ಧಾರಾವಾಹಿ ಪ್ರೇಮಿಗಳಿಗೆ ಶುಭ ಸುದ್ಧಿ; ಕಲರ್ಸ್‌ ಕನ್ನಡದಲ್ಲಿ ಇನ್ಮೇಲೆ ವಾರ ಪೂರ್ತಿ ಸೀರಿಯಲ್

By ಪೂರ್ವ

ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಒಂದನ್ನೊಂದು ಮೀರಿಸುವ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಕಲರ್ಸ್ ಕನ್ನಡ ಧಾರಾವಾಹಿ ಪ್ರೇಮಿಗಳಿಗೆ ಒಂದು ಖುಷಿ ಸುದ್ದಿಯನ್ನು ನೀಡಿದೆ. ವೀಕೆಂಡ್‌ನಲ್ಲಿ ಧಾರಾವಾಹಿಗಳಿಗೆ ಬ್ರೇಕ್ ಇರುತ್ತಿತ್ತು. ಈ ವೇಳೆ ಸೀರಿಯಲ್ ಪ್ರೇಮಿಗಳು ತಮ್ಮ ನೆಚ್ಚಿನ ಧಾರಾವಾಹಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಕಲರ್ಸ್ ಕನ್ನಡದಲ್ಲಿ ತನ್ನ ಜನಪ್ರಿಯ ಧಾರಾವಾಹಿಗಳು ವೀಕೆಂಡ್‌ನಲ್ಲೂ ಪ್ರಸಾರ ಆಗುತ್ತಿದೆ.

ಈಗಾಗಲೇ ಕಲರ್ಸ್ ಕನ್ನಡ ತನ್ನ ವೀಕ್ಷಕರಿಗೆ ಈ ಖುಷಿ ವಿಷಯವನ್ನು ತಿಳಿಸುವುದಕ್ಕೆ ಪ್ರೋಮೊವೊಂದನ್ನು ಬಿಡುಗಡೆ ಮಾಡಿದೆ. ಈ ಮೂಲಕ ಅಧಿಕೃತವಾಗಿ ಧಾರಾವಾಹಿಗಳನ್ನು ವಾರ ಪೂರ್ತಿ ಪ್ರಸಾರ ಮಾಡುವ ನಿರ್ಧಾರವನ್ನು ಪ್ರಕಟಿಸಿದೆ. ಇನ್ಮೇಲೆ ವಾರದ ಏಳೂ ದಿನವೂ ಕಲರ್ಸ್ ಕನ್ನಡದಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿ ಕೂಡ ಪ್ರಸಾರ ಆಗಲಿದೆ. ನಿಮ್ಮನ್ನು ನಗಿಸೋ , ಅಳಿಸೋ, ಕುಣಿಸೋ, ಮನರಂಜಿಸೋ ಫೇವರೇಟ್ ಸೀರಿಯಲ್‌ಗಳು. ಇನ್ಮೇಲೆ ವಾರದ ಏಳೂ ದಿನ ಬರಲಿದೆ.

Colors Kannada is telecasting famous serials every day from now onwards

ಸಂಜೆ ಆರರಿಂದ ರಾತ್ರಿ 9 ಗಂಟೆಯವರೆಗೆ ಜನರಿಗೆ ಮನರಂಜನೆ ನೀಡಲು ಕಲರ್ಸ್ ಕನ್ನಡ ಸಿದ್ಧವಾಗಿದೆ. ಪ್ರತಿದಿನ ಸೀರಿಯಲ್‌ ಮೂಲಕ ಮನರಂಜನೆ ನೀಡಲು ಸಜ್ಜಾಗಿದೆ. ಈಗಾಗಲೇ 'ಭಾಗ್ಯಲಕ್ಷ್ಮೀ' ಧಾರಾವಾಹಿ ಹಾಗೂ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಕಿರುತೆರೆ ವೀಕ್ಷಕರು ಹಿಡಿದಿಟ್ಟಿದೆ. ಇನ್ನೂ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಇದೀಗ ರೋಚಕ ಘಟ್ಟ ತಲುಪಿದೆ. ಶ್ರೇಷ್ಠಾ ಹಾಗೂ ತಾಂಡವ್ ನಡುವೆ ಇದೀಗ ಬಿರುಕು ಬಿಟ್ಟಿದೆ. ಶ್ರೇಷ್ಠನೇ ತಾಂಡವನನ್ನು ಅಂಕಲ್ ಎಂದು ಕರೆದು ಬಿಟ್ಟಿದ್ದಾಳೆ.

ತಾಂಡವಗೆ ಹಣ ಮಾಡಬೇಕು, ಹಾಗೆಯೇ ಮೀಟಿಂಗ್ ಎಂದೆಲ್ಲ ಕಾಲ ಕಳೆಯುತ್ತಿರುತ್ತಾನೆ. ಆದರೆ, ಶ್ರೇಷ್ಠಾಗೆ ಹೆಚ್ಚು ತಾಂಡವನ ಜೊತೆ ಕಾಲ ಕಳೆಯಬೇಕು ಎಂಬ ಆಸೆ ಇರುತ್ತೆ. ಆದರೆ, ಅದು ಸಾಧ್ಯವಾಗದೇ ಹೋದಾಗ ಶ್ರೇಷ್ಠಾಗೆ ಬಹಳ ಕೋಪ ಬರುತ್ತೆ. ತಾಂಡವ್‌ಗೆ ಬಾಯಿಗೆ ಬಂದ ಹಾಗೆ ಬೈದು ಬಿಡುತ್ತಾಳೆ. ಆಕೆಯ ಮಾತನ್ನು ಕೇಳಿದ ತಾಂಡವ್‌ಗೆ ಇದೀಗ ಬಹಳ ಕೋಪ ಬಂದಿದೆ. ಆದರೂ, ಏನು ಮಾತನಾಡದೆ ಸುಮ್ಮನೆ ನಿಂತಿರುತ್ತಾನೆ. ಇತ್ತ ಫ್ಯಾನ್ಸ್ ಮಾತ್ರ ಭಾಗ್ಯಗೆ ಮೋಸ ಮಾಡಿದ ತಾಂಡವ್‌ಗೆ ಹಾಗೆಯೇ ಆಗಬೇಕು ಎಂದು ಟೀಕೆ ಮಾಡುತ್ತಿದ್ದಾರೆ.

ಇತ್ತ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕೂಡ ಲಕ್ಷ್ಮೀಗೆ ಅತ್ತೆ ಕಾವೇರಿಯ ಕಾಟ ಮಾತ್ರ ಮಿತಿ ಮೀರಿದೆ. ಕೀರ್ತಿ ಇನ್ನೂ ಬದುಕಿ ಇದ್ದಾಳೆ. ಆಕೆ ಇದ್ದಾಳೆ ಎನ್ನುವ ಭ್ರಮೆಯಲ್ಲಿ ಇದ್ದಾಳೆ ಲಕ್ಷ್ಮೀ. ಇತ್ತ ಲಕ್ಷ್ಮೀ ಗೆ ಹುಚ್ಚು ಹಿಡಿದಿದೆ ಎಂದು ಹೇಳಿ ಆಕೆಗೆ ಇನ್ನಷ್ಟು ಮಾನಸಿಕವಾಗಿ ಕಿರಿಕಿರಿ ಕೊಡಲಾಗುತ್ತದೆ. ಆದರೂ ವೈಷ್ಣವ್ ಮಾತ್ರ ತನಗೇನು ಗೊತ್ತಿಲ್ಲದ ಹಾಗೆಯೇ ಕಾಲ ಕಳೆಯುತ್ತಿರುವುದು ವೀಕ್ಷಕರ ಕಣ್ಣು ಕೆಂಪಾಗಿಸುತ್ತಿದೆ.

Colors Kannada is telecasting famous serials every day from now onwards

ಇತ್ತ 'ಶ್ರೀ ಗೌರಿ' ಧಾರಾವಾಹಿಯಲ್ಲಿ ಅಪ್ಪು ಜೀವಕ್ಕೆ ಕಂಟಕ ಎದುರಾಗಿದೆ. ಆದರೆ, ಗೌರಿಗೆ ರಾತ್ರಿ ನಡೆದಾಡುವ ಕಾಯಿಲೆ. ಆಕೆಯನ್ನು ತಡೆಯಲು ಯತ್ನಿಸಿದ ಅಪ್ಪು ಮೇಲೆ ಹಲ್ಲೆ ಆಗಿದೆ. ಗೌರಿ ಇದೆಲ್ಲವನ್ನೂ ಯಾವ ರೀತಿ ಸ್ವೀಕಾರ ಮಾಡುತ್ತಾಳೆ ಎಂಬುವುದನ್ನು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.

ಹಾಗೆಯೇ 'ನಿನಗಾಗಿ' ಧಾರಾವಾಹಿಯಲ್ಲಿ ಕೂಡ ಕೃಷ್ಣನಿಂದ ಜೀವವನ್ನು ದೂರ ಇಡಲು ಇದೀಗ ಮಸಲತ್ತು ನಡೆದರೆ, ಕೃಷ್ಣನ ಫೇವರೆಟ್ ಸ್ಟಾರ್‌ಗೆ ಮದುವೆ ಮಾಡಲು ಹುನ್ನಾರ ನಡೆಯುತ್ತಿದೆ. ಕೃಷ್ಣನೀಗೆ ತಂದೆ ಎಂದರೆ ಪಂಚಪ್ರಾಣ. ಆದರೆ, ಆಕೆಯ ತಾತನಿಗೆ ಮಾತ್ರ ಜೀವ ನನ್ನ ಮಗಳನ್ನು ಕಸಿದುಕೊಂಡಿದ್ದಾನೆ. ಆತ ಕೂಡ ತಮ್ಮ ಹಾಗೆ ಜೀವನ ನಡೆಸಲಿ. ಅವನಿಗೆ ಆತನ ಮಗಳನ್ನು ಕಳೆದುಕೊಂಡ ಮೇಲೆ ಆಗುವ ದುಃಖ ಎಷ್ಟಿರುತ್ತದೆ ಎನ್ನುವುದು ಅರ್ಥ ಆಗಲಿ ಎನ್ನುವ ಮನಸ್ಥಿತಿಯಿದೆ. ಇನ್ನೂ 'ಕರಿಮಣಿ' ಧಾರಾವಾಹಿ ಹಾಗೆಯೇ 'ದೃಷ್ಟಿಬೊಟ್ಟು' ಧಾರಾವಾಹಿ ಕೂಡ ಅದ್ಬುತವಾಗಿ ಪ್ರಸಾರ ಆಗುತ್ತಿದ್ದು, ನೋಡುಗರನ್ನು ಮೋಡಿ ಮಾಡುತ್ತಿರುವುದು ಮಾತ್ರ ಸತ್ಯ.

More from Filmibeat

English summary
Colors Kannada is telecasting famous serials every day from now onwards
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X