Lakshmibaramma: ಕೀರ್ತಿಯಿಂದ ಸತ್ಯ ತಿಳಿಬೇಕಂದ್ರೆ ಲಕ್ಷ್ಮೀ ಏನ್ ಮಾಡ್ಬೇಕು? ನೆಟ್ಟಿಗರು ಏನಂತಾರೆ?

By ಎಸ್ ಸುಮಂತ್

ವೈಷ್ಣವ್‌ಗೆ ಸತ್ಯ ಹೇಳುವುದಕ್ಕೆ ಆಗದೇ, ವೈಷ್ಣವ್‌ನನ್ನು ಮರಳಿ ಪಡೆಯುವುದಕ್ಕೆ ಆಗದೆ ಕೀರ್ತಿ ಸಂಕಷ್ಟ ಪಡುತ್ತಿದ್ದಾಳೆ. ಹುಚ್ಚಿಯಂತೆ ಆಡುತ್ತಿದ್ದಾಳೆ. ಅದು ಅತಿಯಾಗುತ್ತಿರುವುದು ಕಾರುಣ್ಯಾಗೆ ಆತಂಕ ಸೃಷ್ಟಿಸಿದೆ. ಸುಮ್ಮನೆ ಎಲ್ಲಿಗೋ ಎದ್ದು ಹೋಗಿ ಬಿಡುತ್ತಾಳೆ, ಲಕ್ಷ್ಮೀಯಂತೆ ಸಿದ್ಧಳಾಗಿ ವೈಷ್ಣವ್ ಮುಂದೆ ನಿಲ್ಲುತ್ತಾಳೆ. ಇದೆಲ್ಲವನ್ನು ನೋಡಿದ ಕಾರುಣ್ಯಾಗೆ ಏನು ಮಾಡಬೇಕು ಎಂಬುದು ಕೂಡ ತೋಚುತ್ತಿಲ್ಲ.

ಈಗ ಕೀರ್ತಿ ಇನ್ನು ದೊಡ್ಡ ಯಡವಟ್ಟನ್ನೇ ಮಾಡಿದ್ದಾಳೆ. ಕಾವೇರಿ ಮನೆಗೆ ಹೋಗಿ, ರಾದ್ದಾಂತ ಮಾಡಿ ಬಂದಿದ್ದಾಳೆ. ಇದೆಲ್ಲವೂ ಲಕ್ಷ್ಮೀಗೆ ಅನುಮಾನ ಹುಟ್ಟಿಸಿತ್ತು. ಸತ್ಯ ತಿಳಿಯುವುದಕ್ಕೆ ಲಕ್ಷ್ಮೀ ಮುಂದಾದಳು. ಕೀರ್ತಿಯಿಂದ ಹೇಗೆ ಸತ್ಯ ತಿಳಿಯುವುದು ಎಂಬುದು ತಿಳಿಯದೆ ಲೈವ್ ಬಂದಿದ್ದಳು. ಅದಕ್ಕೆ ನೆಟ್ಟಿಗರೆಲ್ಲ ತರಹೇವಾರಿ ಸಲಹೆಗಳನ್ನು ನೀಡಿದ್ದಾರೆ.

Colors kannada Lakshmibaramma serial Written Update on April 17th episode

ವೈಷ್ಣವ್ ಮನೆಯಲ್ಲಿ ಚಂದು-ಗೊಂಬೆ

ಈ ಮೊದಲು ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬರುತ್ತಾ ಇತ್ತು. ಆ ಧಾರಾವಾಹಿಯಲ್ಲಿ ಇಬ್ಬರು ಹೆಂಡತಿಯರ ಗಂಡನಾಗಿದ್ದರು ಚಂದು. ಈಗ ಅದೇ ಹೆಸರಿನ ಧಾರಾವಾಹಿ ಬರ್ತಾ ಇದೆ. ಆದರೆ ಕಥೆ ಸ್ವಲ್ಪ ಚೇಂಜ್ ಅಷ್ಟೇ. ಇಲ್ಲಿಯೂ ಇಬ್ಬರೇ. ಆದರೆ ಪ್ರೇಯಸಿ, ಹೆಂಡತಿ. ಪ್ರೇಯಸಿಯಿಂದ ಸಂಸಾರ ಹಾಳಾಗದಂತೆ ನೋಡಿಕೊಳ್ಳಲು ಈಗ ಹಳೆ ತಂಡ ಬಂದಿದೆ.

ಲಕ್ಷ್ಮೀ ಕಂಡು ಕಾರುಣ್ಯಾ ಶಾಕ್

ಕೀರ್ತಿಯ ನಡವಳಿಕೆ ಲಕ್ಷ್ಮೀಗೆ ಯಾಕೋ ವಿಚಿತ್ರ ಎನಿಸಿದೆ. ಮನೆಯಲ್ಲೂ ಯಾರೂ ಕೂಡ ಕೀರ್ತಿಯೇ, ವೈಷ್ಣವ್ ಹಳೆಯ ಪ್ರೀತಿ ಎಂಬುದನ್ನು ಯಾರೂ ಹೇಳಿಲ್ಲ. ವೈಷ್ಣವ್ ಕೂಡ ಆ ಸತ್ಯವನ್ನು ಹೇಳುವುದಕ್ಕೆ ಹೋಗಿಲ್ಲ. ಈಗ ಕೆಲವೊಂದು ನಡವಳಿಕೆಯಿಂದ ಆ ಸತ್ಯ ಗೊತ್ತಾಗಿದೆ. ಅದನ್ನು ತಿಳಿದುಕೊಳ್ಳುವುದಕ್ಕೆ ಅಂತ ಲಕ್ಷ್ಮೀ ಸೀದಾ ಕೀರ್ತಿ ಮನೆಗೆ ಹೋಗಿದ್ದಾಳೆ. ಕೀರ್ತಿ ಎಲ್ಲಿ ಎಂದು ಕೇಳಿದವಳು, ಕರೆಯುವುದಕ್ಕೂ ಮುನ್ನ ಲಕ್ಷ್ಮೀಯೇ ಮುನ್ನುಗ್ಗಿದ್ದಾಳೆ. ಇದನ್ನು ಕಂಡ ಕಾರುಣ್ಯಾಗೆ ಶಾಕ್ ಆಗಿದೆ.

ಕೀರ್ತಿ ಡೈರಿ ನೋಡಿ ಬೈದ ಲಕ್ಷ್ಮೀ

ಕೀರ್ತಿಯನ್ನು ಹುಡುಕಿಕೊಂಡು ನೇರವಾಗಿ ರೂಮಿಗೆ ಹೋದ ಲಕ್ಷ್ಮೀ ಕಣ್ಣಿಗೆ ಬಿದ್ದಿದ್ದು ಅವಳ ಡೈರಿ. ಅದರಲ್ಲಿ ವೈಷ್ಣವ್ ಬಗ್ಗೆಯೇ ಜಾಸ್ತಿ ಬರೆದಿತ್ತು. ಅದರಲ್ಲೂ ಐ ಲವ್ ಯೂ ವೈಶ್ ಅಂತ ಬೇರೆ ಬರೆದಿತ್ತು. ಲಕ್ಷ್ಮೀ ಏನನ್ನೇ ಸಹಿಸಿದರೂ ತನ್ನ ಗಂಡನನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಗಂಡನ ತಂಟೆಗೆ ಬಂದರೂ ಅವರನ್ನು ಬಿಡುವುದಿಲ್ಲ. ಈಗ ಕೀರ್ತಿ ಆ ರೀತಿ ಬರೆದಿದ್ದು ಕಂಡು ಕೆಂಡಾಮಂಡಲಳಾಗಿದ್ದಾಳೆ. ಮದುವೆಯಾದ ಗಂಡಸನ್ನು ನೋಡುವುದಕ್ಕೆ ನಾಚಿಕೆ ಆಗುವುದಿಲ್ಲವಾ. ವೈಶ್ ಅಂತ ಬೇರೆ ಬರೆದಿದ್ದೀಯಾ ಅಂತೆಲ್ಲಾ ಬೈದಿದ್ದಾಳೆ.

Colors kannada Lakshmibaramma serial Written Update on April 17th episode

ನೆಟ್ಟಿಗರಿಂದ ಲಕ್ಷ್ಮೀಗೆ ಸಲಹೆ

ಲಕ್ಷ್ಮೀ ಇಂದು Instagram ಲೈವ್ ಬಂದಿದ್ದರು. ಕೀರ್ತಿಯಿಂದ ಸತ್ಯ ಹೊರ ತರುವುದಕ್ಕೆ ಲಕ್ಷ್ಮೀ ಏನು ಮಾಡಬೇಕು..? ನಿಮ್ಮ ಸಲಹೆಗಳನ್ನು ನೀಡಿ ಎಂದು ಪೋಸ್ಟರ್ ಜೊತೆಗೆ ಕ್ಯಾಪ್ಶನ್ ಹಾಕಿದ್ದರು. ಈ ಒಂದು ಪೋಸ್ಟರ್ ಗೆ ನೆಟ್ಟಿಗರು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. 'ಕೆನ್ನೆಗೆ ಎರಡು ಬಾರಿಸಬೇಕು, ಸತ್ಯವನ್ನ ನಿಮ್ಮ ಅತ್ತೆ ಕಾವೇರಿ ಹತ್ತಿರ ಹೋಗಿ ಕೇಳು, ನಾವೆಲ್ಲಾ ಹೇಳಿದರೆ ಎಲ್ಲಿ ಕೇಳ್ತೀರಾ.‌ ನಿಮ್ಮ ನಿರ್ದೇಶಕರು ಹೇಳಿದಂತೆ ಅಷ್ಟೇ ಕೇಳೋದು' ಅಂತೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.

More from Filmibeat

English summary
Lakshmibaramma kannada serial today episode. Here is the details about Fans advised Lakshmi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X