Lakshmibaramma: ಕೀರ್ತಿ ಸಾವಿನ ನ್ಯಾಯಕ್ಕೆ ಲಕ್ಷ್ಮೀ ಹೋರಾಟ; ಲಾಯರ್ ಬಿಗ್ ಬಾಸ್‌ನಲ್ಲಿದ್ದಾರೆಂದು ನೆನಪಿಸಿದ ವೀಕ್ಷಕರು..!

By ಎಸ್ ಸುಮಂತ್

ಲಕ್ಷ್ಮೀ ಬಾರಮ್ಮ ಧಾರಾವಾಹಿ ಮಂಗಳವಾರ ಮಹಾ‌ಸಂಚಿಕೆ ಪ್ರಸಾರವಾಗಲಿದೆ. ಇಂದು ಸೋಮವಾರ (ಅ.7) ಅಕ್ಕನ ಕಥೆಯೇ ಒಂದು ಗಂಟೆ ಜನರಿಗೆ ಕುತೂಹಲ ಘಟ್ಟಕ್ಕೆ ಕೊಂಚ ಉತ್ತರ ನೀಡಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲೂ ಏನಾಗಬಹುದು ಏನಾಗಬಹುದು ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಅದಕ್ಕೆಲ್ಲ ಉತ್ತರ ಮಂಗಳವಾರದ ಸಂಚಿಕೆಯಲ್ಲಿ ಸಿಗಲಿದೆ.

ಕಾವೇರಿಯ ಪಾಪ ಕೊಡ ತುಂಬಿ ತುಳುಕುತ್ತಿದೆ. ಆದರೆ ಅವಳ ಮೊಂಡು ಧೈರ್ಯ, ನಾಟಕ ಎಲ್ಲವನ್ನು ಮುಚ್ಚಾಕುತ್ತಿದೆ. ಕಾವೇರಿಯ ಪಾಪ ಕರ್ಮಗಳು ಲಕ್ಷ್ಮೀಯ ಅಂಗೈನಲ್ಲಿತ್ತು. ಆದರೆ ಪೊಲೀಸ್ ಸ್ಟೇಷನ್ ಹೋಗಿ ಬರುವಷ್ಟರಲ್ಲಿ ಆ ಸಾಕ್ಷಿ ಅದ್ಯಾವಾಗ ಕಾವೇರಿ ಕೈಗೆ ಹೋಯ್ತು ಅನ್ನೋದೇ ಯಕ್ಷ ಪ್ರಶ್ನೆಯಾಗಿ ಎಲ್ಲರನ್ನು ಕಾಡುತ್ತಿದೆ.

Colors kannada Lakshmibaramma serial Written Update on October 8th episode promo

ಸೆಕೆಂಡ್‌ನಲ್ಲಿ ನಾಟಕದ ಪಾತ್ರವೇ ಬದಲು

ಇನ್ನೇನು ಕಾವೇರಿಯ ಪಾಪ ಕರ್ಮಗಳೆಲ್ಲ ಮನೆಯವರ ಎದುರು ಬಯಲಾಗಬೇಕಿತ್ತು. ಅಷ್ಟರಲ್ಲಿ ಸಾಕ್ಷ್ಯವೂ ಸಿಗಲಿಲ್ಲ. ಈಗ ಕಾವೇರಿಯನ್ನ ಹಿಡಿಯೋದು ಯಾರು..? ಲಕ್ಷ್ಮೀಗೆ ಹುಚ್ಚಿ ಪಟ್ಟ ಕಟ್ಟಿದಳು. ಆಸ್ಪತ್ರೆಗೆ ಸೇರಿಸಬೇಕು ಎಂದಳು. ಮನೆಯಲ್ಲಿ ಆ ವಿಚಾರದ ವಿರುದ್ಧ ವೈಷ್ಣವ್ ತಿರುಗಿ ಬಿದ್ದಾಗ ಕಾವೇರಿ ತನ್ನ ವರಸೆ ಬದಲಿಸಿದಳು. ಆಸ್ಪತ್ರೆಗಲ್ಲ ಪುಟ್ಟ, ಗಂಡ ಹೆಂಡತಿ ಹೊರಗೆ ಹೋಗಿ ಬನ್ನಿ ಎಂದಳು. ನಂಬಲು ಕಷ್ಟವಾದರೂ, ಅನುಮಾನವಾದರೂ ಗಂಡನ ಮಾತಿಗೆ ತಲೆಯಾಡಿಸಿ ಲಕ್ಷ್ಮೀ ಕೂಡ ಹೊರಟಳು.

ಲಕ್ಷ್ಮೀಯ ಜೀವಕ್ಕಿದೆ ಅಪಾಯ

ವೈಷ್ಣವ್ ಮಾತಿಗೆ ಬೆಲೆ ಕೊಟ್ಟು ಬಟ್ಟೆ ಪ್ಯಾಕ್ ಮಾಡಿಕೊಳ್ಳುತ್ತಿರುವಾಗಲೇ ಅಪಾಯದ ಮುನ್ಸೂಚನೆಯೂ ಸಿಕ್ಕಿದೆ. ರೆಸಾರ್ಟ್‌ಗೆ ಹೋಗಬೇಡಿ, ಜೀವಕ್ಕೆ ಅಪಾಯವಿದೆ ಎಂಬ ಸೂಚನೆ ಸಿಕ್ಕಿದೆ. ಆದರೆ ಲಕ್ಷ್ಮೀ ಅದನ್ನ ಹೇಳಿದರೂ ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲದಾಗಿದೆ. ರೆಸಾರ್ಟ್‌ಗೆ ಹೊರಟ ಲಕ್ಷ್ಮೀಗೆ ಅರ್ಧ ದಾರಿಯಲ್ಲಿ ಮತ್ತೆ ಅದೇ ಸೂಚನೆ ಎದುರಾಗಿದೆ. ಆದರೂ ಧೈರ್ಯವಾಗಿ ಮುನ್ನಡೆದಿದ್ದಾಳೆ.

ಕಲರ್ಸ್ ಕನ್ನಡದಲ್ಲಿ ಹಾಕಿದ ಪೋಸ್ಟರ್

ಇನ್ನು ಕಲರ್ಸ್ ಕನ್ನಡ ತನ್ನ ಅಧಿಕೃತ ಫೇಸ್ ಬುಕ್ ಪೇಜ್‌ನಲ್ಲಿ ಒಂದು ಪೋಸ್ಟರ್ ಬಿಟ್ಟಿದೆ. ಆ ಪೋಸ್ಟರ್‌ನಲ್ಲಿ ಕಾವೇರಿ, ಕೀರ್ತಿ, ಕೊಲೆಯಾದ ಜಾಗ, ಲಕ್ಷ್ಮೀ ಫೋಟೋ ಹಾಕಿ, ಕೀರ್ತಿ ಸಾವಿಗೆ ನ್ಯಾಯ ಕೊಡಿಸುತ್ತಾಳಾ ಲಕ್ಷ್ಮೀ ಎಂಬ ಪ್ರಶ್ನೆಯನ್ನು ಎತ್ತಿದೆ. ಅದೇ ಹೋರಾಟದಲ್ಲಿಯೇ ಲಕ್ಷ್ಮೀ ಇದ್ದಳು. ಕೀರ್ತಿಗೆ ಏನಾಯ್ತು ಎಂದು ತಿಳಿದುಕೊಳ್ಳುವುದಕ್ಕೇನೆ ಸಾಕಷ್ಟು ನಾಟಕ ಮಾಡಿದಳು. ಆದರೆ ಕಾವೇರಿ ಮಾತ್ರ ಯಾವುದಕ್ಕೂ ಬಗ್ಗಲಿಲ್ಲ. ಈಗ ಲಕ್ಷ್ಮೀಗೆ ಬೇರೆ ಯಾವ ದಾರಿಯೂ ಉಳಿದಿಲ್ಲ. ಹೊಸ ದಾರಿಯಲ್ಲಿ ಏನಾದರೂ ಸಾಕ್ಷಿ ಸಿಗಬೇಕು ಅಷ್ಟೇ.

ವೀಕ್ಷಕರಿಂದ ಲಾಯರ್ ಜಗದೀಶ್ ಸಲಹೆ

ಮಗ ಸೊಸೆಯನ್ನ ಹೊರಗೆ ಕಳುಹಿಸಿರುವ ಕಾವೇರಿ ಪ್ರಾಣವನ್ನೆ ತೆಗೆಯುವ ಪ್ಲ್ಯಾನ್ ಮಾಡಿದ್ದಾಳೆ. ಈ ಪೋಸ್ಟರ್ ನೋಡಿದ ವೀಕ್ಷಕರಿಗೆ ಅದೇ ದೊಡ್ಡ ಪ್ರಶ್ನೆಯಾಗಿದೆ. ಹೀಗಿರುವಾಗ ಲಕ್ಷ್ಮೀ ಅದೇಗೆ ಕೀರ್ತಿ ಸಾವಿಗೆ ನ್ಯಾಯ ಕೊಡಿಸಲು ಆಗುತ್ತೆ. ಈಗ ಅವಳ ಪ್ರಾಣವನ್ನ ಉಳಿಸಿಕೊಂಡರೆ ಸಾಕಾಗಿದೆ ಎಂದು ಹಲವರು ಮರುಕ ಪಟ್ಟರೆ, ಇನ್ನು ಹಲವರು ಸಲಹೆಯನ್ನು ನೀಡಿದ್ದಾರೆ. ಲಾಯರ್ ಜಗದೀಶ್ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿದ್ದಾರೆ, ಅವರು ಹೊರಗೆ ಬಂದ ಮೇಲೆ ನ್ಯಾಯ ಕೊಡಿಸ್ತಾರೆ ಬಿಡಿ ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Colors kannada Lakshmibaramma Written Update on October 8th episode promo. Here is the details about netizes funny comment on serial with linking bigg boss jagdish;
Read more about: tv serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X