Lakshmibaramma: 'ಲಕ್ಷ್ಮೀಬಾರಮ್ಮ' ನಿರ್ದೇಶಕರು, ವಕೀಲರು ಇವರೇ, ಎಷ್ಟೇ ಆಗ್ಲಿ ಟಿಎನ್ಎಸ್ ಶಿಷ್ಯ ಅಲ್ಲವೇ!

By ಎಸ್ ಸುಮಂತ್

ಪಾಪಿ ಚಿರಾಯು ಅನ್ನೋ ಮಾತಿಗೆ ತಕ್ಕ ಹಾಗೇ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಒಂದಷ್ಟು ಎಪಿಸೋಡ್‌ಗಳು ಪ್ರಸಾರವಾದವು. ಕಾವೇರಿ ಏನೇ ತಪ್ಪು ಮಾಡಿದರೂ ಬಚಾವ್ ಆಗಿ ಬಿಡುತ್ತಾ ಇದ್ದಳು.

ಎಲ್ಲಾ ಸಾಕ್ಷಿಗಳು ಅಂಗೈನಲ್ಲಿಯೇ ಇದ್ದರೂ ಎದುರಿಗಿದ್ದವರಿಗೆ ಕಾಣಿಸುವಷ್ಟರಲ್ಲಿ ಸಾಕ್ಷಿ ನಾಶವಾಗ್ತಾ ಇತ್ತು. ಕಾವೇರಿಯ ಪಾಪಕ್ಕೆ ಕೀರ್ತಿ ಹಾಗೂ ಲಕ್ಷ್ಮೀ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ತಂದಿದ್ದಳು.

ಈಗ ಹಾಗಲ್ಲ ಕಾವೇರಿಯ ಪಾಪದ ಕೊಡ ತುಂಬಿದೆ. ಲಾಯರ್ ಕಾವೇರಿಯ ಕರ್ಮಗಳಿಗೆ ಶಿಕ್ಷೆ ಕೊಡಿಸಲು ಸಜ್ಜಾಗಿದ್ದಾರೆ. ಲಕ್ಷ್ಮೀಯನ್ನು ಸಾಯಿಸಿ, ನಂದೇ ರಾಜ್ಯಭಾರ ಎಂಬಂತೆ ಇರಬಹುದು ಎಂದುಕೊಂಡು ರಾವಣದಹನದ ಜೊತೆಗೆ ಲಕ್ಷ್ಮೀ ದಹನ ಮಾಡುವುದಕ್ಕೆ ಎಲ್ಲಾ ಪ್ಲ್ಯಾನ್ ಮಾಡಿದ್ದಳು. ಆದರೆ ಅದೃಷ್ಟ ಲಕ್ಷ್ಮೀಯೂ ಬಚಾವ್ ಆಗಿ ಬಂದಳು.

Colors kannada Lakshmibaramma serial court Episode getting good response

ಈಗಲೂ ನಂಬುತ್ತಿಲ್ಲ ವೈಷ್ಣವ್

ವೈಷ್ಣವ್‌ಗೆ ಲಕ್ಷ್ಮೀ ವಾಪಾಸ್ ಬಂದಿರುವ ಖುಷಿ ಜಾಸ್ತಿಯೇ ಇದೆ. ಅಮ್ಮನಿಗೆ ಸ್ವಲ್ಪ ನೋವಾದರೂ ತಡೆದುಕೊಳ್ಳುತ್ತಿರಲಿಲ್ಲ ವೈಷ್ಣವ್. ಆದರೆ ಈಗ ಕಾವೇರಿಯ ವಿಚಾರದಲ್ಲಿ ಹಾಗಾಗಿಲ್ಲ. ಪೊಲೀಸ್ ಠಾಣೆಯಲ್ಲಿಯೇ ಉಳಿಯುವಂತೆ ಆದರೂ ಕೂಡ ವೈಷ್ಣವ್ ಒಂದು ಮಾತನಾಡದೆ ಲಕ್ಷ್ಮೀ ಬಂದ ಖುಷಿಯನ್ನು ಫೀಲ್ ಮಾಡಿದ. ಈಗ ಕೀರ್ತಿಯೇ ನಿನ್ನ ಕೊಲೆ ಮಾಡುವುದಕ್ಕೆ ಪ್ರಯತ್ನ ಮಾಡಿದ್ದು ಎಂದೇ ವಾದಿಸುತ್ತಿದ್ದಾನೆ.

ಲಕ್ಷ್ಮೀ ಪರ ವಕೀಲರಿಂದ ವಾದ

ಸೀರಿಯಲ್‌ನಲ್ಲಿ ಕೋರ್ಟ್ ಸೀನ್ ನೋಡುವುದೇ ಒಂದು ಖುಷಿ. ಈಗ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲೂ ಒಂದಷ್ಟು ದಿನ ಕೋರ್ಟ್ ಸೀನ್ ನಡೆದಿದೆ. ಲಕ್ಷ್ಮೀ ಸತ್ತಿದ್ದಾಳೆಂದುಕೊಂಡುವರಿಗೆ ಸತ್ತಿದ್ದ ಕೀರ್ತಿ ಬಂದು ಶಾಕ್ ನೀಡಿದ್ದಳು. ಕೀರ್ತಿಯ ಮಾತಿನಿಂದಾನೇ ಕೋರ್ಟ್‌ನಲ್ಲಿ ಕಾವೇರಿ ವರ್ಸಸ್ ಕೀರ್ತಿಯ ವಿಚಾರವಾಗಿ ಒಳ್ಳೆ ವಾದ ನಡೆದಿತ್ತು. ಪಾಯಿಂಟ್ ಟು ಪಾಯಿಂಟ್ ಹಾಕುವ ಶೈಲಿಗೆ ಜನ ಫಿದಾ ಆಗಿದ್ದರು. ಸದ್ಯಕ್ಕೆ ಕಾವೇರಿ ಪೊಲೀಸ್ ಠಾಣೆಯಲ್ಲಿಯೇ ಇದ್ದಾಳೆ.

ನಿರ್ದೇಶಕರೇ ಲಾಯರ್

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಿರ್ದೇಶಕರು ಯಶವಂತ ಪಾಂಡು ಅವರು. ಈ ಮೊದಲು 'ಕನ್ನಡತಿ' ಸೀರಿಯಲ್ ಮಾಡಿದ್ದರು. ಆ ಧಾರಾವಾಹಿ ಕೂಡ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಧಾರಾವಾಹಿಯನ್ನು ಅದ್ಭುತವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಬೆಸ್ಟ್ ಡೈರೆಕ್ಟರ್ ಅವಾರ್ಡ್ ಕೂಡ ಪಡೆದಿದ್ದಾರೆ. ಇದೀಗ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಪ್ರಮುಖವಾದ ಪಾತ್ರವೊಂದನ್ನು ಯಶವಂತ ಪಾಂಡು ಅವರೇ ನಿರ್ವಹಿಸಿದ್ದಾರೆ. ಕಾವೇರಿಯ ತಪ್ಪನ್ನು ಕೋರ್ಟ್ ಮುಂದೆ ಸಾಬೀತು ಪಡಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಒಳ್ಳೆ ಪ್ರತಿಭೆ ಇರುವಂತ ವಕೀಲರೇ ಬೇಕಿತ್ತು. ವಾದ ಮಾಡುವ ಚಾಕಚಕ್ಯತೆ ಇರುವಂತ ವಕೀಲರು ಬೇಕಿತ್ತು. ಆ ಗುಣ, ಪ್ರತಿಭೆ ನಿರ್ದೇಶಕ ಯಶವಂತ ಪಾಂಡು ಅವರಿಗೆ ಇದ್ದ ಕಾರಣ, ಅವರೇ ನಿಭಾಯಿಸಿದ್ದಾರೆ.

ಮರುಕಳುಹಿಸಿದ ಕೋರ್ಟ್ ದೃಶ್ಯ

ಟಿಎನ್ ಸೀತರಾಮ್ ಅವರ ಪ್ರತಿ ಧಾರಾವಾಹಿಗಳಲ್ಲಿ ಕೋರ್ಟ್ ಸೀನ್ ಕಂಪಲ್ಸರಿ ಇದ್ದೆ ಇರುತ್ತಿತ್ತು. ಅವರು ವಾದ ಮಾಡುತ್ತಿದ್ದ ರೀತಿಗೆ ಜನ ಫಿದಾ ಆಗಿದ್ದರು. ಅವರ ವಾದ ನೋಡುವುದಕ್ಕೇನೆ ಎಷ್ಟೋ ಜನ ಸೀರಿಯಲ್ ನೋಡುತ್ತಾ ಇದ್ದರು. ಈಗ ಯಶವಂತ್ ಕೂಡ ಆ ದಿನಗಳನ್ನೇ ನೆನಪಿಸಿದ್ದಾರೆ. ಎಷ್ಟೇ ಆಗಲಿ ಯಶವಂತ್ ಅವರು ಟಿಎನ್ ಸೀತರಾಮ್ ಅವರ ಜೊತೆಗೆ ಹಲವು ಸೀರಿಯಲ್‌ಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದವರಲ್ಲವೇ.

More from Filmibeat

English summary
Lakshmibaramma Kannada Serial; Here is the details about director yashwanth pandu's lawyer Role;
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X