Lakshmibaramma: ಕಾವೇರಿಗೆ ಗೊತ್ತಿಲ್ಲ ಕೀರ್ತಿ ಏನು ಮಾಡಬಹುದು ಅಂತ; ಈಗ್ಲೂ ತಾನೇ ಬುದ್ದಿವಂತೆ ಅಂದುಕೊಳ್ಳುತ್ತಿದ್ದಾಳೆ, ದಡ್ಡಿ.

By ಎಸ್ ಸುಮಂತ್

ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವುದು ಎಂಬ ಗಾದೆ ಮಾತಿದೆ. ಆದರೆ ಕಾವೇರಿ ಒಂದೇ ಕಲ್ಲಿನಲ್ಲಿ ಮೂವರ ಜೀವನವನ್ನು ಏರು ಪೇರು ಮಾಡಿಟ್ಟಿದ್ದಾಳೆ. ಕೀರ್ತಿಯಿಂದ ವೈಷ್ಣವ್‌ನ ಕಿತ್ತುಕೊಂಡಳು. ಲಕ್ಷ್ಮೀಯಿಂದಾನು ವೈಷ್ಣವ್‌ನ ಕಿತ್ತುಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅದು ಈಗ ಗುಟ್ಟಾಗಿ ಉಳಿದಿಲ್ಲ. ಕೀರ್ತಿಗೂ ಎಲ್ಲಾ ಸತ್ಯ ಗೊತ್ತಾಗಿದೆ. ವೈಷ್ಣವ್ ಮುಂದೆಯೂ ಬಯಲಾಗಿದೆ. ಲಕ್ಷ್ಮೀ ಸತ್ಯ ತಿಳಿದಿದೆ. ಈಗ ಕಾವೇರಿಯೇ ಎಲ್ಲವನ್ನು ಮಾತಾಡಬೇಕಿದೆ.

ಕಾವೇರಿ ಸತ್ಯವನ್ನ ಒಪ್ಪಿಕೊಳ್ಳುವುದಿಲ್ಲ‌. ಏನಿವಾಗ ಅಂತ ಧೈರ್ಯವಾಗಿ ನಿಲ್ಲುವ ವಿಲನ್ ಕೂಡ ಅಲ್ಲ. ಬದಲಿಗೆ ಮಗನ ಕಾಲು ಹಿಡಿದು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾಳೆ. ಅಮ್ಮ ಅಂತ ವೈಷ್ಣವ್ ಕ್ಷಮಿಸಿದರು, ಅತ್ತೆ ಅಂತ ಕೀರ್ತಿ ಕ್ಷಮಿಸಬೇಕಲ್ವಾ? ಅದು ಎಂದಿಗೂ ಸಾಧ್ಯವಿಲ್ಲ. ಈಗ ಕೀರ್ತಿ ಮುಗ್ಧಳಾಗಿ ಉಳಿದಿಲ್ಲ. ಗಟ್ಟಿಗಿತ್ತಿಯಾಗಿ ನಿಂತಿದ್ದಾಳೆ.

Colors kannada Lakshmibaramma Written Update on August 1st episode

ಕಾವೇರಿಗೆ ಚಿತ್ರಹಿಂಸೆ ಕೊಟ್ಟ ಕೀರ್ತಿ

ಕೀರ್ತಿ ಈಗ ಅದೆಷ್ಟು ಬದಲಾಗಿದ್ದಾಳೆ ಎಂದರೆ ತನ್ನ ಮುಗ್ಧತೆಯನ್ನ ದುರುಪಯೋಗ ಪಡಿಸಿಕೊಂಡ ಕಾವೇರಿಯನ್ನ ಸುಮ್ಮನೆ ಬಿಡಬಾರದು ಎಂಬ ನಿಲುವಿಗೆ ಬಂದಿದ್ದಾಳೆ. ಕಿಡ್ನ್ಯಾಪ್ ಮಾಡಿಸಿ ಶಿಕ್ಷೆ ಕೊಟ್ಟಿದ್ದಕ್ಕಿಂತ ಹೆಚ್ಚಿನ ಶಿಕ್ಷೆ ಕೊಡಲು ನಿರ್ಧರಿಸಿದ್ದಾಳೆ. ಅದಕ್ಕೆ ಅದೇ ಕಿಡ್ನ್ಯಾಪರ್ಸ್‌ಗೆ ಹೆಚ್ಚಿನ ಹಣ ಕೊಟ್ಟು ಕಾವೇರಿಯನ್ನ ಕಿಡ್ನ್ಯಾಪ್ ಮಾಡಿಸಿದ್ದಾಳೆ. ಹೆಜ್ಜೆ ಹೆಜ್ಜೆಗೂ ಶಿಕ್ಷೆ ನೀಡಿದ್ದಾಳೆ.

ನೀನೆ ನನ್ನ ಸೊಸೆ ಎಂದ ಕಾವೇರಿ

ಕೀರ್ತಿಯನ್ನು ಪ್ರತಿ ಸಲ ಯಾಮಾರಿಸಿಕೊಂಡೆ ಬಂದಳು ಕಾವೇರಿ. ಮನೆಯವರಿಗೆ ಸತ್ಯ ಹೇಳುತ್ತೀನಿ ಅಂದಾಗಲೂ, ವೈಷ್ಣವ್ ಬಳಿ ಮಾತನಾಡ್ತೀನಿ ಅಂದಾಗಲೂ, ಲಕ್ಷ್ಮೀಯನ್ನು ವಾಪಾಸ್ ಹೋಗು ಅಂತೀನಿ ಅಂದಾಗಲೂ ಕೀರ್ತಿಯ ಮುಗ್ಧತೆಯನ್ನು ಬಳಸಿಕೊಂಡಿದ್ದಳು. ಇದೀಗ ಮತ್ತೆ ಅದೇ ನಾಟಕ ಶುರು ಮಾಡಿದ್ದಾಳೆ. ನೀನೆ ನನ್ನ ಸೊಸೆ ಕೀರ್ತಿ. ಲಕ್ಷ್ಮೀಯನ್ನ ಹೊರಗೆ ಹಾಕಿ, ನಿನ್ನನ್ನೇ ಸೊಸೆ ಮಾಡಿಕೊಳ್ಳಬೇಕು. ನೀನು ಹೀಗೆಲ್ಲಾ ಆಡಿದರೆ ವೈಷ್ಣವ್ ದೃಷ್ಟಿಯಲ್ಲಿ ಕೆಟ್ಟವಳಾಗ್ತೀಯಾ. ನನ್ನ ಪ್ಲ್ಯಾನ್ ಬೇರೆನೆ ಇದೆ. ನಿಂಗೆ ಅದು ಅರ್ಥ ಆಗ್ತಿಲ್ಲ ಅಷ್ಟೇ ಎಂದಿದ್ದಾಳೆ.

ನಂಬಿದವಳಂತೆ ನಾಟಕವಾಡಿದ ಕೀರ್ತಿ

ಕಾವೇರಿಯ ನಾಟಕದ ಎಲ್ಲಾ ಸಾಕ್ಷಿ ಕೀರ್ತಿ ಬಳಿ ಸ್ಟೋರ್ ಆಗಿದೆ. ಮನಸ್ಸಲ್ಲಿಯೇ ಶಾಪ ಹಾಕಿದ ಕೀರ್ತಿ, ತಾನೂ ನಾಟಕವಾಡುವುದಕ್ಕೆ ಶುರು ಮಾಡಿದ್ದಾಳೆ. ನಿಜನ ಆಂಟಿ ಅಲ್ಲ ಅಲ್ಲ ಅತ್ತೆ. ನೀವೂ ಲಕ್ಷ್ಮೀಯನ್ನ ಹೊರಗೆ ಹಾಕಿ ನನ್ನ ಮದುವೆ ಮಾಡಿಸುತ್ತೀರಾ. ವೈಷ್ಣವ್ ನಿಜ ಸಿಕ್ತಾನಾ? ಅಂತ ಡ್ರಾಮಾ ಶುರು ಮಾಡಿದ್ದಾಳೆ.

Colors kannada Lakshmibaramma Written Update on August 1st episode

ಕೀರ್ತಿ ಪ್ಲ್ಯಾನ್ ಬಗ್ಗೆ ಕಾವೇರಿಗೆ ಗೊತ್ತಿಲ್ಲ

ಕಾವೇರಿಗೆ ಕೀರ್ತಿಯ ನಡವಳಿಕೆ ನೋಡಿ ಯಾಮಾರಿಬಿಟ್ಟಳು, ನಾನೇ ಗೆದ್ದೆ, ನಾನೇ ಬುದ್ದಿವಂತೆ ಅನಿಸಿದೆ. ಆದರೆ ವೈಷ್ಣವ್ ಜಾತಕದಲ್ಲಿ ಯಾವುದೇ ದೋಷ ಇಲ್ಲ ಎಂದು ತಿಳಿದ ಕೀರ್ತಿ, ಕಾವೇರಿಯ ನಾಟಕಕ್ಕೆ ಮತ್ತೆ ಬಲಿಯಾಗುವುದಿಲ್ಲ. ಲಕ್ಷ್ಮೀಗಾಗಿ ಕಾಯುತ್ತಿರುವ ಕೀರ್ತಿ, ಕಾವೇರಿಯನ್ನು ಉಬ್ಬಿಸುತ್ತಿದ್ದಾಳೆ. ಕಾವೇರಿಯ ನಾಟಕ ಜಾಸ್ತೊಯಾದಂತೆ ಗನ್ ತೆಗೆದು ತಲೆಗೆ ಗುರಿ ಇಟ್ಟಿದ್ದಾಳೆ. ಈಗಲೇ ಕಾವೇರಿಯನ್ನು ಸಾಯಿಸಿ ಬಿಟ್ಟರೆ ಸತ್ಯ ಯಾರಿಗೂ ಗೊತ್ತಾಗಲ್ಲ. ಗೊತ್ತಾಗಿಸದೇ ಕೀರ್ತಿ ಬಿಡುವುದು ಇಲ್ಲ. ಕಾವೇರಿಯನ್ನು ಮಟ್ಟ ಹಾಕಲು ನಿಂತ ಕೀರ್ತಿಯ ನಟನೆಗೆ ಪ್ರೇಕ್ಷಕರು ಸೈ ಎಂದಿದ್ದಾರೆ.

More from Filmibeat

English summary
Lakshmibaramma kannada serial today episode. Here is the details about Kaveri does not know Keerthy's plan;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X