ಅಂದು ಪ್ರಚಂಡ ಪುಟಾಣಿ.. ಇಂದು ಪ್ರಚಂಡ ನಟಿ; ಯಾರಿವರು ಗೊತ್ತಾಯ್ತಾ?
ಧಾರಾವಾಹಿ, ಸಿನಿಮಾಗಳಿಗೆ ಬಂದಿರುವ ಎಷ್ಟೋ ನಟ-ನಟಿಯರು ಬಾಲ ನಟಿಯರಾಗಿ ಇಂಡಸ್ಟ್ರಿಗೆ ಬಂದಿರುತ್ತಾರೆ. ಆದರೆ ಹೀರೋಯಿನ್‌ಗಳಾದ ಮೇಲೆ ಟಾಪ್ ನಟಿಯರಾಗಿರೋ ಉದಾಹರಣೆಗಳು ಇದಾವೆ.
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ನಟಿ ಕೂಡ ಬಾಲಕಿಯಾಗಿದ್ದಾಗಲೇ ಬಣ್ಣದ ರಂಗನ್ನು ಟಚ್ ಮಾಡಿದ್ದವರೇ ಆಗಿದ್ದಾರೆ. ಈಗಂತು ಒಳ್ಳೆ ಡ್ಯಾನ್ಸರ್, ಆಕ್ಟರ್ ಎಲ್ಲಾ ಆಗಿದ್ದಾರೆ. ಈ ನಟಿ ಎಲ್ಲರ ಫೇವರಿಟ್ ಕೂಡ. ಡಿಮ್ಯಾಂಡ್ ಕ್ರಿಯೇಟ್ ಮಾಡಿಸಿಕೊಂಡಿದ್ದ ನಟಿ ಇವರು.

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಆರಂಭದಿಂದಾನು ಅಕ್ಕ-ತಂಗಿಯರ ಕಥೆಯನ್ನು ಹೊಂದಿದೆ. ಅಕ್ಕನಿಗೆ ತಂಗಿ ಚೆನ್ನಾಗಿರಬೇಕೆಂಬ ಆಸೆ, ತಂಗಿ ಅಕ್ಕಮ್ಮನ ಬದುಕು ಸುಂದರವಾಗಿರಬೇಕೆಂಬ ಬಯಕೆ. ಹೀಗೆ ಸಾಗುತ್ತಿರುವ ಕಥೆಯಲ್ಲಿ ಕೀರ್ತಿಯದ್ದು ಮಹತ್ವ ಪಾತ್ರವೇ ಆಗಿದೆ. ಇದೊಇಗ ಸೋಷಿಯಲ್ ಮೀಡಿಯಾದಲ್ಲಿ ಕೀರ್ತಿಯ ಹಳೆ ವಿಡಿಯೋ ಕೊಂಡಾಡುತ್ತಿದ್ದಾರೆ.
ಹಳೇ ವಿಡಿಯೋ ಈಗ ವೈರಲ್
ಜೀ ಕನ್ನಡದ ರಿಯಾಲಿಟಿ ಶೋ 'ಪ್ರಚಂಡ ಪುಟಾಣಿ' ಶೋನಲ್ಲಿ ನಟಿ ತನ್ವಿ ಬಾಲಕಿಯಾಗಿದ್ದಾಗಲೇ ಭಾಗವಹಿಸಿದ್ದರು. ಭರತನಾಟ್ಯ ಪ್ರದರ್ಶನ ಕೊಟ್ಟಿದ್ದರು ಎನಿಸುತ್ತದೆ. ಅದೇ ಡ್ರೆಸ್‌ನಲ್ಲಿಯೇ ಹಾಡು ಕೂಡ ಹೇಳಿದ್ದಾರೆ. ಗುಡಿಯಲಿರುವ ಶಿಲೆಗಳೆಲ್ಲಾ ಮಕ್ಕಳಂತೆ ಎಂಬ ಹಾಡನ್ನು ಹಾಡಿ, ಜಡ್ಜಸ್ ಮನಗೆದ್ದಿದ್ದರು. ಜೊತೆಗೆ ಭಗವದ್ಗೀತೆಯ ಶ್ಲೋಕವನ್ನು ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಎಲ್ಲರಿಂದಲೂ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದರು.
ದ್ವಾರ್ಕಿ ಎದುರು ಹಾಡಿದ್ದ ಕೀರ್ತಿ
'ಪ್ರಚಂಡ ಪುಟಾಣಿ' ಎಂಬ ರಿಯಾಲಿಟಿ ಶೋ 2007ರಲ್ಲಿ ಜೀ ಕನ್ನಡದಲ್ಲಿ ಶುರುವಾಗಿತ್ತು. ಆ ಶೋ ಮೂಲಕ ಪ್ರತಿಭಾವಂತ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತಿತ್ತು. ಇದೇ ಕಾರ್ಯಕ್ರಮದಲ್ಲಿ ತನ್ವಿರಾವ್ ತಮ್ಮ ನೃತ್ಯ, ಹಾಡುಗಾರಿಗೆ, ಶ್ಲೋಕಗಳನ್ನು ಹೇಳುವುದು ಎಲ್ಲವನ್ನು ಸಲೀಸಾಗಿ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಅಂದೇ ಅರುಂಧತಿ ನಾಗ್, ದ್ವಾರಕೀಶ್ ಅವರು ತೀರ್ಪುಗಾರರಾಗಿದ್ದರು. ತನ್ವಿಗಿರುವ ನಾಲೆಡ್ಜ್ ನೋಡಿ ಮನಃಪೂರ್ವಕವಾಗಿ ಹೊಗಳಿದ್ದರು.

ಶ್ಲೋಕ ಹೇಳುವ ಕೀರ್ತಿ
ಕೀರ್ತಿ ಅಲಿಯಾಸ್ ತನ್ವಿ ರಾವ್ ಅಂದೇ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದನ್ನು ಕಂಡು ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಇದು ನಮ್ಮ ತನ್ವಿ, ಲಕ್ಷ್ಮೀಬಾರಮ್ಮ ಧಾರಾವಾಹಿಯ ಕೀರ್ತಿ, ವಾವ್ ಕೀರ್ತಿ ಎಷ್ಟು ಅದ್ಭುತವಾಗಿ ಶ್ಲೋಕ ಹೇಳುತ್ತೀರಾ, ಸಕಲಕಲಾವಲ್ಲಭೆ ಎಂದೆಲ್ಲಾ ಹೊಗಳಿದ್ದಾರೆ. ಅಷ್ಟೇ ಅಲ್ಲ ಕೀರ್ತಿಗೆ ಎಲ್ಲಾ ವಿಧವಾದ ಟ್ಯಾಲೆಂಟ್ ಇದೆ ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಅದರಲ್ಲೂ ಫ್ಯಾಷನ್ ಐಕಾನ್ ಕೂಡ. ಎಷ್ಟೋ ಹೆಣ್ಣು ಮಕ್ಕಳು ಕೀರ್ತಿಯ ಫ್ಯಾಷನ್ ಫಾಲೋ ಮಾಡುತ್ತಾರೆ.
ಕೀರ್ತಿ ರೀಎಂಟ್ರಿ ಬೆಂಕಿ ಗುರು
ಧಾರಾವಾಹಿಯಲ್ಲಿ ಇತ್ತೀಚೆಗೆ ಕೀರ್ತಿ ಪಾತ್ರ ಸತ್ತು ಹೋಗಿತ್ತು. ಅದಕ್ಕೂ ಕಾರಣವಿದೆ. ಕೀರ್ತಿ ಸೀರಿಯಲ್ ಬಿಡ್ತಾರೆ ಎಂಬ ಮಾತು ಇತ್ತು. ಹೀಗಾಗಿಯೇ ಕೀರ್ತಿಯ ಪಾತ್ರವನ್ನು ಸಾಯಿಸಲಾಗಿತ್ತು. ಆದರೆ ಕೀರ್ತಿ ಪಾತ್ರ ಸತ್ತು ಹೋದ ಮೇಲೆ ಡಿಮ್ಯಾಂಡ್ ಜಾಸ್ತಿಯಾಗಿತ್ತು. ಬೇಗ ಕಮ್ ಬ್ಯಾಕ್ ಮಾಡಿ ಕೀರ್ತಿ ಎಂದೇ ಕೇಳುತ್ತಿದ್ದರು. ಇದೀಗ ವೀಕ್ಷಕರ ಆಸೆಯಂತೆ ಕೀರ್ತಿ ಪಾತ್ರ ಕಮ್ ಬ್ಯಾಕ್ ಆಗಿದೆ. ನಿರೀಕ್ಷೆಯಂತೆ ಪಾಪದಿಂದಾನೇ ತುಂಬಿ ತುಳುಕುತ್ತಿದ್ದ ಕಾವೇರಿಯನ್ನು ಮಟ್ಟ ಹಾಕಲು ರೆಡಿಯಾಗಿದ್ದಾಳೆ.


Click it and Unblock the Notifications











