Lakshmi Baramma: ತಾಳಿಗಾಗಿ ಸಿಡಿದೆದ್ದ ಲಕ್ಷ್ಮೀ; ಕೀರ್ತಿಯ ಮುಂದೆ ರೌದ್ರವತಾರ.. ಇದು ವೈಷ್ಣವ್‌ಗಾಗಿ ನಡೆಯುತ್ತಿರುವ ಯುದ್ಧ!
ಲಕ್ಷ್ಮಿಗೆ ಕೀರ್ತಿ ತನಗೆ ತಂದಿದ್ದ ತಾಳಿಯನ್ನು ತೆಗೆದುಕೊಂಡು ಹೋಗಿರುವುದು ಸ್ವಲ್ಪವೂ ಸಹ ಇಷ್ಟವಿಲ್ಲ. ತೆಗೆದುಕೊಂಡು ಹೋಗಿದ್ದು ಎಂದ ಕೂಡಲೇ ಲಕ್ಷ್ಮಿಗೆ ಬಹಳ ಕೋಪ ಬಂದಿದೆ ಇದೇ ವೇಳೆ ಕಾರುಣ್ಯ ಬಳಿ ಇದ್ದ ತಾಳಿಯನ್ನ ತೆಗೆದುಕೊಂಡು ಅತ್ತೆಯ ಬಳಿ ಬಂದು ಪ್ರಶ್ನೆಯನ್ನು ಮಾಡುತ್ತಾ ಇದ್ದಾಳೆ. ಅತ್ತೆ ನನಗೆ ತಂದ ತಾಳಿಯನ್ನು ನೀವು ಕೀರ್ತಿಗೆ ಯಾಕೆ ಕೊಟ್ರಿ ಎಂದು ಪ್ರಶ್ನಿಸುತ್ತಿದ್ದಾಳೆ ಲಕ್ಷ್ಮಿ ಪ್ರಶ್ನೆಗೆ ಕಾವೇರಿಯ ಬಳಿ ಉತ್ತರವಿಲ್ಲ.
ಲಕ್ಷ್ಮಿ ಕಾವೇರಿಯನ್ನು ಪ್ರಶ್ನೆ ಮಾಡುವ ವೇಳೆ ಮನೆಯಲ್ಲಿ ಇದ್ದಂತಹ ಕೀರ್ತಿ ಹೇಗೋ ತಪ್ಪಿಸಿಕೊಂಡು ಕಾರುಣ್ಯ ಎದುರು ಪ್ರತ್ಯಕ್ಷವಾಗಿದ್ದಾಳೆ. ಆಂಟಿ ಏಕೆ ಭಯ ಪಡುತ್ತಿದ್ದೀರಾ ಲಕ್ಷ್ಮೀಗೆ ಹೇಳಿ ಕೀರ್ತಿಗೆ ಈ ಪ್ಯಾಟರ್ನ್ ಇಷ್ಟವಾಯಿತು. ಅವಳಿಗೆ ಡೈಮಂಡ್ ಕಲೆಕ್ಷನ್ಸ್ ಅಂದರೆ ತುಂಬಾ ಇಷ್ಟ ಅದಕ್ಕೆ ಕೊಟ್ಟು ಕಳಿಸಿದೆ ಎಂದು ಹೇಳಿದ್ದಾಳೆ. ಕೀರ್ತಿ ಮಾತನ್ನು ಕೇಳಿಸಿಕೊಂಡ ಲಕ್ಷ್ಮಿಗೆ ತುಂಬಾ ಕೋಪ ಬಂದಿದೆ.

ಕೀರ್ತಿ ಮಾಡುತ್ತಿರುವ ಕೆಲಸದಿಂದಾಗಿ ಈಗ ಸತ್ಯ ಹೊರಬರಲು ಇನ್ನೆಷ್ಟು ದಿನ ಬೇಕು ಎಂದು ಕಾವೇರಿ ಯೋಚನೆ ಮಾಡುತ್ತಿದ್ದಾಳೆ. ಈ ವಿಷಯ ಪುಟ್ಟನಿಗೆ ಗೊತ್ತಾಗಿ ಹೋದರೆ ಏನು ಗತಿ ಎಂದು ಯೋಚಿಸುತ್ತಿದ್ದಾಳೆ. ಕಾವೇರಿಯ ಮನಸ್ಸು ಈಗ ಗೊಂದಲದ ಗೂಡಾಗಿದೆ. ಈಗಾಗಲೇ ಸುಪ್ರೀತಾ ವೈಷ್ಣೋ ತಲೆಯಲ್ಲಿ ಏನನ್ನು ಹೇಳಿದ್ದು ವೈಷ್ಣವತ್ಸಹ ಸತ್ಯ ಏನೆಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಈ ನಡುವೆ ಈ ರೀತಿಯಲ್ಲ ಆಗುತ್ತಿರುವುದು ವೈಷ್ಣವಿಗೆ ಗೊತ್ತಾದರೆ ಎಂದು ಕಾವೇರಿ ಭಯಪಟ್ಟಿದ್ದಾಳೆ.
ಕೀರ್ತಿ ಲಕ್ಷ್ಮಿಗೆ ಕಟ್ಟಲು ತಂದಿದ್ದ ತಾಳಿಯನ್ನು ತೆಗೆದುಕೊಂಡು ಹೋಗಿದ್ದಾಳೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಲಕ್ಷ್ಮಿ ಕೀರ್ತಿಯ ವಿರುದ್ಧ ಸಿಡಿದೆದ್ದಾಳೆ. ಕೀರ್ತಿ ನೀವು ನನಗೆ ತಂದಿದ್ದ ತಾಳೆಯನ್ನ ತೆಗೆದುಕೊಂಡು ಹೋಗಿದ್ದು ತಪ್ಪು ಎಂದು ಲಕ್ಷ್ಮಿ ಕೀರ್ತಿಗೆ ಹೇಳಿದ್ದಾಳೆ. ಆ ರೀತಿ ತಾಳಿಸರವನ್ನ ಎತ್ತುಕೊಂಡು ಹೋಗಬಾರದು ಎಂದು ಗೊತ್ತಿಲ್ವಾ ನೀವೇನು ಚಿಕ್ಕ ಮಗುನ ಎಂದು ಧ್ವನಿ ಏರಿಸಿ, ಲಕ್ಷ್ಮಿ ಮಾತನಾಡಿದ್ದಾಳೆ. ಇದಕ್ಕೆ ಕೀರ್ತಿ ಏನು ಧ್ವನಿ ಏರಿಸಿ ಮಾತನಾಡುತ್ತಿದ್ದೀಯ ಎಂದು ಹೇಳಿದ್ದಾಳೆ.
ನನಗೆ ಇದೆಲ್ಲವೂ ಇಷ್ಟವಾಗುವುದಿಲ್ಲ ಈ ಮನೆಯಿಂದ ನಾನು ಎಷ್ಟೋ ಸಲ ಬಳೆಯನ್ನ ತೆಗೆದುಕೊಂಡು ಹೋಗಿದ್ದೇನೆ ನನ್ನ ಮನೆಯಿಂದಲೂ ಸಹ ಕಾವೇರಿ ಆಂಟಿ ಗೆ ಧೃತಿಗೆ ತಂದುಕೊಟ್ಟಿದ್ದೇನೆ ಎಂದು ಹೇಳಿದ್ದಾಳೆ. ಇದಕ್ಕೆ ಲಕ್ಷ್ಮೀ ಅದು ಬೇರೆ ಇದು ಬೇರೆ ನೀವು ತಾಳಿ ಬಿಟ್ಟು ಬೇರೆ ಏನೇನ್ನಾದರೂ ತೆಗೆದುಕೊಂಡು ಹೋಗಿ ಆದರೆ ತಾಳಿ ಮಹತ್ವ ನಿಮಗೆ ಗೊತ್ತಿದ್ಯಾ? ಸಂಪ್ರದಾಯ ಗೊತ್ತಿರುವವರು ಈ ರೀತಿ ಮಾಡೋದಿಲ್ಲ ಎಂದು ಕೀರ್ತಿಗೆ ಹೇಳಿದ್ದಾಳೆ. ಇದೇ ವೇಳೆ ಕಾವೇರಿಗೆ ಅತ್ತೆ ನಿಮಗಾದ್ರೂ ಗೊತ್ತಾಗ್ಲಿಲ್ವಾ ತಾಳಿಯನ್ನು ಆ ರೀತಿಯಲ್ಲ ಕೊಟ್ಟು ಕಳಿಸಬಾರದು ಎಂದು ಪ್ರಶ್ನೆ ಮಾಡಿದ್ದಾಳೆ. ಲಕ್ಷ್ಮಿ ಕೇಳುತ್ತಿರುವ ಪ್ರಶ್ನೆಗೆ ಕಾವೇರಿ ನಿರುತ್ತರಳಾಗಿದ್ದಾಳೆ.
ಲಕ್ಷ್ಮೀ ತನ್ನ ಲಿಮಿಟ್ ಕ್ರಾಸ್ ಮಾಡಿ ಮಾತನಾಡುತ್ತಿದ್ದಾಳೆ ನೋಡಿ ಆಂಟಿ ಎಂದು ಕೀರ್ತಿ ಕಾವೇರಿಯ ಬಳಿ ಹೇಳುತ್ತಿದ್ದಾಳೆ. ಕಾವೇರಿ ಇಬ್ಬರ ನಡುವೆ ಸಿಲುಕಿ ಏನು ಮಾತನಾಡದೆ ಸುಮ್ಮನೆ ನಿಂತುಕೊಂಡಿದ್ದಾಳೆ. ಇದೇ ವೇಳೆ ಲಕ್ಷ್ಮಿ, ತಾಳಿಯ ಬಗ್ಗೆ ನಿಮಗೆ ಗೊತ್ತಿದ್ಯಾ? ಆ ರೀತಿಯೆಲ್ಲ ತಾಳಿಯನ್ನ ತೆಗೆದುಕೊಂಡು ಹೋಗಬಾರದು.
ಒಂದು ತವರು ಮನೆಯವರು ತಾಳಿಯನ್ನ ಕೊಡಬೇಕು. ಇಲ್ಲದೆ ಇದ್ದರೆ ಗಂಡನ ಮನೆಯವರು ಕೊಡಬೇಕು. ತೆಗೆದುಕೊಂಡು ಹೋಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ಇನ್ನು ಇದಕ್ಕೆ ಕೀರ್ತಿ ಬ್ಲಾಂಕ್ ಚೆಕ್ಕನ್ನ ಲಕ್ಷ್ಮಿ ಮುಂದೆ ಹಿಡಿದು ಎಷ್ಟು ಬೇಕೋ ಅಷ್ಟು ಹಣವನ್ನ ಬರೆದುಕೋ, ಆದರೆ ಆ ತಾಳಿಸರ ಮಾತ್ರ ನನಗೆ ಬೇಕು ಎಂದಿದ್ದಾಳೆ. ಈಗ ಲಕ್ಷ್ಮಿ ಕೀರ್ತಿಗೆ ಏನು ಮಾಡುತ್ತಾಳೆ ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











