Geetha: ಭಾನುಮತಿಗೆ ಶುರುವಾಯಿತು ಟೆನ್ಷನ್: ಸುಧಾರಾಣಿ ನಡೆ ಮಾತ್ರ ನಿಗೂಢ
ಗೀತಾ- ವಿಜಿ ಮನೆಗೆ ಬಂದಿದ್ದಾರೆ. ಸೀತಾರಾಗೆ ಸುಧಾರಾಣಿ ಬೇಲ್ ಕೊಡಿಸುತ್ತಿರುವ ವಿಷಯವನ್ನು ವಿಜಿ ಹೇಳಿದ್ದಾನೆ. ಇದಕ್ಕೆ ಭಾನುಮತಿ, ಅತ್ತೆಗೆ ಅಣ್ಣ ಎಂಬ ವ್ಯಾಮೋಹವಿದೆ ಎಂದು ಗೀತಾ ಹೇಳಿದ್ದಾಳೆ. ಭಾನುಮತಿ ಅಮ್ಮನ ಬಗ್ಗೆ ನೀನು ತಿಳಿದುಕೊಳ್ಳದೇ ಏನೇನು ಮಾತನಾಡಬೇಡ, ಬೇಲ್ ಕೊಡಿಸುತ್ತಿರುವುದು ಸುಧಾರಾಣಿ ಅಮ್ಮ ಎಂದು ಹೇಳಿದ್ದಾನೆ. ಈ ಮಾತು ಕೇಳಿ ಗೀತಾಗೆ ಶಾಕ್ ಆಗಿದೆ.
ಯಾಕೆ ಎಂದು ಗೀತಾ ಕೇಳಿದ್ದಕ್ಕೆ ನಿನಗೆ ಅವರು ಚೆನ್ನಾಗಿ ಅರ್ಥವಾಗುತ್ತಾರೆ ತಾನೇ, ನೀನೆ ಹೋಗಿ ಕೇಳು ಎಂದು ವಿಜಯ್ ಕೋಪದಿಂದ ಹೇಳಿದ್ದಾನೆ. ಇದೇ ವೇಳೆ ಸುಧಾರಾಣಿ ಬಳಿ ಹೋದ ಗೀತಾ ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದು ಕೇಳಿದ್ದಾಳೆ. ಇದಕ್ಕೆ ಸುಧಾರಾಣಿ ಗೀತಾ ಬಳಿ ನಾನು ಏನೇ ಮಾಡಿದರು ಒಳ್ಳೆಯದ್ದಕ್ಕೆ ಎಂಬ ಬಗ್ಗೆ ನಿನಗೆ ನಂಬಿಕೆ ಇದೆ ತಾನೇ ಎಂದು ಹೇಳಿದ್ದಾಳೆ.

ಸುಧಾರಾಣಿ ಈಗ ಭಾನುಮತಿಯ ಬಳಿ ಹೋಗಿದ್ದಾಳೆ. ನನ್ನ ಮಗನಿಗೆ ನಾವು ಹೇಳುವ ಯಾವುದೇ ಮಾತು ಕಿವಿಯ ಮೇಲೆ ಬೀಳೋದಿಲ್ಲ, ಆದರೆ ನೀನು ಹೇಳುವ ಎಲ್ಲಾ ಮಾತು ಕಿವಿಯ ಮೇಲೆ ಬೀಳುತ್ತವೆ ಆ ರೀತಿ ನೀನು ಮಾಡಿದ್ದೀಯಾ ಎಂದು ಹೇಳಿದ್ದಾಳೆ. ನಿನ್ನ ಪಾಪದ ಕೊಡ ತುಂಬಿದೆ, ನೀನು ಜೈಲಿಗೆ ಹೋಗುತ್ತೀಯಾ ಎಂದು ಹೇಳಿದ್ದಾಳೆ. ಇದಕ್ಕೆ ಭಾನುಮತಿ ನಿನ್ನ ಕೈಯಲ್ಲಿ ಏನು ಮಾಡೋಕೆ ಆಗೋದಿಲ್ಲ ಎಂದು ಸವಾಲು ಹಾಕಿದ್ದಾಳೆ.
ಗೀತಾ ಬಳಿ ಪ್ಲ್ಯಾನ್ ಹೇಳಿದ ಸುಧಾರಾಣಿ
ತಾನು ಮಾಡಿರುವ ಪ್ಲ್ಯಾನ್ ಬಗ್ಗೆ ಗೀತಾ ಬಳಿ ಸುಧಾರಾಣಿ ಹೇಳಿದ್ದಾಳೆ. ನನ್ನ ಗಂಡನನ್ನ ಕೊಂದವರು ಆರಾಮಾಗಿ ಜೈಲಿನಲ್ಲಿ ಸುಖವಾಗಿ ಇದ್ದಾರೆ ನಾನು ಅವರನ್ನು ಸುಮ್ಮನೆ ಬಿಡೋದಿಲ್ಲ. ನಾನೇ ಬೇಲ್ ಕೊಡಿಸಿ ಮಾನಸಿಕವಾಗಿ ಹಿಂಸೆ ನೀಡಿ ವಿಜಿ ಬಳಿ ಕೊಲೆ ಯಾರು ಮಾಡಿದ್ದು ಎಂಬುದನ್ನು ಒಪ್ಪಿಕೊಳ್ಳುವಂತೆ ಮಾಡುತ್ತೇನೆ ಎಂದು ಹೇಳಿದ್ದಾಳೆ. ಈ ಪ್ಲ್ಯಾನ್ ಕೇಳಿದ ಗೀತಾಗೆ ಆತ್ಮವಿಶ್ವಾಸ ಬಂದಿದೆ.

ವಿಜಿಯ ಬಳಿ ಹೋದ ಗೀತಾ ಅತ್ತೆ ಮಾಡುತ್ತಿರುವುದು ಸರಿಯಾಗಿ ಇದೆ, ಈಗ ನಾವು ಅವರಿಗೆ ಏನನ್ನು ಹೇಳಲು ಆಗುವುದಿಲ್ಲ. ಅತ್ತೆ ಹೇಳುತ್ತಿರುವ ವಿಚಾರದಲ್ಲೂ ಸತ್ಯವಿದೆ ಯಾರೋ ಕೊಲೆ ಮಾಡಿ ಇವರ ಮೇಲೆ ಹಾಕಿ ಅವರು ತಪ್ಪಿಸಿಕೊಂಡರೆ ಏನು ಮಾಡುವುದು ಎಂದು ಹೇಳಿದ್ದಾಳೆ. ನಿಜವಾದ ಕೊಲೆಗಾರನನ್ನು ಕಂಡು ಹಿಡಿಯಬೇಕು ಎಂದು ವಿಜಿಗೆ ಗೀತಾ ಹೇಳಿದ್ದಾಳೆ.
ಸಿತಾರಾಗೆ ಜಾಮೀನು ಮಂಜೂರು
ಸುಧಾರಾಣಿಯ ಮುಖವನ್ನು ನೋಡಿದ ಸಿತಾರಾಗೆ ತನ್ನ ತಂಗಿ ಬೆದರಿಸಿ ಜಾಮೀನು ಕೊಡಿಸಲು ಇಲ್ಲಿಗೆ ಕಳಿಸಿರಬೇಕು ಎಂದು ಅಂದುಕೊಂಡಿರುತ್ತಾನೆ. ಈ ಕಡೆ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಸುಧಾರಾಣಿ ಅವರು ಯಾರದ್ದೋ ಒತ್ತಡಕ್ಕೆ ಮಣಿದು ಈ ರೀತಿಯಲ್ಲಿ ಕೊಲೆ ಮಾಡಿರುವ ಆರೋಪಿಗೆ ಜಾಮೀನು ಕೊಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸುಧಾರಾಣಿ ಲಾಯರ್ ಅವರು ಹೇಳಿದ ಮಾತನ್ನು ತಳ್ಳಿ ಹಾಕಿದ್ದು ತನ್ನ ವಾದವನ್ನು ಮಾಡಿದ್ದಾರೆ

ಸುಧಾರಾಣಿ ಮಾಡಿದ ವಾದದಿಂದ ಸೀತಾರಾಗೆ ಜಾಮೀನು ಮಂಜೂರು ಆಗಿದೆ. ಇದರಿಂದಾಗಿ ಗೀತಾ ಹಾಗೂ ಸುಧಾರಾಣಿಗೆ ತುಂಬಾ ಖುಷಿಯಾಗಿದೆ. ಸಿತಾರಾ ನಾನು ಕೊಲೆ ಮಾಡಿಲ್ಲ ಯಾರೋ ಅಡ್ರೆಸ್ ಕೇಳಿದರು ನನ್ನನ್ನು ಅಲ್ಲಿ ತನಕ ಬಿಟ್ಟರೆ ನಾನು ಅಡ್ರೆಸ್ ಹೇಳುತ್ತೇನೆ ಎಂದೇ ಎಂದು ಹೇಳಿದ್ದಾನೆ. ಸುಧಾರಾಣಿ ಕೊಲೆ ಮಾಡಿದ ಆರೋಪಿಗಳು ಆರಾಮಾಗೆ ಹೊರಗೆ ಇದ್ದಾರೆ ಅವರನ್ನು ತಪ್ಪಿಸಿಕೊಳ್ಳಲು ಬಿಡುಬಾರದು ಎಂದು ಹೇಳಿ ವಾದವನ್ನು ಮಾಡಿದ್ದಾಳೆ. ಇದನ್ನು ಕೋರ್ಟ್ ಸಹ ಒಪ್ಪಿಕೊಂಡು ಜಾಮೀನನ್ನು ಮಂಜೂರು ಮಾಡಿದೆ.


Click it and Unblock the Notifications











