Geetha: ಸಿತಾರಾಗೆ ಕಾಟ ಕೊಡಲು ಶುರು ಮಾಡಿದ ಗೀತಾ: ಸಿತಾರಾ ಮೇಲೆ ವಿಜಿಗೆ ಕೋಪ

By ಶೃತಿ ಹರೀಶ್ ಗೌಡ

ಸಿತಾರಾಗೆ ಬೇಲ್ ಕೊಡಿಸಿ ಸುಧಾರಾಣಿ ಬಿಡಿಸಿಕೊಂಡಿದ್ದಾಳೆ. ಇದೇ ವೇಳೆ ಗೀತಾ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ಸಿತಾರಾಗೆ ಹೇಗಾದರೂ ಮಾಡಿ ಕಾಟ ಕೊಟ್ಟು ಮೆಂಟಲ್ ರೀತಿ ಮಾಡಬೇಕು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದಾಳೆ. ಅದಕ್ಕಾಗಿ ನಾನಾ ರೀತಿಯಲ್ಲಿ ಯೋಚನೆಗಳನ್ನು ಮಾಡಿದ್ದಾಳೆ. ಈ ವೇಳೆ ಸುಧಾರಾಣಿ, ಸೀತಾರಾಗೆ ಕಾರನ್ನು ಕೊಟ್ಟು ಮನೆಗೆ ಹೋಗು ಎಂದಿದ್ದಾಳೆ.

ಸುಧಾರಾಣಿ ಫೋನ್ ನಿಂದ ಫೋನ್ ಮಾಡಿದಾಗ ಗೀತಾ ಮೊದಲು ನಿಮ್ಮ ಕಾರಿನಲ್ಲಿ ಬ್ರೇಕ್ ಇದೆಯಾ ನೋಡಿಕೊಳ್ಳಿ ಎಂದು ಹೇಳಿದ್ದಾಳೆ. ಇದ್ಯಾವುದು ಸಹ ಸಿತಾರಾಗೆ ಅರ್ಥವಾಗಿಲ್ಲ ನಾನು ಬಿಡುಗಡೆ ಆಗಿದ್ದೇನೆ ಎಂಬುದಷ್ಟೇ ಸಂತೋಷವನ್ನು ತಂದಿದೆ. ಇದೆ ವೇಳೆ ಕಾರಿನ ಬ್ರೇಕ್ ಸರಿಯಾಗಿದೆಯಾ ನೋಡಿಕೊಳ್ಳಿ ಎಂದು ಎರಡನೇ ಬಾರಿ ಹೇಳಿದಾಗ ಸೀತಾರಾ ಬ್ರೇಕ್‌ ಮೇಲೆ ಕಾಲಿಟ್ಟಿದ್ದಾನೆ. ಬ್ರೇಕ್ ಇಲ್ಲದ್ದನ್ನು ಕಂಡು ಕೊಂಚ ಗಾಬರಿಯಾಗಿದ್ದಾನೆ. ನಂತರ ಹಾಗೆ ಮಾಡಿ ಹೀಗೆ ಮಾಡಿ ಹೇಗೋ ಕಾರನ್ನು ನಿಲ್ಲಿಸಿದ್ದಾನೆ.

colors kannada geetha Written Update on may 3rd episode

ಗೀತಾಳ ತಂದೆ ಶ್ರೀನಿವಾಸ್ ಹೇಗೋ ಮನೆಗೆ ಬಂದಿದ್ದಾನೆ. ಇದೇ ವೇಳೆ ಗೀತಾಳಳಿಗೆ ನೀನು ದುಡ್ಡನ್ನ ಹೊಂದಿಸಿಕೊಂಡು ಬಂದಿಲ್ಲ ಎಂದೆಲ್ಲ ಅವಮಾನ ಮಾಡಿದ್ದಾನೆ. ಇದನ್ನೆಲ್ಲ ಕೇಳಿಸಿಕೊಳ್ಳುತ್ತಿರುವ ಚಂದ್ರಿಕಾಗೆ ತುಂಬಾ ಬೇಸರವಾಗಿದೆ. ಇದಕ್ಕಾಗಿ ಅವಳು ದುಡ್ಡು ಹೊಂದಿಸಲು ಹೋಗಿದ್ದಳು ಎಂದಾಗ ಈ ಮನೆಯಲ್ಲಿ ಮೂರನೆಯವರು ಮಾತನಾಡಬಾರದು ಅವರು ತಮ್ಮಪಾಡಿಗೆ ತಾವು ಇರಬೇಕು ಎಂದು ಚಂದ್ರಿಕಾಗು ಸಹ ಬೇಸರವನ್ನು ತರಿಸಿದ್ದಾನೆ.

ಸುಧಾರಾಣಿ ಪ್ಲಾನ್‌ಗೆ ಭಾನುಮತಿ ಚಿಂತೆ

ಸಿತಾರಾನನ್ನು ಸುಧಾರಾಣಿ ಯಾಕೆ ಬಿಡಿಸಿದಳು ಎಂಬ ಪ್ರಶ್ನೆ ಭಾನುಮತಿಯನ್ನು ಕಾಡುತ್ತಿದೆ. ಇದೇ ವೇಳೆ ಭಾನುಮತಿ ಬಳಿ ಬಂದ ಮಾದೇಶ ಬೇಲ್ ಸಿಕ್ಕಿದೆ ಎಂದು ಹೇಳಿದ್ದಾನೆ. ನೀನು ಹೋಮ್ ಮಿನಿಷ್ಟರ್‌ ಆಗಿದ್ದು ಸಹ ಏನು ಪ್ರಯೋಜನವಿಲ್ಲ. ಅವರು ನೋಡು ಸಿತಾರಾಗೆ ಜಾಮೀನುಕೊಟ್ಟು ಬಿಡಿಸಿಕೊಂಡು ಬಂದಿದ್ದಾರೆ ಎಂದು ಕಿವಿಯನ್ನು ಚುಚ್ಚಿದ್ದಾನೆ. ಇದರಲ್ಲಿ ಏನೋ ಒಂದು ಒಳಸಂಚು ನಡೆಯುತ್ತಿದೆ ಎಂದು ಮಾದೇಶ ಹೇಳಿದ್ದಾನೆ.

colors kannada geetha Written Update on may 3rd episode

ಭಾನುಮತಿಗೂ ಸಹ ಹಾಗೆ ಅನಿಸಿದೆ. ನಮ್ಮ ವಿರುದ್ಧವೇ ಸೀತಾರನನ್ನು ಎತ್ತಿ ಕಟ್ಟುವ ಪ್ಲಾನ್ ನಡೆಯುತ್ತಿದೆ. ಅವನ ಬಾಯಿಂದಲೇ ವಿಜಿ ಬಳಿ ಹೋಗಿ ಸತ್ಯವನ್ನು ಹೇಳಿಸುವ ಪ್ಲಾನ್ ಅನ್ನು ಸುಧಾರಾಣಿ ಹಾಗೂ ಗೀತಾ ಮಾಡಿಕೊಂಡಿದ್ದಾರೆ ಎಂದು ಭಾನುಮತಿ ಸಹ ತಿಳಿದುಕೊಂಡಿದ್ದಾಳೆ. ಬೇಲ್ ಕೊಡಿಸಿದ್ದಾರೆ ಎಂಬ ಖುಷಿಯಿಂದ ವಿಜಿ ಬಳಿ ಹೋಗಿ ಎಲ್ಲಾ ಸತ್ಯವನ್ನ ಹೇಳಿದರೆ ನಮ್ಮ ಗತಿ ಏನು ಎಂದು ಭಾನುಮತಿ ಭಯ ಬಿದ್ದಿದ್ದಾಳೆ.

ಅಮ್ಮನ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿಜಿ

ಸುಧಾರಾಣಿ, ಸೀತಾರಾನನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದಿರುವುದು ವಿಜಿಗೆ ಸ್ವಲ್ಪವೂ ಇಷ್ಟವಿಲ್ಲ. ಇದಕ್ಕಾಗಿ ಸುಧಾರಾಣಿಯ ಬಳಿ ಹಲವು ಪ್ರಶ್ನೆಗಳನ್ನು ವಿಜಿ ಕೇಳಿದ್ದಾನೆ. ಇದಕ್ಕೆ ಸುಧಾರಾಣಿ ನಿನ್ನ ತಂದೆಯನ್ನ ಕೊಂದವರು ಯಾರು ಎಂದು ನೀನು ಕಂಡು ಹಿಡಿ. ಸಿತಾರಾ ಜೈಲಿನಲ್ಲಿ ಇದ್ದಿದ್ದರೆ ಅವರು ಆರಾಮಾಗಿ ಇರ್ತಿದ್ರು ಎಂದು ಹೇಳಿದ್ದಾಳೆ. ಇದಕ್ಕೂ ಸಹ ವಿಜಿಗೆ ಸಮಾಧಾನವಾಗುತ್ತಿಲ್ಲ.

colors kannada geetha Written Update on may 3rd episode

ಅಮ್ಮ ನನಗೆ ಸಿತಾರನನ್ನು ಕಂಡರೆ ಕೊಲೆ ಮಾಡಬೇಕು ಎಂದು ಕೋಪ ಬರುತ್ತಿದೆ. ನೀನು ನನ್ನನ್ನು ಕೊಲೆಗಾರನನ್ನಾಗಿ ಮಾಡುತ್ತೀಯಾ ಎಂದು ಕೋಪದಿಂದಲೇ ವಿಜಿ ಸುಧಾರಾಣಿ ಬಳಿ ಹೇಳಿದ್ದಾನೆ. ಇದಕ್ಕೆ ಸುಧಾರಾಣಿ ನೀನು ಈಗ ತಾಳ್ಮೆಯಿಂದ ಇರಬೇಕು ತಾಳ್ಮೆಯಿಂದಲೇ ಎಲ್ಲವನ್ನು ಕಂಡು ಹಿಡಿಯಬೇಕು ಎಂದು ವಿಜಿಗೆ ಹೇಳಿದ್ದಾಳೆ. ಆದರೂ ಸಹ ವಿಜಿ ಯಾವುದ
ನ್ನು ಕೇಳುತ್ತಿಲ್ಲ.

More from Filmibeat

English summary
colors kannada geetha Written Update on may 3rd episode. Here is the details about sudharani bails out sithara despite vijay's opposition bhanumati starts to worry that sitars will tell sudharani about suryaprakash's murder. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X