Lakshmibaramma: ಮತ್ತೆ ಬಂದ್ಲು ಭಾನುಮತಿ; ಠಾಣೆಗೆ ಹೋದ ಲಕ್ಷ್ಮೀಯನ್ನು ಇಬ್ಬರು ಬಿಡ್ತಾರಾ?
ಕೀರ್ತಿ ಓಡಿ ಹೋಗಿದ್ದಾಳೆ ಎಂದು ಕಾವೇರಿ ನಂಬಿಸಿದ್ದಾಳೆ. ಅದನ್ನೇ ಮನೆಯವರೆಲ್ಲ ನಂಬಿದ್ದಾರೆ. ಆದ್ರೆ ಲಕ್ಷ್ಮೀ ಅದನ್ನು ನಂಬುವುದಕ್ಕೆ ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯನ್ನ ಒಮ್ಮೆ ಅಷ್ಟೇ ಲಕ್ಷ್ಮೀ ನೋಡುವುದು. ಬಹಳ ಬೇಗ ಅರ್ಥ ಮಾಡಿಕೊಳ್ಳುತ್ತಾಳೆ. ಆರಂಭದಲ್ಲಿ ಕೀರ್ತಿಯ ಹುಚ್ಚಾಟಗಳಿಗೆ ಲಕ್ಷ್ಮೀ ಬೈಯ್ಯುತ್ತಿದ್ದಳು. ನನ್ನ ಗಂಡನಿಂದ ದೂರ ಇರಿ ಎನ್ನುತ್ತಿದ್ದಳು. ಆದರೆ ಈಗ ಕೀರ್ತಿಯ ಮಾತಿನಲ್ಲಿ ನಂಬಿಕೆ ಇದೆ.
ಸತ್ಯವನ್ನು ತಿಳಿದುಕೊಳ್ಳಬೇಕು ಅಂದ್ರೆ ಕೀರ್ತಿ ಸಿಗಲೇಬೇಕು. ಸತ್ಯ ಹೇಳ್ತೀನಿ ಎಂದು ಕರೆದ ಕೀರ್ತಿ ನಾಪತ್ತೆಯಾಗಿದ್ದಾಳೆ. ಕಾವೇರಿ ಕೇಳಿದ್ರೆ ಓಡಿ ಹೋದ್ಲು ಅಂತಾಳೆ. ಏನು ಮಾಡಬೇಕು ಎಂದು ತಿಳಿಯದೆ ಲಕ್ಷ್ಮೀ ಕಂಗಾಲಾಗಿದ್ದಾಳೆ. ಹಾಗಂತ ಕೈ ಕಟ್ಟಿ ಕೂರುವವಳಲ್ಲ. ಪ್ರಯತ್ನ ಮುಂದುವರೆಸಿದ್ದಾಳೆ. ಈ ಪ್ರಯತ್ನವೇ ಲಕ್ಷ್ಮೀಯ ಪ್ರಾಣಕ್ಕೆ ಅಪಾಯ ತರುತ್ತದೆಯಾ ಎಂಬ ಭಯ ಅಷ್ಟೇ.

ಕೀರ್ತಿ ಹುಡುಕಾಟ ಶುರು ಮಾಡಿದ ಲಕ್ಷ್ಮೀ
ಲಕ್ಷ್ಮೀಗೆ ಏನೋ ಆಗಿದೆ ಎಂಬ ಅನುಮಾನವಂತು ಬಂದಿದೆ. ಹೀಗಾಗಿ ಕೀರ್ತಿಯನ್ನು ಹುಡುಕುವ ಕೆಲಸ ಶುರು ಮಾಡಿದ್ದಾಳೆ. ಏನು ಮಾಡಬೇಕೆಂದು ತಿಳಿಯದೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಹಂಚಿದ್ದಾಳೆ. ಆಟೋದವರಿಗೆಲ್ಲಾ ಈ ಬಗ್ಗೆ ಕೇಳಿದ್ದಾಳೆ. ದಾರಿ ಕಾಣದೆ ಕಡೆಗೆ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಪೊಲೀಸರು ಯಾರ ಮೇಲಾದರೂ ಅನುಮಾನವಿದೆಯಾ ಎಂದು ಕೇಳಿದ್ದಾರೆ. ಲಕ್ಷ್ಮೀಗೆ ಬೇಕಾಗಿರುವುದು ಸತ್ಯ. ಕಳೆದ ಒಂದು ವರ್ಷದಿಂದ ಕಾವೇರಿ ಹೇಳಿದ್ದೆಲ್ಲವೂ ಸುಳ್ಳು. ಹೀಗಿರುವಾಗ ಅತ್ತೆ ಮೇಲೆ ದೂರು ಕೊಡ್ತಾಳಾ ಹೇಗೆ ಎಂಬುದನ್ನು ನೋಡಬೇಕು.
ಮತ್ತೆ ಬಂದ್ಲು ಭಾನುಮತಿ
ಭಾನುಮತಿ ಜೊತೆ ಸೇರಿ ಸಂಸಾರ ಹಾಳು ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾಳೆ ಕಾವೇರಿ. ಲಾಸ್ಟ್ ವೀಕ್ ಮೀಟ್ ಆದಾಗಲೇ ಕೀರ್ತಿ ಹಾಗೂ ಲಕ್ಷ್ಮೀಯ ಕಿಡ್ನ್ಯಾಪ್ ಆಗಿತ್ತು. ಲಕ್ಷ್ಮೀಯ ಪ್ರಾಣಕ್ಕೆ ಕುತ್ತು ಬಂದಿತ್ತು. ಇದೀಗ ಮತ್ತೆ ಬಂದಿದ್ದಾಳೆ ಭಾನುಮತಿ. ಅವಳ ಜೊತೆಗೆ ಕಾವೇರಿ ಸೇರಿದ್ದಾಳೆ. ಭಾನುಮತಿ ತನ್ನ ಅಧಿಕಾರವೇ ಇರಬೇಕು, ಎಲ್ಲಾ ಆಸ್ತಿ ಅಂತಸ್ತು ನನ್ನ ಹೆಸರಲ್ಲೇ ಇರಬೇಕು ಎಂಬ ಕಾರಣಕ್ಕೆ ಮಗನ ಸಂಸಾರವನ್ನೇ ಹಾಳು ಮಾಡಿದ್ದಳು. ಈಗ ಕಾವೇರಿ ಅವಳ ಮಾತನ್ನೇ ಕೇಳಿ ತನ್ನ ಸಂಸಾರ ಹಾಳು ಮಾಡಿಕೊಳ್ಳುತ್ತಿದ್ದಾಳೆ.

ಲಕ್ಷ್ಮೀಗೆ ಗುರಿ ಇಟ್ಟ ಕಾವೇರಿ
ಲಕ್ಷ್ಮೀಗೆ ಏನು ಗೊತ್ತಾಗಲ್ಲ. ಕಿರಾಣಿ ಅಂಗಡಿಯಲ್ಲಿ ಕೂತು ಬರೀ ವ್ಯಾಪಾರ ಮಾಡುತ್ತಾಳೆ ಅಷ್ಟೇ. ಅವಳನ್ನು ಸೊಸೆಯಾಗಿ ತಂದರೆ ನನ್ನ ಬೇಳೆ ಬೇಯಿಸಿಕೊಳ್ಳಬಹುದು. ನನ್ನದೇ ಅಧಿಕಾರ ನಡೆಸಬಹುದು ಎಂದೇ ಕಾವೇರಿ ಬಯಸಿದ್ದಳು. ಆದರೆ ಲಕ್ಷ್ಮೀ ಮನೆಗೆ ಬಂದ ಮೇಲೆ ಎಲ್ಲವೂ ಉಲ್ಟಾ ಆಗಿದೆ. ತಪ್ಪನ್ನು ಲಕ್ಷ್ಮೀ ಸಹಿಸುವುದಿಲ್ಲ. ಮೋಸವನ್ನು ಸಹಿಸುವುದಿಲ್ಲ. ಲಕ್ಷ್ಮೀ ಧೈರ್ಯ, ಬುದ್ದಿವಂತಿಕೆಗೆ ಕಾವೇರಿ ಕೋಪಗೊಂಡಿದ್ದು, ಈ ಕಿರಟಣಿ ಅಂಗಡಿಯವಳನ್ನ ಹೇಗಾದರೂ ಮಟ್ಟ ಹಾಕಬೇಕು ಅಂತ ಕಾಯ್ತಾ ಇದ್ದಾಳೆ.
ವೈಷ್ಣವ್ ಎಚ್ಚೆತ್ತು ಕೊಳ್ಳುತ್ತಾನಾ..?
ಕಾವೇರಿಗೆ ತನ್ನ ಸ್ವಾರ್ಥದ ಮುಂದೆ ಯಾವ ಜೀವವೂ ಮುಖ್ಯವಲ್ಲ. ಮಗನ ವಿಚಾರದಲ್ಲಿಯೇ ಅದು ಪ್ರೂವ್ ಆಗಿ ಹೋಗಿದೆ. ಮಗನ ಸಂತೋಷಕ್ಕಿಂತ ತನ್ನ ಸಂತೋಷವೇ ಮುಖ್ಯವಾಗಿನೇ ಕೀರ್ತಿಯನ್ನು ದೂರ ಮಾಡಿದ್ದು. ಈಗ ಭಾನುಮತಿ ಜೊತೆ ಸೇರಿದ್ದಾಳೆ. ಲಕ್ಷ್ಮೀಯನ್ನು ಕೊಲ್ಲುವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಆಸ್ಪತ್ರೆಯಲ್ಲಿದ್ದಾಗಲೇ ಕೊಲ್ಲುವುದಕ್ಕೆ ಹೋಗಿದ್ದಳು. ಮಗ ಒಂಟಿಯಾಗಿದ್ದರು ಸರಿ. ಅಮ್ಮ ಅಮ್ಮ ಅಂತ ಹಿಂದೆ ಹಿಂದೆನೆ ಇರಬೇಕು ಕಾವೇರಿಗೆ. ವೈಷ್ಣವ್ ಈಗಲಾದರೂ ಎಚ್ಚೆತ್ತುಕೊಂಡು ಲಕ್ಷ್ಮೀಯನ್ನು ಕಾಪಾಡುತ್ತಾನಾ ನೋಡಬೇಕಿದೆ.


Click it and Unblock the Notifications











