Kendasampige: ಕೊನೆಗೂ ಸುಮನಾ ಕುತ್ತಿಗೆಗೆ ಬಿತ್ತು ತಾಳಿ: ಹೆಂಡತಿ ಎಂದು ಮನಸಿನಿಂದ ಒಪ್ಪಿಕೊಂಡ ತೀರ್ಥ!

By ಶೃತಿ ಹರೀಶ್ ಗೌಡ

ಕೆಂಡಸಂಪಿಗೆ ಧಾರಾವಾಹಿ ವೀಕ್ಷಕರಿಗೆ ಬಹುದಿನದಿಂದ ಕಾಯುತ್ತಿದ್ದ ಕುತೂಹಲಕ್ಕೆ ಕೊನೆಗೂ ಬ್ರೇಕ್ ಸಿಕ್ಕಿದೆ. ಅಡೆ-ತಡೆಗಳನ್ನ ದಾಟಿ ತೀರ್ಥ ಸುಮನಾ ಕತ್ತಿಗೆ ತಾಳಿ ಕಟ್ಟಿದ್ದಾನೆ. ಕೆಂಡಸಂಪಿಗೆ ಧಾರಾವಾಹಿಯಲ್ಲಿ ಗೌರಿ ಗಣೇಶ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ಇದೆ ಒಳ್ಳೆಯ ದಿನ ಅಂದುಕೊಂಡು ತೀರ್ಥನ ಕೈಲಿ ಸುಮನ ಕತ್ತಿಗೆ ತಾಳಿ ಹಾಕಿಸುವ ಶಾಸ್ತ್ರವನ್ನ ಮಾಡಲಾಗುತ್ತಿತ್ತು. ಶಾಸ್ತ್ರವನ್ನು ಹೇಗಾದರೂ ಮಾಡಿ ತಡೆಯಬೇಕು ಎಂದು ಜಾನು ಹಾಗೂ ಅವರ ಅತ್ತಿಗೆ ಸಾಧನ ಇಬ್ಬರು ಸಿಕ್ಕಾಪಟ್ಟೆ ಪರಿಶ್ರಮ ಹಾಕಿ ಎಲ್ಲವನ್ನ ಹಾಳು ಮಾಡಬೇಕು ಎಂದುಕೊಂಡಿದ್ದರು. ಆದರೆ ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು ಎಂಬಂತೆ ಆಗಿದೆ ಸಾಧನ ಪರಿಸ್ಥಿತಿ.

ಎಲ್ಲವನ್ನ ಸಾಂಗವಾಗಿ ನೆರವೇರಿಸಿದ ಮೇಲೆ ಅರ್ಚಕರು ಮಂಗಳ ಸೂತ್ರವನ್ನು ಕೈಗೆ ತೆಗೆದುಕೊಂಡಿದ್ದಾರೆ. ಈ ವೇಳೆ ತಾಳಿಯ ಹಿಂಭಾಗ ಕಟ್ಟಾಗಿದೆ ಪದ್ಮಾಗೆ ಗಾಬರಿಯಾಗಿದೆ. ಯಾಕೆಂದರೆ ತನ್ನ ರೂಮಿನಲ್ಲಿ ಇದ್ದ ತಾಳಿ ಯಾವ ರೀತಿ ಕಟ್ಟಾಯಿತು ಎಂದು ಬೇಸರ ಮಾಡಿಕೊಂಡಿದ್ದಾಳೆ. ಕೊನೆಗೆ ತೀರ್ಥ ಹಾಗೂ ಸುಮನ ಚೆನ್ನಾಗಿ ಇರಬಾರದು ಎಂದು ಯಾರೋ ಸಂಚು ಮಾಡಿದ್ದಾರೆ ಎಂದು ಹೇಳಿದ್ದಾಳೆ. ಇದಕ್ಕೆ ಕೇಶವ ಪ್ರಸಾದ್ ಒಪ್ಪದೇ ಸುಮ್ಮನೆ ಇರು ಎಂದಿದ್ದಾರೆ. ಪದ್ಮ ಹೀಗಾಗಿ ಹೋಯಿತಲ್ಲ ಎಂದು ಚಿಂತೆ ಮಾಡುತ್ತಾ ಇರುವಾಗ ಕೇಶವ ಪ್ರಸಾದ್ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

colors-kannada-kendasampige-serial

ತಮ್ಮ ರೂಂಗೆ ಹೋದವರೇ ಅಮ್ಮನ ತಾಳಿಯನ್ನ ತಂದು ತೀರ್ಥನ ಕೈಗೆ ಇಟ್ಟಿದ್ದಾರೆ. ಇದು ನನ್ನ ಅಮ್ಮನ ತಾಳಿ ನೀನು ಇದನ್ನೇ ಸುಮನ ಕತ್ತಿಗೆ ಕಟ್ಟು ನನ್ನ ಅಮ್ಮನ ನೆನಪು ಈ ಮನೆಯಲ್ಲಿಲ್ಲ ಮೂಡಲಿ ಎಂದು ಮಗನಿಗೆ ಹೇಳಿದ್ದಾರೆ. ಸಾಧನಾ ಹಾಗೂ ಜಾನು ಇದನ್ನ ಕೇಶವಪ್ರಸಾದ್ ರಿಂದ ನಿರೀಕ್ಷೆ ಮಾಡಿರಲಿಲ್ಲ ಒಮ್ಮೆಲೇ ಜಾನು ಹಾಗೂ ಸಾಧನಾಗೆ ಶಾಕ್ ಆಗಿದೆ. ಸುಮನಾ ತಾನು ಇಷ್ಟು ದೊಡ್ಡ ಜವಾಬ್ದಾರಿಯನ್ನು ಹೊರಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಸುಮನಾ ತಂದೆಗೂ ಸಹ ಬಹಳಷ್ಟು ಸಂತೋಷವಾಗಿದೆ. ನನ್ನ ಮಗಳು ಒಳ್ಳೆಯ ಮನೆಗೆ ಸೇರಿದ್ದಾಳೆ ಎಂದು ಖುಷಿಯಾಗಿ ಇದ್ದಾರೆ.

ಕೊನೆಗೂ ತಾಳಿ ಕಟ್ಟಿದ ತೀರ್ಥ, ಹೆಂಡತಿ ಎಂದು ಒಪ್ಪಿಕೊಂಡ

ಕೊನೆಗೂ ತೀರ್ಥ ತನ್ನ ಮನಸ್ಸಿನಲ್ಲಿ ಇದ್ದ ಪ್ರತಿಯೊಂದು ಭಾವನೆಗಳನ್ನು ಹೊರಗೆ ಹಾಕಿದ್ದಾನೆ. ಸಂಪೂರ್ಣವಾಗಿ ಸುಮನಾಳನ್ನ ತನ್ನ ಹೆಂಡತಿ ಎಂದು ಒಪ್ಪಿಕೊಂಡಿದ್ದಾನೆ. ಏಳೇಳು ಜನುಮಕ್ಕು ಸಹ ನೀನೇ ನನ್ನ ಹೆಂಡತಿಯಾಗಿ ಬಾ ಎಂದು ಸುಮನಾಳನ್ನ ತಬ್ಬಿಕೊಂಡಿದ್ದಾನೆ. ಬಹಳಷ್ಟು ಖುಷಿಯಾಗಿ ಇದ್ದಾಳೆ ಇನ್ನೂ ಪದ್ಮ ದೇವರ ಬಳಿ ಕೈಮುಗಿದಿದ್ದಾಳೆ. ನನ್ನ ಸೊಸೆ ಕತ್ತಿಗೆ ಹೇಗೋ ಚಿನ್ನದ ತಾಳಿ ಬಿತ್ತು ಎಂದು ಸಂಭ್ರಮಪಟ್ಟಿದ್ದಾಳೆ.

colors-kannada-kendasampige-serial

ಸುಮನಾ ನಮ್ಮ ಮನೆಗೆ ಬಂದ ಮೇಲೆ ನನಗೆ ರಾಜಕೀಯ ಹಾಗೂ ಕುಟುಂಬದ ಅರಿವನ್ನ ಮೂಡಿಸಿದ್ದಾಳೆ. ನಾನು ಸುಮನಾಳನ್ನ ಬಿಡಬೇಕು ಎಂದು ಯೋಚನೆ ಮಾಡಿದ್ದೆ ಅದೆಲ್ಲವನ್ನು ಮನಸ್ಸಿನಿಂದ ತೆಗೆದುಹಾಕಿದ್ದು ಸುಮನಾಳನ್ನ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದೇನೆ ಎಂದು ತೀರ್ಥ ತಿಳಿಸಿದ್ದಾನೆ. ತೀರ್ಥನ ಮಾತನ್ನು ಕೇಳಿ ಎಲ್ಲರೂ ಸಹ ಖುಷಿಯಾಗಿ ಇದ್ದಾರೆ ಸಾಧನಾ ಹಾಗೂ ಜಾನು ಮಾತ್ರ ತೀರ್ಥನಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ.

ಒಂದೇ ಕಥೆ ಅಂದ‌ ಪ್ರೇಕ್ಷಕರು, ಲಕ್ಷ್ಮೀ ಬಾರಮ್ಮದಲ್ಲೂ ಸೇಮ್ ಕಥೆ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಬಂದು ತಾಳಿಯನ್ನ ಕತ್ತುಕೊಂಡು ಹೋದಾಗ ಲಕ್ಷ್ಮೀಗೆ ಕಾವೇರಿಯ ಅತ್ತೆಯ ತಾಳಿಯನ್ನು ಸುಪ್ರೀತಾ ತಂದುಕೊಟ್ಟು ಹಾಕಿಸಿದಳು. ಅದೇ ರೀತಿ ಇಲ್ಲಿ ಕೇಶವ ಪ್ರಸಾದ್ ತನ್ನ ಅಮ್ಮನ ತಾಳಿಯನ್ನ ಸುಮನ ಕುತ್ತಿಗೆಗೆ ಹಾಕಿಸಿದರು. ಯಾಕೆ ಒಂದೇ ರೀತಿಯಲ್ಲಿ ದೃಶ್ಯಗಳನ್ನ ಮಾಡುತ್ತಿದ್ದೀರಾ ಎಂದು ಪ್ರೇಕ್ಷಕರು ಕೇಳುತ್ತಾ ಇದ್ದಾರೆ. ವಿಭಿನ್ನವಾಗಿ ಎನಾದರೂ ಒಂದು ಮಾಡಿ ಒಂದೇ ರೀತಿ ಸಂಭಾಷಣೆ ಬರುವುದು ಚನ್ನಾಗಿ ಇರೋದಿಲ್ಲ ಎಂದು ಹೇಳಿದ್ದಾರೆ.

More from Filmibeat

English summary
Colors Kannada kendasampige serial September 30th episode details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X