Lakshmi Baramma serial: ಕುಸುಮಾ ಹೇಳಿಕೊಟ್ಟ ಐಡಿಯಾ ಕಾವೇರಿಯ ಕುತ್ತಿಗೆ ತೆಗೆಯುವುದು ಗ್ಯಾರಂಟಿ..!
ಕಾವೇರಿಯ ಸ್ವಾರ್ಥ ಮಗನ ಸಂಸಾರವನ್ನೇ ಹಾಳು ಮಾಡುವ ಹಂತಕ್ಕೆ ತಲುಪುತ್ತದೋ ಗೊತ್ತಿಲ್ಲ. ಕಾವೇರಿ ಅಡ್ಡ ಕತ್ತರಿಯಲ್ಲಿ ಸಿಕ್ಕಿದ್ದಾಳೆ. ಕೀರ್ತಿಯನ್ನು ಮೆಚ್ಚಿಸುವುದಕ್ಕೆ ಹೋಗಿ ಮನೆಯಲ್ಲಿ ಸೊಸೆ ಮತ್ತು ಮಗನ ನಡುವೆ ಮನಸ್ತಾಪ ತಂದಿಟ್ಟಿದ್ದಾಳೆ. ಇಬ್ಬರ ನಡುವೆ ಇದ್ದ ನಂಬಿಕೆಯೇ ಒಡೆದು ಚೂರಾಗಿತ್ತು.
ತನ್ನ ಮರ್ಯಾದೆ, ತನ್ನನ್ನು ಉಳಿಸಿದಳು ಎಂಬ ಖುಷಿ ಸುಪ್ರಿಯಾಗೆ ಇದೆ. ಆ ಋಣ ಕೂಡ ಇಟ್ಟುಕೊಂಡಿದ್ದಾಳೆ. ಹೀಗಾಗಿಯೇ ಒಡೆದು ಚೂರಾಗಿದ್ದ ವೈಷ್ಣವ್ ಹಾಗೂ ಲಕ್ಷ್ಮೀಯ ನಡುವಿನ ಬಂಧವನ್ನು ಅಂಟಿಸುವುದಕ್ಕೆ ಸುಪ್ರೀತಾಳೆ ಮುಂದಾಗಿದ್ದಾಳೆ. ಅದು ಈಗ ಸಕ್ಸಸ್ ಕೂಡ ಆಗಿದೆ. ಕಾವೇರಿಯ ನಿಜ ಬಣ್ಣ ಬಯಲಾಗುವ ಸಮಯ ಬರಬೇಕಾಗಿದೆ.

ಆಣೆ ಪ್ರಮಾಣ ಮಾಡಲು ಲಕ್ಷ್ಮೀ ಹಿಂದೇಟು
ವೈಷ್ಣವ್ ತನ್ನ ಹಾಡಿನ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಕುಳಿತಿದ್ದ. ಲಕ್ಷ್ಮೀ ಪದೇ ಪದೆ ಹೇಳಿದ್ದಕ್ಕೆ ಅದನ್ನೇ ಸತ್ಯ ಎಂದು ನಂಬಿದ್ದ. ಆದರೆ, ಸುಪ್ರೀತಾ ಕೊಟ್ಟ ಡೋಸ್‌ಗೆ ಸತ್ಯ ಹುಡುಕಲು ಶುರು ಮಾಡಿದ್ದ. ಕಡೆಗೂ ಆಣೆ ಪ್ರಮಾಣಕ್ಕೆ ಲಕ್ಷ್ಮೀ ಬಗ್ಗುತ್ತಾಳೆ ಎಂಬುದು ತಿಳಿದ ಮೇಲೆ ಅದನ್ನೇ ಮಾಡಲು ಶುರು ಮಾಡಿದ. ಗಣಪತಿ ಮುಂದೆ ಆಣೆ ಮಾಡಿ ಸತ್ಯ ಹೇಳು ಅಂದಾಗಲೂ ಲಕ್ಷ್ಮೀ ತಪ್ಪಿಸಿಕೊಂಡಳು. ಊಟಕ್ಕೆ ಕೂತಾಗಲು ಆಣೆ ಮಾಡುವುದಕ್ಕೆ ಲಕ್ಷ್ಮೀ ಒಪ್ಪಲೇ ಇಲ್ಲ. ಅಲ್ಲಿಗೆ ವೈಷ್ಣವ್‌ಗಂತು ಲಕ್ಷ್ಮೀ ತಪ್ಪಿತಸ್ಥೆ ಅಲ್ಲ ಅನ್ನೋದು ಕನ್ಫರ್ಮ್ ಆಗಿ ಹೋಯಿತು.
ಕಾವೇರಿ ಮುಖದಲ್ಲಿ ಫುಲ್ ಟೆನ್ಶನ್
ವೈಷ್ಣವ್ ಸತ್ಯ ತಿಳಿದುಕೊಳ್ಳುವುದಕ್ಕೆ ಲಕ್ಷ್ಮೀಯ ಹಿಂದೆ ಬಿದ್ದಿದ್ದಾನೆ. ಕೂತಲ್ಲಿ ನಿಂತಲ್ಲಿ ಲಕ್ಷ್ಮೀ ಬಳಿ ಸತ್ಯ ಕೇಳುತ್ತಿದ್ದಾನೆ. ಇದು ಕಾವೇರಿಯ ಟೆನ್ಶನ್‌ಗೆ ಕಾರಣವಾಗಿದೆ. ಲಕ್ಷ್ಮೀ ಆಣೆ ಮಾಡದೆ ತಪ್ಪಿಸಿಕೊಂಡು ಹೋದಾಗೆಲ್ಲಾ, ವೈಷ್ಣವ್ ಹಠ ಜಾಸ್ತಿಯಾಗಿದೆ. ಈ ಬೆಳವಣಿಗೆ ಕಂಡು ಒಳಗೊಳಗೆ ಕಾವೇರಿ ಗಾಬರಿಯಾಗಿದ್ದಾಳೆ. ಇಡೀ ರಾತ್ರಿ ನಿದ್ದೆ ಮಾಡಿಲ್ಲ.

ಕುಸುಮಾ ಪ್ಲ್ಯಾನ್ ವರ್ಕೌಟ್ ಆಗುತ್ತಾ..?
ವೈಷ್ಣವ್‌ಗೆ ಈ ಮಾಸ್ಟರ್ ಪ್ಲ್ಯಾನ್ ಕೊಟ್ಟಿದ್ದು ದೊಡ್ಡಮ್ಮ. ವೈಷ್ಣವ್‌ಗೆ ಲಕ್ಷ್ಮೀಯ ನಡವಳಿಕೆ ಬಗ್ಗೆ ಗುಣಗಾನ ಮಾಡಿದ್ದಾಳೆ. ಕಷ್ಟದಲ್ಲಿಯೇ ಬೆಳೆದ ಲಕ್ಷ್ಮೀ ಯಾವತ್ತಿಗೂ, ಯಾರಿಗೂ ಮೋಸ ಮಾಡಿದವಳಲ್ಲ ಎಂದು ಹೇಳಿ ಸಮಾಧಾನ ಮಾಡಿದ್ದಾಳೆ. ಅಷ್ಟೇ ಅಲ್ಲ ಕಳ್ಳನನ್ನು ಕಂಡು ಹಿಡಿಯಲು ಬೀರ್ ಬಲ್ ಕಥೆ ಹೇಳಿದ್ದಾಳೆ. ಲಕ್ಷ್ಮೀಯನ್ನು ಫಾಲೋ ಮಾಡಲು ಹೇಳಿದ್ದಾಳೆ.
ದೊಡ್ಡಮ್ಮ ಹೇಳಿದ ಕಥೆಯಲ್ಲೇ ಪ್ಲ್ಯಾನ್
ಕಾವೇರಿ ಈಗ ತನ್ನ ಬಿಲವನ್ನು ತಾನೇ ತೋಡಿಕೊಂಡಿದ್ದಾಳೆ. ಇನ್ನೆಲ್ಲಿ ಲಕ್ಷ್ಮೀ ಸತ್ಯ ಹೇಳಿ ಬಿಡುತ್ತಾಳೋ ಎಂಬ ಭಯಲ್ಲೇ ಬಾಯಿ ಕಟ್ಟಾಕುವುದಕ್ಕೆ ಹೊರಟಿದ್ದಾಳೆ. ಆ ಕಡೆ ಲಕ್ಷ್ಮೀ ಬೆಡ್ ರೂಮಿಗೆ ಬರುವುದಕ್ಕೆ ಹೆದರಿದ್ದಾಳೆ. ವೈಷ್ಣವ್ ಮಲಗಿರುವವನಂತೆ ನಟಿಸಿ, ಲಕ್ಷ್ಮೀಯನ್ನು ಲಾಕ್ ಮಾಡಲು ಯತ್ನಿಸಿದ್ದಾನೆ. ವೈಷ್ಣವ್ ಇನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಹೆಜ್ಜೆ ಒಳಗೆ ಇಡುವಾಗಲೇ ಕಾವೇರಿ ಅವಳನ್ನು ಎಳೆದುಕೊಂಡು ಹೋಗಿದ್ದಾಳೆ. ಈಗ ವೈಷ್ಣವ್‌ಗೆ ದೊಡ್ಡಮ್ಮನ ಪ್ಲ್ಯಾನ್ ವರ್ಕೌಟ್ ಆದಂತೆ ಕಂಡಿದೆ. ಆ ಕಿರಾತಕರು ಯಾರು ಎಂಬುದನ್ನು ಕಂಡು ಹಿಡಿಯುವುದಕ್ಕೆ ಫಾಲೋ ಮಾಡಿಯೇ ಮಾಡುತ್ತಾನೆ. ಕಾವೇರಿ ಈಗ ತಾನಾಗಿಯೇ ಹಳ್ಳಕ್ಕೆ ಬಿದ್ದಂತೆ ಆಗುತ್ತದೆ.


Click it and Unblock the Notifications











