ಅಕ್ಕನಿಂದ ಬೇರ್ಪಟ್ಟ ತಂಗಿ ಕಥೆ ಮುಕ್ತಾಯ; 'ಲಕ್ಷ್ಮೀಬಾರಮ್ಮ' ಫೇಲ್ ಆಗಿದ್ದೆಲ್ಲಿ?

By ಎಸ್ ಸುಮಂತ್

'ಲಕ್ಷ್ಮೀಬಾರಮ್ಮ' ಧಾರಾವಾಹಿಗೆ ಈ ಮೊದಲು ಸಿಕ್ಕಾಪಟ್ಟೆ ಅಭಿಮಾನಿಗಳಿದ್ದರು. ಕಥೆ ಕೂಡ ಅಷ್ಟೇ ಚೆನ್ನಾಗಿ ನಡೆಯುತ್ತಾ ಇತ್ತು. ಆದರೆ ತಾಯಿಗೆ ಮಗನ ಮೇಲೆ ಇದ್ದಂತ ವಿಪರೀತ ವ್ಯಾಮೋಹ ಕಥೆಯನ್ನ ಎಲ್ಲಿಂದ ಇನ್ನೆಲ್ಲಿಗೋ ತೆಗೆದುಕೊಂಡು ಹೋಗಿ ನಿಲ್ಲಿಸಿದೆ. ಈಗ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಧಾರಾವಾಹಿ ಅಂತ್ಯ ಕಾಣುವ ಸಮಯ ಬಂದಿದೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಆದರೆ 'ಲಕ್ಷ್ಮೀಬಾರಮ್ಮ' ಧಾರಾವಾಹಿಯ ತಂಡ ಈ ಬಗ್ಗೆ ಹೇಳಿಲ್ಲ.

ಒಂದು ವೇಳೆ ಧಾರಾವಾಹಿ ನಿಲ್ಲುವ ಹಂತಕ್ಕೆ ಬಂದಿದೆ ಎಂದರೂ ಅದಕ್ಕೆ ಕಥೆಯೇ ಕಾರಣವಾಗಿದೆ ಎಂಬ ಚರ್ಚೆಗಳು ಆಗ್ತಾ ಇದಾವೆ. ಯಾಕಂದ್ರೆ ಈ ಧಾರಾವಾಹಿ ಮೊದಲು ಕೂಡ ಒಂದೇ ಹೆಸರಿನಲ್ಲಿ ಒಂದು ಗಂಟೆಗಳ ಕಾಲ ಪ್ರಸಾರವಾಗುತ್ತಿತ್ತು. 'ಭಾಗ್ಯಲಕ್ಷ್ಮೀ' ಎಂಬ ಹೆಸರಿನಲ್ಲಿ. ಆದರೆ ಆಗ ಮದುವೆಯಾಗಿರಲಿಲ್ಲ. ಹೀಗಾಗಿ ಇಬ್ಬರ ಜೀವನವನ್ನು ಮಿಕ್ಸ್ ಮಾಡಿ ತೋರಿಸಲಾಗ್ತಾ ಇತ್ತು. ಲಕ್ಷ್ಮೀಯ ಮದುವೆಯಾದ ಮೇಲೆ ಧಾರಾವಾಹಿಯು ಅದೇ ಸಮಯ, ಹೆಸರು Extra ಮಾಡಲಾಗಿತ್ತು. ಲಕ್ಷ್ಮೀಬಾರಮ್ಮ ಹೆಸರಿನಲ್ಲಿ ಶುರುವಾಗಿತ್ತು. ಇದೀಗ ಮುಗೀತಾ ಇದೆ ಎನ್ನಲಾಗಿದೆ. ಯಾಕೆ..? ಏನಾಯ್ತು ಅನ್ನೋದನ್ನ ಮುಂದೆ ಓದಿ.

Colors kannada lakshmibaramma serial to go off-air soon

ಅಕ್ಕನದ್ದು ಚಾಲೆಂಜಸ್ ಲೈಫ್

ಭಾಗ್ಯಲಕ್ಷ್ಮೀ ಧಾರಾವಾಹಿ ಈಗಲೂ ಟಿಆರ್ಪಿಯಲ್ಲಿ ಒಳ್ಳೆ ರೇಟಿಂಗ್ ಪಡೆದುಕೊಂಡಿದೆ. ಅಲ್ಲಿಯೂ ಒಂದು ಸ್ವಲ್ಪ ದಿನ ಅದೇ ತಾಂಡವ್, ಅದೇ ರೋಧನೆ, ಅದೇ ಶ್ರೇಷ್ಠಾ, ಭಾಗ್ಯಾಗೆ ಪದೇ ಪದೇ ಕಷ್ಟಗಳು ಬರ್ತಾನೆ ಇತ್ತು. ಆದರೆ ಈಗ ಕಥೆ ಪಿಕಪ್ ಆಗಿದೆ. ಹೀಗಾಗಿ ಭಾಗ್ಯಲಕ್ಷ್ಮೀಯನ್ನ ವೀಕ್ಷಕರು ಮತ್ತೆ ಒಪ್ಪಿದ್ದಾರೆ. ಆದರೆ ಲಕ್ಷ್ಮೀಬಾರಮ್ಮ ಅಕ್ಕನಿಂದ ಬೇರ್ಪಟ್ಟ ಮೇಲೆ ವೀಕ್ ಆಗಿ ಇಡ್ತಾ ಎಂಬ ಪ್ರಶ್ನೆ ಎದುರಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಎಲ್ಲರ ಮನಸ್ಸನ್ನು ಗೆದ್ದಿದ್ದ ಲಕ್ಷ್ಮೀಬಾರಮ್ಮ ಈಗ ಮುಕ್ತಾಯ ಹಂತಕ್ಕೆ ತಲುಪಿದೆ ಎನ್ನಲಾಗಿದೆ.

ಸುಪ್ರಿತಾ - ಕಾವೇರಿಯದ್ದು ಸೇಮ್ ಕಥೆ

ಕಥೆಯಲ್ಲಿ ಒಂದೇ ಥರದ ಸನ್ನಿವೇಶವನ್ನ ನೋಡುವಂತಾಗಿದೆ. ಪಾಪಿ ಚಿರಾಯು ಅಂತೀವಲ್ಲ ಹಾಗೇ. ಸುಪ್ರಿತಾಗೆ ತನ್ನ ಅತ್ತಿಗೆ ಎಷ್ಟು ಕೆಟ್ಟವಳು ಅಂತ ಗೊತ್ತು. ಆದರೂ ಅದನ್ನ ಪ್ರೂವ್ ಮಾಡೋದಕ್ಕೆ ಆಗ್ತಾ ಇಲ್ಲ. ಅತ್ತಿಗೆ ನಾದಿನಿ ಆಗಾಗ ಮಾತಿನ ಯುದ್ಧಕ್ಕೆ ನಿಲ್ತಾರೆ. ಅದನ್ನ ಬಿಡಿಸುವ ಉಸಾಬರಿಗೆ ಮನೆಯವರು ಹೋಗ್ತಾರೆ ವಿನಃ ಕಾವೇರಿಯ ತಪ್ಪನ್ನ ಮಾತ್ರ ಹೌದು ಅನ್ನೋದೆ ಇಲ್ಲ. ಸೋ ಸುಪ್ರಿತಾಗೆ ಸೋಲು, ಕಾವೇರಿಗೆ ಗೆಲುವು ಸರ್ವೇ ಸಾಮಾನ್ಯವಾಗಿದೆ.

ತಾಯಿಗೆ ಅತಿಯಾಯ್ತು ವ್ಯಾಮೋಹ

ಕಾವೇರಿಗೆ ಮಗನ ಮೇಲಿನ ವ್ಯಾಮೋಹಕ್ಕಿಂತ ತನ್ನ ಸ್ವಾರ್ಥವೇ ಹೆಚ್ಚು. ಮಗ ಹೇಗಾದರೂ ಸಾಯ್ಲಿ ಆದರೆ ತನ್ನನ್ನೇ ದೇವರು‌ ಅಂದುಕೊಳ್ಳಬೇಕು. ಮಗ ಹೆಂಡತಿಯ ಜೊತೆಗೆ ಸಂಸಾರ ಮಾಡದೆ ಹೋದರು ಚಿಂತೆ ಇಲ್ಲ. ಆದರೆ ಸೊಸೆ ತಾನೇಳಿದ ಹಾಗೇ ಕೇಳಿಕೊಂಡು ಬಿದ್ದಿರಬೇಕು. ಅದಕ್ಕೆ ಒಂದು ಪ್ರೀತಿಯನ್ನ ಸಾಯಿಸಿದ್ಲು, ಎರಡನೇಯದ್ದು‌ ಹೆಂಡತಿಯನ್ನು ದೂರುವಿಟ್ಟಳು, ಮೂರನೇಯದು ಮದುವೆ ತಯಾರಿಯಲ್ಲಿದ್ದಾಳೆ. ಈಗಿನ ಕಾಲಕ್ಕೆ ಈ ರೀತಿಯ ಸ್ವಾರ್ಥತೆಯನ್ನ ಯಾವ ಹೆಣ್ಣು ಮಕ್ಕಳು ಇಷ್ಟಪಡುವುದಿಲ್ಲ. ಹೀಗಾಗಿ ಮೊದಲಿದ್ದ ವೀಕ್ಷಕರು ಔಟ್ ಆಗಿರುವ ಸಾಧ್ಯತೆಯೂ ಇದೆ.

ವೈಷ್ಣವ್ ಮೂಕ ಪ್ರೇಕ್ಷಕ..!

ಲಕ್ಷ್ಮೀ ಸ್ಟ್ರಾಂಗ್ ಎಂದುಕೊಂಡಿದ್ದರು. ಆದರೆ ಅಮ್ಮನ ನಿರ್ಧಾರವೇ ಸರಿ ಎನ್ನುವ ವೈಷ್ಣವ್ ಪ್ರೀತಿಗಾಗಿ ಇನ್ನು ತಾಳ್ಮೆಯಿಂದ ಕಾಯುತ್ತಿದ್ದಾಳೆ. ಅಮ್ಮನ ಮನೆಯಲ್ಲಜ ಜಾಗವಿಲ್ಲ, ಕಾರುಣ್ಯ ಮನೆಯಲ್ಲಿ ಆಸರೆ‌ ಪಡೆದುಕಿಂಡಿದ್ದಾಳೆ. ಎಲ್ಲವೂ ಸರಿಯಾಗುತ್ತೆ ಎನ್ನುವಾಗಲೇ ಸ್ಪೆಷಲ್ ಗೆಸ್ಟ್ ಎಂಟ್ರಿಯಾಗಿದೆ. ಅದುವೆ ವೈಷ್ಣವ್ ಮದುವೆಯಾಗಲು ಹೊರಟಿರೋ ಹುಡುಗಿ. ಹೀಗಾಗಿ ಸಾಗುತ್ತಿರೊ ಕಥೆ ಅಲ್ಲಿಯೇ ನಿಂತ.ಮತೆ ವೀಕ್ಷಕರಿಗೆ ಫೀಲ್ ಆಗ್ತಾ ಇದೆ.

More from Filmibeat

Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X