Lakshmibaramma: ವೈಷ್ಣವ್-ಲಕ್ಷ್ಮೀಗೆ ಸತ್ಯ ಗೊತ್ತಾಗುತ್ತಾ? ಭಾನುಮತಿ ಜೊತೆ ಸೇರಿ ಕೀರ್ತಿಗೇನಾದ್ರು ಮಾಡ್ತಾಳಾ ಕಾವೇರಿ?
ಕಾವೇರಿಯ ಆಟಕ್ಕೆ ಫುಲ್ ಸ್ಟಾಪ್ ಇಡುವುದಕ್ಕೆ ಕೀರ್ತಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾಳೆ. ಅದ್ಯಾವಾಗ ತನ್ನದಲ್ಲದೇ ಇದ್ದ ತಪ್ಪಿನಲ್ಲಿ ಕೀರ್ತಿ ಸಿಕ್ಕಿ ಬಿದ್ದಳೋ ಅಂದಿನಿಂದ ಆಗುತ್ತಿದ್ದ ತಪ್ಪನ್ನೆಲ್ಲ ನೋಡುತ್ತಾ ಬಂದಳು. ಕಿಡ್ನ್ಯಾಪ್ ಮಾಡಿಸಿದ್ದು ಯಾರೋ.. ಅಪವಾದ ಬಂದಿದ್ದು ಇನ್ಯಾರ ಮೇಲೋ. ಎಲ್ಲಾ ಲೆಕ್ಕಚಾರ ಹಾಕಿದಾಗ ತಿಳಿದದ್ದು ಕಾವೇರಿಯ ಕುತಂತ್ರ.
ಮೊದಲಿಗೆ ಕೀರ್ತಿಗೆ ನಂಬುವುದಕ್ಕೆ ಕಷ್ಟ ಆಯ್ತು. ಅದಕ್ಕೆ ನೇರವಾಗಿ ವೈಷ್ಣವ್ ಜಾತಕ ತೆಗೆದುಕೊಂಡು ಹೋಗಿ ಜ್ಯೋತಿಷ್ಯರ ಬಳಿ ತೋರಿಸಿದ್ದಾಳೆ. ಅದರಲ್ಲಿ ಯಾವುದೇ ದೋಷ ಇಲ್ಲ ಎಂಬುದು ಗೊತ್ತಾಗಿದೆ. ಜೊತೆಗೆ ರಾಜಯೋಗ ಇರುವವರಿಗೆ ದೋಷ ಬರುವುದಕ್ಕೂ ಸಾಧ್ಯವಿಲ್ಲ ಎಂಬುದು ಗೊತ್ತಾಗಿ, ವೈಷ್ಣವ್‌ನಿಂದ ದೂರ ಮಾಡುವುದಕ್ಕೆ ಈ ಪ್ಲ್ಯಾನ್ ಅನ್ನೋದು ಕೀರ್ತಿಗೆ ಅರ್ಥವಾಗಿ ಹೋಗಿದೆ.

ಕಾವೇರಿಯನ್ನು ಗದರಿದ ಕೀರ್ತಿ
ಕೀರ್ತಿ ಕೂಡ ಕಾವೇರಿಯನ್ನು ನಂಬುವಂತೆಯೇ ನಟಿಸಿದಳು. ಹೀಗಾಗಿ ಕಾವೇರಿ ಮತ್ತಷ್ಟು ಸುಳ್ಳು ಹೇಳುವುದಕ್ಕೆ ಶುರು ಮಾಡಿದಳು. ಕೀರ್ತಿ ನಂಬುತ್ತಿದ್ದಾಳೆಂದು ಅಪಾರವಾದ ಸುಳ್ಳನ್ನೇ ಹೇಳುತ್ತಿದ್ದಳು. ಒಂದು ಸಲ ಗದರಿದಳು ನೋಡಿ ಕೀರ್ತಿ, ಸಾಕು ಮಾಡು ಕಾವೇರಿ ಎಂದು ಏಕವಚನದಲ್ಲಿಯೇ ಧ್ವನಿ ಏರಿಸಿದಾಗ ಕಾವೇರಿ ಅಕ್ಷರಶಃ ನಡುಗಿ ಹೋದಳು.
ಸುಳ್ಳು ಹೇಳಲು ಸಾಧ್ಯವಿಲ್ಲ ಕಾವೇರಿ
ಮತ್ತೆ ಮತ್ತೆ ಸುಳ್ಳನ್ನೇ ಸತ್ಯ ಎಂದು ಪ್ರೂವ್ ಮಾಡಲು ಹೊರಟ ಕಾವೇರಿಗೆ ಕೀರ್ತಿ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾಳೆ. ಆರ್ ಯು ಶೋರ್ ಆಂಟಿ.. ವೈಷ್ಣವ್ ಜಾತಕದಲ್ಲಿ ದೋಷ ಇತ್ತಾ ಅಂದ್ರೆ ಇತ್ತು ಅಂತಾನೇ ವಾದ ಮಾಡುತ್ತಾಳೆ. ಕೀರ್ತಿ ಆ ಕ್ಷಣದಲ್ಲಿಯೇ ಒರಿಜಿನಲ್ ಜಾತಕ ತೋರಿಸಿದ್ದಾಳೆ. ಕಾವೇರಿಯ ಸುಳ್ಳಿನ ಅರಮನೆಗೆ ಬೀಗ ಹಾಕಿದ್ದಾಳೆ. ಮುಂದಕ್ಕೆ ತುಟಿಕ್ ಪಿಟಿಕ್ ಎನ್ನದಂತೆ ಲಾಕ್ ಮಾಡಿದ್ದಾಳೆ. ಈಗ ಕಾವೇರಿ ತಪ್ಪನ್ನ ಒಪ್ಪಿಕೊಳ್ಳಲೇಬೇಕಾಗಿದೆ.

ಕೀರ್ತಿಯ ಕಾಲಿನ ಬಳಿ ಕುಳಿತ ಕಾವೇರಿ
ಕೀರ್ತಿಗೆ ತಾನೇ ತಪ್ಪಿತಸ್ಥೆ ಅಂತ ಅನ್ನಿಸಿಕೊಂಡು ಸಾಕಾಗಿದೆ. ಪ್ಲ್ಯಾನ್ ಮಾಡಿದ ಕಾವೇರಿ ಬಚಾವ್ ಆಗಿದ್ದಾಳೆ. ಹೀಗಾಗಿ ತಪ್ಪು ಮಾಡಿದವರನ್ನ ಸಿಕ್ಕಿಬೀಳಿಸಲೇಬೇಕೆಂದು ಪಣ ತೊಟ್ಟ ಕೀರ್ತಿ, ಬೆಟ್ಟದ ಮೇಲಕ್ಕೆ ಲಕ್ಷ್ಮೀ ಹಾಗೂ ವೈಷ್ಣವ್ ನ ಬರುವುದಕ್ಕೆ ಹೇಳಿದ್ದಾಳೆ. ಇಲ್ಲಿ ಕಾವೇರಿಯ ಹಣೆಗೆ ಗನ್ ಇಟ್ಟು ಅವರು ಬಂದ ಮೇಲೆ ನೀವೂ ಮಾಡಿದ ಎಲ್ಲಾ ತಪ್ಪನ್ನು ವೈಷ್ಣವ್ ಹಾಗೂ ಲಕ್ಷ್ಮೀ ಮುಂದೆ ಹೇಳಬೇಕು ಎಂದಿದ್ದಾಳೆ. ಕೀರ್ತಿ ಗನ್ ತೋರಿಸುತ್ತಿದ್ದಂತೆ ಕಾವೇರಿ ಕಾಲಿಗೆ ಬಿದ್ದಿದ್ದಾಳೆ. ಕ್ಷಮಿಸಿ ಬಿಡು ಎಂದು ಬೇಡಿಕೊಂಡಿದ್ದಾಳೆ. ಆದರೆ ಕೀರ್ತಿಯ ಮನಸ್ಸು ಈಗ ಕಲ್ಲಾಗಿದೆ.
ಸತ್ಯ ಹೇಳ್ತಾಳಾ ಕಾವೇರಿ..?
ಮೊದಲೇ ಭಾನುಮತಿ ಜೊತೆ ಸೇರಿ ಕಾವೇರಿ ಇನ್ನಷ್ಟು ತೊಂದರೆ ಕೊಡುವುದಕ್ಕೆ ಶುರು ಮಾಡಿದ್ದಾಳೆ. ಭಾನುಮತಿ ಕಳುಹಿಸಿದ ರೌಡಿಗಳಿಂದಾನೇ ಲಕ್ಷ್ಮೀಯ ಪ್ರಾಣಕ್ಕೆ ಅಪಾಯ ಎದುರಾಗಿತ್ತು. ಹೀಗಿರುವಾಗ ಈಗ ಎಲ್ಲಾ ಸತ್ಯ ಬಯಲಾಗುವ ಸಮಯ ಹತ್ತಿರ ಬಂದಿದೆ. ಈಗ ಭಾನುಮತಿ ಸುಮ್ಮನೆ ಇರುತ್ತಾಳಾ. ಸ್ನೇಹಿತೆಯ ಜೊತೆಗೆ ಸೇರಿ, ಕೀರ್ತಿಗೆ ಏನಾದರೂ ಅಪಾಯ ತರಬಹುದು ಎಂದು ಪ್ರೇಕ್ಷಕರು ಊಹೆ ಮಾಡುತ್ತಿದ್ದಾರೆ. ಮಗನಿಗೆ ಸತ್ಯ ಗೊತ್ತಾಗುವುದಕ್ಕೂ ಮುನ್ನ ಕೀರ್ತಿಗೆ ಏನಾದರೂ ಆಗುತ್ತೇನೋ ಎಂಬ ಭಯ.


Click it and Unblock the Notifications











