Lakshmibaramma: 500 ಸಂಚಿಕೆಗಳ ಸಂಭ್ರಮದಲ್ಲಿ 'ಲಕ್ಷ್ಮೀ ಬಾರಮ್ಮ'; ವೀಕ್ಷಕರಿಗೆ ಇಷ್ಟವಾದ ಪಾತ್ರಗಳು ಇವೆ ನೋಡಿ
ಇತ್ತೀಚಿನ ದಿನಗಳಲ್ಲಿ ಬರುತ್ತಿರುವಂತ ಧಾರಾವಾಹಿಗಳೆಲ್ಲಾ ಮೆಗಾ ಹಿಟ್ ಧಾರಾವಾಹಿಗಳೇ ಆಗಿವೆ. ವರ್ಷಾನುಗಟ್ಟಲೇ ರನ್ ಆಗುತ್ತವೆ. ಎಷ್ಟೋ ಧಾರಾವಾಹಿಗಳು ಆರಂಭದಿಂದ ಟಿಆರ್‌ಪಿ ವಿಚಾರದಲ್ಲಾಗಲಿ, ಸ್ಟೋರಿ ಟರ್ನಿಂಗ್ ತೆಗೆದುಕೊಳ್ಳುವ ವಿಚಾರದಲ್ಲಾಗಲೀ ಎಡವಿರುವುದಿಲ್ಲ. ಟ್ವಿಸ್ಟ್ ಅಂಡ್ ಟರ್ನಿಂಗ್‌ನಲ್ಲಿಯೇ ಧಾರಾವಾಹಿ ಅಸಲಿ ಸಕ್ಸಸ್ ಇರುತ್ತದೆ.
ಇದೀಗ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ 500 ಸಂಚಿಕೆಗಳನ್ನ ಪೂರೈಸಿದೆ. ಈ ಸಂಭ್ರಮವನ್ನ ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಆಚರಿಸುತ್ತಿದೆ. ಜೊತೆಗೆ ಸೀರಿಯಲ್ ವೀಕ್ಷಕರಿಗೆ ಪ್ರಶ್ನೆಯೊಂದನ್ನು ಕೇಳಿದೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಯಾರೂ ನಿಮ್ಮ ಫೇವರಿಟ್ ಆಕ್ಟರ್ ಅಂತ ಕೇಳಿದ್ದಾರೆ. ಅದಕ್ಕೆ ಮುಗಿಬಿದ್ದವರಂತೆ ವೀಕ್ಷಕರು ಕೂಡ ತಮ್ಮಿಷ್ಟದ ನಟ-ನಟಿಯರ ಹೆಸರನ್ನು ಹಾಕಿದ್ದಾರೆ.

ಮೂವರ ಲೈಫ್ ಹಾಳು ಮಾಡಿದ ಕಾವೇರಿ
ಕೋರ್ಟ್‌ನಲ್ಲಿ ಕಾವೇರಿಯ ಬಣ್ಣ ಕಳಚಿದೆ. ಜಾತಕ ದೋಷವನ್ನ ಮುಂದಿಟ್ಟುಕೊಂಡು ಕೀರ್ತಿಯನ್ನ ದೂರ ಮಾಡಿದ್ದ ಕಾವೇರಿಯ ಸುಳ್ಳು ಕೋರ್ಟ್ ಹಾಲ್‌ನಲ್ಲಿ ಗೊತ್ತಾಗಿದೆ. ಇದು ವೈಷ್ಣವ್ ಮನಸ್ಸಿಗೆ ನೋವುಂಟು ಮಾಡಿದೆ. ಅಮ್ಮ ಅಮ್ಮ ಅಂತ ಅಮ್ಮನನ್ನು ಸಪೋರ್ಟ್ ಮಾಡಿಕೊಂಡು ಬಂದ ವೈಷ್ಣವ್ ಈಗ ಕುಸಿದು ಬಿದ್ದಿದ್ದಾನೆ. ನನ್ನ ಅಮ್ಮ ಮೂವರ ಲೈಫ್‌ನಲ್ಲಿ ಆಟವಾಡಿ ಬಿಟ್ಟರಲ್ಲ ಎಂಬ ನೋವು ವೈಷ್ಣವ್ ಕಾಡುವುದಕ್ಕೆ ಶುರು ಮಾಡಿದೆ.
500 ಸಂಚಿಕೆಗಳ ಸಂಭ್ರಮ
ಸದ್ಯ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ 'ಲಕ್ಷ್ಮೀ ಬಾರಮ್ಮ' 500 ಸಂಚಿಕೆಗಳನ್ನು ದಾಟಿದೆ. ಇದು ಕಿರುತೆರೆ ಪ್ರಿಯರಿಗೆ ಖುಷಿ ಕೊಟ್ಟಂತ ವಿಚಾರವಾಗಿದೆ. ನಿನ್ನೆಯೋ ಮೊನ್ನೆಯೋ ಶುರುವಾದಂತ ಫೀಲ್ ಇದೆ. ಯಾರ್ಯಾರ ಬದುಕಿಗೆ ಇನ್ಯಾರೋ ಎಂಟ್ರಿ ಕೊಟ್ಟು, ಬದುಕು ಏನಾಯ್ತು ಎಂಬ ಪ್ರಶ್ನೆ ಇನ್ನು ಇದೆ. 'ಲಕ್ಷ್ಮೀ ಬಾರಮ್ಮ' ಧಾರವಾಹಿ ಒಂದೊಳ್ಳೆ ಫ್ಯಾಮಿಲಿ ಸೀರಿಯಲ್. ಇದರಲ್ಲಿ ಹೆಚ್ಚು ಬೈಕೊಂಡ ಪಾತ್ರ ಎಂದರೆ ಅದುವೆ ಕಾವೇರಿ ಪಾತ್ರ. ಇಂಥ ತಾಯಿಯೂ ಇರುವುದಕ್ಕೆ ಸಾಧ್ಯನಾ? ಎನಿಸುವಂತ ಪ್ರಶ್ನೆ ಕಾಡಿದೆ.
ಇವರೆಂದರೆ ವೀಕ್ಷಕರಿಗೆ ಬಲು ಪ್ರೀತಿ
ಇನ್ನು 500 ಸಂಚಿಕೆಗಳ ಸಂಭ್ರಮದಲ್ಲಿರುವ ತಂಡ ವೀಕ್ಷಕರಿಗೆ ಪ್ರಶ್ನೆಯೊಂದನ್ನ ಕೇಳಿದೆ. ಈ ಧಾರಾವಾಹಿಯಲ್ಲಿ ನಿಮ್ಮ ನೆಚ್ಚಿನ ಕಲಾವಿದರು ಯಾರು ಎಂದು. ಅದಕ್ಕೆ ಅಭಿಮಾನಿಗಳು ನಾ ಮುಂದು ತಾ ಮುಂದು ಎಂಬಂತೆ ಕಮೆಂಟ್ ಹಾಕಿದ್ದಾರೆ. ಎಲ್ಲರು ಹೆಚ್ಚು ಇಷ್ಟಪಟ್ಟಿದ್ದು ಕೀರ್ತಿಯನ್ನ. ಅದರ ಜೊತೆಗೆ ಲಕ್ಷ್ಮೀ, ವೈಷ್ಣವ್, ಸುಪ್ರೀತಾ ಕೂಡ ಇಷ್ಟ ಎಂದೇ ಸುಮಾರು ಜನ ಕಮೆಂಟ್ ಹಾಕಿದ್ದಾರೆ.
ಲಕ್ಷ್ಮೀ ಬದಲಾಗಿರುವ ಸಾಧ್ಯತೆ
ಇನ್ನು ವೈಷ್ಣವ್ ಬಾಳಲ್ಲಿ ಬಂದವರ್ಯಾರು ಉಳಿಯಲೇ ಇಲ್ಲ. ಉಳಿಯುವುದಕ್ಕೆ ಕಾವೇರಿ ಬಿಡುವುದು ಇಲ್ಲ. ಕೀರ್ತಿಯ ಪ್ರೀತಿಯನ್ನೇ ಕೊಂದುಬಿಟ್ಟಳು. ಈಗೀಗ ಮಹಾಲಕ್ಷ್ಮಿಯನ್ನ ವೈಷ್ಣವ್ ತುಂಬಾನೇ ಅಚ್ಚಿಕೊಂಡಿದ್ದ. ಅವಳ ಕೊಲೆಗೂ ಸ್ಕೆಚ್ ಹಾಕಿ ಆಗಿದೆ. ಆದರೆ ಬಹಳ ದಿನಗಳಿಂದ ಕಾಣೆಯಾಗಿದ್ದ ಲಕ್ಷ್ಮೀಯ ಎಂಟ್ರಿಯೂ ಆಗ್ತಿದೆ ಎಂಬುದನ್ನು ಪ್ರೋಮೋದಲ್ಲಿ ನೋಡಬಹುದು. ಆದರೆ ಲಕ್ಷ್ಮೀಯನ್ನು ನೇರವಾಗಿ ತೋರಿಸದೇ ಇರುವ ಕಾರಣ ಲಕ್ಷ್ಮೀ ಪಾತ್ರಧಾರಿಯನ್ನು ಬದಲಾಯಿಸಲಾಗಿದೆ ಎಂದೇ ಹೇಳಲಾಗುತ್ತಿದೆ. ಇದನ್ನ ವೀಕ್ಷಕರು ಹೇಗೆ ಸ್ವೀಕರಿಸ್ತಾರೆ ಗೊತ್ತಿಲ್ಲ. ರಾವಣದಹನದಲ್ಲಿ ಮುಖ ಸುಟ್ಟು ಹೋಗಿದೆ ಎಂದು ಹೇಳುತ್ತಾರೋ ಏನೋ..? ಆದರೆ ವೈಷ್ಣವ್ ಹೇಗೆ ಸ್ವೀಕರಿಸುತ್ತಾನೆ ಎಂಬುದು ಕುತೂಹಲ.


Click it and Unblock the Notifications











