Geetha: ಸಿತಾರನನ್ನು ಜೈಲಿನಿಂದ ಬಿಡಿಸಲು ಪ್ಲ್ಯಾನ್ ಮಾಡಿದ ಸುಧಾರಾಣಿ: ಏನಿದು ಹೊಸ ವರಸೆ?
ಇಷ್ಟು ದಿನ ಬದ್ಧ ವೈರಿಗಳಾಗಿದ್ದ ಸಿತಾರಾ ಹಾಗೂ ಸುಧಾರಾಣಿ ಈಗ ಫ್ರೆಂಡ್ಸ್ ಆಗುವ ಕಾಲ ಹತ್ತಿರಕ್ಕೆ ಬಂದಿದೆ. ಸುಧಾರಾಣಿ ಒಂದು ಮಾಸ್ಟರ್ ಪ್ಲಾನ್ ಮಾಡಿ ಅಣ್ಣ ಹಾಗೂ ತಂಗಿಯ ನಡುವೆ ಬಿರುಗಾಳಿ ಎಬ್ಬಿಸುವ ಕೆಲಸಕ್ಕೆ ಕೈಯನ್ನು ಹಾಕಿದ್ದಾಳೆ. ಸೀತಾರನನ್ನು ಹೊರಗಡೆ ಕರೆತಂದು ಭಾನುಮತಿ ಮೇಲೆ ಎತ್ತಿ ಕಟ್ಟುವ ಕೆಲಸ ನಡೆಯುತ್ತಾ ನೋಡಬೇಕಿದೆ.
ಆದರೆ ವಿಜಿಗೆ ತನ್ನ ಅಮ್ಮ ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂಬ ಪ್ರಶ್ನೆ ಕಾಡುತ್ತಿದೆ. ಮೊದಲು ಸೀತಾರಾ ಹಾಗೂ ಭಾನುಮತಿಯನ್ನು ಕಂಡರೆ ಆಗದ ಸುಧಾರಾಣಿ ಅಮ್ಮ ಯಾಕೆ ಹೀಗೆ ಸಿತಾರಾಗೆ ಬೇಲ್ ಕೊಡಿಸಲು ಪ್ಲಾನ್ ಮಾಡಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಸುಧಾರಾಣಿ ಬಳಿ ವಿಷಯವನ್ನು ತಿಳಿದುಕೊಳ್ಳಲು ವಿಜಿ ಕಾತುರನಾಗಿದ್ದಾನೆ.

ಭಾನುಮತಿ ಚಾಪೆ ಕೆಳಗೆ ತೋರಿದರೆ ಸುಧಾರಾಣಿ ರಂಗೋಲಿ ಕೆಳಗೆ ತೋರುತ್ತಿದ್ದಾಳೆ. ಭಾನುಮತಿಯ ಆಟಕ್ಕೆ ಅಂತ್ಯ ಕಾಣಿಸಬೇಕು ಎಂದು ಟೊಂಕ ಕಟ್ಟಿ ನಿಂತಿದ್ದಾಳೆ. ಇದಕ್ಕಾಗಿ ನಾನು ಆ ರೀತಿಯ ಪ್ರಯತ್ನಗಳನ್ನು ಮಾಡಿ ಸುಧಾರಾಣಿ ಸಹ ಕೆಲವೊಂದು ಫಲವನ್ನ ಕಂಡರೆ ಇನ್ನು ಕೆಲವು ಪ್ಲಾನ್‌ಗಳು ಫ್ಲಾಪ್ ಆಗಿವೆ. ಈಗ ಹೊಸದೊಂದು ಯೋಚನೆಗೆ ಕೈ ಹಾಕಿದ್ದು ಇದು ಸಕ್ಸಸ್ ಕಾಣುತ್ತ ನೋಡಬೇಕಿದೆ.
ಸಿತಾರಾಗೆ ಬೇಲ್ ಕೊಡಿಸಲು ರೆಡಿ
ಸುಧಾರಾಣಿ ಕ್ರಿಮಿನಲ್ ಲಾಯರ್ ಆಗಿ ಗೀತಾ ಧಾರಾವಾಹಿಯಲ್ಲಿ ವಿಜಿ ಅಮ್ಮನಾಗಿ ಮಿಂಚುತ್ತಿದ್ದಾರೆ. ಈಗ ಸಣ್ಣ ಎದುರಾಳಿಗೆ ಜಾಮೀನು ಕೊಡಿಸುವ ಮೂಲಕ ಧಾರವಾಹಿಯಲ್ಲಿ ಹೊಸದೊಂದು ಟ್ವಿಸ್ಟ್ ನೀಡಲಾಗಿದೆ. ಬೇಲ್ ಸಿಗದ ಸಿತಾರಾಗೆ ಸುಧಾರಾಣಿ ಖುದ್ದಾಗಿ ನಿಂತು ಬೇಲ್ ಕೊಡಿಸಲು ನಿರ್ಧಾರವನ್ನು ಮಾಡಿದ್ದಾಳೆ.

ಭಾನುಮತಿಗೆ ತನ್ನ ಅಣ್ಣ ಜೈಲಿನಲ್ಲಿ ಇದ್ದರೆ ನಾವು ಸೇಫ್ ನಮ್ಮ ಮೇಲೆ ವಿಜಿಗೆ ಅನುಮಾನ ಬರುವುದಿಲ್ಲ ಎಂದು ಸೀತಾರಾನನ್ನು ಆದಷ್ಟು ಜೈಲಿನಲ್ಲಿ ಇರಿಸಲು ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಇದಕ್ಕೆಲ್ಲಾ ಒಂದು ಅಂತ್ಯ ಆಡಬೇಕು ಎಂದು ಸುಧಾರಾಣಿ ತಾನೇ ಖುದ್ದಾಗಿ ನಿಂತು ಜಾಮೀನು ಸಿಗುವಂತೆ ಹೋರಾಡಲು ನಿರ್ಧಾರವನ್ನು ಮಾಡಿದ್ದಾಳೆ.
ಅಮ್ಮನನ್ನೇ ಪ್ರಶ್ನೆ ಮಾಡಿದ ಮಗ
ಸಿತಾರಗೆ ಸುಧಾರಾಣಿ ಜಾಮೀನು ಕೊಡಿಸುತ್ತಿರುವುದು ವಿಜಿಗೆ ಸ್ವಲ್ಪವೂ ಸಹ ಇಷ್ಟವಿಲ್ಲ. ಇದಕ್ಕಾಗಿ ಸುಧಾರಾಣಿ ಬಳಿ ಬಂದಿರುವ ವಿಜಿ ಅಮ್ಮ ಈ ಮೊದಲು ನೀವು ನಾನು ಶ್ರುತಿಯ ಎಂಗೇಜ್ಮೆಂಟ್ ಇನ್ವಿಟೇಶನ್ ಕಾರ್ಡ್ ತೆಗೆದುಕೊಂಡು ಬರಲು ಹೋದಾಗ ಗೀತಾ ಹಾಗೂ ನನ್ನ ಮದುವೆಯ ಇನ್ವಿಟೇಶನ್ ಕಾರ್ಡ್ ಮಾಡಿಸಿದ್ರಿ. ನಂತರ ಮನೆಯಲ್ಲಿ ಜಗಳ ತೆಗೆದು ಜೋರಾಗಿ ಕೂಗಾಡಿದ್ರಿ. ನಾನು ಡಾಕ್ಟರ್ ಆಗಲು ಸಹ ನನಗೆ ಏನೂ ಇಲ್ಲ ಎಂದು ಡಾಕ್ಟರ್‌ಗೂ ಬೈದು ಕಳಿಸಿದ್ರಿ. ಈಗ ನೋಡಿದರೆ ನೀವು ಮಾಡಲು ಹೊರಟಿರುವುದು ಏನು ಎಂದು ಪ್ರಶ್ನೆ ಮಾಡಿದ್ದಾನೆ.

ಇದಕ್ಕೆ ಉತ್ತರ ನೀಡಿದ ಸುಧಾರಾಣಿಯ ಮಾತನ್ನು ಕೇಳಿ ವಿಜಿ ಶಾಕ್‌ಗೆ ಒಳಗಾಗಿದ್ದಾನೆ. ವಿಜಿ, ನಾನು ಹೇಳುವ ಮಾತು ಕೇಳಿ ನೀನು ಶಾಕ್ ಆಗಬೇಡ ಯಾಕೆಂದರೆ ಅದೇ ಸತ್ಯ ಎಂದು ಸುಧಾರಾಣಿ ಹೇಳಿದ್ದಾಳೆ. ನಿನ್ನ ತಂದೆಯನ್ನು ಸಿತಾರಾ ಕೊಲೆ ಮಾಡಿಲ್ಲ ಅವನು ನಿಮಿತ್ತ ಮಾತ್ರ ಇದರ ಹಿಂದೆ ಬೇರೆ ಯಾರು ಇದ್ದಾರೆ ಎಂದು ಸುಧಾರಾಣಿ ಹೇಳಿದ್ದಾಳೆ.
ಇದಕ್ಕೆ ವಿಜಿ ಶಾಕ್ ಆಗಿ ಅಮ್ಮ ಏನನ್ನು ಹೇಳುತ್ತಿದ್ದೀರಾ? ಎಂದು ಕೇಳಿದ್ದಾನೆ. ಹೌದು ಇದರಲ್ಲಿ ಸೀತಾರಾ ಮಾತ್ರ ಭಾಗಿಯಾಗಿಲ್ಲ ಎಂದು ಹೇಳಿದ್ದಾಳೆ. ನಿನ್ನ ತಂದೆಯನ್ನು ಕೊಲೆ ಮಾಡಿದವರನ್ನು ಕಂಡು ಹಿಡಿಯುವ ಕೆಲಸವನ್ನು ನೀನು ಮಾಡು ಅದು ನಿನಗೆ ಬಿಟ್ಟಿದ್ದು ಎಂದು ಸುಧಾರಾಣಿ, ವಿಜಿಗೆ ಹೇಳಿದ್ದಾಳೆ.


Click it and Unblock the Notifications











