Lakshmibaramma: ಕೀರ್ತಿಯನ್ನ ಓಡಿ ಹೋದವಳೆಂದ ಕಾವೇರಿ ಗಂಡ; ಸತ್ತಿದ್ದು ಯಾರಿಂದ ಅನ್ನೋದು ಅವನಿಗೆ ಗೊತ್ತಿಲ್ಲ!
ಕೀರ್ತಿಯ ತ್ಯಾಗ ಕಾವೇರಿ ಮನೆಯವರಿಗೆ ತಿಳಿಯುತ್ತಿಲ್ಲ. ಮನೆಯವರಿಗೆ ಬಿಡು ಅದು ಅರ್ಥವಾಗುವುದಿಲ್ಲ. ಯಾಕಂದ್ರೆ ವೈಷ್ಣವ್ ಅಷ್ಟು ಪ್ರೀತಿ ಮಾಡುತ್ತಿದ್ದೀನಿ ಎಂದು ಗೋಳಾಡಿದಾಗ, ಕೀರ್ತಿಯ ಕಾಲು ಹಿಡಿದಾಗಲೂ ಕಾವೇರಿಯ ಮಾತು ನಂಬಿ ಒದ್ದು ಹೋದವಳು ಕೀರ್ತಿ. ಹೀಗಾಗಿ ಮನೆಯಲ್ಲಿ ಯಾರಿಗೂ ಅವಳನ್ನು ಕಂಡರೆ ಆಗುವುದಿಲ್ಲ. ಆದರೆ ವೈಷ್ಣವ್ ಆದರೂ ಅರ್ಥ ಮಾಡಿಕೊಳ್ಳಬೇಕಿತ್ತು ಅಲ್ವಾ. ಈಗಲೂ ಅವಳನ್ನು ನಾಟಕದ ಪಾತ್ರಧಾರಿಯಂತೆಯೇ ಬಿಂಬಿಸುತ್ತಿದ್ದಾನೆ.
ಕಾವೇರಿಯ ಮುಂದೆ ಬಂದು ಅಮ್ಮ ನೀನು ಕೀರ್ತಿಯನ್ನ ಕೊಲೆ ಮಾಡಿದೆಯಾ ಎಂದು ಕೇಳಿದ. ಅದು ಸತ್ಯವಾದ ಮಾತು. ಆದರೆ ಕಾವೇರಿ ಒಪ್ಪುತ್ತಾಳೆಯೇ ಸಾಧ್ಯವೇ ಇಲ್ಲ. ಮಗನೇ ಈ ರೀತಿ ಅಮ್ಮನನ್ನು ಅಂದುಬಿಟ್ಟನಲ್ಲ ಎಂದು ದೊಡ್ಡ ಡ್ರಾಮಾವನ್ನೇ ಮಾಡುತ್ತಿದ್ದಾಳೆ ಕಾವೇರಿ. ಈಗ ಕಾವೇರಿಯ ಎಲ್ಲಾ ನಾಟಕಕ್ಕೂ ಕೃಷ್ಣ ಬೇರೆ ಜೊತೆಯಾಗಿದ್ದಾನೆ. ಯಾರೂ ಏನೇ ಹೇಳಿದರೂ ಕೃಷ್ಣ, ಕಾವೇರಿಯನ್ನು ವಹಿಸಿಕೊಂಡೆ ಬರುತ್ತಿದ್ದಾನೆ.

ಕಾವೇರಿಯ ಬೆಂಬಲಕ್ಕೆ ನಿಂತ ಕೃಷ್ಣ
ವೈಷ್ಣವ್‌ಗೆ ಆಸ್ಪತ್ರೆಯಿಂದ ಬಂದಾಗಿನಿಂದಲು ಹಲವು ಪ್ರಶ್ನೆಗಳು ಇದಾವೆ. ಆದರೆ ಅದ್ಯಾವುದಕ್ಕೂ ಕಾವೇರಿಯ ಬಳಿ ಉತ್ತರವಿಲ್ಲ. ಕೀರ್ತಿಯನ್ನು ಕೊಲೆ ಮಾಡಿದೆಯಾ ಎಂಬ ಪ್ರಶ್ನೆಗೂ ಉತ್ತರವಿಲ್ಲ. ಭಯಕ್ಕೆ ಕಣ್ಣೀರೊಂದೆ ಉಳಿದದ್ದು. ಕಾವೇರಿಯನ್ನು ಕಂಡು, ಅವಳ ಪರ ನಿಂತ ಕೃಷ್ಣ, ಎಲ್ಲರಿಗೂ ಕಾವೇರಿಯ ಮೇಲೆ ಅನುಮಾನ. ಆದರೆ ಅವಳು ಏನು ಮಾಡಿಲ್ಲ ಎಂದೇ ವಾದಿಸುತ್ತಿದ್ದಾನೆ.
ಕೀರ್ತಿ ಜೊತೆಗಿನ ಮದುವೆ ಬಗ್ಗೆ ಪ್ರಶ್ನೆ
ಕಾವೇರಿ ಬಳಿ ವೈಷ್ಣವ್ ತಿಳಿದುಕೊಳ್ಳಬೇಕಾದ ಉತ್ತರ ಬಹಳಷ್ಟಿದೆ. ಕೀರ್ತಿ ಮೋಸ ಹೋದ ಬಗೆ, ಕೀರ್ತಿಗೆ ಕಾವೇರಿ ನೀಡಿದ ಭರವಸೆ, ಕೀರ್ತಿ ಬೆಟ್ಟದ ಮೇಲಕ್ಕೆ ಕಾವೇರಿಯನ್ನ ಯಾಕೆ ಕರೆಸಿದ್ದಳು ಹೀಗೆ ಹಲವು ಪ್ರಶ್ನೆಗಳ ಜೊತೆಗೆ ಲಕ್ಷ್ಮೀ ಜೊತೆಗೆ ಡಿವೋರ್ಸ್ ಕೊಡಿಸಿ ಮತ್ತೆ ಕೀರ್ತಿಯ ಜೊತೆಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರ ಬಗ್ಗೆಯೂ ಉತ್ತರ ಸಿಕ್ಕಿಲ್ಲ. ಈಗ ವೈಷ್ಣವ್ ಅದರ ಹಿಂದೆಯೇ ಬಿದ್ದಿದ್ದಾನೆ. ಅದಕ್ಕೆ ಕೃಷ್ಣ ನಡುವೆ ಬಾಯಾಕುತ್ತಿದ್ದಾನೆ.

ಕಾರುಣ್ಯ ಮಾತನ್ನಾದರೂ ನಂಬುತ್ತಾರ?
ಕಾವೇರಿ ಮತ್ತದೇ ನಾಟಕ ಶುರು ಮಾಡಿದ್ದಾಳೆ. ಸುಪ್ರೀತಾಗೆ ಕೂಡ ದೊಡ್ಡ ಅನುಮಾನ ಬಂದಿದೆ. ಕೀರ್ತಿಯನ್ನು ಏನೋ ಮಾಡಿದ್ದಾಳೆ ಎಂದೇ ಭಾವಿಸಿದ್ದಾಳೆ. ಈಗ ವೈಷ್ಣವ್ ಪ್ರಶ್ನೆ ಮಾಡುತ್ತಿದ್ದವರ ನಡುವೆ ಕಾರುಣ್ಯ ಎಂಟ್ರಿಯಾಗಿದ್ದಾಳೆ. ಮಗಳಿಗೆ ಕಾವೇರಿ ಪ್ರಾಮೀಸ್ ಮಾಡಿದ್ದಳು ಎಂದೇ ಹೇಳಿದ್ದಾಳೆ. ವೈಷ್ಣವ್ ಜೊತೆಗೆ ಮದುವೆ ಮಾಡಿಸುತ್ತೀನಿ ಅಂತ ಮಾತು ಕೊಟ್ಟಿದ್ದಳು. ಹಾಗಂತ ಕೀರ್ತಿ ಸಾಕಷ್ಟು ಸಲ ಹೇಳಿದ್ದಳು. ನಾನು ಬುದ್ದಿ ಹೇಳಿದ್ದರು ಕೇಳಲಿಲ್ಲ ಎಂದೇ ಹೇಳಿದ್ದಾಳೆ.
ಕಾವೇರಿಯೇ ತಗಲಾಕಿಕೊಳ್ಳುವ ಪರಿಸ್ಥಿತಿ
ಕಾರುಣ್ಯಗೂ ಈ ವಿಚಾರ ಗೊತ್ತಿದ್ದನ್ನು ಕೇಳಿ ವೈಷ್ಣವ್ ಶಾಕ್ ಆಗಿದ್ದಾನೆ. ಆಂಟಿ ಈ ವಿಚಾರ ನಿಮಗೂ ಗೊತ್ತಿತ್ತಾ ಎಂದೇ ಪ್ರಶ್ನೆ ಮಾಡಿದ್ದಾನೆ. ಆಗ ಕಾವೇರಿ ಮಧ್ಯ ಪ್ರವೇಶಿಸಿ, ಎಲ್ಲರಿಗೂ ಹೇಳಿದಂತೆ ನಿಮ್ಮ ಮಗಳು ನಿಮಗೂ ಸುಳ್ಳು ಹೇಳಿರಬಹುದು. ನಾನು ಯಾವತ್ತು ಆ ರೀತಿ ಹೇಳಿಲ್ಲ ಎಂದಿದ್ದಾಳೆ. ಕೃಷ್ಣ ಕೂಡ ಎಷ್ಟೇ ಆಗಲಿ ನಿಮ್ಮ ಮಗಳು ಹಣ ತೆಗೆದುಕೊಂಡು ಓಡಿ ಹೋದವಳಲ್ವಾ ಎಂದಾಗ ಕಾವೇರಿ ತಾನೇ ಸತ್ಯ ಹೇಳಿ ತಗಲಾಕಿಕೊಂಡಿದ್ದಾಳೆ. ಇದು ಕೀರ್ತಿಯದ್ದೇ ಗನ್ ಎಂದಿದ್ದಾಳೆ. ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಈಗ ಕಾವೇರಿ ಮುಂದೆ ಬರುವ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.


Click it and Unblock the Notifications











