Lakshana: ಲಕ್ಷಣ ಧಾರಾವಾಹಿ ಮುಕ್ತಾಯ; ಡೆವಿಲ್ ಸತ್ಯ ಅನಾವರಣದೊಂದಿಗೆ ಅಂತ್ಯ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಆಗಸ್ಟ್ 9, 2021 ರಲ್ಲಿ ಲಕ್ಷ್ಮಣ ಧಾರಾವಾಹಿ ಪ್ರಸಾರವನ್ನು ಆರಂಭಿಸಿತು. ಧಾರಾವಾಹಿಯಲ್ಲಿ ಕಲಾವಿದರಾದ ಜಗನ್ನಾಥ್, ವಿಜಯಲಕ್ಷ್ಮಿ, ಸುಕೃತಾ ನಾಗ್, ಸುಧಾ ಬೆಳವಾಡಿ, ವೈಷ್ಣವಿಗೌಡ, ಪ್ರಿಯಾ ಶತಶರ್ಮನ್ ಕಾಣಿಸಿಕೊಂಡಿದ್ದರು. ನಕ್ಷತ್ರ ಹಾಗೂ ಶ್ವೇತಾ ಇಬ್ಬರೂ ಸಹ ಬೇರೆ ಬೇರೆಯಾಗಿ ಬೆಳೆಯುತ್ತಾರೆ. ಇಲ್ಲಿ ನಕ್ಷತ್ರ ಶ್ರೀಮಂತರ ಮನೆಯ ಹುಡುಗಿಯಾಗಿದ್ದು, ಬಡವರ ಮನೆಯಲ್ಲಿ ಬೆಳೆಯುತ್ತಾಳೆ. ಶ್ವೇತಾ ಬಡವರ ಮನೆಯಲ್ಲಿ ಹುಟ್ಟಿದ್ದು ಶ್ರೀಮಂತರ ಮನೆಯಲ್ಲಿ ಬೆಳೆಯುತ್ತಾಳೆ.
ಭೂಪತಿಯ ಮದುವೆ ಸಮಯದಲ್ಲಿ ನಿಜವಾದ ಸತ್ಯ ಗೊತ್ತಾಗಿ ನಕ್ಷತ್ರ ಭೂಪತಿಯನ್ನು ಮದುವೆಯಾಗುತ್ತಾಳೆ. ಇಲ್ಲಿ ಶ್ವೇತಾಗೆ ನಕ್ಷತ್ರ ಮೇಲೆ ದ್ವೇಷ ಬಂದು ನಾನು ಭೂಪತಿಯನ್ನು ಪಡೆದೆ ತೀರುತ್ತೇನೆ ಎಂದು ಮೋಸದಿಂದ ಮದುವೆಯಾಗಲು ಹೋಗುತ್ತಾಳೆ. ಇದಕ್ಕೆ ಡೆವಿಲ್ ಸಹಾಯವನ್ನು ಪಡೆಯುತ್ತಾಳೆ. ಆದರೆ ಮೌರ್ಯ ತನ್ನ ಅಣ್ಣನಿಗೆ ಮೋಸ ಆಗುತ್ತದೆ ಎಂದು ಶ್ವೇತಾಳ ಕುತ್ತಿಗೆಗೆ ತಾಳಿಯನ್ನು ಕಟ್ಟುತ್ತಾನೆ. ಈ ವೇಳೆ ಶಕುಂತಲಾ ದೇವಿ ಶ್ವೇತಾಳನ್ನೇ ನಂಬಿ ತಮ್ಮ ಎಲ್ಲಾ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ. ಈ ವೇಳೆ ಶಾಕುಂತಲ ದೇವಿಗೆ ಸತ್ಯದ ಅರಿವಾಗುತ್ತದೆ.

ನಕ್ಷತ್ರ ಮೇಲಿನ ದ್ವೇಷಕ್ಕೆ ಶ್ವೇತ ಮತ್ತೆ ಹೋಟೆಲ್ ಸ್ಟಾರ್ಟ್ ಮಾಡಿದ್ದಾರೆ ಎಂದು ಹೋಟೆಲ್‌ಗೆ ಬೆಂಕಿ ಹಚ್ಚಲು ಬರುತ್ತಾಳೆ. ಈ ವೇಳೆ ತನ್ನ ತಂದೆ ಹಾಗೂ ಅಜ್ಜಿಯನ್ನೇ ಸುಡಲು ಹೋದಾಗ ಪೊಲೀಸರು ಅಲ್ಲಿಗೆ ಬಂದಿದ್ದು ಶ್ವೇತಾ ತಪ್ಪಿಸಿಕೊಂಡು ಹೋಗಿದ್ದಾಳೆ. ಇದೇ ವೇಳೆ ಶ್ವೇತಾ ಬಳಿಯಲ್ಲಿದ್ದ ಹಣವೆಲ್ಲ ಖಾಲಿಯಾಗಿದ್ದು, ಚಂದ್ರಶೇಖರ್‌ಗೆ ಕಾಲ್ ಮಾಡಿ ನೀವು ಹಣವನ್ನ ಕೊಟ್ಟರೆ ಡೆವಿಲ್ ಬಗ್ಗೆ ಹೇಳುತ್ತೇನೆ ಎಂದು ಡೀಲ್ ಮಾಡಿದ್ದಾಳೆ. ಚಂದ್ರಶೇಖರ್ ಬಗ್ಗೆ ತಿಳಿದುಕೊಳ್ಳಲು ಹಣ ನೀಡುತ್ತೇನೆ ಎಂದು ಕರೆಸಿಕೊಂಡಿದ್ದಾರೆ.
ಸತ್ತು ಹೋದ ಮಿಲ್ಲಿ, ಬಿಕ್ಕಿ ಬಿಕ್ಕಿ ಅತ್ತಾ ಡೆವಿಲ್!
ಮಿಲ್ಲಿ ಡೇವಿಲ್ ಮಗಳು ಎಂದು ಚಂದ್ರಶೇಖರ್ ಹಾಗೂ ಭೂಪತಿ, ನಕ್ಷತ್ರಾಗೆ ಗೊತ್ತಾಗಿದೆ. ಶ್ವೇತಾಗೆ ಆಕ್ಸಿಡೆಂಟ್ ಆಗಿದ್ದು ಅವಳನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನ ನಕ್ಷತ್ರ ಮಾಡಿದ್ದಾಳೆ. ಇದೆ ವೇಳೆ ನಕ್ಷತ್ರ ಅಮ್ಮನಿಗೆ ಫೋನ್ ಮಾಡಿ ಅಮ್ಮ ನೀವು ಆಸ್ಪತ್ರೆಗೆ ಬನ್ನಿ ಶ್ವೇತಾಗೆ ರಕ್ತ ಹೋಗುತ್ತಿದೆ ಎಂದು ಹೇಳಿದ್ದಾಳೆ. ಮಿಲ್ಲಿಯ ಬಳಿ ಚಂದ್ರಶೇಖರ್ ಹಾಗೂ ಭೂಪತಿ ಇಬ್ಬರು ಡೆವಿಲ್ ಯಾರು ಎಂಬ ಸತ್ಯವನ್ನ ಬಾಯ್ ಬಿಡಿಸಲು ಏನೇನೋ ಪ್ರಯತ್ನವನ್ನ ಮಾಡುತ್ತಾ ಇದ್ದಾರೆ. ಆದರೆ ಕೊನೆಗೂ ಸಹ ಮಿಲ್ಲಿ ಸತ್ತು ಹೋಗುವಂತೆ ಮಾಡಿದ್ದಾರೆ.
ಮಗಳು ಸತ್ತು ಹೋದಳು ಎಂದು ಡಾಕ್ಟರ್ ಡ್ರೆಸ್‌ನಲ್ಲಿ ಬಂದ ಭಾರ್ಗವಿ ಕಣ್ಣೀರನ್ನು ಹಾಕುತ್ತಾ ಇದ್ದಾಳೆ .ಇದೆ ವೇಳೆ ನಕ್ಷತ್ರ ಭಾರ್ಗವಿ ಅತ್ತೆಯೇ ಡೇವಿಲ್ ಎಂಬ ಸತ್ಯವನ್ನ ತಿಳಿದುಕೊಂಡಿದ್ದಾಳೆ. ಈ ವಿಷಯವನ್ನ ಭೂಪತಿ ಹಾಗೂ ಚಂದ್ರಶೇಖರ್ ಬಳಿಯೂ ಹೇಳಿದ್ದು ಅವರೆಲ್ಲರಿಗೂ ಸಹ ಶಾಕ್ ಆಗಿದೆ. ನಮ್ಮ ಮನೆಯಲ್ಲಿ ಇದ್ದುಕೊಂಡು ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಆಯಿತಲ್ಲ ಎಂದು ಅವರು ಅಂದುಕೊಂಡಿದ್ದಾರೆ.

ನಕ್ಷತ್ರಾಳನ್ನ ಟಾರ್ಗೆಟ್ ಮಾಡಿದ ಶ್ವೇತಾ, ಡೇವಿಲ್ ಕೈಯಲ್ಲಿ ಸಿಕ್ಕಿಬಿದ್ದ ನಕ್ಷತ್ರ
ಶ್ವೇತಾಗೆ ಇನ್ನೂ ಸಹ ಬುದ್ಧಿ ಬಂದಿಲ್ಲ ನಕ್ಷತ್ರಾಗೆ ನರಕವನ್ನು ತೋರಿಸಬೇಕು ಎಂದು ಡಿಸೈಡ್ ಮಾಡಿದ್ದಾಳೆ ಇನ್ನೂ ನಕ್ಷತ್ರ ಡೆವಿಲ್ ಕೈಗೆ ಸಿಕ್ಕಿ ಬಿದ್ದಿದ್ದು ಎಲ್ಲರೂ ಇರುವ ಜಾಗಕ್ಕೆ ಬಂದಿದ್ದಾಳೆ. ಇದೇ ವೇಳೆ ಶ್ವೇತಾ ಕೈಯಲ್ಲಿ ನಾನು ನಕ್ಷತ್ರಳನ್ನು ಸಾಯಿಸುತ್ತೇನೆ ಅವಳಿಗೆ ನಾನು ನರಕವನ್ನ ತೋರಿಸುತ್ತೇನೆ ಎಂದು ಹೇಳುತ್ತಾ ಇದ್ದಾಳೆ.
ಅಷ್ಟೇ ಅಲ್ಲದೆ ಡೆವಿಲ್ ಸಹ ಗನ್ ಹಿಡಿದುಕೊಂಡಿದ್ದು ನನಗೂ ನಕ್ಷತ್ರ ಮೇಲೆ ದ್ವೇಷವಿದೆ ನಾನು ಅವಳನ್ನ ಕೊಲ್ಲಬೇಕು ಎನ್ನುತ್ತಾ ಇದ್ದಾಳೆ. ಇದೆಲ್ಲವನ್ನ ಭೂಪತಿ ಹಾಗೂ ಚಂದ್ರಶೇಖರ್ ನೋಡುತ್ತಾ ನಿಂತಿದ್ದಾರೆ. ಇನ್ನು ಶ್ವೇತಾಗೆ ಬುದ್ಧಿ ಹೇಳುವ ಪ್ರಯತ್ನವನ್ನ ಮಾಡಿದ್ದಾರೆ. ಡೆವಿಲ್ ಯಾರೆಂಬುದು ಗೊತ್ತಾದ ಮೇಲೆ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಡೆವಿಲ್ ಸತ್ಯದೊಂದಿಗೆ ಎರಡು ಗಂಟೆಗಳ ಮಹಾ ಸಂಚಿಕೆಯೊಂದಿಗೆ ಇಂದಿನಿಂದ ಲಕ್ಷಣ ಧಾರಾವಾಹಿ ಮುಕ್ತಾಯವಾಗಲಿದೆ.


Click it and Unblock the Notifications











