Kendasampige: ಸದ್ದಿಲ್ಲದೆ ಕಾರ್ಯ ಸಾಧಿಸಿದ ಸಾಧನಾ ಸಿಸಿಟಿವಿ ಸಾಕ್ಷ್ಯದಿಂದ ಸಿಕ್ಕಿ‌ ಬೀಳ್ತಾಳಾ..?

By ಶೃತಿ ಹರೀಶ್ ಗೌಡ

ಕೆಂಡಸಂಪಿಗೆ ಧಾರಾವಾಹಿ ಮಹತ್ವದ ತಿರುವನ್ನು ಪಡೆದುಕೊಂಡು ಸಾಗುತ್ತಿದೆ. ಈಗ ಸಾಧನ ಸಿಕ್ಕಿಬಿಳ್ಳುವ ಸಮಯ ಹತ್ತಿರವಾಗಿದೆ. ಮನೆಯಲ್ಲಿ ಎಲ್ಲರೂ ಕಳ್ಳ ಯಾರೆಂದು ತಲೆ ಕೆಡಿಸಿಕೊಂಡಿದ್ದಾರೆ.‌ಸುಮನಾ ಸಹ ಬಂದಿದ್ದ ಕಳ್ಳ ಯಾರು ನಾನು ಅವನನ್ನು ಎಲ್ಲೋ ನೋಡಿದ್ದೇನೆ ಎಂದು ಅಂದುಕೊಂಡಿದ್ದಾಳೆ. ತೀರ್ಥ ಸಹ ತನ್ನ ಹೆಂಡತಿಯ ಹೊಟ್ಟೆಗೆ ಎಲ್ಲಿ ಪೆಟ್ಟಾಯಿತು ಎಂದು ನೋವು ಪಡುತ್ತಿದ್ದಾನೆ. ಆದರೆ ಸಾಧನ ಮಾತ್ರ ಸದ್ದಿಲ್ಲದೇ ತನ್ನ ಕಾರ್ಯವನ್ನ ಸಾಧಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾಳೆ. ಆದರೆ ತನ್ನ ಬುಡಕ್ಕೆ ಅದು ಬಂದು ಬೀಳುತ್ತದೆ ಎಂಬುದನ್ನ ಅವಳು ಯೋಚನೆ ಮಾಡಿರಲೇ ಇಲ್ಲ ಅಂತಹ ಪೆಟ್ಟು ಕೊಡಲು ಸುಮನಾ ಸಿದ್ದರಾಗಿದ್ದಾಳೆ.

ಇನ್ನು ಮನೆಯಲ್ಲಿ ಎಲ್ಲರೂ ಸುಮನಾ ಹಾಗೂ ತೀರ್ಥ ಇಬ್ಬರೂ ಕೂಡ ಚೆನ್ನಾಗಿದ್ದಾರೆ ಎಂದು ತಿಳಿದುಕೊಂಡಿದ್ದರು. ಕೊನೆಗೆ ತೀರ್ಥ ಏನೋ ಒಂದು ಪ್ಲಾನ್ ಮಾಡಿ ಇಲ್ಲ ನಾವು ಚೆನ್ನಾಗಿಲ್ಲ ಎಂದು ಹೇಳಿದ್ದನು. ಇದನ್ನೇ ಸತ್ಯ ಎಂದು ಎಲ್ಲರೂ ನಂಬಿಕೊಂಡಿದ್ದಾರೆ. ಈ ನಡುವೆ ಸುಮನಾಗೆ ಖುಷಿ ಕೊಡುವ ಕೆಲಸವನ್ನ ತೀರ್ಥ ಮಾಡಿದ್ದಾನೆ. ಸುಮನಾ ತಮ್ಮ ರಾಜೇಶನ ಫೋಟೋವನ್ನ ತಮ್ಮ ರೂಮಿನಲ್ಲಿ ಹಾಕುವ ಮೂಲಕ ಪ್ರತಿದಿನವೂ ರಾಜೇಶ್ ನೆನಪು ಆಗುವಂತೆ ಮಾಡಿದ್ದಾನೆ. ಇದರಿಂದಾಗಿ ಸುಮನಾ ತೀರ್ಥಗೆ ಥ್ಯಾಂಕ್ಸ್ ಹೇಳಿದ್ದಾಳೆ. ನೀವು ಇಂತಹ ಗಿಫ್ಟ್ ಅನ್ನು ನನಗೆ ಕೊಡುತ್ತೀರಾ ಎಂದು ಕೊಂಡಿರಲಿಲ್ಲ. ನನ್ನ ತಮ್ಮನ ಫೋಟೋವನ್ನ ಹಾಕಿ ನನ್ನನ್ನು ಖುಷಿಪಡಿಸಿದ್ದೀರಾ ಎಂದು ಸುಮನಾ ಹೇಳಿದ್ದಾಳೆ.

colors-kannada-kendasampige

ಸುಮನಾ ಹಾಗೂ ತೀರ್ಥ ಇಬ್ಬರೂ ಕೂಡ ಸಂತೋಷದಿಂದ ಇರುವ ಸಮಯದಲ್ಲಿಯೇ ಎಲ್ಲವನ್ನು ಹಾಳು ಮಾಡಲು ಸಾಧನ ಕಾದುಕೊಂಡು ನಿಂತಿದ್ದಳು. ಇವರು ಇಬ್ಬರು ನೆಮ್ಮದಿಯಾಗಿ ಇರಲು ಬಿಟ್ಟರೆ ನನಗೆ ಉಳಿಗಾಲವಿಲ್ಲ ಎಂದುಕೊಂಡು ರಾಜೇಶನ ಕೊಲೆಯನ್ನೇ ತನ್ನ ಸ್ವಾರ್ಥ ಲಾಭಕ್ಕಾಗಿ ಬಳಸಿಕೊಂಡಿದ್ದಾಳೆ.‌ಇನ್ನೂ ಸುಳಿವು ಸಿಕ್ಕೇಬಿಡ್ತು ಎನ್ನುವಾಗ ಸುಮನಾಗೆ ನೋವಿನ ಮೇಲೆ ನೋವು ಕೊಟ್ಟು ಕಣ್ಣೀರು ಹಾಕುವಂತೆ ಮಾಡಿದ್ದಾಳೆ. ಕೊನೆಗೆ ಕಳ್ಳನ ನಾಟಕವನ್ನು ಆಡಿಸಿ ಸುಮನಾಳನ್ನು ಜೋರಾಗಿ ತಳ್ಳಿ ಹೇಗೋ ಬಚಾವ್ ಆಗಿದ್ದಳು.‌ ಆದರೆ ಈಗ ಎಲ್ಲದಕ್ಕೂ ಕೂಡ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ.

ಬಯಲಾಗಿ ಬಿಡುತ್ತಾ ಸಾಧನ ಸಂಚು..?

ಎಲ್ಲರೂ ಕಳ್ಳನ ಬಗ್ಗೆ ಮಾತನಾಡುತ್ತಿರುವಾಗ ಸುಮನಾಳಿಗೆ ಒಂದು ಐಡಿಯಾ ಬಂದಿದೆ. ಆ ಕಳ್ಳ ಯಾರು ಎಂಬುದನ್ನು ತಿಳಿದುಕೊಳ್ಳಲೇಬೇಕು ಎಂದು ಎಲ್ಲರೂ ಮಾತನಾಡುವಾಗ ಸುಮನಾ ಅಲ್ಲಿಗೆ ಬಂದಿದ್ದು ನನ್ನನ್ನ ಕಳ್ಳ ತಳ್ಳಿದಾಗ ನಾನು ಸಿಸಿ ಕ್ಯಾಮೆರಾದ ಕೆಳಗಡೆ ನಿಂತಿದೆ ನಮಗೆ ಯಾವುದಾದರೂ ಒಂದು ಮಾಹಿತಿ ಸಿಗಬಹುದು ಎಂದು ಸುಮನ ಎಲ್ಲರ ಗಮನವನ್ನು ಸೆಳೆದಿದ್ದಾಳೆ. ಎಲ್ಲರೂ ಸುಮನ ಹೇಳುತ್ತಿರುವುದು ಸರಿಯಾಗಿದೆ ಎಂದುಕೊಂಡು ಮೇಲೆ ಎದ್ದಿದ್ದಾರೆ ಸಾಧನಾಗೆ ಶುರುವಾಗಿದೆ. ಏನಾದರೂ ಸಿಸಿ ಕ್ಯಾಮೆರಾದ ಫೋಟೋ ಚೆಕ್ ಮಾಡಿದರೆ ನಾನು ಸಿಕ್ಕಿ ಬೀಳೋದು ಗ್ಯಾರಂಟಿ ಎಂಬುವುದು ಖಾತರಿಯಾಗಿದೆ.

colors-kannada-kendasampige

ಹೇಗಾದರೂ ಮಾಡಿ ಸಿಸಿಟಿವಿ ಫುಟ್ ಹೆಚ್ ಡಿಲೀಟ್ ಮಾಡಬೇಕು ಎಂದುಕೊಂಡಿದ್ದಾಳೆ. ನಾನಂದುಕೊಂಡಂತೆ ಸುಮ್ಮನಾ ಇಲ್ಲ ನನಗಿಂತ ಒಂದು ಹೆಜ್ಜೆ ಮುಂದೆ ಯೋಚನೆ ಮಾಡುತ್ತಾಳೆ ನಾನು ಯಾಮಾರಿ ಬಿಟ್ಟೆ ಎಂದು ಸಾಧನ ಟೆನ್ಶನ್ ಮಾಡಿಕೊಂಡಿದ್ದಾಳೆ. ಎಲ್ಲರೂ ಕೂಡ ಸಿಸಿಟಿವಿ ಫೂಟೇಜ್ ನೋಡಲು ಹೋಗಿದ್ದಾರೆ. ಇದೇ ವೇಳೆ ಸಾಧನ ಎಲ್ಲರ ಅಟೆಂಷನ್ ನನ್ನ ತನ್ನ ಕಡೆಗೆ ಸೆಳೆದುಕೊಳ್ಳಬೇಕು ಎಂದುಕೊಂಡಿದ್ದಾಳೆ.

ಅತ್ತಿಗೆಯನ್ನು ಪ್ರಶ್ನೆ ಮಾಡಿದ ಸುಭಾಷ್, ತೀರ್ಥ ಕೈ ಸೇರಿದ ಹಾರ್ಡ್ ಡಿಸ್ಕ್

ಸಾಧನಾ ಕಳ್ಳನ ಜೊತೆ ಮಾತನಾಡುತ್ತಿರುವ ಹಾವಭಾವವನ್ನು ಗಮನಿಸಿದ ಸುಭಾಷ್‌ ಅತ್ತಿಗೆ ನೀವು ಕಳ್ಳನ ಬಳಿ ಆರಾಮಾಗಿ ಮಾತನಾಡುತ್ತಾ ಇದ್ದೀರಾ ಎಂದು ಕೇಳಿದ್ದಾನೆ. ಈ ಬೇಳೆ ಸಾಧನಾ ನಾನು ಕಳ್ಳ ನನ್ನ ಬೈಯುತ್ತಿದ್ದೆ ನೀನು ಎಂಎಲ್ಎ ಮನೆಗೆ ನುಗ್ಗಿರುವುದು ನಿನ್ನ ಜೀವಕ್ಕೆ ಸಂಚುಕಾರ ಬರುತ್ತದೆ ಎಂದು ಹೇಳುತ್ತಿದ್ದೆ ಎಂದಿದ್ದಾನೆ. ಅಷ್ಟರಲ್ಲಿ ಕರೆಂಟ್ ಹೋಗಿದ್ದು ಸಿಸಿ ಟಿವಿ ಫೂಟೇಜ್ ಕಾಣಿಸದೆ ಇರುವುದರಿಂದ ತೀರ್ಥ ಹಾರ್ಡ್‌ಡಿಸ್ಕನ್ನು ವಶಕ್ಕೆ ಪಡೆದುಕೊಂಡಿದ್ದಾನೆ. ತೀರ್ಥ ಪಡೆದುಕೊಂಡಿರುವ ಹಾರ್ಡ್ ಡಿಸ್ಕ್ ಮೇಲೆ ಸಾಧನಾ ಕಣ್ಣು ಬಿದ್ದಿದ್ದು, ಅದನ್ನು ಹೇಗಾದರೂ ಮಾಡಿ ವಶಕ್ಕೆ ಪಡೆದುಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದಾಳೆ. ಸಾಧನಾಳ ಸಂಚು ಇಲ್ಲೂ ಕೂಡ ವರ್ಕ್ ಔಟ್ ಆಗಿದೆ.

More from Filmibeat

English summary
Kendasampige serial 10th November details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X