Karimani: ಕರ್ಣನ ಅಪಾರ್ಥದ ಬ್ರಹ್ಮಾಸ್ತ್ರ ಸಾಹಿತ್ಯಾ ಬದುಕಿಗೆ ಬೆಂಕಿ ಇಟ್ಟಿದೆ..!
ಕಲರ್ಸ್ ಕನ್ನಡದಲ್ಲಿ 'ಕರಿಮಣಿ' ಧಾರಾವಾಹಿ ಶುರುವಾಗಿದೆ. ಈ ಧಾರಾವಾಹಿಯ ತಂಡ ಪ್ರೋಮೋದಿಂದಾನೇ ಕುತೂಹಲ ಹೆಚ್ಚು ಮಾಡಿತ್ತು. ಮದುವೆ ಮಂಟಪಕ್ಕೆ ಬಂದು ಗೊತ್ತಿಲ್ಲದೆ ಹುಡುಗಿಗೆ ಡಿವೋರ್ಸ್ ಕೊಡುವುದು ಎಂದರೆ ಸುಮ್ಮನೇನಾ? ಒಂದು ದೃಶ್ಯಕ್ಕೆ ಊಹೆಗಳು ಕಡಿಮೇನಾ?. ಪ್ರೋಮೋ ನೋಡಿದವರಿಗೆ ಸಾಹಿತ್ತಾಳೆ ಕರ್ಣನಿಗೆ ಮೋಸ ಮಾಡಿಬಿಟ್ಟಳಾ..? ಸಾಹಿತ್ಯಾಳ ಕರಿಮಣಿ ಮಾಲೀಕ ಕರ್ಣನಾ..? ಎನ್ನುವ ನೂರೆಂಟು ಪ್ರಶ್ನೆಗಳು ಉದ್ಭವವಾಗಿತ್ತು.
ಕುತೂಹಲಕಾರಿ ವಿಚಾರಗಳಿಂದಾನೇ ಸದ್ದು ಮಾಡಿದ್ದ 'ಕರಿಮಣಿ' ಧಾರಾವಾಹಿ ಶುರುವಾಗಿದೆ. ಆರಂಭದಿಂದಾನೂ ಮದುವೆಯ ಸಂಭ್ರಮ, ಕರ್ಣನ ನಡೆಯೇ ಒಂದಷ್ಟು ಆಸಕ್ತಿಯನ್ನು ಉಂಟು ಮಾಡಿದೆ. ಸಾಹಿತ್ಯಾಳ ತಂದೆಯ ಪ್ರಾಣವನ್ನು ಕಾಪಾಡಿದ್ದಿದ್ದೆ ಕರ್ಣ. ಇದೀಗ ಒಂದು ತಪ್ಪು ನಿರ್ಧಾರದಿಂದ ಸಾಹಿತ್ಯಾಳ ತಂದೆಯ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ.

ಮದುವೆ ಸಂಭ್ರಮದಲ್ಲಿ ಸಾಹಿತ್ಯಾ
ಸಾಹಿತ್ಯಾ ಮನೆಗೆ ಒಬ್ಬಳೇ ಮಗಳು. ಈಗ ಮದುವೆ ಕೂಡ ಆಗುತ್ತಿದೆ. ಸಾಹಿತ್ಯಾಳ ತಂದೆಗೆ ಇದೊಂದು ದೊಡ್ಡ ಕನಸು. ಹೀಗಾಗಿ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿದ್ದಾರೆ. ಮನೆ ಮಂದಿಯೆಲ್ಲಾ ಸೇರಿ, ನೆಂಟರಿಸ್ಟರೆಲ್ಲಾ ಸಾಹಿತ್ಯಾಳ ಮದುವೆಯನ್ನು ಸಂಭ್ರಮದಿಂದ ಮಾಡುತ್ತಿದ್ದಾರೆ. ಸಾಹಿತ್ಯಾಳ ತಂದೆಗೆ ಮೊದಲೇ ಅನಾರೋಗ್ಯವಿದೆ. ಆದರೆ ಅದನ್ನು ಮನೆಯವರ ಬಳಿ ಹೇಳಿಕೊಂಡಿಲ್ಲ. ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿರುವುದನ್ನು ಹೇಳಿಲ್ಲ. ವಿಷಯ ತಿಳಿದರೆ ಮಗಳು ಮದುವೆಯಾಗದೇ ಉಳಿದು ಬಿಡುವ ಭಯ. ಮೊದಲು ಮಗಳ ಜೀವನ ಸರಿ ಮಾಡಲೆಂದೇ ತನ್ನ ನೋವನ್ನು ಬಚ್ಚಿಟ್ಟು, ಮೇಲ್ನೋಟಕ್ಕೆ ಖುಷಿಯಾಗಿದ್ದಾರೆ ಸಾಹಿತ್ಯಾಳ ತಂದೆ.
ತಂದೆಗೆ ಮಗಳೆಂದರೆ ಪ್ರಾಣ
ಇತ್ತಿಚೆಗೆ ದೇವಸ್ಥಾನಕ್ಕೆ ಹೋದಾಗಲೂ ಸಾಹಿತ್ಯಾಳ ತಂದೆಗೆ ಎದೆ ನೋವು ಕಾಣಿಸಿಕೊಂಡಿತ್ತು. ಮಾತ್ರೆ ನುಂಗುವುದಕ್ಕೂ ಆಗದಷ್ಟು. ಆಗ ಸಹಾಯಕ್ಕೆ ಬಂದಿದ್ದು ಇದೇ ಕರ್ಣ. ಆದರೆ ಈಗ ಕರ್ಣ ಮಾಡಲು ಹೊರಟಿರುವ ಕೆಲಸದಿಂದ ಸಾಹಿತ್ಯಾಳ ತಂದೆಯ ಪ್ರಾಣಕ್ಕೆ ಕುತ್ತು ಇದೆ. ಕಾಪಾಡಿದ ಪ್ರಾಣವನ್ನು ಕರ್ಣನೇ ಕಳೆಯುವುದಕ್ಕೆ ಮುಂದೆ ಬಂದಿದ್ದಾನೆ. ಇಂಥದ್ದೊಂದು ಸುಳ್ಳು ಆರೋಪ ಹೊರಿಸಿದರೆ ಕುಟುಂಬದಲ್ಲಿ ಎಷ್ಟು ದೊಡ್ಡ ಅನಾಹುತವಾಗಬಹುದೆಂಬ ಸಣ್ಣ ಅರಿವು ಆತನಿಗೆ ಇಲ್ಲದಾಗಿದೆ.

ಕರ್ಣನಿಂದ ಬ್ರಹ್ಮಾಸ್ತ್ರ ಸಿದ್ಧ
ಸಾಹಿತ್ಯಾಳ ಬಗ್ಗೆ ತುಂಬಾ ಕಡಿಮೆ ಸಮಯದಲ್ಲಿ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದುಕೊಂಡಿದ್ದಾನೆ. ಮದುವೆಯಾಗುತ್ತಿದ್ದಾಳೆ ಎಂಬ ಮಾಹಿತಿಯೂ ಕರ್ಣನಿಗೆ ಸಿಕ್ಕಾಗಿದೆ. ಹೀಗಾಗಿಯೇ ಮದುವೆ ನಿಲ್ಲಿಸುವ, ಸೇಡು ತೀರಿಸಿಕೊಳ್ಳುವಂತ ಬ್ರಹ್ಮಾಸ್ತ್ರ ರೆಡಿ ಮಾಡುವುದಕ್ಕೆ ಹೇಳಿದ್ದಾನೆ. ಆತನ ಅಸಿಸ್ಟೆಂಟ್ ಆ ಬ್ರಹ್ಮಾಸ್ತ್ರವನ್ನು ಸಿದ್ಧ ಕೂಡ ಮಾಡಿ ಆಗಿದೆ. ಸಾಹಿತ್ಯಾ ಹಾಗೂ ಕರ್ಣನ ಮದುವೆ ಆಗಿರುವುದು ಹಾಗೂ ಡಿವೋರ್ಸ್ ಕೇಳಿರುವ ದಾಖಲೆಯನ್ನು ರೆಡಿ ಮಾಡಿಸಿದ್ದಾನೆ. ಇದು ಕರ್ಣನ ಕೈ ಸೇರಿ ಆಗಿದೆ.
ತಪ್ಪನ್ನು ಕರ್ಣನೇ ತಿದ್ದಿಕೊಳ್ಳುತ್ತಾನಾ..?
ಕರ್ಣ ಈ ಮದುವೆ ನಿಲ್ಲಿಸುವ ಮುನ್ನ ಸಾವಿರ ಸಲ ಯೋಚನೆ ಮಾಡಬೇಕಿತ್ತು. ಆದರೆ ಸ್ನೇಹಿತನ ಮೇಲಿನ ಅಭಿಮಾನ, ಪ್ರೀತಿ ಅವನನ್ನು ಕುರುಡು ಮಾಡಿದೆ. ಸ್ನೇಹಿತನಿಗೆ ಆತ ಪ್ರೀತಿಸಿದ ಹುಡುಗಿ ಮೋಸ ಮಾಡಿದ್ದಳು. ಆ ನೋವಿನಿಂದ ಸ್ನೇಹಿತ ಆಸ್ಪತ್ರೆ ಪಾಲಾಗಿದ್ದಾನೆ. ಇದನ್ನು ಸಹಿಸದ ಕರ್ಣ, ಅವಳಿಗೆ ತಕ್ಕ ಬುದ್ದಿ ಕಲಿಸುವುದಾಗಿ ಪಣ ತೊಟ್ಟಿದ್ದ. ಅವಳನ್ನು ಹುಡುಕುತ್ತಾ ಹೊರಟಾಗ, ಎದುರಿಗೆ ಬಂದ ಸ್ನೇಹಿತನ ಹುಡುಗಿಯನ್ನು ಬಿಟ್ಟ, ಆಟೋ ಹತ್ತುತ್ತಿದ್ದ ಸಾಹಿತ್ಯಾಳನ್ನು ಗಮನಿಸಿದ. ಸಾಹಿತ್ಯಾ ಕೂಡ ಮದುವೆ ವೆಷದಲ್ಲಿ ಇದ್ದ ಕಾರಣ, ಅವಳೇ ಎಂದುಕಿಂಡು ಅಪಾರ್ಥ ಮಾಡಿಕೊಂಡು, ಅವಳಿಗೆ ಪಾಠ ಕಲಿಸಲು ಹೊರಟಿದ್ದಾನೆ.


Click it and Unblock the Notifications











