Geetha: ಸಿತಾರಗೆ ವಿಷ ಹಾಕಿದ ಸುಧಾರಾಣಿ: ಗೀತಾ ಬಳಿಗೆ ಓಡೋಡಿ ಹೋದ ಸಿತಾರಾ
'ಗೀತಾ' ಧಾರಾವಾಹಿ ಎಲ್ಲಿ ಈಗ ಹೊಸದೊಂದು ತಿರುವು ಶುರುವಾಗಿದೆ. ಸೂರ್ಯಪ್ರಕಾಶ್‌ನ ಕೊಂದಂತಹ ಕೊಲೆಗಡುಕರಿಗೆ ಈಗ ಸುಧಾರಾಣಿ ನರಕವನ್ನು ತೋರಿಸಲು ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಂಡಿದ್ದಾಳೆ. ಇದಕ್ಕಾಗಿ ಗೀತಾ ಜೊತೆಗೆ ಸೇರಿಕೊಂಡು ನಾನಾ ತಂತ್ರಗಳನ್ನ ರೂಪಿಸಿದ್ದಾಳೆ. ಈಗ ಸಿತಾರಾ ಮೇಲೆ ಕಣ್ಣು ಬಿದ್ದಿದ್ದು ಸಿತಾರಾಗೆ ಟಾರ್ಚರ್ ಕೊಡಲು ಇಬ್ಬರು ಶುರು ಮಾಡಿಕೊಂಡಿದ್ದಾರೆ.
ಕಾರ್ ಆಕ್ಸಿಡೆಂಟ್ ಮಾಡಿಸಿದ ಬಳಿಕ ಈಗ ಮತ್ತೊಂದು ಏಟನ್ನು ಕೊಡಲು ಸಿದ್ದರಾಗಿದ್ದಾರೆ. ಅಣ್ಣನ ಬಳಿಗೆ ಬಂದ ಭಾನುಮತಿ ಅಣ್ಣ ನೀನು ಅವರು ಹೇಳಿದ ರೀತಿ ಮಾಡಬೇಡ ಅವರು ಹೇಳಿದ ತಾಳಕ್ಕೆ ಕುಣಿಯ ಬೇಡ ಎಂದೆಲ್ಲಾ ಹೇಳಿದ್ದಾಳೆ. ಅವಳು ನಿನಗೆ ಯಾವ ಕಾರಣಕ್ಕಾಗಿ ಬೇಲ ಅನ್ನು ಕೊಡಿಸಿದ್ದಾಳೆ ಎಂಬುದನ್ನು ನಾನು ತಿಳಿದುಕೊಳ್ಳುತ್ತೇನೆ.

ವಿಜಿ ನಿನ್ನ ಸಹವಾಸಕ್ಕೆ ಬರದ ರೀತಿ ನಾನು ನೋಡಿಕೊಳ್ಳುತ್ತೇನೆ ಎಂದೆಲ್ಲ ಅಣ್ಣನಿಗೆ ಭಾನುಮತಿ ಭರವಸೆ ನೀಡಿದ್ದಾಳೆ. ಆದರೆ ವಿಜಿಗೆ ಸಿತಾರಾ ತನ್ನ ಮನೆಯಲ್ಲಿ ಇರುವುದು ಸ್ವಲ್ಪವೂ ಸಹ ಇಷ್ಟವಿಲ್ಲ ಇದಕ್ಕಾಗಿ ಸುಧಾರಾಣಿ ಬಳಿಯು ಸಹ ಬೇಸರ ವ್ಯಕ್ತಪಡಿಸಿದ್ದಾನೆ. ಸುಧಾರಾಣಿ ತಾಳ್ಮೆಯಿಂದ ಇರುವಂತೆ ವಿಜಿಗೆ ಹೇಳಿದ್ದಾಳೆ.
ಸೀತಾರಾಗೆ ಹೊಡೆಯಲು ಹೋದ ವಿಜಿ
ಸಿತಾರ ಮನೆಯಲ್ಲಿ ಇರುವುದನ್ನು ಸಹಿಸಿಕೊಳ್ಳಲು ಆಗದ ವಿಜಿ ಅವನಿಗೆ ಹೊಡೆಯಲು ಹೋಗಿದ್ದಾನೆ. ಈ ವೇಳೆ ಭಾನುಮತಿ ಸಹ ಬಂದು ಅಣ್ಣನ ಕಪಾಳಕ್ಕೆ ಹೊಡೆದಿದ್ದಾಳೆ. ನಂತರ ನನ್ನ ಮಗನಿಗೆ ಇಷ್ಟವಿಲ್ಲದಿದ್ದರೂ ಸಹ ನೀನು ಯಾಕೆ ಇದೆ ಮನೆಗೆ ಬಂದಿದ್ದೀಯ ಮೊದಲು ಮನೆಯಿಂದ ಹೊರಗೆ ಹೋಗು ಎಂದಿದ್ದಾಳೆ.

ಭಾನುಮತಿ ಆಡುತ್ತಿರುವ ನಾಟಕಕ್ಕೆ ಸುಧಾರಾಣಿಗೆ ನಗು ಬರುತ್ತಿದೆ. ಆದರೂ ಸಹ ನಗು ತಡೆದುಕೊಂಡು ವಿಜಿಯನ್ನು ತಡೆದಿದ್ದಾಳೆ. ವಿಜಿ ನಾನು ಹೇಳಿದ್ದು ಏನು ನೀನು ಮಾಡುತ್ತಿರುವುದು ಏನು ಸಿತಾರ ಏನಾದರೂ ಇಲ್ಲಿಂದ ಹೊರಗೆ ಹೋದರೆ ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ. ನಾನು ಅಪರಾಧಿಗಳನ್ನು ತಡೆಯುವ ತನಕ ನೀನು ಸುಮ್ಮನೆ ಇರುತ್ತೇನೆ ಎಂದು ಅಲ್ಲಿಂದ ಹೋಗಿದ್ದಾನೆ.
ಸಿತಾರಾಗೆ ವಿಷ ಕೊಡಿಸಿದ ಸುಧಾರಾಣಿ
ಸುಧಾರಾಣಿ ಸಿತಾರಾಗೆ ವಿಷವನ್ನು ಕುಡಿಸಿದ್ದಾಳೆ. ತನ್ನ ಗಂಡನನ್ನು ಕೊಂದ ನಿಮ್ಮನ್ನು ನಾನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ ಎಂದು ಹೇಳಿದ್ದಾಳೆ. ಈ ಕಡೆ ವಿಜಯ್ ಸಹ ಅಪ್ಪನನ್ನು ಕೊಂದವರನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುವಷ್ಟು ಕೋಪ ಬರುತ್ತಿದೆ ಎಂದು ಹೇಳಿದ್ದಾನೆ. ಇದೆಲ್ಲವನ್ನು ನೋಡುತ್ತಿರುವ ಶ್ರುತಿಗೆ ತುಂಬಾ ಭಯವಾಗಿದೆ.

ಮನೆ ಕೆಲಸದವಳ ಕೈಯಲ್ಲಿ ಸುಧಾರಾಣಿ, ಸೀತಾರಾಗೆ ಕಾಫಿ ಕೊಟ್ಟು ಕಳಿಸಿದ್ದಾಳೆ. ಅದರಲ್ಲಿ ವಿಷ ಇದೆ ಎಂಬುದು ಸಿತಾರಾಗೆ ಗೊತ್ತಿಲ್ಲ. ಸಿತಾರಾ ಬಳಿ ಬಂದ ಸುಧಾರಾಣಿ ನಾನು ಈಗ ಸಾಯುತ್ತಿರುವವರ ಲೈವ್ ಅನ್ನು ನೋಡುತ್ತಿದ್ದೇನೆ ಎಂದು ಹೇಳಿದ್ದಾಳೆ. ಇದನ್ನು ಕೇಳಿಸಿಕೊಂಡ ಸಿತಾರಾಗೆ ತುಂಬಾ ಭಯವಾಗಿದೆ. ನಾನು ಜೈಲಿನಲ್ಲಿ ನೆಮ್ಮದಿಯಾಗಿ ಇದ್ದೇ ಎಂದು ಸಿತಾರಾ ಹೇಳಿದ್ದಾನೆ.
ಗೀತಾ ಬಳಿ ಓಡಿ ಹೋದ ಸಿತಾರಾ
ಗೀತಾ ಬಳಿ ವಿಷವನ್ನು ಕುಡಿದ ಸಿತಾರಾ ಓಡೋಡಿ ಹೋಗಿದ್ದಾನೆ. ಗೀತಾ, ಸಿತಾರಾನನ್ನು ಆಟವಾಡಿಸುತ್ತಿದ್ದಾಳೆ. ನಾನು ಮನೆಯಲ್ಲಿ ಇಲ್ಲ ಪಾರ್ಕ್‌ನಲ್ಲಿ ಇದ್ದೇನೆ ಎಂದೆಲ್ಲ ಗೀತಾ ಹೇಳುತ್ತಿದ್ದಾಳೆ. ಇದಕ್ಕೆ ಸಿತಾರಾ ನಾನು ಜೈಲಿನಲ್ಲಿ ಹೇಗೋ ಆರಾಮವಾಗಿ ಇದ್ದೇ ತಂಗಿ ನೀಡುತ್ತಿದ್ದ ಎಲ್ಲವನ್ನು ತಿಂದು ಕೊಂಡು ಚೆನ್ನಾಗಿ ಇದ್ದವನನ್ನು ತಂದು ಸಾವಿನ ಬಾಯಿಗೆ ಹಾಕಿ ಬಿಟ್ರು ಎಂದು ಕಣ್ಣೀರು ಹಾಕಿದ್ದಾನೆ.


Click it and Unblock the Notifications











