ಕೊನೆಗೊಳ್ಳುತ್ತಿದೆ 'ಕೆಂಡಸಂಪಿಗೆ' ಧಾರಾವಾಹಿ; 'ಲವ್ ಯೂ' ಎಂದ ನಟಿ ಅಮೃತಾ ರಾಮಮೂರ್ತಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಕೆಂಡಸಂಪಿಗೆ' ಧಾರಾವಾಹಿಯು ಮುಕ್ತಾಯಗೊಳ್ಳುತ್ತಿದೆ. ಈ ವಿಚಾರವನ್ನು ಸ್ವತಃ ಅಮೃತಾ ರಾಮಮೂರ್ತಿ ಅವರೇ ಹೇಳಿಕೊಂಡಿದ್ದಾರೆ. ಹೌದು, 'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಖಳನಾಯಕಿ ಸಾಧನಾ ಆಗಿ ಅಭಿನಯಿಸುತ್ತಿರುವ ಅಮೃತಾ ರಾಮಮೂರ್ತಿ ಅವರು ಧಾರಾವಾಹಿ ಮುಕ್ತಾಯವಾಗುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಕೆಂಡಸಂಪಿಗೆ' ಕೊನೆಯ ಹಂತದ ಚಿತ್ರೀಕರಣದ ವಿಡಿಯೋವೊಂದನ್ನು ಅಮೃತಾ ರಾಮಮೂರ್ತಿ ಹಂಚಿಕೊಂಡಿದ್ದಾರೆ. ಏನಂದ್ರೆ 'ಕೆಂಡಸಂಪಿಗೆ' ಧಾರಾವಾಹಿಯ ಇವರ ಓಪನಿಂಗ್ ಶಾಟ್ ಬಿಎಂಡಬ್ಲ್ಯುನಲ್ಲಿ ಆಗಿತ್ತು. ಈಗ ಅಂತ್ಯ ಹೇಗೆ ಆಗುತ್ತೆ ಅಂಥ ನೀವೇ ನೋಡಿ. ಕೊನೆಯ ಸಂಚಿಕೆಗಳನ್ನು ಮರೆಯದೇ ನೋಡಿ. ಲವ್ ಯೂ ಆಲ್" ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೇ ವಿಡಿಯೋದ ಕೆಳಗೆ "ಕೆಂಡಸಂಪಿಗೆ ಕೊನೆಯ ಹಂತದಲ್ಲಿ. ಐ ವಿಲ್ ಮಿಸ್ ಯೂ ಸಾಧನಾ" ಎಂದು ಆಕೆ ಬರೆದುಕೊಂಡಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ಅಭಿನಯಿಸಿದ್ದ ಅಮೃತಾ ರಾಮಮೂರ್ತಿ ಮುಂದೆ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದರು. ಮುಂದೆ ಮಗಳು ಧೃತಿಯ ಸಲುವಾಗಿ ನಟನೆಯಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದ ಅಮೃತಾ ರಾಮಮೂರ್ತಿ 'ಕೆಂಡಸಂಪಿಗೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದರು. ಇದೇ ಮೊದಲ ಬಾರಿಗೆ ಸಂಪೂರ್ಣ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮೃತಾ ಆ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದರು.
ಬಾಲ್ಯದಿಂದಲೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಅಮೃತಾ ಕಿರುತೆರೆಗೆ ಕಾಲಿಟ್ಟಿದ್ದು ಲಕ್ಷ್ಮಿಯಾಗಿ. 'ಸರಸ್ವತಿ - ಲಕ್ಷ್ಮಿ ಪ್ರಿಯೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಈಕೆ ನಂತರ 'ಮೇಘ ಮಯೂರಿ' ಧಾರಾವಾಹಿಯಲ್ಲಿ ಮಯೂರಿಯಾಗಿ ಮಿಂಚಿದರು.

ನಂತರ 'ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ', 'ಕುಲವಧು' ಹಾಗೂ ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಈಕೆ ನಟಿಸಿದ್ದರು. ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿರುವ ಬೆಡಗಿ ಈಕೆ. ತೆಲುಗಿನ 'ಪುಟ್ಟಿಂಚಿ ಪಟ್ಟುಚೀರ', 'ಗೌರವಂ' ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ 'ಸೈಕೋ ಶಂಕರ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ.
ನಟನೆಯ ಹೊರತಾಗಿ ಅಮೃತಾ ನೃತ್ಯಗಾರ್ತಿಯಾಗಿದ್ದರು ಎನ್ನುವ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅಂದ ಹಾಗೇ ಅಮೃತಾ ಮೊದಲ ಬಾರಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದಾಗ ಕೇವಲ ಒಂಭತ್ತು ವರ್ಷ. ಶಾಸ್ತ್ರೋಕ್ತವಾಗಿ ಭರತನಾಟ್ಯ ಕಲೆಯನ್ನು ಈಕೆ ಕಲಿತಿದ್ದಾರೆ. ಇದರ ಜೊತೆಗೆ ಪಾಶ್ಚಾತ್ಯ, ಕಂಟೆಪರರಿ, ಹಿಪ್ ಹಾಪ್ ನೃತ್ಯಗಳನ್ನು ಕಲಿತಿದ್ದಾರೆ.


Click it and Unblock the Notifications











