Karimani: ಮಿಸ್ ಆದ್ಲು ಅಂದ್ಕೊಂಡಿದ್ದ ಸಾಹಿತ್ಯಾ, ಕರ್ಣನಿಗೇ ಸಿಕ್ಕಿದ್ಲು; ಈ ಎಪಿಸೋಡ್ಗಾಗಿ ಕಾಯ್ತಿದ್ದವರೇ ಜಾಸ್ತಿ
'ಕರಿಮಣಿ' ಧಾರಾವಾಹಿಯ ಇಂದಿನ ಎಪಿಸೋಡ್ ನೋಡುವಾಗ ಬಹುಶಃ ವೀಕ್ಷಕರ ಎದೆಯಲ್ಲಿ ನಡುಕ ಶುರುವಾಗಿತ್ತು. ಯಾಕಂದ್ರೆ ಮನಸಾರೆ ಇಷ್ಟಪಟ್ಟಿದ್ದ ಸಾಹಿತ್ಯಾ, ಕರ್ಣನಿಂದ ಮಿಸ್ ಆಗ್ತಾ ಇದಾಳೆ ಅಂತ. ಕರ್ಣನ ತಮ್ಮ ಭರತ ಬಂದು ಮದುವೆ ನಿಲ್ಲಿಸುವುದಕ್ಕೆ ಟ್ರೈ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಅವನ ಹಿಂದೆಯೇ ಮನೆಯವರೆಲ್ಲ ಬಂದರೂ ರಿಷಿ ಕಡೆಯ ರೌಡಿಗಳು ಎಲ್ಲರನ್ನ ಲಾಕ್ ಮಾಡಿದ್ರು. ಆದರೆ ಕಡೆಗೆ ವೀಕ್ಷಕರು ಬಯಸಿದ್ದೆ ಸಿಕ್ಕಿದ್ದು.
ಸಿಂಚನಾ, ಕರ್ಣನನ್ನ ಲವ್ ಮಾಡ್ತಾ ಇದ್ಲು. ಸಿಂಚು ತಾಯಿಗೆ ಅಣ್ಣನ ಮನೆಯ ಆಸ್ತಿ ಮೇಲೆ ಮೋಹ ಜಾಸ್ತಿ. ಹೀಗಾಗಿ ಮಗಳನ್ನ ಕರ್ಣನಿಗೆ ಕೊಟ್ಟು ಮದುವೆ ಮಾಡಬೇಕೆಂದು ಏನೇನೋ ಪ್ಲ್ಯಾನ್ ಮಾಡಿದಳು. ಸಿಂಚು ಕೂಡ ಕರ್ಣ ಹಾಗೂ ಸಾಹಿತ್ಯ ನಡುವೆ ದ್ವೇಷ ಬರುವಂತೆ ಮಾಡಿದಳು. ಆದರೆ ತಾಳಿ ಕಟ್ಟಿಸಿಕೊಳ್ಳುವ ಸಮಯದಲ್ಲಿ ಸಿಂಚು ನಡೆದದ್ದೆಲ್ಲ ಹೇಳಿ ಕ್ಷಮೆಯನ್ನು ಕೇಳಿದಳು.

ಸಾಹಿತ್ಯಾಳನ್ನು ಪಡೆಯುವ ಹಂಬಲ
ಕರ್ಣನ ಎಲ್ಲಾ ವಿಚಾರವನ್ನು ತಿಳಿದಿದ್ದ ರಿಷಿ, ಬ್ಲಾಕ್ ರೋಸ್ ಇಟ್ಟು ಆಟವಾಡುತ್ತಿದ್ದ. ಅವನ ಗುರಿ ಸಾಹಿತ್ಯಾಳನ್ನ ಪಡೆದು, ಕರ್ಣನನ್ನ ಸೋಲಿಸುವುದೇ ಆಗಿತ್ತು. ಅದಕ್ಕೆ ಬ್ರಹ್ಮಾಂಡವನ್ನೇ ನಿರ್ಮಾಣ ಮಾಡಿದ್ದ. ಮದುವೆ ಮನೆಯಲ್ಲಿ ಮುಖ ತೋರಿಸದೆ ವರನಾಗಿ ಕೂತಿದ್ದ. ಆದ್ರೆ ಬ್ಲಾಕ್ ರೋಸ್ ರಿಷಿಯ ಆಸೆ ಈಡೇರಲೇ ಇಲ್ಲ.
ರಿಷಿ ಜಾಗದಲ್ಲಿ ಕೂತ ಕರ್ಣ
ವೀಕ್ಷಕರಿಗೂ ಒಂದು ಕ್ಷಣ ಶಾಕ್ ಆಗೋಗಿತ್ತು. ಸಾಹಿತ್ಯ ಕೊರಳಿಗೆ ರಿಷಿ ತಾಳಿ ಕಟ್ಟಿಯೇ ಬಿಟ್ಟ ಎಂದುಕೊಂಡರು. ಯಾಕಂದ್ರೆ ಎಲ್ಲರನ್ನು ಹೊಡೆದುರುಳಿಸಿ, ಸಾಹಿತ್ಯಾಳನ್ನ ಕರ್ಣ ಕಾಪಾಡುತ್ತಾನೆ ಎಂದುಕೊಂಡಿದ್ದರು. ಅದಗಯಾವುದು ಆಗಲೇ ಇಲ್ಲ. ಹಸೆಮಣೆ ಮೇಲೆ ಕೂತಿದ್ದು ರಿಷಿ ಅಂತಾನೇ ಭಾವಿಸಿದ್ದ ವೀಕ್ಷಕರಿಗೆ ಭರತನ ನಗುವಿನಿಂದ ಕೊಂಚ ಸಮಾಧಾನವಾಯ್ತು. ತಾಳಿ ಕಟ್ಟಿದ್ದು ಕರ್ಣನೇ ಎಂಬುದು ಅರ್ಥವಾಯ್ತು.
ಮೌನಿಯಾಗಿ ನಿಂತ ಸಾಹಿತ್ಯಾ
ಸಾಹಿತ್ಯಾಗೆ ಎಲ್ಲವೂ ಗೊಂದಲಮಯವಾಗಿತ್ತು. ಯಾಕಂದ್ರೆ ಕರ್ಣನ ಪ್ರೀತಿ, ಸಿಂಚನಾಳ ಲೈಫ್, ಮನೆಯವರ ಹಿಂಸೆ ಎಲ್ಕದರಿಂದಾನೂ ನೊಂದಿದ್ದ ಸಾಹಿತ್ಯಾಗೆ ಕರ್ಣನೇ ತಾಳಿ ಕಟ್ಟುದ್ದರು ಏನು ಅನ್ನಿಸುತ್ತಿಲ್ಲ. ಯಾವುದೇ ರಿಯಾಕ್ಷನ್ ಇಲ್ಲದೆ ಮೌನಿಯಾಗಿ ನಿಂತು ಬಿಟ್ಟಿದ್ದಾಳೆ. ಆದರೆ ರಿಷಿ ಕಡೆಯ ವಿಲನ್ ಸಾಹಿತ್ಯಾನ ಕತ್ತರಿಸು ಹಾಕ್ರೋ ಅಂದ್ರೆ ಕರ್ಣ ಸುಮ್ಮನೆ ಬಿಡ್ಥಾನಾ..? ಅಂತ ಕೋಟೆಯನ್ನೇ ಉರುಳಿಸಿ, ರಿಷಿಗೆ ರಕ್ತ ಬರುವಂತೆ ಹೊಡೆದಿರೋನಿಗೆ ಸಾಹಿತ್ಯಾನ ಕಾಪಾಡಿಕೊಳ್ಳೋದಕ್ಜೆ ಬರಲ್ವಾ. ಈಗ ಸಾಹಿತ್ಯಾ ನನ್ನ ಹೆಂಡತಿ. ಬನ್ರೋ ನೋಡೋಣಾ ಅವಳನ್ನ ಮುಟ್ಟಿ ಎಂದು ಕರ್ಣ ಸವಾಲು ಹಾಕಿದ್ದಾನೆ.
ಇದು ಆಕ್ಚುಲಿ ಬೇಕಿದ್ದ ಎಪಿಸೋಡ್
ಆಕ್ಚುಲಿ ಈ ಎಪಿಸೋಡಿಗಾಗಿ ಕರಿಮಣಿ ವೀಕ್ಷಕರು ತುಂಬಾನೇ ಕಾಯುತ್ತಿದ್ದರು. ಕರ್ಣ ಹಾಗೂ ಸಾಹಿತ್ಯಾ ಕ್ಯೂಟ್ ಕಿತ್ತಾಟ, ಇಬ್ವರ ನಡುವಿನ ಬಾಂಧವ್ಯ ಈ ಎಲ್ಲವೂ ವೀಕ್ಷಕರಿಗೂ ಇಷ್ಟವಾಗಿತ್ತು. ಧಾರಾವಾಹಿಯ ಆರಂಭದಲ್ಲಿಯೇ ಕರ್ಣ ಡಿವೋರ್ಸ್ ಪೇಪರ್ಹಿಡಿದು ಬಂದಿದ್ದ. ಸಾಹಿತ್ಯಾ, ತನ್‌ನ ಸ್ನೇಹಿತನಿಗೆ ಮೋಸ ಮಾಡಿದ್ದಾಳೆಂದು ಅಪಾರ್ಥ ಮಾಡಿಕೊಂಡು ಸಾಹಿತ್ಯಾಳ ಮದುವೆಯನ್ನೇ ನಿಲ್ಲಿಸಿದ್ದ. ಅಂದು ತಾನು ಮಾಡಿದ ತಪ್ಪನ್ನ ನಾನೇ ಸರಿ ಮಾಡ್ತೀನಿ, ಸಾಹಿತ್ಯಾಳಿಗೆ ಹುಡುಗನನ್ನ ಹುಡುಜಿ ಮದುವೆ ಮಾಡ್ತೀನಿ ಎಂದವನೇ ಮದುವೆಯಾಗಿದ್ದಾನೆ.


Click it and Unblock the Notifications











