Lakshmibaramma: ಕೀರ್ತಿ ವಾಪಾಸ್ ಬರ್ತಾಳೆ ಅನ್ನೋ ನಿರೀಕ್ಷೆ ಹುಸಿ ಆಗೋಯ್ತಾ?

By ಎಸ್ ಸುಮಂತ್

ಕಾವೇರಿಯ ನಾಟಕ ಮಿತಿ ಮೀರಿದೆ. ದೊಡ್ಡ ಬಿಸಿನೆಸ್ ಮ್ಯಾನ್ ರಘುರಾಮ್ ಅವರ ಒಬ್ಬಳೇ ಮಗಳು ಕೀರ್ತಿ. ಕಾವೇರಿಯ ಆಟಕ್ಕೆ ಬಲಿಯಾಗಿದ್ದಾಳೆ. ಎಲ್ಲಿದ್ದಾಳೆ ಅನ್ನೋದು ಕೂಡ ಗೊತ್ತಾಗುತ್ತಿಲ್ಲ. ಮಗಳನ್ನು ಕಾಣದೇ ಕಂಗಾಲಾದ ಕಾರುಣ್ಯ ಕಡೆಗೂ ಕಾವೇರಿಯನ್ನೇ ಕೇಳಿ ಬಿಡಬೇಕೆಂದು ಬಂದಿದ್ದಾಳೆ.

ಇತ್ತಿಚೆಗೆ ಕಾವೇರಿ ಭಾನುಮತಿ ಜೊತೆಗೆ ಸೇರಿದ್ದಾಳೆ. ಅವಳಿಂದ ಅದೆಷ್ಟೋ ಕೆಟ್ಟ ಕೆಟ್ಟ ಆಲೋಚನೆಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾಳೆ. ಈಗ ಕೀರ್ತಿಯ ಸಾವಿಗೂ ಕಾವೇರಿ ಹೆದರದಂತೆ ಆಗಿದ್ದಾಳೆ. ತನ್ನ ಸ್ವಾರ್ಥದ ಮುಂದೆ ಎಷ್ಟೇ ಜನರ ಪ್ರಾಣ ಹೋದರೂ ಕಾವೇರಿ ಅದಕ್ಕೆ ಚಿಂತಿಸುತ್ತಿಲ್ಲ.

Colors kannada Lakshmibaramma Written Update on August 16th episode

ಮೊದಲು ತನ್ನ ಜೀವನ ಅಷ್ಟೇ. ಅದಕ್ಕೆ ಮಗಳನ್ನು ಹುಡುಕಿ ಬಂದಿದ್ದ ಕಾರುಣ್ಯಾಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾಳೆ. ಮನೆಯವರ ಮುಂದೆಲ್ಲಾ ತನ್ನ ಪ್ರಾಣ ತೆಗೆಯುವುದಕ್ಕೆ ಬಂದಳು ಎಂದೇ ಹಬ್ಬಿಸಿದ್ದಾಳೆ. ಈಗ ಲಕ್ಷ್ಮೀಯೂ ಕಾವೇರಿಯ ನಾಟಕವನ್ನೇ ಸತ್ಯ ಎಂದು ನಂಬಿದರೆ ಕೀರ್ತಿಯ ಹುಡುಕಾಟ ಕಷ್ಟಸಾಧ್ಯ.

ಭಾನುವಾರ ಸ್ಪೆಷಲ್ ಎಪಿಸೋಡ್

ಕೀರ್ತಿಯ ಕಥೆ ಕಡಿಮೆ ಏನು ಇಲ್ಲ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಅದೆಷ್ಟು ಮುಗ್ಧಳು, ಪ್ರೀತಿಯಲ್ಲಿ ಪ್ರಾಮಾಣಿಕಳು ಎಂಬುದು ಗೊತ್ತಾಗೋಕೆ ಕೊನೆ ಕೊನೆಯ ಎಪಿಸೋಡ್ ಬೇಕಾಗಿತ್ತು. ವೈಷ್ ನನ್ನವನು ನನಗೆ ಬೇಕು ಎಂದು ಕೊನೆಯ ತನಕ ಹೋರಾಡಿದವಳು. ಇದೀಗ ಕೀರ್ತಿ ಮತ್ತು ವೈಷ್ಣವ್ ಪ್ರೀತಿ ಒಂದು ಎಪಿಸೋಡ್ ಆಗಿ ಭಾನುವಾರ ಪ್ರಸಾರವಾಗಲಿದೆ.

Colors kannada Lakshmibaramma Written Update on August 16th episode

ಲಕ್ಷ್ಮೀಬಾರಮ್ಮದಲ್ಲಿ ಕೀರ್ತಿಯ ಹೆಜ್ಜೆ

ವೈಷ್ ಪ್ರೀತಿಗೆ ಅಂಬಲಿಸಿದವಳು.. ಕಾವೇರಿಯ ಸುಳ್ಳಿಗೆ ಮೋಸ ಹೋದವಳು.. ಲಕ್ಷ್ಮೀಯನ್ನು ಕಾಡಿದವಳು.. ಬೇಡಿದವಳು.. ಬೇಕಾಗಿದ್ದೆಲ್ಲವೂ ಕೀರ್ತಿಯ ಲೈಫ್‌ನಿಂದ ಕೈಜಾರಿ ಹೋಯ್ತು. ಪ್ರೀತಿ, ಸತ್ಯ ಕೊನೆಗೆ ಜೀವವೂ ಕೂಡ. ಕೀರ್ತಿ ಪ್ರತಿ ಹೆಜ್ಜೆಯ ಸನ್ನಿವೇಶವೂ ಎಪಿಸೋಡ್ ಆಗಿ ಬರ್ತಾ ಇದೆ. ಬಣ್ಣ ಬಣ್ಣದ ಕಾವೇರಿ ಮಾತುಗಳನ್ನು ಕೇಳುತ್ತಲೇ, ತನ್ನ ಪ್ರೀತಿಯನ್ನು ಸಂಪೂರ್ಣವಾಗಿ ಕಳೆದು ಕೀರ್ತಿ, ಲಕ್ಷ್ಮೀ ಬಳಿ ಹೋಗಿ ಅಂಗಲಾಚಿ ಬೇಡಿದರೆ ತನ್ನ ಗಂಡನನ್ನು ಅವಳೇಗೆ ಬಿಟ್ಟುಕೊಡಲು ಸಾಧ್ಯ. ಈಗ ಕೀರ್ತಿಯ ಜೀವವೇ ಅಂತ್ಯವಾಗಿದೆ.

ಇನ್ಮುಂದೆ ಕೀರ್ತಿ ಪಾತ್ರ ಇರಲ್ವಾ..?

ಮೊದ ಮೊದಲಿಗೆ ಕೀರ್ತಿ ಎಂದರೆ ಕಿರಿಕಿರಿ ಎನ್ನುತ್ತಿದ್ದವರು ಕಡೆ ಕಡೆಗೆ ಕೀರ್ತಿಯ ನಟನೆಗೆ ಫಿದಾ ಆಗಿದ್ದಾರೆ. ಕೀರ್ತಿಯ ಪಾತ್ರ ಕೊನೆಗೊಳ್ಳಬಾರದು. ಕಾವೇರಿ ಆಟ ಅಡಗಬೇಕು, ಕೀರ್ತಿ ಬದುಕಬೇಕು ಎಂದು ಬಯಸಿದರು. ನಿರ್ದೇಶಕರು ಖಂಡಿತ ಕೀರ್ತಿಯನ್ನು ಮತ್ತೆ ತರ್ತಾರೆ ಎಂದುಕೊಂಡರು. ಆದರೆ ಕೀರ್ತಿ ಕೆಳಗೆ ಬಿದ್ದು ನಾಲ್ಕೈದು ದಿನಗಳಾಗಿವೆ. ಲಕ್ಷ್ಮೀಗೆ ಸುಳಿವು ಸಿಗುತ್ತಿಲ್ಲ. ಇನ್ನೆಲ್ಲಿ ಅವಳ ಪ್ರಾಣ ಕಾಪಾಡುವುದು. ಕೀರ್ತಿ ಮತ್ತೆ ಬರುವುದು ಅನುಮಾನವಾಗಿದೆ. ಇದಕ್ಕೆ ಪುಷ್ಠಿ ನೀಡಿದ್ದೆ, ಭಾನುವಾರ ಸ್ಪೆಷಲ್ ಆಗಿ ಪ್ತಸಾರವಾಗುತ್ತಿರುವ ಕೀರ್ತಿ ಸಂಚಿಕೆ.

ಮೊದಲೇ ಇತ್ತು ಕೀರ್ತಿ ಬದಲಾಗುವ ಸುದ್ದಿ

ಕಳೆದ ಕೆಲವು ದಿನಗಳ ಹಿಂದೆ ಇಂತಾದೊಂದು ಸುದ್ದಿ ಹಬ್ಬಿತ್ತು. ಕೀರ್ತಿ ತಮ್ಮ ಪಾತ್ರದಿಂದ ಹೊರ ಬರುತ್ತಿದ್ದಾರೆ ಎಂದು. ಬೇರೆ ಯಾವುದೋ ಪ್ರಾಜೆಕ್ಟ್ ಇದೆ ಎಂದು. ಆ ಪಾತ್ರವನ್ನು ರಿಪ್ಲೇಸ್ ಮಾಡಿದ್ದರೆ ಖಂಡಿತ ಜನ ಸ್ವೀಕಾರ ಮಾಡ್ತಾ ಇರಲಿಲ್ಲ. ಆ ಪಾತ್ರಕ್ಕೆ ಕೀರ್ತಿ ಆ ರೀತಿ ಹೊಂದಿಕೊಂಡಿದ್ದರು. ಕೀರ್ತಿ ಕೂಡ ಆ ಸುದ್ದಿಯೆಲ್ಲಾ ಜಸ್ಟ್ ಗಾಸಿಪ್ ಎಂದಿದ್ದರು. ಆದರೆ ನಿರ್ದೇಶಕರು ಕಥೆ ತೆಗೆದುಕೊಂಡು ಹೋದ ರೀತಿಯೇ ಸಖತ್ ಟ್ವಿಸ್ಟ್ ಕೊಟ್ಟಿದೆ. ಕೀರ್ತಿ ಪಾತ್ರ ಭಾವನಾತ್ಮಕವಾಗಿ ಕೊನೆಗೊಂಡಿದೆ.

More from Filmibeat

English summary
Lakshmibaramma kannada serial today episode. Here is the details about Kirti's role is over.
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X