿದ ನಾಟಕ ಎಂದು ಗೀತಾಗೆ ಸುಧಾರಾಣಿ ಹೇಳಿದ್ದಾಳೆ. ಇದೆಲ್ಲವನ್ನೂ ಕೇಳಿದ ಗೀತಾಗೆ ತುಂಬಾ ಬೇಸರವಾಗಿದೆ. ನಿನ್ನ ಮತ್ತು ವಿಜಿ ಮದುವೆಯನ್ನು ಆದಷ್ಟು ಬೇಗ ಮಾಡಬೇಕು ಎಂದು ಸುಧಾರಾಣಿ, ಗೀತಾಗೆ ಹೇಳಿದ್ದಾಳೆ. ಅದನ್ನು ಕೇಳಿಸಿಕೊಂಡ ವಿಜಿ ಅಮ್ಮ ಮೊದಲು ನನ್ನ ತಂಗಿ ಮದುವೆಯನ್ನು ಮಾಡೋಣ ನಂತರ ಗೀತಾ ಮತ್ತು ನನ್ನ ಮದುವೆ ಎಂದು ಹೇಳಿದ್ದಾನೆ.
ಅಲ್ಲಿಗೆ ಬಂದ ಭಾನುಮತಿ ನನ್ನ ಮಗಳ ಮದುವೆಯನ್ನು ಯಾರಿಂದಲೂ ಸಹ ತಡೆಯಲು ಸಾಧ್ಯವಿಲ್ಲ. ಹೇಗೆ ಮದುವೆ ಮಾಡುತ್ತೇನೆ ಎಂದು ಸುಧಾರಾಣಿಗೆ ಟಾಂಗ್ ನೀಡಿದ್ದಾಳೆ. ಇನ್ನೂ ವಿಜಿ, ಗೀತಾಗೆ ಎಂಗೇಜ್ಮೆಂಟ್ ಇನ್ವಿಟೇಷನ್ ಸೆಲೆಕ್ಟ್ ಮಾಡಬೇಕು ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಶೃತಿ ಮತ್ತು ಗೀತಾ ಇಬ್ಬರು ಸಹ ಹೋಗಿದ್ದಾರೆ.


Click it and Unblock the Notifications











